ರಾಮಾಯಣ ಯುದ್ಧಕಾಂಡವೇ SSMB29 ಚಿತ್ರಕ್ಕೆ ಸ್ಫೂರ್ತಿ; ಆ ಪಾತ್ರದಲ್ಲಿ ಮಹೇಶ್ ಬಾಬು?

ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ನಟನೆಯ ಹೊಸ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಒರಿಸ್ಸಾದ ಪರ್ವತಗಳ ಬಳಿ ಕೆಲ ಮಹತ್ವದ ಸನ್ನಿವೇಶಗಳನ್ನು ಸೆರೆಹಿಡಿಯಲಾಗುತ್ತಿದೆ. ಈಗಾಗಲೇ SSMB29 ಮೇಕಿಂಗ್ ವೀಡಿಯೊ ವೈರಲ್ ಆಗಿ ಬಹಳ ಸದ್ದು ಮಾಡ್ತಿದೆ. ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಹುಕೋಟಿ ವೆಚ್ಚದಲ್ಲಿ ಈ ಕ್ರೇಜಿ ಕಾಂಬಿನೇಷನ್ ಸಿನಿಮಾ ನಿರ್ಮಾಣವಾಗುತ್ತಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. 'RRR' ಬಳಿಕ ಜಕ್ಕಣ್ಣ ಬಹಳ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಕೈ ಜೋಡಿಸಿದ್ದಾರೆ. ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಆಕೆ ಕೂಡ ಒಡಿಸಾಗೆ ಸೇರಿಕೊಂಡಿದ್ದಾರೆ.

Buzz Is Mahesh babu and Rajamouli s SSMB29 Story is Inspired by an Episode from Ramayana

ಒಂದಕ್ಕಿಂತ ಒಂದು ವಿಭಿನ್ನ ಜಾನರ್ ಸಿನಿಮಾಗಳನ್ನು ರಾಜಮೌಳಿ ಕಟ್ಟಿಕೊಡುತ್ತಾ ಬರ್ತಿದ್ದಾರೆ. ಈ ಬಾರಿ ಪೌರಾಣಿಕ ಕಥೆಗೆ ಲಿಂಕ್ ಮಾಡಿ ಒಂದು ಹೊಸ ಕಥೆಯನ್ನು ಹೇಳಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಗ್ಲೋಬ್‌ಟ್ರೊಟಿಂಗ್ ಆಕ್ಷನ್ ಅಡ್ವೆಂಚರಸ್ ಸಿನಿಮಾ ಎಂದು ಈಗಾಗಲೇ ರಾಜಮೌಳಿ ಕೂಡ ಹೇಳಿದ್ದಾರೆ. ತೆಲುಗು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರವನ್ನು ಸೆರೆ ಹಿಡಿಯುವ ಪ್ರಯತ್ನ ನಡೀತಿದೆ. ಹಾಲಿವುಡ್ ಪ್ರೇಕ್ಷಕರನ್ನು ಮನಸ್ಸಿನಲ್ಲಿಟ್ಟುಕೊಂಡು ಸಿನಿಮಾ ತೆರೆಗೆ ತರಲಾಗುತ್ತಿದೆ.

ಹೊಸ ವರ್ಷದ ಆರಂಭದಲ್ಲೇ ಚಿತ್ರದ ಮುಹೂರ್ತ ನಡೆದಿತ್ತು. ಆದರೆ ಆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಬಳಿಕ ಸದ್ದಿಲ್ಲದೇ ಜಕ್ಕಣ್ಣ ಚಿತ್ರೀಕರಣ ಆರಂಭಿಸಿದ್ದರು. ಸದ್ಯ ಚಿತ್ರತಂಡ ಒರಿಸ್ಸಾದಲ್ಲಿ ಬೀಡು ಬಿಟ್ಟಿದೆ. ಅಲ್ಲಿ ಒಂದು ಸನ್ನಿವೇಶದ ಚಿತ್ರೀಕರಣವನ್ನು ಯಾರೋ ಮೊಬೈಲ್‌ನಲ್ಲಿ ಶೂಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಅದನ್ನು ಚಿತ್ರತಂಡ ಡಿಲೀಟ್ ಮಾಡಿಸುವ ಪ್ರಯತ್ನವನ್ನು ಮಾಡಿದೆ. ಇದೆಲ್ಲದರ ನಡುವೆ ಚಿತ್ರ ಕಥೆ ಬಗ್ಗೆ ಉಹಾಪೋಹ ಶುರುವಾಗಿದೆ.

Buzz Is Mahesh babu and Rajamouli s SSMB29 Story is Inspired by an Episode from Ramayana

ರಾಮಾಯಣದ ಯುದ್ಧಕಾಂಡದಲ್ಲಿ ಹನುಮಂತ ಸಂಜೀವಿನಿ ತಂದು ಲಕ್ಷ್ಮಣನ ಪ್ರಾಣ ಉಳಿಸುವ ಕಥೆಯಿದೆ. ಇದರಿಂದಲೇ ಪ್ರೇರಣೆಗೊಂಡು ರಾಜಮೌಳಿ ಅಂಡ್ ಟೀಂ SSMB29 ಚಿತ್ರಕ್ಕೆ ಕಥೆ ಬರೆದಿದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. ಈಗಾಗಲೇ ಈ ಕಾನ್ಸೆಪ್ಟ್‌ನಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಮತ್ತೆ ಅದೇ ಕಾನ್ಸೆಪ್ಟ್‌ನಲ್ಲಿ ಜಕ್ಕಣ್ಣ ಸಿನಿಮಾ ಮಾಡ್ತಾರಾ? ಎನ್ನುವ ಅನುಮಾನ ಕೂಡ ಮೂಡಿದೆ.

ಲಕ್ಷ್ಮಣನ ಪ್ರಾಣ ಉಳಿಸಲು ಹನುಮಂತ ಸಂಜೀವಿನಿ ತಂದಂತೆ ಈ ಚಿತ್ರದಲ್ಲಿ ನಾಯಕ ಒಂದು ಜೀವ ಉಳಿಸಲು ಅಮೂಲ್ಯವಾದ ಮೆಡಿಸನ್ ತರಲು ಹೋಗುತ್ತಾನೆ, ಅದರ ಸುತ್ತಾ ಸಿನಿಮಾ ಕಥೆ ಸಾಗುತ್ತದೆ ಎಂದು ಚರ್ಚೆ ನಡೀತಿದೆ. ಈ ಹಿಂದೆ ಚಿರಂಜೀವಿ ನಟನೆಯ ತೆಲುಗಿನ 'ಜಗದೇಕ ವೀರುಡು ಅತಿಲೋಕ ಸುಂದರಿ' ಹಾಗೂ 'ಅಂಜಿ' ಚಿತ್ರಗಳಲ್ಲೇ ಇದೇ ಕಾನ್ಸೆಪ್ಟ್ ಕಥೆ ಇತ್ತು. ಹಾಗಾಗಿ ಎಲ್ಲಾ ಗೊತ್ತಿದ್ದು ರಾಜಮೌಳಿ ಇಂತಾದೊಂದು ಕಥೆ ಮಾಡ್ತಾರಾ? ಎನ್ನುವ ಪ್ರಶ್ನೆಯನ್ನು ಕೆಲವರು ಕೇಳುತ್ತಿದ್ದಾರೆ.

ಕಾಶಿಯ ಇತಿಹಾಸ ಆಧರಿಸಿ ಕಥೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅದಕ್ಕಾಗಿ ಕಾಶಿ ಪಟ್ಟಣ ಸೆಟ್ ಹಾಕುತ್ತಾರೆ ಎನ್ನುವ ಊಹಾಪೋಹ ಕೂಡ ಶುರುವಾಗಿದೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ SSMB29 ಚಿತ್ರಕ್ಕೂ ಕಥೆ ಬರೆದಿದ್ದಾರೆ. ಎಂ. ಎಂ ಕೀರವಾಣಿ ಸಂಗೀತ ಚಿತ್ರಕ್ಕೆ ಇರಲಿದೆ. ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ವೈರಲ್ ಆಗಿರುವ ವೀಡಿಯೋದಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿರುವುದು ಪೃಥ್ವಿರಾಜ್ ಎನ್ನಲಾಗ್ತಿದೆ.

ಶೀಘ್ರದಲ್ಲೇ ರಾಜಮೌಳಿ ಸುದ್ದಿಗೋಷ್ಠಿ ನಡೆಸಿ SSMB29 ಸಿನಿಮಾ ಅಪ್‌ಡೇಟ್ ಕೊಡ್ತಾರೆ ಎನ್ನಲಾಗ್ತಿದೆ. ಅಭಿಮಾನಿಗಳಂತೂ ಇದಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. 1000 ಕೋಟಿ ರೂ. ಬಜೆಟ್‌ನಲ್ಲಿ ಎರಡು ಭಾಗಗಳಾಗಿ ಈ ಮಹತ್ವಾಕಾಂಕ್ಷೆಯ ಸಿನಿಮಾ ನಿರ್ಮಾಣವಾಗುತ್ತದೆ ಎಂದು ಹೇಳಲಾಗುತ್ತಿದೆ.

More from Filmibeat

English summary
SSMB29; Rajamouli-Mahesh Babu's Film based on Kashi's history or Ramayana sanjeevini episode;
Read more about: mahesh babu rajamouli tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X