Virat Kohli Biopic: ಕಿಂಗ್ ಕೊಹ್ಲಿ ಅವತಾರದಲ್ಲಿ ಆ ಪ್ಯಾನ್ ಇಂಡಿಯಾ ಸ್ಟಾರ್? ಅಂದೇ ಸಿನಿಮಾ ಘೋಷಣೆ?

ಭಾರತೀಯ ಚಿತ್ರರಂಗದಲ್ಲಿ ಈಗ ಬಯೋಪಿಕ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಕ್ರಿಕೆಟ್, ಬ್ಯಾಡ್ಮಿಟನ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಭಾರತದ ಸಾಧಕರ ಕತೆ ದೃಶ್ಯರೂಪದಲ್ಲಿ ತೆರೆಗಪ್ಪಳಿಸುತ್ತಿದೆ. ಕೊನೆಗೆ ಶ್ರೀಲಂಕಾ ಕ್ರಿಕೆಟರ್ ಮುತ್ತಯ್ಯ ಮುರಳೀಧರನ್ ಜೀವನಾಧರಿತ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಇದೆಲ್ಲದರ ನಡುವೆ ವಿರಾಟ್ ಕೊಹ್ಲಿ ಬಯೋಪಿಕ್ ಚರ್ಚೆ ಶುರುವಾಗಿದೆ.

ಕ್ರಿಕೆಟ್ ಲೋಕದ ಕಿಂಗ್ ಎಂದು ಅಭಿಮಾನಿಗಳಿಂದ ಕರೆಸಿಕೊಂಡಿರುವ ವಿರಾಟ್ ಕೊಹ್ಲಿ ಬಯೋಪಿಕ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ವಿರಾಟ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದು 15 ವರ್ಷಗಳಾಗಿದೆ. ತಮ್ಮ ವಿರಾಟರೂಪ ಬ್ಯಾಟಿಂಗ್‌ ಹಾಗೂ ಕ್ರೀಡಾಂಗಣದಲ್ಲಿ ತಮ್ಮ ಡೇರ್ ಡೆವಿಲ್ ಆಟಿಟ್ಯೂಡ್‌ನಿಂದ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದಾರೆ. ವಿರಾಟ್ 2008ರ ಆಗಸ್ಟ್ 18ರಂದು ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದೊಂದಿಗೆ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನ ಶುರು ಮಾಡಿದರು.

Buzz: Bollywood Production House planning to Do ViratKohli Biopic with Ram Charan

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸೆಂಚುರಿ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿದ್ದಾರೆ. ಏಕದಿನ, ಟೆಸ್ಟ್ ಮತ್ತು ಟಿ20 ಪಂದ್ಯಗಳೆಲ್ಲಾ ಸೇರಿ ಒಟ್ಟು 76 ಸೆಂಚುರಿ ಗಳಿಸಿದ್ದಾರೆ. ಏಕದಿನದಲ್ಲಿ 46, ಟೆಸ್ಟ್‌ನಲ್ಲಿ 29 ಮತ್ತು ಟಿ20ಯಲ್ಲಿ ಒಂದು ಶತಕ ಕೊಹ್ಲಿ ಖಾತೆಯಲ್ಲಿದೆ. 100 ಸೆಂಚುರಿ ಸಿಡಿಸಿರುವ ಸಚಿನ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು ಮೊದಲೆರಡು ಸ್ಥಾನಗಳಲ್ಲಿ ಭಾರತದ ಆಟಗಾರರೇ ಇರುವುದು ಹೆಮ್ಮೆಯ ಸಂಗತಿ.

ಈ 15 ವರ್ಷಗಳಲ್ಲಿ 276 ಏಕದಿನ ಪಂದ್ಯಗಳನ್ನು ಆಡಿರುವ ಕೊಹ್ಲಿ, 57.32ರ ಸರಾಸರಿಯಲ್ಲಿ, 46 ಶತಕಗಳ ಸಹಾಯದಿಂದ 13,000 ರನ್‌ ಗಡಿಯಲ್ಲಿದ್ದಾರೆ. ಇನ್ನು ಅತಿ ಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿ ದಾಖಲೆ, ಭಾರತದ ಪರ ಅತಿ ಹೆಚ್ಚು ಕ್ಯಾಚ್ ಹಿಡಿದ ದಾಖಲೆ ಹೀಗೆ ಹಲವು ದಾಖಲೆಗಳು ವಿರಾಟ್ ಹೆಸರಿನಲ್ಲಿದೆ. ಇನ್ನು ಟೆಸ್ಟ್​ ಕ್ರಿಕೆಟ್​​ನಲ್ಲಿ ಆಡಿದ 111 ಪಂದ್ಯಗಳನ್ನು ಆಡಿ 8,000ಕ್ಕೂ ಅಧಿಕ ರನ್ ದಾಖಲಿಸಿದ್ದಾರೆ. ನಾಯಕನಾಗಿಯೂ ಟೀಂ ಇಂಡಿಯಾ ತಂಡ ಮುನ್ನಡೆಸಿದ್ದಾರೆ. ಹೀಗೆ ಕ್ರಿಕೆಟ್ ಲೋಕದಲ್ಲಿ ವಿರಾಟರೂಪ ಪ್ರದರ್ಶಿಸಿರುವ ಕೊಹ್ಲಿ ಬಯೋಪಿಕ್‌ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಿದೆ.

Buzz: Bollywood Production House planning to Do ViratKohli Biopic with Ram Charan

ಬಹಳ ದಿನಗಳಿಂದ ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ಗುಸುಗುಸು ಕೇಳಿಬರ್ತಿದೆ. ರಾಮ್‌ಚರಣ್ ಚಿತ್ರದಲ್ಲಿ ಕೊಹ್ಲಿ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಚರ್ಚೆ ಕೂಡ ನಡೀತಿತ್ತು. ಇದೀಗ ಮತ್ತೆ ಇದೇ ಸುದ್ದಿ ಮುನ್ನಲೆಗೆ ಬಂದಿದೆ. ಬಾಲಿವುಡ್‌ನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಇಂತಾದೊಂದು ಮೆಗಾ ಪ್ರಾಜೆಕ್ಟ್‌ಗೆ ಕೈ ಹಾಕಿದೆ ಎನ್ನಲಾಗ್ತಿದೆ. ಈ ಹಿಂದೆ ಕೂಡ ರಾಮ್‌ಚರಣ್ ಕ್ರೀಡೆಗೆ ಸಂಬಂಧಿಸಿದ ಸಿನಿಮಾದಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದ್ದರು. ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸಲು ಸಿದ್ಧ ಎಂದಿದ್ದರು.

'RRR' ಚಿತ್ರದ ಮೂಲಕ ರಾಮ್‌ಚರಣ್ ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವಲ್ಲ ಗ್ಲೋಬಲ್ ಸ್ಟಾರ್ ಎನಿಸಿಕೊಂಡಿದ್ದಾರೆ. ನೋಡುವುದಕ್ಕೂ ಕೊಂಚ ವಿರಾಟ್ ಕೊಹ್ಲಿ ರೀತಿ ಕಾಣುತ್ತಾರೆ. ಹಾಗಾಗಿ ಅಭಿಮಾನಿಗಳು ಚರಣ್, ಕ್ರಿಕೆಟರ್ ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸಿದರೆ ಚೆನ್ನಾಗಿರುತ್ತದೆ ಎನ್ನುತ್ತಿದ್ದಾರೆ. ಇದೆಲ್ಲದರ ಬೆನ್ನಲ್ಲೇ ಬಾಲಿವುಡ್‌ ಚಿತ್ರನಿರ್ಮಾಣ ಸಂಸ್ಥೆ ಇಂತಾದೊಂದು ಬಯೋಪಿಕ್ ಚಿತ್ರಕ್ಕೆ ಪ್ಲ್ಯಾನ್ ಮಾಡುತ್ತಿದೆ ಎನ್ನುವ ಮಾತುಗಳು ಈಗ ಕೇಳಿಬರ್ತಿದೆ.

ನವೆಂಬರ್ 5ಕ್ಕೆ ವಿರಾಟ್ ಕೊಹ್ಲಿ ಹುಟ್ಟುಹಬ್ಬ. ಅಂದೇ ಈ ಬಯೋಪಿಕ್ ಸಿನಿಮಾ ಘೋಷಣೆ ಆಗುತ್ತದೆ ಎನ್ನಲಾಗುತ್ತಿದೆ. ಆದರೆ ಇದು ಎಷ್ಟು ನಿಜ ಎನ್ನುವುದು ಮಾತ್ರ ಗೊತ್ತಿಲ್ಲ. ಇನ್ನು ರಾಮ್‌ಚರಣ್ ಸಿನಿಮಾ ಲೈನಪ್‌ ವಿಚಾರಕ್ಕೆ ಬಂದರೆ ಸದ್ಯ ಗೇಮ್‌ ಚೇಂಜರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಳಿಕ ಬುಚ್ಚಿಬಾಬು ನಿರ್ದೇಶನದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಮಫ್ತಿ' ನರ್ತನ್ ಜೊತೆಗೂ ಒಂದು ಸಿನಿಮಾ ಮಾತುಕತೆ ನಡೀತಿದೆ. ಹಾಗಾಗಿ ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ಚರಣ್ ನಟಿಸುತ್ತಾರಾ? ಎನ್ನುವ ಪ್ರಶ್ನೆಗೆ ಈಗಲೇ ಉತ್ತರ ಸಿಗುವುದಿಲ್ಲ.

More from Filmibeat

English summary
Ram Charan is going to play the lead role in Virat Kohli Biopic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X