ಹೊಂಬಾಳೆ ಫಿಲ್ಮ್ಸ್ ಹಾಗೂ ಪ್ರಭಾಸ್ 3 ಚಿತ್ರಗಳಿಗೆ ನಿರ್ದೇಶಕರು ಸಿಕ್ಕೇಬಿಟ್ರಾ?

ತೆಲುಗು ನಟ ಪ್ರಭಾಸ್ ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸ್ಟಾರ್ ನಿರ್ದೇಶಕರು ಅವರೊಟ್ಟಿಗೆ ಸಿನಿಮಾ ಮಾಡಲು ಕ್ಯೂ ನಿಂತಿದ್ದಾರೆ. ಡಾರ್ಲಿಂಗ್ ಕೂಟ ಅಳೆದು ತೂಗಿ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರಭಾಸ್ ಕಾಂಬಿನೇಷನ್‌ನಲ್ಲಿ ಹೊಂಬಾಳೆ ಫಿಲ್ಮ್ಸ್ 3 ಸಿನಿಮಾ ಘೋಷಿಸಿರುವುದು ಗೊತ್ತೇಯಿದೆ.

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಟಿಸಿದ 'ಸಲಾರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಹೊಂಬಾಳೆ ಸಂಸ್ಥೆ ಚಿತ್ರಕ್ಕೆ ಹಣ ಹೂಡಿತ್ತು. ಭರ್ಜರಿ ಲಾಭ ಸಹ ಗಳಿಸಿತ್ತು. ಆ ಚಿತ್ರದ ಸೀಕ್ವೆಲ್ ಕೂಡ ಅದೇ ಕಾಂಬಿನೇಷನ್‌ನಲ್ಲಿ ಬರಬೇಕಿದೆ. ಅದಕ್ಕೂ ಮುನ್ 'ರಾಜಾ ಸಾಬ್', 'ಫೌಜಿ', 'ಸ್ಪಿರಿಟ್' ಚಿತ್ರಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಅತ್ತ ಜ್ಯೂ. ಎನ್‌ಟಿಆರ್ ಚಿತ್ರವನ್ನು ನೀಲ್ ಕೈಗೆತ್ತಿಕೊಂಡಿದ್ದಾರೆ.

Buzz Hombale Films to collaborate with Prabhas 3 films directors locked

'ಸಲಾರ್- 2' ಸೇರಿ ಪ್ರಭಾಸ್ ಜೊತೆ ಮತ್ತೆರಡು ಸಿನಿಮಾಗಳನ್ನು ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿದೆ. ಅದಕ್ಕಾಗಿ ಭಾರೀ ಮೊತ್ತದ ಸಂಭಾವನೆ ಮಾತನಾಡಲಾಗಿದೆ. ಆದರೆ ಆ 2 ಸಿನಿಮಾಗಳನ್ನು ಯಾರು ನಿರ್ದೇಶನ ಮಾಡುತ್ತಾರೆ ಗೊತ್ತಿಲ್ಲ ಎನ್ನಲಾಗಿತ್ತು. ಇದೀಗ ಆ ಚಿತ್ರಗಳನ್ನು ಯಾರು ನಿರ್ದೇಶನ ಮಾಡಬಹುದು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಈಗಾಗಲೇ ಪ್ರಭಾಸ್ ಮತ್ತೊಂದು ಚಿತ್ರದ ಲುಕ್ ಟೆಸ್ಟ್ ಮಾಡಿದ್ದಾರೆ ಎನ್ನಲಾಗ್ತಿದೆ.

ಪ್ರಶಾಂತ್ ವರ್ಮ ನಿರ್ದೇಶನದ 'ಬ್ರಹ್ಮರಾಕ್ಷಸ' ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಾರೆ ಎಂದು ಗುಲ್ಲಾಗಿದೆ. ಸದ್ದಿಲ್ಲದೇ ತಮ್ಮ ಮನೆಯಲ್ಲೇ ಲುಕ್ ಟೆಸ್ಟ್ ಮಾಡಿದ್ದಾರೆ. ಹೋಳಿ ಹಬ್ಬದ ಸಂಭ್ರಮದಲ್ಲಿ ಪೋಸ್ಟರ್ ಸಮೇತ ಸಿನಿಮಾ ಘೋಷಣೆ ಆಗುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಈ ಹಿಂದೆ ಇದೇ ಚಿತ್ರವನ್ನು ರಣ್‌ವೀರ್ ಸಿಂಗ್ ಜೊತೆ ಮಾಡಲು ಪ್ರಶಾಂತ್ ವರ್ಮ ಮುಂದಾಗಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾ ನಿಂತಿತ್ತು.

Buzz Hombale Films to collaborate with Prabhas 3 films directors locked

'ಬ್ರಹ್ಮರಾಕ್ಷಸ' ಕಥೆಯನ್ನು ಪ್ರಭಾಸ್‌ಗೆ ಹೇಳಿ ಒಪ್ಪಿಸಿದ್ದಾರೆ ಎನ್ನಲಾಗ್ತಿದೆ. ಇನ್ನು ತಮಿಳಿನ ಲೋಕೇಶ್ ಕನಕರಾಜ್ ಕೂಡ ಪ್ರಭಾಸ್ ಜೊತೆ ಸಿನಿಮಾ ಮಾಡಲು ಮನಸ್ಸು ಮಾಡಿದ್ದಾರೆ. ಈ ಬಗ್ಗೆ ಚರ್ಚಿಸುತ್ತಿದ್ದಾರೆ. ಇದು ಕೂಡ ಫೈನಲ್ ಆಗಲಿದ್ದು ಹೊಂಬಾಳೆ ಸಂಸ್ಥೆ ಚಿತ್ರ ನಿರ್ಮಾಣ ಮಾಡುತ್ತದೆ ಎನ್ನಲಾಗ್ತಿದೆ. ಅಲ್ಲಿಗೆ ಪ್ರಭಾಸ್ ಹಾಗೂ ಹೊಂಬಾಳೆ ಕಾಂಬಿನೇಷನ್ 3 ಚಿತ್ರಗಳಿಗೆ ನಿರ್ದೇಶಕರು ಸಿಕ್ಕಾಂತಾಯಿತು ಎಂದು ಹೇಳಲಾಗ್ತಿದೆ.

'KGF' ಸರಣಿ, 'ಕಾಂತಾರ' ಹಾಗೂ 'ಸಲಾರ್' ಚಿತ್ರಗಳನ್ನು ನಿರ್ಮಿಸಿ ಹೊಂಬಾಳೆ ಸಂಸ್ಥೆ ಗೆದ್ದಿದೆ. ಈಗಾಗಲೇ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ನಿರ್ಮಿಸಿದೆ. ಮುಂದೆ ಬಾಲಿವುಡ್ ಅಂಗಳಕ್ಕೂ ಎಂಟ್ರಿ ಕೊಡುವ ಲೆಕ್ಕಾಚಾರದಲ್ಲಿದೆ. ಇನ್ನು ಪ್ರಭಾಸ್ ಹಾಗೂ ಪ್ರಶಾಂತ್ ವರ್ಮ ಜೋಡಿಯ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಯಾವಾಗ ಹೊರ ಬೀಳುತ್ತದೆ ಎಂದು ಕಾದು ನೋಡಬೇಕಿದೆ.

ಇನ್ನುಳಿದಂತೆ ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸುವ 'ರಿಚರ್ಡ್ ಆಂಟನಿ', 'KGF'-3 ಚಿತ್ರಗಳನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಬೇಕಿದೆ. 'ಕಾಂತಾರ- 1' ಸಿನಿಮಾ ಇದೇ ವರ್ಷ ಗಾಂಧಿ ಜಯಂತಿ ವೀಕೆಂಡ್‌ನಲ್ಲಿ ತೆರೆಗೆ ಬರಲಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಿನಿಮಾ ನಿರ್ಮಾಣವಾಗುತ್ತಿದೆ.

More from Filmibeat

English summary
Prabhas signs three-film contract with Hombale Films, These 3 directors going to direct the films;
Read more about: prabhas hombale films tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X