Prabhas: ₹160 ಕೋಟಿ ಮೌಲ್ಯದ 2 ಎಕರೆ ಜಾಗದಲ್ಲಿ ಪ್ರಭಾಸ್ ಕನಸಿನ ಮ್ಯಾನ್ಷನ್ ನಿರ್ಮಾಣ ಆರಂಭ!

ತೆಲುಗು ನಟ ಪ್ರಭಾಸ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಚಿತ್ರವೊಂದಕ್ಕೆ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ. ವಯಸ್ಸು 40 ದಾಟಿದ್ರು ಮದುವೆ ಬಗ್ಗೆ ಆಲೋಚಿಸದೇ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಹೈದರಾಬಾದ್‌ನಲ್ಲಿ ಬಹುಕೋಟಿ ವೆಚ್ಚದ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಹೈದರಾಬಾದ್‌ನಲ್ಲಿ ಈಗಾಗಲೇ ಪ್ರಭಾಸ್ ಅವರಿಗೆ ದೊಡ್ಡ ಬಂಗಲೆಯಿದೆ. ರಾಯದುರ್ಗದಲ್ಲಿ ಗೆಸ್ಟ್‌ಹೌಸ್ ಕೂಡ ಇದೆ. ಇಟಲಿಯಲ್ಲಿ ಮನೆ ಖರೀದಿಸಿ ಬಾಡಿಗೆಗೆ ಬಿಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ರಿಯಲ್ ಎಸ್ಟೇಟ್‌ನಲ್ಲಿ ಹಣ ಹೂಡಿದ್ದಾರೆ. ಚಿತ್ರ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ ಎನ್ನಲಾಗ್ತಿದೆ. ಹೇಳಿಕೇಳಿ ರಾಜಮನೆತನದ ಕುಡಿ ಪ್ರಭಾಸ್. ಅದಕ್ಕೆ ತಕ್ಕಂತೆ ಪಿತಾರ್ಜಿತವಾಗಿ ಸಾಕಷ್ಟು ಆಸ್ತಿ ಇತ್ತು. ಹೀರೊ ಆಗಿ ಕೋಟಿ ಕೋಟಿ ದುಡಿಯಲು ಆರಂಭಿಸಿದ ಮೇಲೆ ಅದನ್ನು ಹೂಡಿಕೆ ಮಾಡಿ ದೊಡ್ಡ ಸಾಮ್ರಾಜ್ಯ ಕಟ್ಟಿದ್ದಾರೆ.

Buzz Actor Prabhas Builds Lavish Dream Mansion in Hyderabad s Elite Financial District

ಹೈದರಾಬಾದ್‌ನಲ್ಲಿ ಭಾರೀ ಮ್ಯಾನ್ಷನ್ ನಿರ್ಮಾಣ ಮಾಡಲು ಪ್ರಭಾಸ್ ಮುಂದಾಗಿದ್ದಾರೆ ಎನ್ನುವ ಮಾತುಗಳು ಬಹಳ ದಿನಗಳಿಂದ ಕೇಳಿಬರ್ತಿತ್ತು. ಸದ್ಯ ನಿರ್ಮಾಣ ಕೆಲಸ ಆರಂಭವಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಭವ್ಯ ಅರಮನೆ ಎದ್ದು ನಿಲ್ಲಲಿದೆ ಎಂದು ವರದಿಯಾಗಿದೆ. ಬರೋಬ್ಬರಿ 2 ಎಕರೆ ಜಾಗದಲ್ಲಿ ಮನೆ ಅಲ್ಲ, ದೊಡ್ಡ ರೆಸಾರ್ಟ್ ರೀತಿ ಮನೆ, ತೋಟ ನಿರ್ಮಾಣವಾಗುತ್ತದೆ ಎನ್ನಲಾಗ್ತಿದೆ. ಅತ್ಯಾಧುನಿಕ ಒಳಾಂಗಣ ವಿನ್ಯಾಸದೊಂದಿಗೆ ಈ ಮ್ಯಾನ್ಷನ್ ತಲೆ ಎತ್ತಲಿದೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.

ಹೈದರಾಬಾದ್‌ನ ಪ್ರಮುಖ ಐಷಾರಾಮಿ ವಸತಿ ಕೇಂದ್ರ ಫೈನಾನ್ಷಿಯಲ್ ಡಿಸ್ಟ್ರಿಕ್ಟ್‌ ಭಾಗದಲ್ಲಿ ಪ್ರಭಾಸ್ ಕನಸಿನ ಮ್ಯಾನ್ಷನ್ ನಿರ್ಮಾಣವಾಗುತ್ತಿದೆ. ಅಲ್ಲಿ ಒಂದು ಎಕರೆ ಜಾಗದ ಬೆಲೆ 80 ಕೋಟಿ ರೂ. ಎನ್ನಲಾಗ್ತಿದೆ.ಆ ಲೆಕ್ಕದಲ್ಲಿ ಬರೀ ಜಾಗದ ಬೆಲೆ 160 ಕೋಟಿ ರೂ. ಎಂದು ಚರ್ಚೆ ನಡೀತಿದೆ. ಅಬ್ಬಬ್ಬಾ, 160 ಕೋಟಿ ರೂ. ವೆಚ್ಚದ ಜಾಗದಲ್ಲಿ ಅದೆಷ್ಟು ಕೋಟಿ ಖರ್ಚು ಮಾಡಿ ಪ್ರಭಾಸ್ ಮನೆ ನಿರ್ಮಿಸುತ್ತಾರೆ ಎಂದು ಅಭಿಮಾನಿಗಳು ಹುಬ್ಬೇರಿಸಿದ್ದಾರೆ.

Buzz Actor Prabhas Builds Lavish Dream Mansion in Hyderabad s Elite Financial District

ದೊಡ್ಡ ದೊಡ್ಡ ಕೋಣೆಗಳು, ಅಂತರಾಷ್ಟ್ರೀಯಮಟ್ಟದ ಒಳಾಂಗಣ ವಿನ್ಯಾಸ, ಜಿಮ್, ಹೋಮ್ ಥಿಯೇಟರ್, ಬಾರ್ ಕೌಂಟರ್, ಸ್ವಿಮ್ಮಿಂಗ್ ಪೂಲ್, ದೊಡ್ಡ ಲಾನ್, ವಾಕಿಂಗ್ ಟ್ರ್ಯಾಕ್ ಎಲ್ಲವೂ ಈ ಮ್ಯಾನ್ಷನ್‌ನಲ್ಲಿ ಇರುತ್ತದೆ ಎಂದು ಚರ್ಚೆ ನಡೀತಿದೆ. "ನಮ್ ಬಾಸ್ ರೇಂಜ್‌ಗೆ ತಕ್ಕಂತ ಮನೆ" ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಈ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ಕೋಕಾಪೇಟೆ ಔಟರ್‌ ರಿಂಗ್‌ರೋಡ್‌ಗೆ ಈ ಜಾಗ ಸಮೀಪದಲ್ಲಿದ್ದು ಇತ್ತೀಚೆಗೆ ಜಾಗಕ್ಕೆ ಸಂಬಂಧಿಸಿದಂತೆ ರಿಜಿಸ್ಟ್ರೇಷನ್ ಕೆಲಸ ಮುಗಿದಿದೆ. ಮುನಿಸಿಪಲ್ ಬೋರ್ಡ್‌ನಿಂದ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೂಡ ಸಿಕ್ಕಿದೆ. ನಗರದ ಟ್ರಾಫಿಕ್‌ನಿಂದ ತಪ್ಪಿಸಿಕೊಂಡು ಪ್ರಭಾಸ್ ವಿಮಾನ ನಿಲ್ದಾಣ ಸೇರಿದಂತೆ ಬೇರೆ ಬೇರೆ ಕಡೆ ಓಡಾಡಲು ಈ ಜಾಗ ಸೂಕ್ತವಾಗಿದೆ.

'ದಿ ರಾಜಾಸಾಬ್' ಬಳಿಕ ಪ್ರಭಾಸ್ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. 'ಕಲ್ಕಿ 2898AD' ಸೂಪರ್ ಹಿಟ್ ಬಳಿಕ 'ದಿ ರಾಜಾಸಾಬ್' ಸೋಲು ಡಾರ್ಲಿಂಗ್ ಅಭಿಮಾನಿಗಳಿಗೆ ಬೇಸರ ತಂದಿದೆ. ಮುಂದೆ ಮತ್ತಷ್ಟು ದೊಡ್ಡ ಸಿನಿಮಾಗಳ ಮೂಲಕ ಯಂಗ್ ರೆಬಲ್ ಸ್ಟಾರ್ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಹನು ರಾಘವಪುಡಿ ನಿರ್ದೇಶನದ 'ಫೌಜಿ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಬಳಿಕ ಸಂದೀಪ್ ರೆಡ್ಡಿ ವಂಗಾ ಸಾರಥ್ಯದ 'ಸ್ಪಿರಿಟ್' ಚಿತ್ರದಲ್ಲಿ ಪ್ರಭಾಸ್ ಬಣ್ಣ ಹಚ್ಚಲಿದ್ದಾರೆ.

'ಕಲ್ಕಿ 2898AD' ಸೀಕ್ವೆಲ್ ಬಳಿಕ 'ಸಲಾರ್- 2' ಚಿತ್ರದಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಹೊಂಬಾಳೆ ಸಂಸ್ಥೆ ಜೊತೆ 3 ಸಿನಿಮಾಗಳಲ್ಲಿ ಕೆಲಸ ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಅದರಲ್ಲಿ ಒಂದು 'ಸಲಾರ್' ಸೀಕ್ವೆಲ್ ಆಗಿರಲಿದೆ. ಇನ್ನೆರಡು ಸಿನಿಮಾಗಳು ಯಾವುದು ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Read more about: prabhas lifestyle tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X