ಆ ಪ್ಯಾನ್ ಇಂಡಿಯಾ ಚಿತ್ರಕ್ಕಾಗಿ ಭಾರತಕ್ಕೆ ಬರ್ತಾರಾ ಜೇಮ್ಸ್ ಕ್ಯಾಮರೂನ್?

ಸಿನಿಪ್ರಪಂಚ ಕಂಡ ಪ್ರತಿಭಾನ್ವಿತ ಸಿನಿಕರ್ಮಿ ಜೇಮ್ಸ್ ಕ್ಯಾಮರೂನ್. ತಮ್ಮ ಅದ್ಭುತ ಹಾಲಿವುಡ್ ಸಿನಿಮಾಗಳಿಂದ ಸಿನಿಪ್ರೇಕ್ಷಕರನ್ನು ರಂಜಿಸಿದ ಮಾಂತ್ರಿಕ. ಜೇಮ್ಸ್ ಕ್ಯಾಮರೂನ್ ಅಂದಾಕ್ಷಣ 'ದಿ ಟರ್ಮಿನೇಟರ್', 'ಟೈಟಾನಿಕ್' ಹಾಗೂ 'ಅವತಾರ್' ಸಿನಿಮಾಗಳು ಕಣ್ಮುಂದೆ ಬರುತ್ತವೆ.

ಜೇಮ್ಸ್ ಕ್ಯಾಮರೂನ್ ವಿಷನ್, ಸಿನಿಮಾ ಮೇಕಿಂಗ್, ನಿರೂಪಣೆ ಶೈಲಿ ಎಷ್ಟೇ ಸಿನಿಮಾ ಮೇಕರ್ಸ್‌ಗೆ ಸ್ಫೂರ್ತಿ. ಸದ್ಯ 'ಅವತಾರ್' ಸರಣಿಯ ಮತ್ತೆರಡು ಸಿನಿಮಾಗಳ ನಿರ್ಮಾಣದಲ್ಲಿ ಕ್ಯಾಮರೂನ್ ಬ್ಯುಸಿಯಾಗಿದ್ದಾರೆ. ವರ್ಷದ ಹಿಂದೆ 'ಅವತಾರ್: ದಿ ವೇ ಆಫ್ ವಾಟರ್' ಸಿನಿಮಾ ಬಂದು ಮತ್ತೊಮ್ಮೆ ಪ್ರೇಕ್ಷಕರನ್ನು ಹೊಸ ಮಾಯಾಲೋಕಕ್ಕೆ ಕೊಂಡೊಯ್ದಿತ್ತು.

Buzz: will James Cameron attend this pan india film Launch event?

ಸದ್ಯ ಅದೊಂದು ಚಿತ್ರಕ್ಕಾಗಿ ಜೇಮ್ಸ್ ಕ್ಯಾಮರೂನ್ ಭಾರತಕ್ಕೆ ಬರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಅರೇ ಎಲ್ಲಿಯ ಜೇಮ್ಸ್ ಕ್ಯಾಮರೂನ್, ಅವರು ಭಾರತಕ್ಕೆ ಬರೋದು ಯಾಕೆ? ಅದು ಕೂಡ ನಮ್ಮ ಸಿನಿಮಾಗಾಗಿ ಎಂದು ಅಚ್ಚರಿ ಆಗುತ್ತಿದ್ಯಾ? ಇಂತಾದೊಂದು ಸುದ್ದಿ ಈಗ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡ್ತಿದೆ. ತೆಲುಗು ಚಿತ್ರವೊಂದಕ್ಕಾಗಿ 'ಅವತಾರ್' ಸೃಷ್ಟಿಕರ್ತನನ್ನು ಹೈದರಾಬಾದ್‌ಗೆ ಕರ್ಕೊಂಡು ಬರುವ ಬಗ್ಗೆ ಅಂತೆ ಕಂತೆ ಸುದ್ದಿ ಕೇಳಿಬರ್ತಿದೆ.

'RRR' ಸೂಪರ್ ಹಿಟ್ ಬಳಿಕ ನಿರ್ದೇಶಕ ರಾಜಮೌಳಿ ಹೊಸ ಸಿನಿಮಾ ತಯಾರಿಯಲ್ಲಿದ್ದಾರೆ. ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಪ್ಲ್ಯಾನ್ ಮಾಡುತ್ತಿದ್ದಾರೆ. ಸದ್ಯ ಇನ್ನು ಹೆಸರಿಡದ ಈ ಸಿನಿಮಾ ಪ್ರೀ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗುತ್ತಿದೆ. ಸದ್ಯಕ್ಕೆ SSMB29 ಎನ್ನುವ ಟೈಟಲ್‌ನಲ್ಲಿ ಸಿನಿಮಾವನ್ನು ಗುರ್ತಿಸಲಾಗುತ್ತಿದೆ. ಗ್ಲೋಬ್ಟ್ರೋಟಿಂಗ್ ಆಕ್ಷನ್ ಅಡ್ವೆಂಚರ್ ಜಾನರ್ ಸಿನಿಮಾ ಇದು ಎನ್ನಲಾಗುತ್ತಿದೆ.

ಶೀಘ್ರದಲ್ಲೇ SSMB29 ಸಿನಿಮಾ ಲಾಂಚ್ ಮಾಡುವ ಪ್ರಯತ್ನಗಳು ನಡೀತಿದೆ. ಈ ಕಾರ್ಯಕ್ರಮಕ್ಕೆ ಜೇಮ್ಸ್ ಕ್ಯಾಮರೂನ್ ಅತಿಥಿಯಾಗಿ ಬರುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಮಹೇಶ್ ಬಾಬು - ರಾಜಮೌಳಿ ಸಿನಿಮಾ ಮುಹೂರ್ತ ಸಮಾರಂಭಕ್ಕೆ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಬರ್ತಾರೆ ಎನ್ನುವುದನ್ನು ಕೇಳಿ ಕೆಲವರು ಥ್ರಿಲ್ಲಾಗಿದ್ದಾರೆ.

ವಿಭಿನ್ನ ರೀತಿಯಲ್ಲಿ ತಮ್ಮ ಸಿನಿಮಾಗಳನ್ನು ರಾಜಮೌಳಿ ಪ್ರಚಾರ ಮಾಡುತ್ತಾರೆ. ಪ್ರತಿ ಬಾರಿ ಸಿನಿಮಾ ಆರಂಭಿಸುವಾಗ ಸುದ್ದಿಗೋಷ್ಠಿ ನಡೆಸುತ್ತಾರೆ. ಏಪ್ರಿಲ್ 9ಕ್ಕೆ SSMB29 ಸಿನಿಮಾ ಶುರುವಾಗುವ ಬಗ್ಗೆ ಚರ್ಚೆ ನಡೀತಿದೆ. ಅಂದೇ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಆ ವೇಳೆ ಜೇಮ್ಸ್ ಕ್ಯಾಮರೂನ್ ಸಹ ಹಾಜರಿರುತ್ತಾರೆ ಎನ್ನಲಾಗ್ತಿದೆ. ರಾಜಮೌಳಿ ನಿರ್ದೇಶನದ 'RRR' ಸಿನಿಮಾ ನೋಡಿ ಜೇಮ್ಸ್ ಕ್ಯಾಮರೂನ್ ಫಿದಾ ಆಗಿದ್ದರು. ಜಕ್ಕಣ್ಣ ಪ್ರತಿಭೆ ಬಗ್ಗೆ ಮೆಚ್ಚಿಕೊಂಡಾಡಿದ್ದರು.

Buzz: will James Cameron attend this pan india film Launch event?

ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ 'RRR' ತಂಡ ಜೇಮ್ಸ್ ಕ್ಯಾಮರೂನ್ ಭೇಟಿ ಮಾಡಿದ್ದರು. ಆಗ ಇಡೀ ತಂಡದ ಕೆಲಸವನ್ನು ಹಾಲಿವುಡ್ ಸ್ಟಾರ್ ಡೈರೆಕ್ಟರ್ ಹಾಡಿ ಕೊಂಡಾಡಿದ್ದರು. ಇದೇ ಒಡನಾಟದಿಂದ ತಮ್ಮ ಮುಂದಿನ ಸಿನಿಮಾ ಮುಹೂರ್ತ ಸಮಾರಂಭಕ್ಕೆ ಮೌಳಿ, ಜೇಮ್ಸ್ ಕ್ಯಾಮರೂನ್‌ನ ಆಹ್ವಾನಿಸುತ್ತಾರೆ ಎನ್ನುವ ಲೆಕ್ಕಾಚಾರ ಕೆಲವರದ್ದು.

ಬಹಳ ದೊಡ್ಡಮಟ್ಟದಲ್ಲಿ ರಾಜಮೌಳಿ SSMB29 ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ಹಾಲಿವುಡ್ ಸ್ಟುಡಿಯೋ ಜೊತೆಗೂ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಹಾಲಿವುಡ್ ತಂತ್ರಜ್ಞರು, ಕಲಾವಿದರು ಕೂಡ ಈ ಅದ್ಧೂರಿ ಚಿತ್ರದಲ್ಲಿ ಕೆಲಸ ಮಾಡುವ ಸಾಧ್ಯತೆಯಿದೆ. ಒಂದರ್ಥದಲ್ಲಿ ಟಾಲಿವುಡ್‌ನಲ್ಲೇ ಹಾಲಿವುಡ್ ಪ್ರಾಜೆಕ್ಟ್ ನಿರ್ಮಾಣವಾಗುವ ಅಂದಾಜಿದೆ. ಅದಕ್ಕೆ ತಕ್ಕಂತೆ ಮೇಕಿಂಗ್, ಪ್ರಮೋಷ್, ರಿಲೀಸ್ ನಡೆಯಲಿದೆ. ಹಾಗಾಗಿ ಚಿತ್ರದ ಮುಹೂರ್ತಕ್ಕೆ ಜೇಮ್ಸ್ ಕ್ಯಾಮರೂನ್ ಬಂದರೂ ಅಚ್ಚರಿಪಡಬೇಕಿಲ್ಲ.

ಕೆ. ಎಲ್ ನಾರಾಯಣ ಹಾಗೂ ಎಸ್. ಗೋಪಾಲ್ SSMB29 ಸಿನಿಮಾ ನಿರ್ಮಿಸಲಿದ್ದಾರೆ. ಚಿತ್ರಕ್ಕೆ ಇಂಡೋನೇಷ್ಯಾ ನಟಿ ಚೆಲ್ಸಿ ಎಲಿಜಬೆತ್ ಇಸ್ಲಾನ್ ನಾಯಕಿ ಎನ್ನಲಾಗುತ್ತಿದೆ. ಚಿತ್ರಕ್ಕಾಗಿ 'ಮಹಾರಾಜ' ಎನ್ನುವ ಟೈಟಲ್‌ ಪರಿಶೀಲನೆಯಲ್ಲಿದೆಯಂತೆ ಚಿತ್ರತಂಡ. ಒಟ್ನಲ್ಲಿ ಮಹೇಶ್ ಬಾಬು, ರಾಜಮೌಳಿ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ.

More from Filmibeat

English summary
Tollywood director Planning to Bring James Cameron on his Film Launch;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X