SSMB29: ಮಹೇಶ್ - ರಾಜಮೌಳಿ ಸಿನಿಮಾ ಬಜೆಟ್ ಕೇಳಿ ಫ್ಯಾನ್ಸ್ ಸುಸ್ತು!

ಯಾವುದೇ ಚಿತ್ರಕ್ಕೆ ಬಜೆಟ್ ಬಹಳ ಮುಖ್ಯ. ಒಳ್ಳೆ ಕಥೆ ಇದ್ದರೆ ಕಮ್ಮಿ ಬಜೆಟ್‌ನಲ್ಲಿ ಕೂಡ ಸಿನಿಮಾ ಮಾಡಬಹುದು ಎನ್ನುವುದು ಬೇರೆ ಮಾತು. ಆದರೆ ತೆರೆಮೇಲೆ ದೊಡ್ಡಮಟ್ಟದಲ್ಲಿ ವಿಷ್ಯುವಲ್ ಟ್ರೀಟ್ ಕೊಡಬೇಕು ಅಂದರೆ ದೊಡ್ಡ ಬಜೆಟ್ ಬೇಕಾಗುತ್ತಾರೆ. ಸದ್ಯ ಸ್ಟಾರ್ ನಟರ ಚಿತ್ರಗಳಿಗೆ 200, 300 ಕೋಟಿ ರೂ. ಬಜೆಟ್ ಸರ್ವೇ ಸಾಧಾರಣ ಎನ್ನುವಂತಾಗಿದೆ.

ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ 300, 400 ಕೋಟಿ ರೂ. ಹಾಕಿ ಚಿತ್ರ ನಿರ್ಮಿಸಿದರೂ ವಾಪಸ್ ಬರುತ್ತದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಸದ್ಯ ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಚಿತ್ರದ ಬಜೆಟ್ ಬಗ್ಗೆ ಭಾರೀ ಚರ್ಚೆ ನಡೀತಿದೆ. 'RRR' ಬಳಿಕ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಮೌಳಿ ಸಿನಿಮಾ ಘೋಷಿಸಿದ್ದಾರೆ. ಸದ್ಯ ಪ್ರೀ ಪ್ರೊಡಕ್ಷನ್ ವರ್ಕ್ ನಡೀತಿದೆ. ಜನವರಿಯಲ್ಲಿ ಸಿನಿಮಾ ಸೆಟ್ಟೇರುವ ನಿರೀಕ್ಷೆಯಿದೆ.

Buzz Mahesh Babu and Rajamouli s SSMB29 will be set to 1000 crore budget

ಬಹಳ ಹಿಂದೆಯೇ ಮೌಳಿ- ಮಹೇಶ್ ಜೋಡಿ ಸಿನಿಮಾ ಮಾಡಬೇಕಿತ್ತು. ಕಾರಣಾಂತರಗಳಿಂದ ತಡವಾಗಿತ್ತು. ಆದರೆ ಈ ಬಾರಿ ಇಬ್ಬರೂ ಕೈ ಜೋಡಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಚಿತ್ರಕ್ಕೆ ಸಿದ್ಧತೆ ನಡೆಯುತ್ತಿದೆ. ಕೆ. ಎಲ್ ನಾರಾಯಣ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಈಗಾಗಲೇ ಮಹೇಶ್ ಬಾಬು ಚಿತ್ರದ ಪಾತ್ರಕ್ಕಾಗಿ ಉದ್ದನೆಯ ಗಡ್ಡ, ಕೂದಲು ಬಿಟ್ಟು ತಯಾರಿ ನಡೆಸುತ್ತಿದ್ದಾರೆ. ಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಈ ಚಿತ್ರಕ್ಕೂ ಕಥೆ ಬರೆದಿದ್ದಾರೆ.

ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿದೆ. ಸದ್ಯಕ್ಕೆ SSMB 29 ಎಂದು ಕರೆಯಲಾಗುತ್ತಿದೆ. ಕಾರಣ ಇದು ಮಹೇಶ್ ಬಾಬು ನಟನೆಯ 29ನೇ ಸಿನಿಮಾ. ಒಂದಕ್ಕಿಂತ ಒಂದು ಅದ್ಭುತ ಸಿನಿಮಾಗಳನ್ನು ಜಕ್ಕಣ್ಣ ಕಟ್ಟಿಕೊಡುತ್ತಾ ಬರುತ್ತಿದ್ದಾರೆ. ಈ ಬಾರಿ ಮತ್ತಷ್ಟು ದೊಡ್ಡದಾಗಿ ಪ್ಲ್ಯಾನ್ ಮಾಡುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಸಾಗುವ ಕಥೆಯನ್ನು ಹೇಳಲು ಮುಂದಾಗಿದ್ದಾರೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಈ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ.

Buzz Mahesh Babu and Rajamouli s SSMB29 will be set to 1000 crore budget

ಎರಡು ಭಾಗಗಳಾಗಿ ಈ ಚಿತ್ರ ನಿರ್ಮಾಣ ಆಗುತ್ತದೆ ಎನ್ನಲಾಗ್ತಿದೆ. ಆದರೆ ಚಿತ್ರದ ಬಗ್ಗೆ ಅಧಿಕೃತ ಮಾಹಿತಿ ಈವರೆಗೆ ಸಿಕ್ಕಿಲ್ಲ. ಸದ್ಯ ಚಿತ್ರದ ಬಜೆಟ್ 1000 ಕೋಟಿ ರೂ. ಎನ್ನುವ ಚರ್ಚೆ ಶುರುವಾಗಿದೆ. ಭಾರತೀಯ ಚಿತ್ರರಂಗದಲ್ಲಿ ಈಗ 1000 ಕೋಟಿ ರೂ. ಬಾಕ್ಸಾಫೀಸ್ ಕಲೆಕ್ಷನ್ ಲೆಕ್ಕಾಚಾರ ನಡೀತಿದೆ. ಆದರೆ SSMB 29 ಬಜೆಟ್ 1000 ಕೋಟಿ ರೂ. ಎಂದು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಹಾಗಿದ್ದರೆ ಇದು ಇನ್ನು ಎಷ್ಟು ದೊಡ್ಡ ಸಿನಿಮಾ ಇರಬಹುದು? ಸ್ಟಾರ್‌ಕಾಸ್ಟ್, ಮೇಕಿಂಗ್? ಹೇಗಿರುತ್ತದೆ ಎಂದು ಊಹಿಸಿಕೊಂಡೇ ಥ್ರಿಲ್ಲಾಗಿದ್ದಾರೆ.

ಜ್ಯೂ. ಎನ್‌ಟಿಆರ್ ಹಾಗೂ ರಾಮ್‌ಚರಣ್ ನಟನೆಯ 'RRR' ಚಿತ್ರವನ್ನು ನೋಡಿ ಹಾಲಿವುಡ್ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಜೇಮ್ಸ್ ಕ್ಯಾಮರೂನ್ ರೀತಿಯ ಫಿಲ್ಮ್ ಮೇಕರ್ಸ್ ಸಹ ಕೊಂಡಾಡಿದ್ದರು. ಇದೇ ಸ್ಫೂರ್ತಿಯಿಂದ ಈ ಬಾರಿ ಹಾಲಿವುಡ್ ರೇಂಜ್ ಚಿತ್ರಕ್ಕೆ ಜಕ್ಕಣ್ಣ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಅದಕ್ಕೆ ತಕ್ಕ ಮೇಕಿಂಗ್, ಗ್ರಾಫಿಕ್ಸ್ ಕೂಡ ಇರಲಿದೆ. ಹಾಗಾಗಿ ಸಹಜವಾಗಿಯೇ ಬಜೆಟ್ ಹೆಚ್ಚಾಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಭಾರತೀಯ ಚಿತ್ರರಂಗದಲ್ಲೇ SSMB 29 ಬಹಳ ದುಬಾರಿ ಸಿನಿಮಾ ಆಗುತ್ತದೆ ಎಂದು ಹೇಳಲಾಗುತ್ತಿದೆ. ರಾಜಮೌಳಿ- ಮಹೇಶ್ ಬಾಬು ಕೂಡ ಭಾರೀ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ. ಚಿತ್ರಕ್ಕಾಗಿ ಎರಡ್ಮೂರು ವರ್ಷ ವ್ಯಯಿಸಲಿದ್ದು ಸಹಜವಾಗಿಯೇ ಬಜೆಟ್ ಹೆಚ್ಚಾಗಲಿದೆ. ಆದಷ್ಟು ಬೇಗ ಸಿನಿಮಾ ಘೋಷಣೆ ಮಾಡಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.

More from Filmibeat

English summary
Shocking budget for Mahesh Babu and Rajamouli's SSMB29
Read more about: mahesh babu rajamouli tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X