ಡಾನ್ ಅವತಾರದಲ್ಲಿ ಕ್ರಿಕೆಟಿಗ ಡೇವಿಡ್ ವಾರ್ನರ್ ಚಿತ್ರರಂಗಕ್ಕೆ ಎಂಟ್ರಿ?

ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಕ್ರಿಕೆಟ್ ಪ್ರೇಮಿಗಳಿಗೆ ಚಿರಪರಿಚಿತ ಹೆಸರು. ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಕ್ರೀಡಾಂಗಣದ ಮೂಲೆ ಮೂಲೆ ಚೆಂಡನ್ನು ಅಟ್ಟುವ ಮೂಲಕ ಡೇವಿಡ್ ಸದ್ದು ಮಾಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಕೂಡ ತಮ್ಮ ಸ್ಫೋಟಕ ಪ್ರದರ್ಶನದಿಂದ ಗಮನ ಸೆಳೆಯುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕೂಡ ಡೇವಿಡ್ ವಾರ್ನರ್ ಸಖತ್ ಆಕ್ಟೀವ್ ಆಗಿರುತ್ತಾರೆ. ಪತ್ನಿ ಮಕ್ಕಳ ಜೊತೆ ಸೇರಿ ರೀಲ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಾರೆ. ಕೆಲ ವರ್ಷಗಳ ಕಾಲ ಸನ್‌ ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡದಲ್ಲಿ ಅವರು ಆಡಿದ್ದರು. ತೆಲುಗು ಜನರ ಪ್ರೀತಿಗೆ ಮರುಳಾಗಿದ್ದರು. ತೆಲುಗು ಸಿನಿಮಾ ನಟರ ಡೈಲಾಗ್‌ಗಳನ್ನು ರೀಲ್ಸ್ ಮಾಡಿ, ಸಾಂಗ್ಸ್‌ಗೆ ಹೆಜ್ಜೆ ಹಾಕಿ ಪೋಸ್ಟ್ ಮಾಡಿದ್ದರು. ಅದರಲ್ಲೂ 'ಪುಷ್ಪ' ಚಿತ್ರದ ಡೈಲಾಗ್ಸ್‌ನಿಂದ ಡೇವಿಡ್ ಸದ್ದು ಮಾಡಿದ್ದರು.

BUZZ australian cricketer David Warner Cameo in Allu arjun starrer Pushpa-2 The Rule

ಮಹೇಶ್ ಬಾಬು, ಅಲ್ಲು ಅರ್ಜುನ್, ಪವನ್ ಕಲ್ಯಾಣ್ ಹೀಗೆ ಸ್ಟಾರ್ ನಟರ ಡೈಲಾಗ್ಸ್ ಹೇಳಿ ಡೇವಿಡ್ ವಾರ್ನರ್ ಅಭಿಮಾನಿಗಳ ಮನಗೆದ್ದಿದ್ದಾರೆ. ಅದರಲ್ಲೂ 'ಪುಷ್ಪ'ರಾಜ್ ಅವತಾರದಲ್ಲಿ ಅವರ ಡೈಲಾಗ್ಸ್ ಸಖತ್ ವೈರಲ್ ಆಗಿತ್ತು. ಇನ್ನು ನಿರ್ದೇಶಕ ರಾಜಮೌಳಿ ಜೊತೆ ಒಂದು ಜಾಹೀರಾತಿನಲ್ಲಿ ಕೂಡ ಆಸ್ಟ್ರೇಲಿಯಾ ಕ್ರಿಕೆಟಿಗ ಮಿಂಚಿದ್ದರು. ಭಾರತದ ಕೆಲ ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತಮಗೆ ಭಾರೀ ಜನಪ್ರಿಯತೆ ತಂದುಕೊಟ್ಟ 'ಪುಷ್ಪ' ಚಿತ್ರದ ಸೀಕ್ವೆಲ್‌ನಲ್ಲಿ ವಾರ್ನರ್ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಡಾನ್ ಅವತಾರದಲ್ಲಿ ಆಸ್ಟ್ರೇಲಿಯಾ ಬ್ಯಾಟರ್ ಕಾಣಿಸಿಕೊಂಡಿರುವ ಫೋಟೊ ವೈರಲ್ ಆಗುತ್ತಿದೆ. 'ಪುಷ್ಪ' ಚಿತ್ರದಲ್ಲಿ ರಕ್ತಚಂದನ ಸ್ಮಗ್ಲರ್ ಆಗಿದ್ದ 'ಪುಷ್ಪ'ರಾಜ್ ಇದೀಗ ಮಾಫಿಯಾ ಡಾನ್ ಆಗಿ ಬೆಳೆದಿದ್ದಾನೆ. ಅವನೊಟ್ಟಿಗೆ ಒಂದಷ್ಟು ಡಾನ್‌ಗಳು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ಡೇವಿಡ್ ವಾರ್ನರ್ ಸಣ್ಣ ಗೆಸ್ಟ್ ಅಪಿಯರೆನ್ಸ್ ಮಾಡುತ್ತಾರೆ ಎನ್ನಲಾಗ್ತಿದೆ.

ಬಿಳಿ ಬಣ್ಣದ ಶರ್ಟ್, ಪ್ಯಾಂಟ್, ಕೆಂಪು ಬಣ್ಣದ ಶೂ ಧರಿಸಿ, ಕೂಲಿಂಗ್ ಕ್ಲಾಸ್ ಹಾಕಿಕೊಂಡು ಡೇವಿಡ್ ವಾರ್ನರ್ ಗನ್ ಹಿಡಿದು ಕಾಣಿಸಿಕೊಂಡಿರುವ ಫೋಟೊಗಳು ವೈರಲ್ ಆಗುತ್ತಿದೆ. 'ಪುಷ್ಪ' ಚಿತ್ರದ ಸೀಕ್ವೆಲ್‌ನಲ್ಲಿ ನಟಿಸುವ ಬಗ್ಗೆ ಹಿಂದೆ ಸಂದರ್ಶನವೊಂದರಲ್ಲಿ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಡೇವಿಡ್ ಗೊತ್ತಿಲ್ಲ, ನೋಡೋಣ ಅದೆಲ್ಲಾ ನಟರು ಮಾಡುವ ಕೆಲಸ ಎಂದಿದ್ದರು. ಇದೀಗ ಈ ಫೋಟೊಗಳು ನೋಡಿ ಅಭಿಮಾನಿಗಳು ಹುಬ್ಬೇರಿಸುತ್ತಿದ್ದಾರೆ.

ಸುಕುಮಾರ್ ನಿರ್ದೇಶನದ 'ಪುಷ್ಪ'-2 ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಎರಡೂವರೆ ವರ್ಷಗಳ ಹಿಂದೆ 'ಪುಷ್ಪ' ಚಿತ್ರ ತೆರೆಕಂಡು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಆದರೆ ಸೀಕ್ವೆಲ್ ರಿಲೀಸ್ ಡೇಟ್ ಪದೇ ಪದೆ ಬದಲಾಗುತ್ತಲೇ ಇದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಇದೀಗ ಡಿಸೆಂಬರ್ 6ಕ್ಕೆ ಚಿತ್ರ ತೆರೆಗೆ ತರುವುದಾಗಿ ಹೇಳಲಾಗಿದೆ.

ಮತ್ತೊಮ್ಮೆ ಪುಷ್ಪರಾಜ್ ಆಗಿ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಎರಡನೇ ಭಾಗ ತೆರೆಗೆ ಬರಲಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡಿದೆ. ಈ ಬಾರಿ ಪುಷ್ಪರಾಜ್ ವರ್ಸಸ್ ಭನ್ವರ್ ಸಿಂಗ್ ಶೇಖಾವತ್ ಮಾರಾಮಾರಿ ಕುತೂಹಲ ಮೂಡಿಸಿದೆ. ದೇಶ ವಿದೇಶಗಳಲ್ಲಿ ಚಿತ್ರದ ಕಥೆ ಸಾಗಲಿದೆ.

ಕ್ರಿಕೆಟಿಗ ಡೇವಿಡ್ ವಾರ್ನರ್ 'ಪುಷ್ಪ'-2 ಚಿತ್ರದಲ್ಲಿ ನಟಿಸುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇತ್ತೀಚೆಗೆ ಡೇವಿಡ್ ಸಾಕಷ್ಟು ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ. ಇದು ಕೂಡ ಯಾವುದೋ ಜಾಹೀರಾತಿಗೆ ಸಂಬಂಧಿಸಿದ ಫೋಟೊಗಳು ಇರಬಹುದು ಎನ್ನುವ ಮಾತುಗಳು ಕೇಳಿಬರುತ್ತಿದೆ.

More from Filmibeat

English summary
David Warner to play a cameo in sukumar's Pushpa-2?
Read more about: pushpa allu arjun tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X