ತೆಲುಗು ಸಿನಿರಂಗದಲ್ಲಿ ಹೊಸ ದಾಖಲೆ ಬರೆದ ಅಲ್ಲು ಅರ್ಜುನ್-ಪೂಜಾ ಹೆಗ್ಡೆ
ತೆಲುಗು ಸಿನಿರಂಗದಲ್ಲಿ ಈ ಹಿಂದಿನ ದಾಖಲೆಯೊಂದನ್ನು ಪುಡಿಗಟ್ಟಿ ಹೊಸ ದಾಖಲೆ ಬರೆದಿದ್ದಾರೆ ಅಲ್ಲು ಅರ್ಜುನ್-ಪೂಜಾ ಹೆಗ್ಡೆ.
Recommended Video
ಹೌದು, ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ಅಭಿನಯದ 'ಅಲಾ ವೈಕುಂಟಪುರಂಲೋ' ಸಿನಿಮಾದ 'ಬುಟ್ಟ ಬೊಮ್ಮ' ಹಾಡು ತೆಲುಗು ಸಿನಿರಂಗದಲ್ಲಿದ್ದ ಈ ಹಿಂದಿನ ದಾಖಲೆಗಳನ್ನು ಅಳಿಸಿ ಹೊಸ ದಾಖಲೆ ಬರೆದಿದೆ.
ಅಲಾ ವೈಕುಂಟಪುರಂಲೋ ಸಿನಿಮಾದ 'ಬುಟ್ಟ ಬೊಮ್ಮ' ಸಿನಿಮಾದ ವಿಡಿಯೋ ಹಾಡನ್ನು ಅತಿ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ಹಿಂದಿನ ಯಾವ ಹಾಡನ್ನೂ ಸಹ ಇಷ್ಟು ಬಾರಿ ವೀಕ್ಷಣೆ ಮಾಡಿಲ್ಲ, ಇದೊಂದು ಹೊಸ ದಾಖಲೆ ಆಗಿದೆ.

ಅತಿ ಹೆಚ್ಚು ಬಾರಿ ವೀಕ್ಷಣೆಯಾದ ಹಾಡು
ಬುಟ್ಟ ಬೊಮ್ಮಾ ಹಾಡನ್ನು ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಪಟ್ಟ ತೆಲುಗು ವಿಡಿಯೋ ಹಾಡು ಎಂಬ ಖ್ಯಾತಿ ಗಳಿಸಿಕೊಂಡಿದೆ. ಎಲ್ಲಾ ದಾಖಲೆಗಳನ್ನು ಅದು ಪುಡಿಗಟ್ಟಿದೆ. ಇದನ್ನು ಸಿನಿಮಾದ ಸಂಗೀತ ನಿರ್ದೇಶಕ ಎಸ್.ತಮನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

26 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆ
ಬುಟ್ಟ ಬೊಮ್ಮ ಹಾಡನ್ನು ಈವರೆಗೆ 26 ಕೋಟಿಗೂ ಹೆಚ್ಚು ವೀಕ್ಷಿಸಲಾಗಿದೆ. ತೆಲುಗು ಸಿನಿಮಾದ ಇನ್ನಾವುದೇ ಹಾಡನ್ನು ಇಷ್ಟೋಂದು ಬಾರಿ ಯೂಟ್ಯೂಬ್‌ನಲ್ಲಿ ವೀಕ್ಷಿಸಿಲ್ಲ. ಈ ಹಾಡು ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಸಾಕಷ್ಟು ಜನಪ್ರಿಯತೆ ಗಳಿಸಿದೆ.

ಡೇವಿಡ್ ವಾರ್ನರ್ ನರ್ತಿಸಿದ್ದರು
ಆಸ್ಟ್ರೆಲಿಯಾದ ಕ್ರಿಕೆಟರ್ ಡೇವಿಡ್ ವಾರ್ನರ್ ಇದೇ ಹಾಡಿಗೆ ತನ್ನ ಕುಟುಂಬದೊಂದಿಗೆ ಹೆಜ್ಜೆ ಹಾಕಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

ಸಾಮಜವರಗಮನ ಹಾಡು ಸಖತ್ ಹಿಟ್ ಆಗಿತ್ತು
ಅಲಾ ವೈಕುಂಟಪುರಂಲೋ ಸಿನಿಮಾದ 'ಸಾಮಜವರಗಮನ' ಹಾಡೂ ಸಹ ಸಾಕಷ್ಟು ಹಿಟ್ ಆಗಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಆ ಹಾಡು ಹಿಟ್ ಎನಿಸಿಕೊಂಡಿತ್ತು, ಆದರೆ ಸಿನಿಮಾ ಬಿಡುಗಡೆ ನಂತರ ಬುಟ್ಟ ಬೊಮ್ಮ ಹಾಡು ಸಖತ್ ಹಿಟ್ ಆಯಿತು.

ಮೂರೇ ದಿನದಲ್ಲಿ ಟ್ಯೂನ್ ಸಿದ್ಧಪಡಿಸಿದ್ದರಂತೆ
ಸಿನಿಮಾದ ಒಂದು ಹಾಡನ್ನು ಅಲ್ಲು ಅರ್ಜುನ್ ಇಷ್ಟವಾಗದೆ ತೆಗೆದು ಹಾಕಿದ್ದರಂತೆ, ಆಗ ಮೂರೇ ದಿನಕ್ಕೆ ಬುಟ್ಟ ಬೊಮ್ಮ ಹಾಡಿನ ಟ್ಯೂನ್ ಸಿದ್ಧಪಡಿಸಿಕೊಂಡು ಅಲ್ಲು ಅರ್ಜುನ್ ಅನ್ನು ಭೇಟಿಯಾದರಂತೆ ಸಂಗೀತ ನಿರ್ದೇಶಕ ಎಸ್.ತಮನ್.


Click it and Unblock the Notifications











