For Quick Alerts
  ALLOW NOTIFICATIONS  
  For Daily Alerts

  ದಸರಾ ಹಬ್ಬಕ್ಕೆ 'ಆದಿಪುರುಷ್' ಟೀಸರ್, ಫಸ್ಟ್ ಲುಕ್: ಟ್ರೆಂಡಿಂಗ್‌ನಲ್ಲಿ ಪ್ರಭಾಸ್!

  |

  ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಸದ್ಯ ದು:ಖದಲ್ಲಿದ್ದಾರೆ. ಪ್ರಭಾಸ್ ದೊಡ್ಡಪ್ಪ ಕೃಷ್ಣಂ ರಾಜು ಇತ್ತೀಚೆಗೆ ನಿಧನರಾಗಿದ್ದು, ಆ ನೋವಿನಿಂದ ಹೊರಬರಬೇಕಿದೆ. ಈ ಮಧ್ಯೆ ಪ್ರಭಾಸ್ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ.

  ಪ್ರಭಾಸ್ ಅಭಿನಯದ ದುಬಾರಿ ಸಿನಿಮಾ 'ಆದಿಪುರುಷ್'. ಶ್ರೀರಾಮನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಯಂಗ್ ರೆಬೆಲ್‌ಸ್ಟಾರ್ ನೋಡಲು ಫ್ಯಾನ್ಸ್ ತುದಿಗಾಲಲ್ಲಿ ಸಿಕ್ಕಿದೆ. ಅದಕ್ಕೆ ಸರಿಯಾಗಿ 'ಆದಿಪುರುಷ್' ಫಸ್ಟ್ ಲುಕ್ ಪೋಸ್ಟರ್, ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ ಅನ್ನೋ ಮಾತು ಓಡಾಡುತ್ತಿದೆ.

  "ಪ್ರಭಾಸ್ ಸರ್ ಮದುವೆ ಆದರೆ ನಾನು ಮದುವೆ ಆಗ್ತೀನಿ": ಧನಂಜಯ್ ಹೇಳಿಕೆ ವೈರಲ್!

  ಅತೀ ಹೆಚ್ಚು ವಿಎಫ್‌ಎಕ್ಸ್ ಹೊಂದಿರೋ ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಈಗಾಗಲೇ ಶುರುವಾಗಿದೆ. ಶೂಟಿಂಗ್ ಹಾಗೂ ವಿಎಫ್‌ಎಕ್ಸ್ ಎರಡೂ ಒಟ್ಟೊಟ್ಟಿಗೆ ನಡೆದಿತ್ತು. ಆದರೆ, ಚಿತ್ರತಂಡ ಇದೂವರೆಗೂ ಒಂದೇ ಒಂದು ಲುಕ್ ಅನ್ನು ರಿಲೀಸ್ ಮಾಡಿರಲಿಲ್ಲ. ಈಗ ಕೊನೆಗೂ ಫಸ್ಟ್ ಲುಕ್ ಹಾಗೂ ಟೀಸರ್ ರಿಲೀಸ್‌ಗೆ ವೇದಿಕೆ ಸಜ್ಜಾಗಿದೆ ಎನ್ನಲಾಗಿದೆ.

  'ಆದಿಪುರುಷ್' ಟ್ರೆಂಡಿಂಗ್

  'ಆದಿಪುರುಷ್' ಟ್ರೆಂಡಿಂಗ್

  ಡಾರ್ಲಿಂಗ್ ಪ್ರಭಾಸ್ ಫ್ಯಾನ್ಸ್‌ 'ಆದಿಪುರುಷ್' ಸಿನಿಮಾ ರಿಲೀಸ್‌ಗಾಗಿ ಎದುರು ನೋಡುತ್ತಿದ್ದಾರೆ. 'ಸಾಹೋ' ಹಾಗೂ 'ರಾಧೆ ಶ್ಯಾಮ್' ಸೋಲಿನ ಬಳಿಕ 'ಆದಿಪುರುಷ್' ಗೆದ್ದೇ ಗೆಲ್ಲುತ್ತೆ ಅನ್ನೋ ಅಚಲ ನಂಬಿಕೆ ಇದೆ. ಇದು ಗೊತ್ತಿದ್ದರೂ, ಟೀಮ್ ಮಾತ್ರ 'ಆದಿಪುರುಷ್' ಸಿನಿಮಾದ ಫಸ್ಟ್ ಲುಕ್ ಕೂಡ ಬಿಟ್ಟಿರಲಿಲ್ಲ. ಈಗ ಪ್ರಭಾಸ್ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಶುರುವಾಗಿದೆ. ಫಸ್ಟ್ ಲುಕ್ ಹಾಗೂ ಟೀಸರ್ ರಿಲೀಸ್ ಬಗ್ಗೆ ಅಭಿಮಾನಿಗಳೇ ಟ್ರೆಂಡಿಂಗ್ ಮಾಡುತ್ತಿದ್ದಾರೆ.

  ಪ್ರಭಾಸ್- ಅನುಷ್ಕಾ ಮದುವೆ ಬಗ್ಗೆ ಕೃಷ್ಣಂರಾಜು ಹೇಳಿದ್ದೇನು? ಕೊನೆಗೂ ಆ ಆಸೆ ಈಡೇರಲೇ ಇಲ್ಲ!ಪ್ರಭಾಸ್- ಅನುಷ್ಕಾ ಮದುವೆ ಬಗ್ಗೆ ಕೃಷ್ಣಂರಾಜು ಹೇಳಿದ್ದೇನು? ಕೊನೆಗೂ ಆ ಆಸೆ ಈಡೇರಲೇ ಇಲ್ಲ!

  ದಸರಾಗೆ 'ಆದಿಪುರುಷ್' ಟೀಸರ್!

  ದಸರಾಗೆ 'ಆದಿಪುರುಷ್' ಟೀಸರ್!

  ಡಾರ್ಲಿಂಗ್ ಪ್ರಭಾಸ್ ಅಭಿನಯದ 'ಆದಿಪುರುಷ್' ಸಿನಿಮಾದ ಟೀಸರ್ ದಸರಾ ಹಬ್ಬಕ್ಕಾಗಿ ಬಿಡುಗಡೆಯಾಗಲಿದೆ. ಆಕ್ಟೋಬರ್ 03 ಟೀಸರ್ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಅದಕ್ಕೂ ಒಂದು ವಾರ ಮೊದಲೇ ಫಸ್ಟ್ ಲುಕ್ ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಶುರು ಮಾಡಿದ್ದಾರೆ. ಆದರೆ, ಈ ಬಗ್ಗೆ 'ಆದಿಪುರುಷ್' ತಂಡ ಮಾತ್ರ ಅಧಿಕೃತವಾಗಿ ಇನ್ನೂ ಹೇಳಿಕೆಯನ್ನು ನೀಡಿಲ್ಲ.

  ರಾವಣನ ದಹಿಸಲಿರೋ ಪ್ರಭಾಸ್

  ರಾವಣನ ದಹಿಸಲಿರೋ ಪ್ರಭಾಸ್

  ದೆಹಲಿಯಲ್ಲಿ ದಸರಾ ಪ್ರಯುಕ್ತ 'ರಾಮ್ ಲೀಲಾ' ಉತ್ಸವ ನಡೆಯಲಿದೆ. 10 ದಿನ ಅದ್ದೂರಿಯಾಗಿ ನಡೆಯುವ ಈ ಕಾರ್ಯಕ್ರಮಕ್ಕೆ ಬಾಲಿವುಡ್ ತಾರೆಯರು ಹಾಗೂ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 26 ರಿಂದ ರಾಮಲೀಲಾ ಆರಂಭ ಆಗಲಿದ್ದು, ಈ ಕಾರ್ಯಕ್ರಮದಲ್ಲಿ ರಾವಣನ ಪ್ರತಿಕೃತಿಯನ್ನು ದಹನ ಮಾಡಲು ಪ್ರಭಾಸ್ ಆಗಮಿಸಲಿದ್ದು, ಮುಖ್ಯ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

  ಐತಿಹಾಸಿಕ ರಾಮನವಮಿ ಆಚರಣೆಯಲ್ಲಿ ಪ್ರಭಾಸ್‌ಗೆ ವಿಶೇಷ ಗೌರವಐತಿಹಾಸಿಕ ರಾಮನವಮಿ ಆಚರಣೆಯಲ್ಲಿ ಪ್ರಭಾಸ್‌ಗೆ ವಿಶೇಷ ಗೌರವ

  'ಆದಿಪುರುಷ್' ಬಿಡುಗಡೆ ಯಾವಾಗ?

  'ಆದಿಪುರುಷ್' ಬಿಡುಗಡೆ ಯಾವಾಗ?

  ಪ್ರಭಾಸ್ ಅಭಿನಯದ 'ಆದಿಪುರುಷ್' ಸಿನಿಮಾ ಮುಂದಿನ ರಿಲೀಸ್ ಆಗಲಿದೆ. ಜನವರಿ 12, 2023ಕ್ಕೆ ಬಿಡುಗಡೆ ಎನ್ನಲಾಗಿದೆ. ದಸರಾಗೂ 'ಆದಿಪುರುಷ್‌'ಗೂ ಲಿಂಕ್ ಇರುವುದರಿಂದಲೇ ಇದೇ ಹಬ್ಬಕ್ಕೆ ಸಿನಿಮಾ ಫಸ್ಟ್ ಟೀಸರ್ ಬಿಡುಗಡೆಯಾಗಲಿದೆ ಅನ್ನೋ ನಂಬಿಕೆ ಪ್ರಭಾಸ್ ಅಭಿಮಾನಿಗಳದ್ದು. ಆದರೆ, ಇನ್ನೂ ಸಿನಿಮಾ ತಂಡ ಆಗಲಿ, ಪ್ರಭಾಸ್ ಆಗಲಿ, ಇಲ್ಲಾ ನಿರ್ದೇಶಕ ಓಂ ರಾವುತ್ ಆಗಲಿ ಈ ಸಿನಿಮಾದ ಟೀಸರ್ ಹಾಗೂ ಫಸ್ಟ್ ಲುಕ್ ರಿಲೀಸ್ ಬಗ್ಗೆ ಇನ್ನೂ ಮಾಹಿತಿಯನ್ನು ನೀಡಿಲ್ಲ.

  English summary
  Buzz is That Prabhas Starrer Adipurush Movie Teaser On Dasara Festival, Know More.
  Wednesday, September 14, 2022, 13:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X