ಸೆಟ್ಟೇರುವ ಮುನ್ನವೇ ಅಲ್ಲು ಅರ್ಜುನ್- ಅಟ್ಲಿ ಸಿನಿಮಾ ನಿಂತು ಹೋಯ್ತಾ? ಕಾರಣ ಅದೇನಾ?

ಭಾರತೀಯ ಚಿತ್ರರಂಗದಲ್ಲೀಗ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಆರ್ಭಟ. ಸ್ಟಾರ್ ನಟರು, ತಂತ್ರಜ್ಞರು ಭಾಷೆಯ ಎಲ್ಲೆ ಮೀರಿ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹಿಟ್ ಕೊಟ್ಟ ನಿರ್ದೇಶಕರನ್ನು ಸ್ಟಾರ್ ನಟರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡುವ ಲೆಕ್ಕಾಚಾರ ಎಲ್ಲೆಡೆ ನಡೀತಿದೆ. ಆದರೆ ಅದು ಅಷ್ಟು ಸುಲಭವಲ್ಲ. ಸ್ವಲ್ಪ ಹೆಚ್ಚು ಕಮ್ಮಿ ಆದ್ರೂ ಪ್ರಾಜೆಕ್ಟ್ ನಿಂತು ಹೋಗುತ್ತದೆ.

'ಪುಷ್ಪ' ಸರಣಿ ಸಿನಿಮಾಗಳಿಂದ ಅಲ್ಲು ಅರ್ಜುನ್ ಕ್ರೇಜ್ ಡಬಲ್ ಆಗಿದೆ. ಬಾಲಿವುಡ್ ನಿರ್ಮಾಪಕರು ಬನ್ನಿ ಕಾಲ್‌ಶೀಟ್‌ಗಾಗಿ ಕಾಯುವಂತಾಗಿದೆ. ಇನ್ನು 'ಜವಾನ್' ಸಿನಿಮಾ ಮೂಲಕ ತಮಿಳು ನಿರ್ದೇಶಕ ಅಟ್ಲಿ ಭಾರೀ ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ. ಇವರಿಬ್ಬರೂ ಸೇರಿ ಹೊಸ ಚಿತ್ರಕ್ಕೆ ಪ್ಲ್ಯಾನ್ ಮಾಡಿದ್ದರು. ಅಧಿಕೃತವಾಗಿ ಸಿನಿಮಾ ಘೋಷಣೆ ಆಗಿತ್ತು. ಆದರೆ ಸೆಟ್ಟೇರುವ ಮುನ್ನವೇ ಸಿನಿಮಾ ನಿಂತು ಹೋಗಿದೆ ಎನ್ನುವ ಚರ್ಚೆ ಶುರುವಾಗಿದೆ.

Buzz Allu Arjun and Atlee s film has been shelved due to salary issues

ಅಲ್ಲು ಅರ್ಜುನ್ 'ಪುಷ್ಪ'-2 ಬಳಿಕ ಅಟ್ಲಿ ಜೊತೆ ಕೈ ಜೋಡಿಸುತ್ತಾರೆ. ಬಾಲಿವುಡ್‌ನಲ್ಲಿ 'ಜವಾನ್' ರೀತಿ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ಅಟ್ಲಿ ಈ ಬಾರಿ ಯಾವ ಕಥೆ ಕಟ್ಟುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಸಹಜವಾಗಿಯೇ ಸಿನಿಮಾ ಬಗ್ಗೆ ಅಭಿಮಾನಿಗಳು ಕಾತರರಾಗಿದ್ದರು. ಆದರೆ ಎಲ್ಲಾ ಕುತೂಹಲಕ್ಕೆ ಆರಂಭದಲ್ಲೇ ಬ್ರೇಕ್ ಬೀಳುತ್ತದೆ ಎನ್ನಲಾಗ್ತಿದೆ. ಈಗಾಗಲೇ ಸಿನಿಮಾ ಮಾತುಕತೆ ಮುರಿದು ಬಿದ್ದಿದೆ ಎನ್ನುವ ಗುಸುಗುಸು ಕೇಳಿಬರ್ತಿದ್ದು ಅಧಿಕೃತ ಮಾಹಿತಿ ಬಾಕಿಯಿದೆ.

ಅಷ್ಟಕ್ಕೂ ಅಟ್ಲಿ ಹಾಗೂ ಅಲ್ಲು ಅರ್ಜುನ್ ಸಿನಿಮಾ ಮುರಿದು ಬೀಳಲು ಕಾರಣ ಸಂಭಾವನೆ ಎನ್ನಲಾಗ್ತಿದೆ. 'ಜವಾನ್' ಸಕ್ಸಸ್ ಬಳಿಕ ನಿರ್ದೇಶಕರು 80 ಕೋಟಿ ರೂ. ಸಂಭಾವನೆಗೆ ಬೇಡಿಕೆ ಇಟ್ಟಿದ್ದು ಇದಕ್ಕೆ ನಿರ್ಮಾಪಕರು ಸಿದ್ಧರಿಲ್ಲ. ಇದೇ ಕಾರಣಕ್ಕೆ ಸಿನಿಮಾವೇ ನಿಂತು ಹೋಗುತ್ತಿದೆ ಎನ್ನುವ ಚರ್ಚೆ ಶುರುವಾಗಿದೆ. ಬರೀ ನಿರ್ದೇಶಕರಿಗೆ ಇಷ್ಟು ದೊಡ್ಡ ಸಂಭಾವನೆ ಕೊಡೋಕೆ ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಖುದ್ದು ಅಲ್ಲು ಅರ್ಜುನ್ ತಂದೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು.

ಅಟ್ಲಿ ನಿರ್ದೇಶನದ 'ಜವಾನ್' ಸಿನಿಮಾ ಕಳೆದ 1000 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಕೆಲ ಸೌತ್ ಸಿನಿಮಾಗಳ ಕಥೆಯನ್ನು ಸೇರಿಸಿ ರಾಬಿನ್ ಹುಡ್ ಶೈಲಿಯ ಹೊಸ ಚಿತ್ರವನ್ನು ಅಟ್ಲಿ ಕಟ್ಟಿಕೊಟ್ಟಿದ್ದರು. ಹಾಗಾಗಿ ದಿಢೀರ್ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಮಗನೇ ಹೀರೊ ಆಗಿರುವುದರಿಂದ ಅಲ್ಲು ಅರವಿಂದ್ ದೊಡ್ಡದಾಗಿ ಸಂಭಾವನೆ ಕೊಡುವ ಅಗತ್ಯವಿಲ್ಲ. ಆದರೆ ನಿರ್ದೇಶಕರಿಗೆ 80 ಕೋಟಿ ರೂ. ಕೊಡಬೇಕಾ? ಎಂದು ಚರ್ಚಿಸುತ್ತಿದ್ದಾರೆ ಎನ್ನಲಾಗ್ತಿದೆ.

Buzz Allu Arjun and Atlee s film has been shelved due to salary issues

ಸದ್ಯ ಅಲ್ಲು ಅರ್ಜುನ್- ಅಟ್ಲಿ ಕಾಂಬೊ ಸಿನಿಮಾ ಪಕ್ಕಕ್ಕಿಟ್ಟು ವರುಣ್‌ ತೇಜ್ ಚಿತ್ರವನ್ನು ಗೀತಾ ಆರ್ಟ್ಸ್ ಕೈಗೆತ್ತಿಕೊಳ್ಳುತ್ತಿದೆ. ಅತ್ತ ಅಲ್ಲು ಅರ್ಜುನ್ 'ಪುಷ್ಪ'-2 ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡಲಾಗಿದೆ. ಆದರೆ ಕಾರಣಾಂತರಗಳಿಂದ ಪೋಸ್ಟ್‌ಪೋನ್ ಆಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ.

3 ವರ್ಷಗಳ ಹಿಂದೆ ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಹಿಂದಿ ಬೆಲ್ಟ್‌ನಲ್ಲಿ ಕೂಡ ದಾಖಲೆ ಬರೆದಿತ್ತು. ಹಾಗಾಗಿ ಸಹಜವಾಗಿಯೇ ಸೀಕ್ವೆಲ್ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ಚಿತ್ರದಲ್ಲಿ ಮುಂದುವರೆಯುತ್ತಿದ್ದಾರೆ. ಫಹಾದ್ ಫಾಸಿಲ್, ಸುನೀಲ್, ಧನಂಜಯ್ ಸೇರಿದಂತೆ ದೊಡ್ಡ ತಾರಾಗಣ 'ಪುಷ್ಪ'-2 ಚಿತ್ರದಲ್ಲಿದೆ.

More from Filmibeat

English summary
Allu Arjun and Atlee Kumar film shelved
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X