ಅಬ್ಬಬ್ಬಾ ಜಾಕ್‌ಪಾಟ್; ಟಾಲಿವುಡ್‌ಗೆ ಡಿಂಪಲ್ ಕ್ವೀನ್ ರಚಿತಾರಾಮ್ ಮೆಗಾ ರೀ-ಎಂಟ್ರಿ

ಕನ್ನಡ ಕಲಾವಿದರು, ತಂತ್ರಜ್ಞರು ಪರಭಾಷಾ ಸಿನಿಮಾಗಳಲ್ಲಿ ಹೆಚ್ಚು ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಇದು ಹೆಚ್ಚಾಗಿದೆ. 'ಕೂಲಿ' ಚಿತ್ರದ ನೆಗೆಟಿವ್ ಪಾತ್ರದಲ್ಲಿ ರಚಿತಾ ರಾಮ್ ಮೋಡಿ ಮಾಡಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದಲ್ಲಿ ಮಿಂಚಿ ಗಮನ ಸೆಳೆದಿದ್ದರು. ಇದೀಗ ಮೆಗಾಸ್ಟಾರ್ ಚಿರಂಜೀವಿ ಚಿತ್ರಕ್ಕೆ ರಚ್ಚು ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ.

ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಈಗಾಗಲೇ ಒಂದು ತೆಲುಗು ಚಿತ್ರದಲ್ಲಿ ನಟಿಸಿ ಬಂದಿದ್ದಾರೆ. 'ಸೂಪರ್ ಮಚ್ಚಿ' ಚಿತ್ರದಲ್ಲಿ ಚಿರಂಜೀವಿ ಅಳಿಯನ ಜೊತೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದರ. ಇದೀಗ ಮೆಗಾಸ್ಟಾರ್ ಮುಂದಿನ ಚಿತ್ರದ ಪ್ರಮುಖ ಪಾತ್ರದ ಅವಕಾಶ ಸಿಕ್ಕಿದೆ ಎಂದು ಚರ್ಚೆ ನಡೀತಿದೆ.

Buzz Rachita Ram replaces Honey Rose In Chiranjeevi s Mega158

ಬಾಬಿ ನಿರ್ದೇಶನದಲ್ಲಿ ಚಿರಂಜೀವಿ ನಟನೆಯ ಹೊಸ ಸಿನಿಮಾ ಇತ್ತೀಚೆಗೆ ಸೆಟ್ಟೇರಿತ್ತು. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಮುಹೂರ್ತ ಸಮಾರಂಭಕ್ಕೆ ಹಾಜರಾಗಿ ಕ್ಲಾಪ್ ಮಾಡಿ ತಂಡಕ್ಕೆ ಶುಭ ಕೋರಿದ್ದರು. ಇನ್ನು ಹೆಸರಿಡದ ಇದೇ ಚಿತ್ರದಲ್ಲಿ ರಚಿತಾ ರಾಮ್ ನಟಿಸುತ್ತಾರೆ ಎಂದು ಫಿಲ್ಮ್ ನಗರ್‌ನಲ್ಲಿ ಗುಲ್ಲಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.

ಚಿತ್ರದಲ್ಲಿ ಮಲಯಾಳಂ ನಟಿ ಹನಿ ರೋಸ್ ನಟಿಸಬೇಕಿತ್ತು. ಕಾರಣಾಂತರಗಳಿಂದ ಆಕೆ ಹೊಸ ಬಂದಿದ್ದರು. ಅದೇ ಪಾತ್ರ ಈಗ ರಚಿತಾ ರಾಮ್ ಪಾಲಾಗಿದೆ ಎಂದು ಹೇಳಲಾಗ್ತಿದೆ. ಈ ಹಿಂದೆ ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ಚಿತ್ರಕ್ಕೆ ಬಾಬಿ ಆಕ್ಷನ್ ಕಟ್ ಹೇಳಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದೇ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಮೂಡಿ ಬರ್ತಿದೆ. 'ಕೂಲಿ' ಚಿತ್ರದಲ್ಲಿ ರಚ್ಚು ನಟನೆ ನೋಡಿ ಆಕೆಯನ್ನು ಚಿರಂಜೀವಿ ಚಿತ್ರಕ್ಕೆ ಆಕೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಅದ್ಯಾಕೋ ಕನ್ನಡದಲ್ಲಿ ರಚಿತಾ ರಾಮ್ ಹವಾ ಕಮ್ಮಿ ಆಗಿದೆ. ಈ ವರ್ಷ ಆಕೆ ನಟಿಸಿದ 'ಲ್ಯಾಂಡ್‌ಲಾರ್ಡ್' ಹಾಗೂ 'ಕಲ್ಟ್' ಸಿನಿಮಾಗಳು ಒಟ್ಟಿಗೆ ತೆರೆಗೆ ಬಂದಿದ್ದವು. ಆದರೆ ದೊಡ್ಡಮಟ್ಟದಲ್ಲಿ ಗೆಲ್ಲಲಿಲ್ಲ. ಸದ್ಯ ನಾಲ್ಕೈದು ಸಿನಿಮಾಗಳು ಆಕೆಯ ಕೈಯಲ್ಲಿವೆ. ಅದರಲ್ಲಿ 'ಅಯೋಗ್ಯ -2' ಸಿನಿಮಾ ಕೊಂಚ ನಿರೀಕ್ಷೆ ಮೂಡಿಸಿದೆ. ಇನ್ನುಳಿದಂತೆ ಧ್ರುವ ಸರ್ಜಾ ಜೋಡಿಯಾಗಿ 'ಕ್ರಿಮಿನಲ್' ಎಂಬ ಚಿತ್ರದಲ್ಲಿ ಡಿಂಪಲ್ ಕ್ವೀನ್ ನಟಿಸಿದ್ದಾರೆ. ಇನ್ನುಳಿದಂತೆ 'ಶಬರಿ' ಹಾಗೂ 'ಲವ್ ಮಿ or ಹೇಟ್ ಮಿ' ಸಿನಿಮಾಗಳು ಸದ್ಯಕ್ಕೆ ರಿಲೀಸ್ ಆಗುವಂತೆ ಕಾಣ್ತಿಲ್ಲ.

'ಮೆಗಾ 158' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ತೆಲುಗಿನಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಚೊಚ್ಚಲ ಸಿನಿಮಾ ಇದು. ವಿಜಯ್ ಕಾರ್ತಿಕ್ ಛಾಯಾಗ್ರಹಣ, ಎಸ್. ತಮನ್ ಸಂಗೀತ ಚಿತ್ರಕ್ಕಿದೆ. ಐಶ್ವರ್ಯ ರಾಜೇಶ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 'ಮನ ಶಂಕರವರಪ್ರಸಾದ್‌ಗಾರು' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ ಚಿರು ಕ್ರೇಜ್ ಜೋರಾಗಿದೆ. ಹಾಗಾಗಿ ಅವರ ಮುಂದಿನ ಸಿನಿಮಾಗಳ ಬಗ್ಗೆ ನಿರೀಕ್ಷೆ ಮೂಡಿದೆ.

ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಆಶಿಕಾ ರಂಗನಾಥ್, ಶ್ರದ್ಧಾ ಶ್ರೀನಾಥ್, ನಭಾ ನಟೇಶ್, ನೇಹಾ ಶೆಟ್ಟಿ ಹೀಗೆ ಸಾಕಷ್ಟು ಕನ್ನಡ ನಟಿಯರು ತೆಲುಗು ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ರಚಿತಾ ರಾಮ್ ಕೂಡ ಆ ಪ್ರಯತ್ನ ಮಾಡಿ ಸೋತಿದ್ದರು. ಇದೀಗ ಮೆಗಾಸ್ಟಾರ್ ಜೊತೆ ರೀ-ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಪ್ರಮುಖ ಪಾತ್ರಗಳಿದ್ದು ಅಂಥದ್ದೇ ಒಂದು ಪಾತ್ರ ರಚಿತಾ ಪಾಲಾಗಿದೆ ಎಂದು ಹೇಳಲಾಗ್ತಿದೆ.

Read more about: chiranjeevi tollywood rachita ram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X