ಪ್ರಶಾಂತ್ - ತಾರಕ್ ಚಿತ್ರಕ್ಕೆ ಸಿಕ್ತು ಟೈಟಲ್? ಮತ್ತೆ ಇಂಗ್ಲೀಷ್ ಮೊರೆ ಹೋದ್ರಾ ನೀಲ್?

'ಸಲಾರ್' ಬಳಿಕ ಪ್ರಶಾಂತ್ ನೀಲ್ ಯಾವ ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ. ಜ್ಯೂ. ಎನ್‌ಟಿಆರ್ ಜೊತೆಗೂ ಒಂದು ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ಆ ಚಿತ್ರವನ್ನು ಆರಂಭಿಸುತ್ತಾರಾ? ಅಥವಾ 'ಸಲಾರ್'-2 ತೆರೆಗೆ ತರುತ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ.

ಜ್ಯೂ. ಎನ್‌ಟಿಆರ್ ಸದ್ಯ 'ದೇವರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದು ಕಡೆ ಬಾಲಿವುಡ್‌ಗೂ ಅಡಿ ಇಟ್ಟಿದ್ದಾರೆ. ಹೃತಿಕ್ ರೋಷನ್ ಜೊತೆ 'ವಾರ್'-2 ಚಿತ್ರದಲ್ಲಿ ತೊಡೆ ತಟ್ಟಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ತಾರಕ್ ವಾಣಿಜ್ಯ ನಗರಿಯಲ್ಲಿ ಕಾಣಿಸಿಕೊಂಡಿದ್ದ ಫೋಟೊ, ವೀಡಿಯೋಗಳು ವೈರಲ್ ಆಗಿತ್ತು.

Buzz This is the Title for Jr NTR and Prashanth neel film

ಇನ್ನೆರಡು ದಿನಗಳಲ್ಲಿ(ಮೇ 20) ಟಾಲಿವುಡ್ ಯಂಗ್‌ ಟೈಗರ್ ಹುಟ್ಟುಹಬ್ಬ. ಅಭಿಮಾನಿಗಳು ಈ ದಿನವನ್ನು ವಿಶೇಷವಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಇದೇ ಸಂಭ್ರಮದಲ್ಲಿ ಅಭಿಮಾನಿಗಳಿಗೆ 'ದೇವರ' ಹಾಗೂ 'ವಾರ್‌-2' ಚಿತ್ರಗಳಿಂದ ಸ್ಪೆಷಲ್ ಗಿಫ್ಟ್ ಸಿಗುವ ನಿರೀಕ್ಷೆಯಿದೆ. 'ದೇವರ' ಫಸ್ಟ್ ಸಾಂಗ್ ರಿಲೀಸ್ ಮಾಡೋದಾಗಿ ಹೇಳಿದ್ದಾರೆ. ಇನ್ನು NTR31 ಟೀಂ ಕೂಡ ಏನಾದರೂ ಸರ್‌ಪ್ರೈಸ್‌ ಕೊಡುತ್ತಾ ಕಾದು ನೋಡಬೇಕಿದೆ.

ಬಹಳ ಹಿಂದೆಯೇ ಪ್ರಶಾಂತ್‌ ನೀಲ್- ಜ್ಯೂ. ಎನ್‌ಟಿಆರ್ ಸಿನಿಮಾ ಘೋಷಣೆ ಆಗಿತ್ತು. ಇದು ತಾರಕ್ ನಟನೆಯ 31ನೇ ಸಿನಿಮಾ. ಹಾಗಾಗಿ ಸದ್ಯಕ್ಕೆ NTR31 ಎಂದು ಕರೆಯಲಾಗುತ್ತಿದೆ. ಮೇ 20ಕ್ಕೆ ಚಿತ್ರದ ಟೈಟಲ್ ಘೋಷಣೆ ಆಗುತ್ತದೆ ಎಂದು ಕೆಲವರು ಕಾಯುತ್ತಿದ್ದಾರೆ. ಚಿತ್ರದ ಟೈಟಲ್ ಏನು? ಎನ್ನುವ ಬಗ್ಗೆ ಬಹಳ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಲೇಯಿದೆ.

ಒಂದು ಚಿತ್ರಕ್ಕೆ ಟೈಟಲ್ ಬಹಳ ಮುಖ್ಯ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು, ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಸಲು ಇಂಟ್ರೆಸ್ಟಿಂಗ್ ಹೆಸರುಗಳು ಹುಡುಕಾಟ ನಡೆಯುತ್ತದೆ. ಈ ಬಗ್ಗೆ ಫಿಲ್ಮ್ ಮೇಕರ್ಸ್ ಬಹಳ ತಲೆ ಕೆಡಿಸಿಕೊಳ್ಳುತ್ತಾರೆ. ಇನ್ನು ಸಿನಿಮಾ ಟೈಟಲ್‌ಗಾಗಿ ವಿವಾದಗಳು ಸೃಷ್ಟಿಯಾಗಿ ದೂರುಗಳು ದಾಖಲಾಗುತ್ತದೆ. ನಿರ್ದೇಶಕ ಪ್ರಶಾಂತ್‌ ನೀಲ್ ತಮ್ಮ ಸಿನಿಮಾ ಹಾಗೂ ಪಾತ್ರಗಳ ಹೆಸರಿನ ವಿಚಾರದಲ್ಲಿ ಬಹಳ ಮುತುವರ್ಜಿ ವಹಿಸುತ್ತಾರೆ.

Buzz This is the Title for Jr NTR and Prashanth neel film

'ಉಗ್ರಂ', 'KGF'ಚಾಪ್ಟರ್-1 ಹಾಗೂ ಚಾಪ್ಟರ್-2, 'ಸಲಾರ್' ಹೀಗೆ ತಮ್ಮ ಸಿನಿಮಾಗಳ ಟೈಟಲ್‌ ವಿಚಾರದಲ್ಲಿ ನೀಲ್ ಹೆಚ್ಚಿನ ಗಮನ ಹರಿಸುತ್ತಾರೆ. ಇನ್ನು ಸಂಸ್ಕೃತದ ಪದಗಳನ್ನು ಕೂಡ ಬಳಸುತ್ತಾರೆ. ಇಂಗ್ಲೀಷ್ ಪದಗಳು, ಸಾಲುಗಳನ್ನು ಕ್ಯಾಪ್ಷನ್ ಆಗಿ ಇಡುತ್ತಾರೆ. ಹಾಗಾಗಿ NTR31 ಸಿನಿಮಾ ಟೈಟಲ್ ಏನಿರಬಹುದು? ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. 'ಡ್ರ್ಯಾಗನ್' ಎನ್ನುವ ಖಡಕ್ ಟೈಟಲ್‌ನಲ್ಲಿ ತಾರಕ್ ಜೊತೆ ಸಿನಿಮಾ ಮಾಡಲು ನಿರ್ದೇಶಕರು ಮುಂದಾಗಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.

ಜ್ಯೂ. ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಸಿನಿಮಾ ಟೈಟಲ್ 'ಡ್ರ್ಯಾಗನ್' ಎಂದು ಹೇಳಲಾಗುತ್ತಿದೆ. ಫಿಂಕ್‌ವಿಲ್ಲಾ ವೆಬ್‌ಸೈಟ್ ಕೂಡ ಈ ಬಗ್ಗೆ ವರದಿ ಮಾಡಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಎಲ್ಲಾ ಭಾಷೆಗಳಲ್ಲಿ ಒಂದೇ ಟೈಟಲ್ ಇರುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಹಿಂದಿಯಲ್ಲಿ ಈ ಟೈಟಲ್ ಕರಣ್ ಜೋಹರ್ ಬಳಿ ಇತ್ತಂತೆ. ತಮ್ಮ 'ಬ್ರಹ್ಮಾಸ್ತ್ರ' ಚಿತ್ರಕ್ಕಾಗಿ ಈ ಟೈಟಲ್ ರಿಜಿಸ್ಟರ್ ಮಾಡಿಸಿದ್ದರಂತೆ. ಇದೀಗ ಆ ಟೈಟಲ್‌ ಅನ್ನು ನೀಲ್ ಚಿತ್ರಕ್ಕೆ ಬಿಟ್ಟುಕೊಟ್ಟಿದ್ದಾರೆ ಎನ್ನಲಾಗ್ತಿದೆ.

'ಡ್ರ್ಯಾಗನ್' ಎನ್ನುವ ಟೈಟಲ್ ಕೆಲವರಿಗೆ ಇಷ್ಟವಾಗಿದೆ. ಮತ್ತೆ ಕೆಲವರು ಚೆನ್ನಾಗಿಲ್ಲ ಎನ್ನುತ್ತಿದ್ದಾರೆ. 'ಡ್ರ್ಯಾಗನ್‌'ಗಿಂತ 'ಡೈನೋಸಾರ್' ಚೆನ್ನಾಗಿರುತ್ತದೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಇದು ಟೆಂಟಿಟಿವ್ ಟೈಟಲ್ ಅಷ್ಟೆ. ಮುಂದಿನ ದಿನಗಳಲ್ಲಿ ಬದಲಾಗಲೂಬಹುದು ಎನ್ನುತ್ತಿದ್ದಾರೆ. ಮೇ 20ಕ್ಕೆ ತಾರಕ್ ಹುಟ್ಟುಹಬ್ಬದ ದಿನ ಈ ಬಗ್ಗೆ ಸ್ಪಷ್ಟನೆ ಸಿಕ್ಕರೂ ಅಚ್ಚರಿ ಪಡಬೇಕಿಲ್ಲ.

More from Filmibeat

English summary
NTR31: Jr NTR and Prashanth neel's film title leaked;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X