twitter
    For Quick Alerts
    ALLOW NOTIFICATIONS  
    For Daily Alerts

    'ಮಾ' ಚುನಾವಣೆಗೆ ಟ್ವಿಸ್ಟ್: ಈ ಸುದ್ದಿ ಪಕ್ಕಾ ಆದ್ರೆ ಸ್ಪರ್ಧೆ ಮತ್ತಷ್ಟು ಕಠಿಣ

    |

    ತೆಲುಗು ಸಿನಿ ಕಲಾವಿದರ ಸಂಘದ ಚುನಾವಣೆ ಹಿನ್ನೆಲೆ ಟಾಲಿವುಡ್ ಇಂಡಸ್ಟ್ರಿ ಹಲವು ಭಾಗಗಳಾಗಿ ವಿಭಜನೆಯಾಗಿದೆ. ಬಹುಭಾಷೆ ನಟ ಪ್ರಕಾಶ್ ರಾಜ್, ಯುವ ನಟ ಮಂಚು ವಿಷ್ಣು, ಹಿರಿಯ ನಟಿ ಜೀವಿತಾ ರಾಜಶೇಖರ್ ಹಾಗೂ ನಟಿ ಹೇಮಾ ಸೇರಿದಂತೆ ಹಲವು ಪ್ರಮುಖ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಈ ಸಲ ಭಾರಿ ಪೈಪೋಟಿ ಕಂಡು ಬರುತ್ತಿರುವ ಕಾರಣ ಅರೋಪಗಳು, ವದಂತಿಗಳು, ಟೀಕೆಗಳು ತುಸು ಹೆಚ್ಚಾಗಿದೆ.

    ಮಾ ಚುನಾವಣೆಯಲ್ಲಿ ಮೆಗಾ ಕುಟುಂಬದ ಪಾತ್ರ ಬಹಳ ಪ್ರಮುಖವಾಗಿರುತ್ತದೆ. ಪ್ರಕಾಶ್ ರಾಜ್‌ಗೆ ಮೆಗಾ ಕುಟುಂಬದ ಬೆಂಬಲ ಸೂಚಿಸಿದೆ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಪ್ರಕಾಶ್ ರಾಜ್ ಗೆಲ್ಲುವ ಸಾಧ್ಯತೆ ಹಚ್ಚಿದೆ ಎಂಬ ಅಭಿಪ್ರಾಯ ಇದೆ. ಇಂತಹ ಸಂದರ್ಭದಲ್ಲಿ ಟ್ವಿಸ್ಟ್ ಎನ್ನುವಂತೆ ಹೊಸ ಸುದ್ದಿಯೊಂದು ಚರ್ಚೆಗೆ ಬಂದಿದ್ದು, ಮಾ ಚುನಾವಣೆಯ ಫಲಿತಾಂಶವನ್ನು ಉಲ್ಟಾ ಆಗಲಿದೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ...

    ಪ್ರಕಾಶ್ ರಾಜ್ ಬೆಂಬಲಿಸಿದ ವರ್ಮಾ: 'ನಾನ್ ಲೋಕಲ್' ಎಂದವರಿಗೆ ಗುನ್ನಾಪ್ರಕಾಶ್ ರಾಜ್ ಬೆಂಬಲಿಸಿದ ವರ್ಮಾ: 'ನಾನ್ ಲೋಕಲ್' ಎಂದವರಿಗೆ ಗುನ್ನಾ

    ಹೊಸ ಅಭ್ಯರ್ಥಿ ಕಣಕ್ಕೆ?

    ಹೊಸ ಅಭ್ಯರ್ಥಿ ಕಣಕ್ಕೆ?

    ಸದ್ಯಕ್ಕೆ ಮಾ ಚುನಾವಣೆಯ ದಿನಾಂಕ ಘೋಷಣೆಯಾಗಿಲ್ಲ. ಎರಡು ಅಥವಾ ಮೂರು ತಿಂಗಳಲ್ಲಿ ಎಲೆಕ್ಷನ್ ನಡೆಯಬೇಕಿದೆ. ಸದ್ಯಕ್ಕೆ ಪ್ರಕಾಶ್ ರಾಜ್, ಮಂಚು ವಿಷ್ಣು, ಜೀವಿತಾ ರಾಜಶೇಖರ್ ಹಾಗೂ ಹೇಮಾ ಹೆಸರು ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿದೆ. ಈ ನಡುವೆ ಮತ್ತೊಬ್ಬ ನಟನ ಹೆಸರನ್ನು ಅಭ್ಯರ್ಥಿ ಎಂದು ತೇಲಿಬಿಡಲಾಗಿದೆ.

    ಮಾ ಚುನಾವಣೆಯಲ್ಲಿ ಸೋನು ಸೂದ ಸ್ಪರ್ಧೆ?

    ಮಾ ಚುನಾವಣೆಯಲ್ಲಿ ಸೋನು ಸೂದ ಸ್ಪರ್ಧೆ?

    ಕಳೆದ ಎರಡು ವರ್ಷದಿಂದ ಜನಸಾಮಾನ್ಯರ ಪಾಲಿಗೆ ಹೀರೋ ಎನಿಸಿಕೊಂಡಿರುವ ಸೋನು ಸೂದ್ ಅವರನ್ನು ಮಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಈ ಬಗ್ಗೆ ಯಾರೂ ಅಧಿಕೃತವಾಗಿ ಮಾತನಾಡಿಲ್ಲ. ಬಾಲಿವುಡ್ ನಟ ಎನಿಸಿಕೊಂಡಿದ್ದರೂ ತೆಲುಗಿನಲ್ಲಿ ಸೋನು ಸೂದ್ ಹೆಚ್ಚು ಸಿನಿಮಾ ಮಾಡಿರುವುದು ಇಂತಹದೊಂದು ಸಾಧ್ಯತೆಯನ್ನು ಅಲ್ಲೆಗಳೆಯುವಂತಿಲ್ಲ.

    'ನಮ್ಮವರಲ್ಲ' ಎಂದ ಟಾಲಿವುಡ್ ಮಂದಿಗೆ ಪ್ರಕಾಶ್ ರಾಜ್ ತಿರುಗೇಟು'ನಮ್ಮವರಲ್ಲ' ಎಂದ ಟಾಲಿವುಡ್ ಮಂದಿಗೆ ಪ್ರಕಾಶ್ ರಾಜ್ ತಿರುಗೇಟು

    ತೆಲಂಗಾಣಕ್ಕೆ ಭೇಟಿ ನೀಡಿದ ಸೋನು ಸೂದ್

    ತೆಲಂಗಾಣಕ್ಕೆ ಭೇಟಿ ನೀಡಿದ ಸೋನು ಸೂದ್

    ಇತ್ತೀಚಿಗಷ್ಟೆ ನಟ ಸೋನು ಸೂದ್ ತೆಲಂಗಾಣ ಆಗಮಿಸಿದ್ದರು. ಸಚಿವ ಕೆಟಿಆರ್ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ್ದ ಸೋನು ಸೂದ್‌ಗೆ ನಿರ್ದೇಶಕ ವಂಶಿ ಪೈದಿಪಲ್ಲಿ ಜೊತೆಯಾಗಿದ್ದರು. ಅದಕ್ಕೂ ಮುಂಚೆ ಟ್ವಿಟ್ಟರ್‌ನಲ್ಲಿ ಕೆಟಿಆರ್ ಜೊತೆ ಮಾತನಾಡಿದ್ದ ಸೋನು ''ತೆಲಂಗಾಣ ನನ್ನ ಎರಡನೇ ಮನೆ'' ಎಂದಿದ್ದರು.

    Recommended Video

    ಡ್ಯಾನ್ಸರ್ ಗಳಿಗೆ ಫುಡ್ ಕಿಟ್ ಕೊಟ್ಟು ಮೆಚ್ಚುಗೆ ಪಡೆದ Nikhil Kumaraswamy | Oneindia Kannada
    ರಾಜಕೀಯಕ್ಕೆ ಬರಲ್ಲ ಸೋನು ಸೂದ್

    ರಾಜಕೀಯಕ್ಕೆ ಬರಲ್ಲ ಸೋನು ಸೂದ್

    ದೇಶಾದ್ಯಂತ ಜನಪರ ಕೆಲಸಗಳನ್ನು ಮಾಡುವ ಮೂಲಕ ಅಪಾರ ಮೆಚ್ಚುಗೆ ಗಳಿಸಿಕೊಂಡ ಸೋನು ಸೂದ್ ರಾಜಕೀಯಕ್ಕೆ ಬರಬೇಕು ಎಂಬ ಅಭಿಪ್ರಾಯ ಕೇಳಿಬಂತು. ಇನ್ನು ಕೆಲವರು ನಮ್ಮ ರಾಜ್ಯ ಸಿಎಂ ಆಗಲಿ, ನಮ್ಮ ದೇಶದ ಪ್ರಧಾನಿ ಆಗಲಿ ಎಂದು ಆಸೆ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸೋನು ಸೂದ್ ''ನಾನು ಸಾಮಾನ್ಯ ವ್ಯಕ್ತಿಯಾಗಿರಲು ಆಸೆ'' ಎಂದು ಹೇಳಿದ್ದರು.

    English summary
    Buzz: Bollywood actor Sonu Sood to contest in MAA Elections 2021.
    Thursday, July 8, 2021, 11:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X