'ಪುಷ್ಪ' ಸಿನಿಮಾ ಹತ್ತು 'ಕೆಜಿಎಫ್‌'ಗೆ ಸಮ ಎಂದ ನಿರ್ದೇಶಕ: ಯಶ್ ಅಭಿಮಾನಿಗಳು ಗರಂ

ಕನ್ನಡದ 'ಕೆಜಿಎಫ್' ಸಿನಿಮಾ 'ಬೆಂಚ್ ಮಾರ್ಕ್' ಸಿನಿಮಾ ಆಗಿಬಿಟ್ಟಿದೆ. ಬೇರೆ ಭಾಷೆಯ ಸಿನಿಮಾರಂಗದವರು ಸಹ 'ಕೆಜಿಎಫ್‌' ಅನ್ನು ಉದಾಹರಣೆಯಾಗಿ ಬಳಸಿ ಮಾತನಾಡುತ್ತಿದ್ದಾರೆ.

'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಇದೇ ಸಂದರ್ಭದಲ್ಲಿ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಸಹ ಬಿಡುಗಡೆಗೆ ರೆಡಿಯಾಗಿದೆ. 'ಕೆಜಿಎಫ್‌ 2' ನಂತೆ 'ಪುಷ್ಪ' ಸಿನಿಮಾ ಸಹ ಭಾರಿ ನಿರೀಕ್ಷೆಯನ್ನೇ ಮೂಡಿಸಿದೆ.

ತೆಲುಗಿನ ಯುವ ನಿರ್ದೇಶಕರೊಬ್ಬರು 'ಪುಷ್ಪ' ಸಿನಿಮಾವನ್ನು ಹೊಗಳುವ ಭರದಲ್ಲಿ 'ಕೆಜಿಎಫ್‌' ಅನ್ನು ಉದಾಹರಣೆಯಾಗಿ ಬಳಸಿದ್ದಾರೆ. ಆದರೆ ಅವರು 'ಕೆಜಿಎಫ್' ಸಿನಿಮಾ ಹೆಸರನ್ನು ಬಳಸಿರುವ ರೀತಿಗೆ ಯಶ್ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ.

ಇತ್ತೀಚೆಗೆ ಬಿಡುಗಡೆ ಆಗಿ ಸೂಪರ್ ಹಿಟ್ ಆದ ತೆಲುಗಿನ 'ಉಪ್ಪೆನ' ಸಿನಿಮಾದ ನಿರ್ದೇಶಕ ಬುಚ್ಚಿಬಾಬು ಸನಾ, ತನ್ನ ಗುರುಗಳಾದ ಸುಕುಮಾರ್ ನಿರ್ದೇಶಿಸುತ್ತಿರುವ 'ಪುಷ್ಪ' ಸಿನಿಮಾದ ಬಗ್ಗೆ ಮಾತನಾಡುತ್ತಾ, ''ಪುಷ' ಸಿನಿಮಾವು ಹತ್ತು 'ಕೆಜಿಎಫ್' ಸಿನಿಮಾಗಳಿಗೆ ಸಮ'' ಎಂದಿದ್ದಾರೆ.

ನಾನು ಪುಷ್ಪ ಸಿನಿಮಾ ನೋಡಿದ್ದೇನೆ: ಬುಚ್ಚಿಬಾಬು ಸನಾ

ನಾನು ಪುಷ್ಪ ಸಿನಿಮಾ ನೋಡಿದ್ದೇನೆ: ಬುಚ್ಚಿಬಾಬು ಸನಾ

''ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟಿಸಿರುವ 'ಪುಷ್ಪ' ಸಿನಿಮಾದ ಮೊದಲ ಭಾಗ ನೋಡಿದ್ದೇನೆ. ಸಿನಿಮಾ ಅತ್ಯದ್ಭುವಾಗಿದೆ. ಸಿನಿಮಾದ ನಾಯಕನ ಪಾತ್ರ, ದೃಶ್ಯಗಳು, ಆಕ್ಷನ್‌, ಸಂಗೀತ ಎಲ್ಲವೂ ಅದ್ಭುತವಾಗಿದೆ. 'ಪುಷ್ಪ' ಸಿನಿಮಾ ಹತ್ತು ಕೆಜಿಎಫ್‌ಗಳಿಗೆ ಸಮ'' ಎಂದಿದ್ದಾರೆ ಬುಚ್ಚಿಬಾಬು ಸನಾ.

ಹಳೆ ಗುರುಗಳನ್ನು ಹೊಗಳಿದ ಬುಚ್ಚಿಬಾಬು ಸನಾ

ಹಳೆ ಗುರುಗಳನ್ನು ಹೊಗಳಿದ ಬುಚ್ಚಿಬಾಬು ಸನಾ

''ನಿರ್ದೇಶಕ ಸುಕುಮಾರ್ ಅದ್ಭುತವಾದ ಬರಹಗಾರ. ಅತ್ಯುತ್ತಮವಾಗಿ ಅವರು ಕತೆಯನ್ನು ಡೆವೆಲಪ್ ಮಾಡಿದ್ದಾರೆ ಮತ್ತು ಪಾತ್ರಗಳ ನಡುವೆ ಸಂಘರ್ಷವನ್ನು ತಂದಿದ್ದಾರೆ'' ಎಂದು ತಮ್ಮ ಗುರುಗಳನ್ನು ಹೊಗಳಿದ್ದಾರೆ ಬುಚ್ಚಿಬಾಬು ಸನಾ. ಸುಕುಮಾರ್ ಬಳಿ ಸಹಾಯಕ ನಿರ್ದೇಶಕನಾಗಿ ಬುಚ್ಚಿಬಾಬು ಸನಾ ಕೆಲಸ ಮಾಡುತ್ತಿದ್ದರು.

ಬುಚ್ಚಿಬಾಬು ಸನಾ ಹೇಳಿಕೆಗೆ ಯಶ್ ಅಭಿಮಾನಿಗಳ ಅಸಮಾಧಾನ

ಬುಚ್ಚಿಬಾಬು ಸನಾ ಹೇಳಿಕೆಗೆ ಯಶ್ ಅಭಿಮಾನಿಗಳ ಅಸಮಾಧಾನ

ಆದರೆ ಬುಚ್ಚಿಬಾಬು ಸನಾ ಹೇಳಿಕೆ ಬಗ್ಗೆ ಯಶ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ''ನಿಮ್ಮ ಸಿನಿಮಾಕ್ಕೆ ಪ್ರಚಾರ ಪಡೆದುಕೊಳ್ಳಲು 'ಕೆಜಿಎಫ್‌' ಸಿನಿಮಾವನ್ನು ಕೀಳಾಗಿ ಕಾಣಿಸುವ ಯತ್ನ ಮಾಡಬೇಡಿ'' ಎಂದಿದ್ದಾರೆ. ''ಕೆಜಿಎಫ್' ಸಿನಿಮಾವು ಕ್ಲಾಸಿಕ್‌ ಆಗಿದ್ದು ಹಲವು ದಾಖಲೆಗಳನ್ನು ಬರೆದಿದೆ. ಈಗಲೂ 'ಕೆಜಿಎಫ್ 2' ಸಿನಿಮಾ 'ಪುಷ್ಪ' ಸಿನಿಮಾಕ್ಕಿಂತಲೂ ಹೆಚ್ಚು ಕಲೆಕ್ಷನ್ ಮಾಡಲಿದೆ'' ಎಂದು ಸವಾಲು ಎಸೆದಿದ್ದಾರೆ ಕೆಲವರು.

Recommended Video

ಒಂದೇ ಮಾರ್ಗದಲ್ಲಿ ನಡೆಯಲು ಮುಂದಾದ ಜೋಡೆತ್ತು | Filmibeat Kannada
ಆಗಸ್ಟ್ 13 ರಂದು ಬಿಡುಗಡೆ ಆಗಲಿರುವ 'ಪುಷ್ಪ'

ಆಗಸ್ಟ್ 13 ರಂದು ಬಿಡುಗಡೆ ಆಗಲಿರುವ 'ಪುಷ್ಪ'

'ಪುಷ್ಪ' ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೊತೆಗೆ ಕನ್ನಡಿಗ ಡಾಲಿ ಧನಂಜಯ್, ಮಲಯಾಳಂನ ಫಹಾದ್ ಫಾಸಿಲ್, ತಮಿಳಿನ ವಿಕ್ರಂ, ಜಗಪತಿ ಬಾಬು ಇನ್ನೂ ಹಲವು ಅತ್ಯದ್ಭುತ ನಟರು ನಟಿಸಿದ್ದಾರೆ. ಸಿನಿಮಾವು ಆಗಸ್ಟ್ 13ರಂದು ಬಿಡುಗಡೆ ಆಗಲಿದೆ.

More from Filmibeat

English summary
Director Buchi Babu Sana said 'Pushpa' is 10 times greater than KGF in every aspects. '
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X