Salaar: ನಿರಾಸೆಗೊಂಡಿರುವ ಪ್ರಭಾಸ್ ಅಭಿಮಾನಿಗಳಿಗಾಗಿ ಬರಲಿದೆ ಮತ್ತೊಂದು ಟ್ರೈಲರ್

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಸಖತ್ ಸದ್ದು ಮಾಡ್ತಿದೆ. ಟ್ರೈಲರ್ ಚೆನ್ನಾಗಿದೆ, ಚೆನ್ನಾಗಿಲ್ಲ ಎನ್ನವ ಚರ್ಚೆ ಜೋರಾಗಿದೆ. ಕೆಲವರಿಗೆ ಇಷ್ಟವಾಗಿದ್ದರೆ ಮತ್ತೆ ಕೆಲವರಿಗೆ ಇಷ್ಟವಾಗಿಲ್ಲ. ಇದೆಲ್ಲದರ ನಡುವೆ ಚಿತ್ರತಂಡ ಇನ್ನೊಂದು ಟ್ರೈಲರ್ ಕಟ್ ಮಾಡ್ತಿದೆ.

ಹೊಂಬಾಳೆ ಸಂಸ್ಥೆ ನಿರ್ಮಾಣದ ಅದ್ಧೂರಿ ಸಿನಿಮಾ 'ಸಲಾರ್'. ಡಿಸೆಂಬರ್ 22ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೀತಿದೆ. ಟ್ರೈಲರ್ ನೋಡಿದವರು ಇದು 'ಉಗ್ರಂ' ರೀಮೇಕ್ ಎನ್ನುತ್ತಿದ್ದಾರೆ. 'ಉಗ್ರಂ' ಕತೆಯನ್ನೇ ಬಹಳ ದೊಡ್ಡಮಟ್ಟದಲ್ಲಿ ಹೇಳ್ತಿದ್ದಾರೆ ಅಷ್ಟೇ ಎನ್ನುವ ಚರ್ಚೆಯೂ ನಡೀತಿದೆ. ಈಗಾಗಲೇ ಪ್ರಮೋಷನ್‌ ಸ್ಪೀಡ್ ಹೆಚ್ಚಿಸಿದೆ ಚಿತ್ರತಂಡ. ಡಿಸೆಂಬರ್ 15ರಿಂದ ಭಾರತದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಲಿದೆ. ಅದೇ ದಿನ ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ಕೂಡ ರಿಲೀಸ್ ಆಗಲಿದೆ.

Buzz: Salaar movie makers planning to release onemore trailer for prabhas fans

'ಸಲಾರ್' ಚಿತ್ರದ ಪಾತ್ರವರ್ಗ ಕೂಡ ರಿವೀಲ್ ಆಗಿದೆ. ಎಲ್ಲರಿಗೂ ಗೊತ್ತಿರುವಂತೆ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಗರುಡ ರಾಮ್, ಪ್ರಮೋದ್, ಗುಲ್ಟು ನವೀನ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿರುವುದು ಟ್ರೈಲರ್‌ನಲ್ಲಿ ಗೊತ್ತಾಗಿದೆ.

ಟ್ರೈಲರ್ ನೋಡಿದರೆ 'ಸಲಾರ್' ಕತೆ ಏನು ಎನ್ನುವುದರ ಬಗ್ಗೆ ಸುಳಿವು ಸಿಗುತ್ತದೆ. ಚಿಕ್ಕಂದಿನಲ್ಲಿ ದೇವ (ಪ್ರಭಾಸ್), ವರದರಾಜ್ ಮನ್ನಾರ್ (ಪೃಥ್ವಿರಾಜ್ ಸುಕುಮಾರನ್) ಮಧ್ಯ ಸ್ನೇಹ ಇರುತ್ತದೆ. ಆದರೆ ಕಾರಣಾಂತರಗಳಿಂದ ಇಬ್ಬರು ದೂರಾಗುತ್ತಾರೆ. "ನಿನಗಾಗಿ ಗಾಳ ಆದ್ರು ಆಗ್ತೀನಿ ತಿಮಿಂಗಿಲ ಆದರೂ ಆಗ್ತೀನಿ. ನಿನ್ನೊಬ್ಬನಿಗಾಗಿ ನೀವು ಯಾವಾಗ ಹೇಳಿದರು ಇಲ್ಲಿ ಬರ್ತೀನಿ" ಎಂದು ಹೇಳಿ ದೇವ ಹೊರಟು ಹೋಗ್ತಾನೆ. ಇನ್ನು ಖಾನ್ಸಾರ್ ಸಾಮ್ರಾಜ್ಯದ ಕುರ್ಚಿಗಾಗಿ ನಡೆಯುವ ಬಗ್ಗೆ ಹಿನ್ನೆಲೆ ಧ್ವನಿಯಲ್ಲಿ ಮಾಹಿತಿ ಸಿಗುತ್ತದೆ. ಆ ಖಾನ್ಸಾರ್‌ ನಾಯಕ ರಾಜಮನ್ನಾರ್ ಆಗಿ ಜಗಪತಿ ಬಾಬು ಕಾಣಿಸಿಕೊಂಡಿದ್ದಾರೆ. ತನ್ನ ಮಗ ವರದ ರಾಜ ಮನ್ನಾರ್ ಮುಂದೆ ನಾಯಕನಾಗಬೇಖು ಎನ್ನುವುದು ಆತನ ಬಯಕೆ.

ವರದರಾಜ್‌ಗೆ ಅಧಿಕಾರ ಸಿಗಬಾರದು, ಆತನನ್ನು ಕೊಂದುಬಿಡಬೇಕು ಎಂದು ಕೆಲ ಗ್ಯಾಂಗ್‌ಗಳು ಕುತಂತ್ರ ನಡೆಸುತ್ತಿರುತ್ತವೆ. ದಾಳಿ ಮಾಡಿ ಖಾನ್ಸಾರ್‌ನ ವಶಪಡಿಸಿಕೊಳ್ಳುತ್ತಾನೆ. ವರದರಾಜ್ ಮರಳಿ ಖಾನ್ಸಾರ್ ಪಡೆಯಲು ಸ್ನೇಹಿತ ದೇವ ಸಹಾಯ ಕೇಳುತ್ತಾನೆ. ಆತನನ್ನೇ ಒಂದು ಆರ್ಮಿ ಎಂದು ಭಾವಿಸುತ್ತಾನೆ. ದೇವ ಮರಳಿ ಬಂದಮೇಲೆ ಏನೆಲ್ಲಾ ಆಗುತ್ತದೆ ಅನ್ನೋದು ಇನ್ನುಳಿದ ಕತೆ.

ಪ್ರಭಾಸ್ ಹಾರ್ಡ್‌ಕೋರ್ ಅಭಿಮಾನಿಗಳಿಗೆ ಟ್ರೈಲರ್ ಕೊಂಚ ನಿರಾಸೆ ಮೂಡಿಸಿದೆ. ಮುಕ್ಕಾಲುಭಾಗ ಟ್ರೈಲರ್‌ನಲ್ಲಿ ಪ್ರಭಾಸ್ ಕಾಣಿಸಲ್ಲ. ಕೊನೆಗೆ ಬಂದು ಒಂದೆರಡು ಆಕ್ಷನ್ ಸೀಕ್ವೆನ್ಸ್ ತೋರಿಸಿ ಮುಗಿಸಿಬಿಟ್ಟಿದ್ದಾರೆ. ಇದಕ್ಕೂ ಮುನ್ನ ಬಂದಿದ್ದ ಟೀಸರ್‌ನಲ್ಲಿ ಪ್ರಭಾಸ್ ಮುಖವನ್ನು ತೋರಿಸಿರಲಿಲ್ಲ. ಈಗ ನೀಡಿದ್ರೆ ಹೀಗೆ ಮಾಡಿದ್ದಾರೆ ಎನ್ನುತ್ತಿದ್ದಾರೆ. ಹಾಗಾಗಿ ಯಂಗ್ ರೆಬಲ್ ಸ್ಟಾರ್ ಆಕ್ಷನ್ ಧಮಾಕ ಇರುವ ಮತ್ತೊಂದು ಟ್ರೈಲರ್ ಕಟ್ ಮಾಡುವ ಆಲೋಚನೆಯಲ್ಲಿದೆಯಂತೆ ಚಿತ್ರತಂಡ.

ಸಾಮಾನ್ಯವಾಗಿ ಬಾಲಿವುಡ್‌ನ ದೊಡ್ಡ ಸಿನಿಮಾಗಳಿಗೆ ಎರಡೆರಡು ಟ್ರೈಲರ್ ರಿಲೀಸ್ ಮಾಡುವ ಪದ್ಧತಿ ಇದೆ. ಸಿನಿಮಾ ತೆರೆಗೆ ತರುವ ಹೊಸ್ತಿಲಲ್ಲಿ ಫೈನಲ್ ಟ್ರೈಲರ್ ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡ್ತಾರೆ. ಅದೇ ಲೆಕ್ಕಾಚಾರ 'ಸಲಾರ್' ವಿಚಾರದಲ್ಲೂ ಅದೇ ಚರ್ಚೆ ನಡೀತಿದೆಯಂತೆ. ಈ ಹಿಂದೆ 'KGF' ಚಾಪ್ಟರ್-1 ಚಿತ್ರಕ್ಕೂ ಹೊಂಬಾಳೆ ಸಂಸ್ಥೆ 2 ಟ್ರೈಲರ್ ರಿಲೀಸ್ ಮಾಡಿತ್ತು.

'ಸಲಾರ್' ಚಿತ್ರದಲ್ಲಿ ಹಾಡುಗಳು ಕಮ್ಮಿ ಇರುವುದರಿಂದ ಮತ್ತೊಂದು ಟ್ರೈಲರ್ ಬಿಟ್ಟು ನಿರೀಕ್ಷೆ ಹೆಚ್ಚುವಂತೆ ಮಾಡುವ ಲೆಕ್ಕಾಚಾರ ನಡೀತಿದೆಯಂತೆ. ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ 'ಸಲಾರ್' ಸಿನಿಮಾ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.

More from Filmibeat

English summary
Makers plan to release one more trailer for Salaar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X