ವಾರೆವ್ಹಾ.. ಮಹೇಶ್ ಬಾಬು ಚಿತ್ರಕ್ಕೆ ಚಿನ್ನದಂತ ಟೈಟಲ್ ಹುಡುಕಿದ ಜಕ್ಕಣ್ಣ!; ಫ್ಯಾನ್ಸ್ ಕೂಡ ಖುಷ್
ರಾಜಮೌಳಿ ಹೊಸ ಸಿನಿಮಾ ಇನ್ನು ಶುರುವಾಗಿಲ್ಲ. 'RRR' ಸಿನಿಮಾ ಬಂದೋಗಿ 2 ವರ್ಷ ಗ್ಯಾಪ್ ಆಯಿತು. ಆದರೂ ಹೊಸ ಸಿನಿಮಾ ಸೆಟ್ಟೇರಲಿಲ್ಲ. ತೆರೆಮರೆಯಲ್ಲಿ ಸಿನಿಮಾ ಕೆಲಸಗಳು ನಡೆಯುತ್ತಿದೆ. ಮಹೇಶ್ ಬಾಬು ಹೀರೋ ಆಗಿ ನಟಿಸೋದು ಪಕ್ಕಾ ಆಗಿದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.
ಈ ಬಾರಿ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಚಿತ್ರಕ್ಕೆ ರಾಜಮೌಳಿ ಮುಂದಾಗಿದ್ದಾರೆ. ಅದಕ್ಕೆ ತಕ್ಕಂತ ಕಥೆ, ಟೈಟಲ್, ಮೇಕಿಂಗ್, ಪ್ರಮೋಷನ್, ರಿಲೀಸ್ ಪ್ಲ್ಯಾನ್ ಶುರುವಾಗಿದೆ. ಮುಂದಿನ ತಿಂಗಳು ಸಿನಿಮಾ ಮುಹೂರ್ತ ಎನ್ನಲಾಗುತ್ತಿದೆ. ಗ್ಲೋಬ್‌ಟ್ರೋಟಿಂಗ್ ಆಕ್ಷನ್ ಅಡ್ವೆಂಚರಸ್ ಸಿನಿಮಾ ಆಗಲಿರಲಿದ್ದು ದೇಶ ವಿದೇಶಗಳಲ್ಲಿ ಕಥೆ ಸಾಗಲಿದೆ.

ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದು ಮೌಳಿ ಅಂಡ್ ಟೀಂ ಚಿತ್ರಕಥೆ ಸಿದ್ಧಪಡಿಸಿದೆ. ಮಹೇಶ್ ಬಾಬು ಚಿತ್ರಕ್ಕಾಗಿ ಬಹಳ ಕರಸತ್ತು ನಡೆಸುತ್ತಿದ್ದಾರೆ. ಬೇರೆ ಸಿನಿಮಾಗಳನ್ನು ಪಕ್ಕಕ್ಕಿಟ್ಟು ಈ ಚಿತ್ರದ ಕಡೆ ಫೋಕಸ್ ಮಾಡಿದ್ದಾರೆ. ಕೆ. ವಿ ನಾರಾಯನ್ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಅವರೊಟ್ಟಿಗೆ ಹಾಲಿವುಡ್ ಸಂಸ್ಥೆ ಕೈ ಜೋಡಿಸುತ್ತದೆ ಎನ್ನಲಾಗ್ತಿದೆ.
ಸದ್ಯಕ್ಕೆ SSMB29 ಎಂದು ಈ ಚಿತ್ರವನ್ನು ಕರೆಯಲಾಗುತ್ತಿದೆ. ಚಿತ್ರದ ಟೈಟಲ್ ಎನಿರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಈ ಹಿಂದೆ ಮಹಾರಾಜ, ಛತ್ರಪತಿ ಎನ್ನುವ ಟೈಟಲ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇವೆರಡರಲ್ಲಿ ಒಂದು ಟೈಟಲ್ ಫೈನಲ್ ಆಗಬಹುದು ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಇದು ಪ್ಯಾನ್ ವರ್ಲ್ಡ್ ಸಿನಿಮಾ ಆಗಿರುವುದರಿಂದ ಇದಕ್ಕಿಂತ ಭಿನ್ನ ಟೈಟಲ್ ಹುಡುಕಾಟ ನಡೆಯುತ್ತಿದೆ ಎನ್ನಲಾಗ್ತಿದೆ.
'ಗೋಲ್ಡ್' ಎನ್ನುವ ಟೈಟಲ್ ಅನ್ನು ಜಕ್ಕಣ್ಣ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ. ಈ ಟೈಟಲ್ ಬಹಳ ಕ್ಯಾಚಿ ಆಗಿದ್ದು ಹಾಲಿವುಡ್ ಪ್ರೇಕ್ಷಕರಿಗೂ ಕನೆಕ್ಟ್ ಆಗುತ್ತದೆ. ಇಂಗ್ಲೀಷ್ ಸೇರಿ ಎಲ್ಲಾ ಭಾಷೆಗಳಿಗೆ ಈ ಟೈಟಲ್ ಸೂಕ್ತ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಇದೇ ಟೈಟಲ್ ಫೈನಲ್ ಆಗಬಹುದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಬಾಲಿವುಡ್‌ನಲ್ಲಿ ಈ ಹಿಂದೆ 'ಗೋಲ್ಡ್' ಎನ್ನುವ ಸಿನಿಮಾ ಬಂದಿತ್ತು. ಹಾಗಾಗಿ ಈ ಟೈಟಲ್ ಆಯ್ಕೆ ಮಾಡಿಕೊಳ್ಳುವುದು ಅನುಮಾನ ಎಂದು ಕೆಲವರು ಹೇಳುತ್ತಿದ್ದಾರೆ. ಒಟ್ನಲ್ಲಿ ಟೈಟಲ್ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. SSMB29 ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಸಿನಿಮಾದಲ್ಲಿ ಕೆಲಸ ಮಾಡುವ ಸಾಧ್ಯತೆಯಿದೆ.
ಇನ್ನು ಈಗಾಗಲೇ ತಮಿಳು ನಟ ನಾಜರ್ ಕಲಾವಿದರಿಗೆ ಅಭಿನಯದ ಪಟ್ಟುಗಳನ್ನು ಹೇಳಿಕೊಡಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ರಾಜಮೌಳಿ ಪ್ರೀ ಪ್ರೊಡಕ್ಷನ್ ವರ್ಕ್ ಮುಂದುವರೆದಿದ್ದಾರೆ. ವಿದೇಶಗಳಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಪ್ಲ್ಯಾನ್ ನಡೆಯುತ್ತಿದೆ. 'RRR' ಚಿತ್ರದ 'ನಾಟು ನಾಟು' ಗೀತೆಗೆ ಆಸ್ಕರ್ ಪ್ರಶಸ್ತಿ ಸಿಕ್ಕಿತ್ತು. ಹಾಗಾಗಿ ಈ ಬಾರಿ ಬೇರೆ ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿ ಮೇಲೆ ನಿರ್ದೇಶಕ ರಾಜಮೌಳಿ ಕಣ್ಣಿಟ್ಟಿದ್ದಾರೆ.


Click it and Unblock the Notifications











