ಒಂದೇ ಚಿತ್ರದಲ್ಲಿ ಪವನ್ ಎದುರು ಪ್ರಭಾಸ್; ಬಾಕ್ಸಾಫೀಸ್ ಶೇಕ್ ಆಗೋದು ಗ್ಯಾರೆಂಟಿ

ಮಲ್ಟಿಸ್ಟಾರರ್ ಸಿನಿಮಾಗಳ ಬಗ್ಗೆ ನಿರೀಕ್ಷೆ ಸಹಜ. ಇಬ್ಬರೂ ಸ್ಟಾರ್ ನಟರು ಒಟ್ಟಿಗೆ ನಟಿಸಿದರೆ ಇಬ್ಬರ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬೀಳ್ತಾರೆ. ಆಗ ಸಹಜವಾಗಿಯೇ ಸಿನಿಮಾ ಸದ್ದು ಮಾಡುತ್ತದೆ. ತೆಲುಗಿನಲ್ಲಿ ಈಗ ಪವನ್ ಕಲ್ಯಾಣ್ ಎದುರು ಪ್ರಭಾಸ್ ನಟಿಸೋ ಬಗ್ಗೆ ಚರ್ಚೆ ನಡೀತಿದೆ.

ಪವನ್ ಕಲ್ಯಾಣ್ ಹಾಗೂ ಪ್ರಭಾಸ್. ತೆಲುಗು ಚಿತ್ರರಂಗದ ಸ್ಟಾರ್ ನಟರು. ಇಬ್ಬರಿಗೂ ಇರುವ ಫ್ಯಾನ್ ಫಾಲೋಯಿಂಗ್ ಬಗ್ಗೆ ಹೊಸದಾಗಿ ಹೇಳುವುದು ಬೇಕಿಲ್ಲ. ಆಂಧ್ರ ಡಿಸಿಎಂ ಆಗಿ ಪವನ್ ಸೇವೆ ಸಲ್ಲಿಸುತ್ತಿದ್ದಾರೆ. ಆದರೂ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ನಟಿಸುತ್ತಿದ್ದ 3 ಸಿನಿಮಾಗಳನ್ನು ಬಿಟ್ಟು ರಾಜಕೀಯರಂಗದಲ್ಲಿ ಪವರ್ ಸ್ಟಾರ್ ಬ್ಯುಸಿ ಆಗಿಬಿಟ್ಟರು.

Buzz Prabhas to do a special cameo in Pawan Kalyan s OG movie

10 ವರ್ಷಗಳ ಹಿಂದೆಯೇ ಜನಸೇನಾ ಪಕ್ಷವನ್ನು ಪ್ರಭಾಸ್ ಸ್ಥಾಪಿಸಿದರು. ಆದರೆ ಗೆಲ್ಲಲು ಬಹಳ ಶ್ರಮಿಸಬೇಕಾಯಿತು. ಈ ಬಾರಿ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಹಾಗೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು 19 ಕ್ಷೇತ್ರಗಳಲ್ಲಿ ಪಕ್ಷ ಗೆದ್ದಿದೆ. ಪರಿಣಾಮ ಡಿಸಿಎಂ ಪಟ್ಟ ಕೂಡ ಸಿಕ್ಕಿದೆ. ನೆಚ್ಚಿನ ನಟ ರಾಜಕೀಯರಂಗದಲ್ಲಿ ಗೆದ್ದಿದ್ದಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಮತ್ತೊಂದು ಕಡೆ ಇನ್ಮುಂದೆ ಸಿನಿಮಾಗಳಲ್ಲಿ ನಟಿಸಲ್ವಾ? ಎಂದು ಬೇಸರಗೊಂಡಿದ್ದಾರೆ.

ಪವನ್ ಕಲ್ಯಾಣ್ ನಟನೆಯ 'ಹರಿಹರ ವೀರಮಲ್ಲು', 'ಉಸ್ತಾದ್ ಭಗತ್ ಸಿಂಗ್' ಹಾಗೂ 'OG' ಚಿತ್ರಗಳು ಅರ್ಧಕ್ಕೆ ನಿಂತಿದೆ. ಆಗಾಗ್ಗೆ ಪಾಲಿಟಿಕ್ಸ್‌ನಿಂದ ಬಿಡುವು ಪಡೆದು 3 ಸಿನಿಮಾಗಳನ್ನು ಮುಗಿಸುವುದಾಗಿ ಪವರ್ ಸ್ಟಾರ್ ಹೇಳಿದ್ದಾರೆ. ಸದ್ಯ ಪವನ್ ಜೊತೆ ಪ್ರಭಾಸ್ ನಟಿಸೋ ಸುದ್ದಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಅಂದಹಾಗೆ ಇದು ಹೊಸ ಸಿನಿಮಾ ಅಲ್ಲ. ಸುಜಿತ್ ನಿರ್ದೇಶನದ 'OG' ಚಿತ್ರದಲ್ಲಿ ಪ್ರಭಾಸ್ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ.

ಅಂದಾಜು 250 ಕೋಟಿ ರೂ. ಬಜೆಟ್‌ನಲ್ಲಿ 'OG' ಸಿನಿಮಾ ನಿರ್ಮಾಣ ಆಗುತ್ತಿದೆ. ಇಮ್ರಾನ್ ಹಶ್ಮಿ, ಪ್ರಕಾಶ್ ರಾಜ್, ಪ್ರಿಯಾಂಕ ಮೋಹನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸದ್ಯ ಈಗ ಸಿನಿಮ್ಯಾಟಿಕ್ ಯೂನಿವರ್ಸ್ ಟ್ರೆಂಡ್ ನಡೀತಿದೆ. 'OG' ಚಿತ್ರದ ಜೊತೆಗೆ ಪ್ರಭಾಸ್ ನಟಿಸಿದ 'ಸಾಹೋ' ಚಿತ್ರಕ್ಕೂ ಲಿಂಕ್ ಕೊಡುವ ಪ್ರಯತ್ನ ನಡೀತಿದೆ. ಹಾಗಾಗಿ 'OG' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ 'ಸಾಹೋ' ಚಿತ್ರದ ಸಿದ್ದಾರ್ಥ್ ನಂದನ್ ಸಾಹೋ(ಪ್ರಭಾಸ್) ಎಂಟ್ರಿ ಕೊಡುತ್ತಾರೆ ಎನ್ನಲಾಗ್ತಿದೆ.

Buzz Prabhas to do a special cameo in Pawan Kalyan s OG movie

5 ವರ್ಷಗಳ ಹಿಂದೆ ಬಂದಿದ್ದ 'ಸಾಹೋ' ಸಖತ್ ಸದ್ದು ಮಾಡಿತ್ತು. ಸ್ಟೈಲಿಶ್ ಗ್ಯಾಂಗ್‌ಸ್ಟರ್ ಚಿತ್ರದಲ್ಲಿ ಪ್ರಭಾಸ್ ಆರ್ಭಟ ನೋಡಿ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. 'ಬಾಹುಬಲಿ' ಸರಣಿ ಬಳಿಕ ಯಂಗ್ ರೆಬಲ್ ಸ್ಟಾರ್ ನಟಿಸಿದ್ದ ಸಿನಿಮಾ ಇದು. ಹಾಗಾಗಿ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿತ್ತು. ಆದರೂ ತಕ್ಕ ಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು.

ಟಾಲಿವುಡ್ ಅಜಾತಶತ್ರು ಪ್ರಭಾಸ್. ಯಾವ ನಟನೊಟ್ಟಿಗೂ ಯಾವುದೇ ಸಂಘರ್ಷ ಇಲ್ಲ. ಹಾಗಾಗಿ ಪವನ್ ಜೊತೆಗೂ ನಟಿಸೋಕೆ ಹಿಂದೇಟು ಹಾಕಲ್ಲ. ಈಗಾಗಲೇ 'ಕಣ್ಣಪ್ಪ' ಚಿತ್ರದಲ್ಲಿ ಪ್ರಭಾಸ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಪವರ್ ಸ್ಟಾರ್ ನಟನೆಯ 'OG' ಚಿತ್ರದಲ್ಲೂ ಅಬ್ಬರಿಸುವುದು ಖಚಿತ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೆ ಬರಬೇಕಿದೆ.

ಇನ್ನು ಪ್ರಭಾಸ್ ಸದ್ಯ 'ದಿ ರಾಜಾಸಾಬ್' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಫೌಜಿ' ಎಂಬ ಮತ್ತೊಂದು ಸಿನಿಮಾ ಕೈಯಲ್ಲಿದೆ. 'ಸಲಾರ್-2', 'ಸ್ಪಿರಿಟ್' ಚಿತ್ರಗಳು ಬರಬೇಕಿದೆ. ಹೊಂಬಾಳೆ ಫಿಲ್ಮ್ಸ್ ಜೊತೆ ಮತ್ತೆರಡು ಸಿನಿಮಾಗಳು ಕನ್ಫರ್ಮ್ ಆಗಿದೆ. ಮುಂದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಂಗ್ ರೆಬಲ್ ಸ್ಟಾರ್ ಆರ್ಭಟ ಜೋರಾಗಿರುತ್ತದೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ.

More from Filmibeat

English summary
Prabhas in Ap Deputy Chief Minister Pawan Kalyan's next;
Read more about: prabhas tollywood pawan kalyan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X