ರಾಮ್ ಚರಣ್-ಉಪಾಸನಾ ತಮ್ಮ ಅವಳಿ ಮಕ್ಕಳಿಗೆ ಹೆಸರಿಡಲು ಜ್ಯೋತಿಷಿಗೆ ಕೊಟ್ಟ ಹಣವೆಷ್ಟು?
ಟಾಲಿವುಡ್‌ನ ಮೆಗಾ ಸ್ಟಾರ್ ಚಿರಂಜೀವಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಪುತ್ರ ರಾಮ್ ಚರಣ್ ಹಾಗೂ ಸೊಸೆ ಉಪಾಸನಾಗೆ ಇತ್ತೀಚೆಗೆ ಅವಳಿ ಮಕ್ಕಳು ಜನಿಸಿವೆ. ಅದರಲ್ಲಿ ಒಬ್ಬ ಮಗ ಹಾಗೂ ಇನ್ನೊಬ್ಬಳು ಮಗಳು ಜನಿಸಿದ್ದಾರೆ. ಇದು ಮೆಗಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡುವಂತೆ ಮಾಡಿದೆ. ಚಿರಂಜೀವಿ ಆಸೆ ಕೊನೆಗೂ ಈಡೇರಿದೆ.
ಕೆಲವು ದಿನಗಳ ಹಿಂದಷ್ಟೇ ಸಮಾರಂಭವೊಂದರಲ್ಲಿ ಚಿರಂಜೀವಿ ತಮ್ಮ ಮನೆಗೆ ಒಂದು ಗಂಡು ಮಗು ಬೇಕು ಎಂದು ಆಸೆ ಪಟ್ಟಿದ್ದರು. ಇವರ ಆಸೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ವಿವಾದಕ್ಕೂ ಎಡೆ ಮಾಡಿಕೊಟ್ಟಿತ್ತು. ಆದರೆ, ಮೆಗಾ ಕುಟುಂಬ ಈ ಬಗ್ಗೆ ಸಮಜಾಯಿಷಿ ನೀಡುವುದಕ್ಕೆ ಹೋಗಿರಲಿಲ್ಲ. ರಾಮ್ ಚರಣ್ ಹಾಗೂ ಉಪಾಸನಾ ಪುತ್ರಿಗೆ ಜನ್ಮ ನೀಡಿದ ಬಳಿಕ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ.

ರಾಮ್ ಚರಣ್ ಹಾಗೂ ಉಪಾಸನಾಗೆ ಅವಳಿ ಮಕ್ಕಳು ಜನಿಸುತ್ತಿದ್ದಂತೆ ರಾಮ್ ಚರಣ್‌ಗೆ ವಾರಸುದಾರ ಸಿಕ್ಕಂತಾಗಿದೆ ಎಂದು ತೆಲುಗು ಮಂದಿ, ಅದರಲ್ಲೂ ಮೆಗಾ ಕುಟುಂಬದ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಇದು ಅವರ ಆನಂದವನ್ನು ದುಪ್ಪಟ್ಟು ಮಾಡಿದೆ. ಇದೇ ವೇಳೆ ಟಾಲಿವುಡ್ ಮಾಧ್ಯಮಗಳು ಅವಳಿ ಮಕ್ಕಳಿಗೆ ಖರ್ಚು ಮಾಡುವುದಕ್ಕೆ ದುಬಾರಿ ಮೊತ್ತವನ್ನೇ ಖರ್ಚು ಮಾಡಿದ್ದಾರೆಂದು ವರದಿ ಮಾಡಿವೆ. ಹಾಗಿದ್ದರೆ, ಅವಳಿ ಮಕ್ಕಳ ಹೆಸರಿಡುವುದಕ್ಕೆ ಮೆಗಾ ಕುಟುಂಬ ಖರ್ಚು ಮಾಡಿದ್ದೆಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
ಅವಳಿ ಮಕ್ಕಳು ಜನಿಸಿದ ಈ ಶುಭ ಸಂದರ್ಭದಲ್ಲಿ ಶಿಶುಗಳಿಗೆ ಹೆಸರಿಡುವ ಸಲುವಾಗಿ ಮೆಗಾ ಕುಟುಂಬ ತೆಲುಗಿನ ಜನಪ್ರಿಯ ಜ್ಯೋತಿಷಿ ಮಹೇಶ್ ಬಾಗ್ ಅವರನ್ನು ಸಂಪರ್ಕ ಮಾಡಿದೆ ಎನ್ನಲಾಗಿದೆ. ಜ್ಯೋತಿಷಿ ಮಹೇಶ್ ಬಾಗ್ ಅವರು ಕೇವಲ 30 ನಿಮಿಷಗಳ ಕಾಲ ಮಕ್ಕಳ ಜಾತಕವನ್ನು ಪರಿಶೀಲಿಸಿದ್ದಾರೆ. ಬಳಿಕ ಇಬ್ಬರಿಗೂ ಸೂಕ್ತವಾದ ಹೆಸರನ್ನು ಸೂಚಿಸಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ಆದರೆ, ಅವಳಿ ಮಕ್ಕಳಿಗೆ ಹೆಸರು ಇಟ್ಟಿದ್ದು ಒಂದು ಕಡೆಯಾದರೆ, ಜ್ಯೋತಿಷಿಗೆ ನೀಡಿದ ದುಬಾರಿ ಮೊತ್ತದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ತಮ್ಮ ಮಕ್ಕಳಿಗೆ ಹೆಸರು ಇಡುವುದಕ್ಕಾಗಿ ರಾಮ್ ಚರಣ್ ಹಾಗೂ ಉಪಾಸನಾ ಇಬ್ಬರೂ ಜ್ಯೋತಿಷಿಗೆ ಸುಮಾರು ₹3 ಲಕ್ಷ ರೂಪಾಯಿ ಹಣವನ್ನು ನೀಡಿದ್ದಾರೆ. ಈ ಮೊತ್ತ ಸಾಮಾನ್ಯ ಜನರಿಗೆ ಭರಿಸಲು ಅಸಾಧ್ಯ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ಇನ್ನು ಜ್ಯೋತಿಷಿ ಮಹೇಶ್ ಬಾಗ್ ಅವರು ಮೆಗಾ ಕುಟುಂಬಕ್ಕೆ ಕಳೆದ ಹಲವು ವರ್ಷಗಳಿಂದ ಜ್ಯೋತಿಷ್ಯ ವಿಷಯದಲ್ಲಿ ಸಲಹೆ ನೀಡುತ್ತಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ ತಾವು ತೆಗೆದುಕೊಳ್ಳುವ ಪ್ರತಿಯೊಂದು ಪ್ರಮುಖ ನಿರ್ಧಾರವನ್ನೂ ಮಹೇಶ್ ಬಾಗ್ ಅವರೊಂದಿಗೆ ಚರ್ಚಿಸಿ, ಅವರ ಸಲಹೆ ಪಡೆದ ನಂತರವೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರ ನಿಖರವಾದ ಭವಿಷ್ಯವಾಣಿಗೆ ಮೆಗಾ ಕುಟುಂಬ ಹೆಚ್ಚಿನ ಮನ್ನಣೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ.
ಇನ್ನು ರಾಮ್ ಚರಣ್-ಉಪಾಸನಾಗೆ ಅವಳಿ ಮಕ್ಕಳ ಜನನದಿಂದ ಮೆಗಾ ಕುಟುಂಬಕ್ಕೆ ಇದ್ದ ದೊಡ್ಡ ಕೊರತೆಯೊಂದು ನೀಗಿದೆ ಎಂದು ತೆಲುಗು ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಚಿರಂಜೀವಿ ಮತ್ತೆ ಅಜ್ಜನ ಸ್ಥಾನ ಪಡೆದುಕೊಂಡಿದ್ದಕ್ಕೆ ಅಪಾರ ಸಂತೋಷದಲ್ಲಿ ಇದ್ದಾರೆ. ಇನ್ನೊಂದು ಕಡೆ ಈ ಸಂಕ್ರಾಂತಿ ಹಬ್ಬದಂದು ರಿಲೀಸ್ ಆಗಿದ್ದ 'ಮನ ಶಂಕರ್ ವರಪ್ರಸಾದ್ ಗಾರು' ಸಿನಿಮಾ ಯಶಸ್ಸು ಪಡೆದುಕೊಂಡಿದೆ. ಇದು ಒಂದು ಕಡೆಯಾದರೆ, ಮೊಮ್ಮಗ ಮನೆಗೆ ಬಂದ ಸಂತೋಷ ಮತ್ತೊಂದು ಹಂತದ ಸಂಭ್ರಮ ತಂದಿದೆ ಎಂದು ಸುದ್ದಿಯಾಗಿದೆ.


Click it and Unblock the Notifications











