ಶಿವಣ್ಣ ನಟನೆಯ ತೆಲುಗು ಸಿನಿಮಾ ಟೈಟಲ್ ಫಿಕ್ಸ್; ಮುಂದಿನ ವಾರವೇ ಮುಹೂರ್ತ

ರಾಮ್‌ಚರಣ್ ತೇಜಾ ನಟನೆಯ ಮುಂದಿನ ಚಿತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ನಟಿಸುತ್ತಿದ್ದಾರೆ. 'ಉಪ್ಪೆನ' ಖ್ಯಾತಿಯ ನಿರ್ದೇಶಕ ಬುಚ್ಚಿಬಾಬು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಮುಂದಿನ ವಾರವೇ ಚಿತ್ರದ ಮುಹೂರ್ತ ನೆರವೇರಲಿದೆ.

'RRR' ಬಳಿಕ ಶಂಕರ್ ನಿರ್ದೇಶನದ 'ಗೇಮ್‌ ಚೇಂಜರ್' ಚಿತ್ರದಲ್ಲಿ ರಾಮ್‌ಚರಣ್ ನಟಿಸುತ್ತಿದ್ದಾರೆ. ಆದರೆ ಕಾರಣಾಂತರಗಳಿಂದ ಈ ಸಿನಿಮಾ ತಡವಾಗುತ್ತಿದೆ. ಈ ವರ್ಷವೇ ಸಿನಿಮಾ ತೆರೆಗೆ ತರುವ ಪ್ರಯತ್ನಗಳು ನಡೀತಿದೆ. ಇದರ ಬೆನ್ನಲ್ಲೇ ಮೆಗಾ ಪವರ್ ಸ್ಟಾರ್ ಮತ್ತೊಂದು ಚಿತ್ರಕ್ಕೆ ಚಾಲನೆ ಸಿಗಲಿದೆ. ಬಹಳ ಹಿಂದೆಯೇ ಬುಚ್ಚಿಬಾಬು ನಿರ್ದೇಶನದಲ್ಲಿ ಚರಣ್ ನಟನೆಯ ಸಿನಿಮಾ ಬಗ್ಗೆ ಚರ್ಚೆ ನಡೀತಿತ್ತು.

Buzz Shivarajkumar and Ram Charan s Rc16 fixed a New Title

ಕಳೆದ ವರ್ಷ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ RC16 ಸಿನಿಮಾ ಬಗ್ಗೆ ಅಧಿಕೃತವಾಗಿ ಮಾಹಿತಿ ಲಭ್ಯವಾಗಿತ್ತು. ಇದು ರಾಮ್‌ಚರಣ್ ನಟನೆಯ 16ನೇ ಸಿನಿಮಾ. ಹಾಗಾಗಿ RC16 ಹೆಸರಿನಲ್ಲಿ ಸಿನಿಮಾ ಪ್ರೀಪ್ರೊಡಕ್ಷನ್ ನಡೀತು. ಇದೀಗ ಟೈಟಲ್ ಫಿಕ್ಸ್ ಆಗಿದ್ದು ಮಾರ್ಚ್ 20ರಂದು ಮುಹೂರ್ತಕ್ಕೆ ಸಿದ್ಧತೆ ನಡೀತಿದೆ. ಏಪ್ರಿಲ್‌ನಲ್ಲೇ ಸಿನಿಮಾ ಶೂಟಿಂಗ್ ಶುರುವಾಗಲಿದೆ.

ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ರಾಮ್‌ಚರಣ್ ನಟನೆಯ 'ರಂಗಸ್ಥಳಂ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 6 ವರ್ಷಗಳ ಹಿಂದೆ ಬಂದಿದ್ದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಹಳ್ಳಿ ಹೈದನ ಪಾತ್ರದಲ್ಲಿ ನಟಿಸಿದ್ದರು ಗಮನ ಸೆಳೆದಿದ್ದರು. ಇದೀಗ ಸುಕುಮಾರ್ ಶಿಷ್ಯ ಬುಚ್ಚಿಬಾಬು ನಿರ್ದೇಶನದಲ್ಲಿ ಚರಣ್ ನಟಿಸುತ್ತಿದ್ದಾರೆ.

ಚಿತ್ರಕ್ಕೆ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ತಾರಕ್ ನಟನೆಯ 'ದೇವರ' ಸಿನಿಮಾ ಮೂಲಕ ಆಕೆ ಟಾಲಿವುಡ್ ಪ್ರವೇಶಿಸಿದ್ದಾರೆ. 'ರಂಗಸ್ಥಳಂ' ಚಿತ್ರಕ್ಕೆ ಕೆಲಸ ಮಾಡಿದ ಹಲವು ಈ ಚಿತ್ರಕ್ಕೂ ಕೈ ಜೋಡಿಸುತ್ತಿದ್ದಾರೆ.

Buzz Shivarajkumar and Ram Charan s Rc16 fixed a New Title

ಈ ಕ್ರೇಜಿ ಕಾಂಬಿನೇಷನ್‌ ಚಿತ್ರಕ್ಕೆ 'ಪೆದ್ದಿ' ಎನ್ನುವ ಟೈಟಲ್ ಫಿಕ್ಸ್ ಮಾಡಿರುವುದಾಗಿ ಟಾಲಿವುಡ್‌ನಲ್ಲಿ ಗುಲ್ಲಾಗಿದೆ. 'ಪೆದ್ದಿ' ಅಂದರೆ ತೆಲುಗಿನಲ್ಲಿ ದೊಡ್ಡದು, ದೊಡ್ಡವನು ಅಥವಾ ಹಿರಿಯ ಎನ್ನುವ ಅರ್ಥವಿದೆ. ಅಂದಹಾಗೆ ಚಿತ್ರಕ್ಕೆ ಹಳ್ಳಿಸೊಗಡಿನ ಕಥೆ ಹೇಳುವ ಪ್ರಯತ್ನ ನಡೀತಿದೆ. ಕಬಡ್ಡಿ ಆಟಗಾರನಾಗಿ ರಾಮ್‌ಚರಣ್ ನಟಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು.

ಬಹಳ ಹಿಂದೆ 'ಪೆದ್ದಿ' ಹೆಸರಿನ ಚಿತ್ರದಲ್ಲಿ ಜ್ಯೂ. ಎನ್‌ಟಿಆರ್ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಬುಚ್ಚಿಬಾಬು ಆಕ್ಷನ್ ಕಟ್ ಹೇಳುತ್ತಾರೆ ಎನ್ನಲಾಗಿತ್ತು. ಇದೀಗ ಅದೇ ಕಥೆಯಲ್ಲಿ ರಾಮ್‌ಚರಣ್ ನಟಿಸಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯೇ ಈ ಚಿತ್ರಕ್ಕೂ ಬಂಡವಾಳ ಹೂಡಲಿದೆ. ಎ. ಆರ್ ರಹಮಾನ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ.

'ಜೈಲರ್' ಚಿತ್ರದಲ್ಲಿ ನರಸಿಂಹ ಆಗಿ ಶಿವರಾಜ್‌ಕುಮಾರ್ ಅಬ್ಬರಿಸಿದ್ದರು. ಚಿತ್ರ ತೆಲುಗಿಗೂ ಡಬ್ ಆಗಿ ಅಲ್ಲಿನ ಪ್ರೇಕ್ಷಕರು ಕೂಡ ಶಿವಣ್ಣ ಪರ್ಫಾರ್ಮನ್ಸ್ ಮೆಚ್ಚಿದ್ದರು. ಇದೇ ಕಾರಣಕ್ಕೆ ಬುಚ್ಚಿಬಾಬು RC16 ಚಿತ್ರದಲ್ಲಿ ಸೆಂಚುರಿ ಸ್ಟಾರ್‌ಗೆ ಸ್ಪೆಷಲ್ ರೋಲ್ ಡಿಸೈನ್ ಮಾಡಿದ್ದಾರೆ. ನಾಯಕನಿಗೆ ಗುರುವಾಗಿ, ಹಿರಿಯನಾಗಿ ಕಾಣಿಸಿಕೊಳ್ಳುವಂತಹ ಪಾತ್ರ ಅದು. ಚರಣ್‌- ಶಿವಣ್ಣ ತೆರೆಹಂಚಿಕೊಳ್ಳುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಮುಂದಿನ ವರ್ಷ 'ಪೆದ್ದಿ' ಸಿನಿಮಾ ಬಿಡುಗಡೆಗೆ ಪ್ರಯತ್ನಿಸಲಾಗುತ್ತಿದೆ. ತೆಲುಗು ಮಾತ್ರವಲ್ಲದೇ ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಗಳಿಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆ. ಚಿತ್ರದಲ್ಲಿ ರಾಮ್‌ಚರಣ್ ಡಬಲ್ ರೋಲ್ ಪ್ಲೇ ಮಾಡುತ್ತಾರೆ ಎನ್ನುವ ಊಹಾಪೋಹ ಕೂಡ ಇದೆ. ಎಲ್ಲದಕ್ಕೂ ಶೀಘ್ರದಲ್ಲೇ ತೆರೆ ಬೀಳಲಿದೆ.

More from Filmibeat

English summary
Ram Charan, Buchi Babu Sana's film title confirmed;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X