ಪೌರಾಣಿಕ ಚಿತ್ರದ ನೆಗೆಟಿವ್ ಶೇಡ್ ರೋಲ್‌ನಲ್ಲಿ ಪ್ರಭಾಸ್; ಸಿನಿಮಾ ಟೈಟಲ್ ಏನು ಗೊತ್ತಾ?

ಬಾಹುಬಲಿ ಪ್ರಭಾಸ್ ನಟನೆಯ ಸಿನಿಮಾಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿವೆ. 'ರಾಜಾ ಸಾಬ್' ಬೆನ್ನಲ್ಲೇ ಹನು ರಾಘವಪುಡಿ ನಿರ್ದೇಶದನ 'ಫೌಜಿ' ಚಿತ್ರದಲ್ಲಿ ಯಂಗ್ ರೆಬಲ್ ಸ್ಟಾರ್ ನಟಿಸುತ್ತಿದ್ದಾರೆ. ಶೀಘ್ರದಲ್ಲೇ 'ಸ್ಪಿರಿಟ್' ಸಿನಿಮಾ ಶುರುವಾಗಲಿದೆ. ಇದೆಲ್ಲದರ ನಡುವೆ ಪ್ರಶಾಂತ್ ವರ್ಮಾ ನಿರ್ದೇಶನದ ಸಿನಿಮಾ ಭಾರೀ ಸದ್ದು ಮಾಡ್ತಿದೆ.

'ಹನುಮಾನ್' ರೀತಿಯ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ಪ್ರಶಾಂತ್ ವರ್ಮಾ 'ಜೈ ಹನುಮಾನ್' ಸಿನಿಮಾ ಘೋಷಣೆ ಮಾಡಿದ್ದಾರೆ. ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಇದರ ನಡುವೆ ಪ್ರಭಾಸ್ ಮುಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾರೆ. ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡುತ್ತದೆ ಎಂದು ಟಾಲಿವುಡ್‌ನಲ್ಲಿ ಗುಲ್ಲಾಗಿದೆ. ಚಿತ್ರದ ಕಥೆ ಹಾಗೂ ಟೈಟಲ್ ಬಗ್ಗೆ ಇದೀಗ ಭಾರೀ ಚರ್ಚೆ ನಡೀತಿದೆ.

Buzz Interesting title under consideration for Prabhas and Prasanth Varma s film

ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಪ್ರಭಾಸ್ ನಟಿಸುತ್ತಾ ಬರ್ತಿದ್ದಾರೆ. 'ಸಲಾರ್' ಬಳಿಕ ಹೊಂಬಾಳೆ ಸಂಸ್ಥೆ ಜೊತೆ 3 ಸಿನಿಮಾಗಳಲ್ಲಿ ನಟಿಸೋಕೆ ಒಪ್ಪಂದ ಮಾಡಿಕೊಂಡಿದ್ದಾರೆ. ಅದರಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್'-2 ಕೂಡ ಒಂದು. ಇನ್ನುಳಿದಂತೆ ಎರಡು ಸಿನಿಮಾಗಳನ್ನು ಯಾರು ನಿರ್ದೇಶನ ಮಾಡುತ್ತಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಪ್ರಶಾಂತ್ ವರ್ಮಾ ಹಾಗೂ ಲೋಕೆಶ್ ಕನಕರಾಜ್‌ಗೆ ಈ ಅವಕಾಶ ಸಿಗುತ್ತದೆ ಎನ್ನಲಾಗ್ತಿದೆ.

ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ಪ್ರಭಾಸ್ ನಟಿಸುವ ಸಿನಿಮಾ ಲುಕ್ ಟೆಸ್ಟ್ ಕೂಡ ನಡೆದಿದೆ ಎಂದು ಗುಲ್ಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಶೀಘ್ರದಲ್ಲೇ ಪೋಸ್ಟರ್ ಸಮೇತ ಸಿನಿಮಾ ಘೋಷಣೆ ಆಗುತ್ತದೆ ಎಂದು ಟಾಲಿವುಡ್ ಅಂಗಳದಲ್ಲಿ ಗುಸುಗುಸು ಶುರುವಾಗಿದೆ. ಸದ್ಯ ಚಿತ್ರದ ಟೈಟಲ್ ಬಗ್ಗೆ ಇಂಟ್ರೆಸ್ಟಿಂಗ್ ಗಾಸಿಪ್ ಹರಿದಾಡುತ್ತಿದೆ. ಈ ಹಿಂದೆ ರಣ್‌ವೀರ್ ಸಿಂಗ್ ಕಾಂಬಿನೇಷನ್‌ನಲ್ಲಿ ಪ್ರಶಾಂತ್ ವರ್ಮಾ 'ಬ್ರಹ್ಮರಾಕ್ಷಸ' ಸಿನಿಮಾ ಮಾಡ್ತಾರೆ ಎನ್ನಲಾಗಿತ್ತು. ಬಳಿಕ ಅದು ನಿಂತು ಹೋಗಿತ್ತು.

Buzz Interesting title under consideration for Prabhas and Prasanth Varma s film

ರಣ್‌ವೀರ್ ಸಿಂಗ್ ಕೈಬಿಟ್ಟ ಅದೇ ಕಥೆಯನ್ನು ಪ್ರಭಾಸ್‌ಗೆ ಹೇಳಿ ಪ್ರಶಾಂತ್ ಒಪ್ಪಿಸಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಈ ಚಿತ್ರದಲ್ಲಿ ಮಹಾಭಾರತದ ಬಕಾಸುರನ ಕಥೆಯನ್ನು ಹೇಳುತ್ತಾರೆ ಎನ್ನಲಾಗ್ತಿದೆ. ನೆಗೆಟಿವ್ ಶೇಡ್ ಇರುವು ಈ ಪೌರಾಣಿಕ ಪಾತ್ರದಲ್ಲಿ ಯಂಗ್ ರೆಬಲ್ ಸ್ಟಾರ್ ನಟಿಸುತ್ತಾರೆ ಎಂದು ಗುಲ್ಲಾಗಿದೆ. ಇದೀಗ ಚಿತ್ರಕ್ಕೆ ಟೈಟಲ್ ಕೂಡ ಸಿಕ್ಕಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

'ಬಕಾ' ಎಂಬ ಟೈಟಲ್‌ನಲ್ಲಿ ಪ್ರಭಾಸ್ ಹಾಗೂ ಪ್ರಶಾಂತ್ ವರ್ಮಾ ಸಿನಿಮಾ ಮೂಡಿ ಬರುತ್ತದೆ ಎಂದು ಹೇಳಲಾಗುತ್ತಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ತಯಾರಾಗಲಿದೆ. ಆದರೆ ಈ ಬಗ್ಗೆ ಯಾವುದೇ ಅಪ್‌ಡೇಟ್ ಈವರೆಗೆ ಸಿಕ್ಕಿಲ್ಲ. ಇದೆಲ್ಲ ಬರೀ ಅಂತೆಕಂತೆನಾ? ಅಥವಾ ನಿಜವಾಗಿಯೂ ಇಂತಾದೊಂದು ಪ್ರಯತ್ನ ನಡೆಯುತ್ತಿದ್ಯಾ? ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಈಗಾಗಲೇ ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ 'ಜೈ ಹನುಮಾನ್' ಹಾಗೂ 'ಅಧೀರ' ಎಂಬ ಎರಡು ಸಿನಿಮಾಗಳು ಘೋಷಣೆ ಆಗಿದೆ. ಆದರೆ ಯಾವಾಗ ಶುರುವಾಗುತ್ತದೆ ಎನ್ನುವ ಬಗ್ಗೆ ಖಾತ್ರಿಯಿಲ್ಲ. ಪ್ರಭಾಸ್ ಸೈ ಎಂದರೆ 'ಬಕಾ' ಸಿನಿಮಾ ಮೊದಲು ಆರಂಭವಾಗುವ ಸಾಧ್ಯತೆಯಿದೆ.

ಹೊಂಬಾಳೆ ಸಂಸ್ಥೆ ಈಗಾಗಲೇ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡಿದೆ. ಮತ್ತಷ್ಟು ದೊಡ್ಡ ಸಿನಿಮಾಗಳನ್ನು ತೆರೆಗೆ ತರುವ ಲೆಕ್ಕಾಚಾರದಲ್ಲಿದೆ. ಅದರಲ್ಲಿ ಪ್ರಭಾಷ್ ಕಾಂಬಿನೇಷನ್‌ನಲ್ಲಿ ಬರಲಿರುವ 3 ಸಿನಿಮಾಗಳು ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ವರ್ಷದ ಹಿಂದೆ ಬಂದಿದ್ದ 'ಸಲಾರ್' ಸಿನಿಮಾ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.

More from Filmibeat

English summary
Prabhas and Director Prashanth Verma next gets an interesting title;
Read more about: prabhas hombale films tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X