ಒಂದೇ ಚಿತ್ರದಲ್ಲಿ ಯಶ್, ಪ್ರಭಾಸ್, ತಾರಕ್: ಕ್ರೇಜಿ ನ್ಯೂಸ್ ಕೇಳಿ ಅಭಿಮಾನಿಗಳು ಥ್ರಿಲ್
ಭಾರತೀಯ ಚಿತ್ರರಂಗದಲ್ಲೀಗ ಮಲ್ಟಿಸ್ಟಾರರ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಇನ್ನು ಸಿನಿಮ್ಯಾಟಿಕ್ ಯೂನಿವರ್ಸ್‌ಗಳ ಹವಾ ಶುರುವಾಗಿದೆ. ಹಾಲಿವುಡ್‌ನಿಂದ ಬಾಲಿವುಡ್‌ಗೆ ಬಂದ ಟ್ರೆಂಡ್ ಈಗ ಸೌತ್ ಸಿನಿದುನಿಯಾಕ್ಕೂ ಪ್ರವೇಶಿಸಿದೆ. ಈಗಾಗಲೇ ತಮಿಳು ನಿರ್ದೇಶನ ಲೋಕೇಶ್ ಕನಕರಾಜ್ ಸಿನಿಮ್ಯಾಟಿಕ್ ಯೂನಿವರ್ಸ್ ಭಾರೀ ಸದ್ದು ಮಾಡ್ತಿದೆ.
ಬೇರೆ ಬೇರೆ ಸ್ಟಾರ್ ನಟರನ್ನು ಹೀರೊ ಮಾಡಿ ಸಿನಿಮಾಗಳನ್ನು ಮಾಡೋದು. ಆ ಕತೆಗಳಿಗೆ ಒಂದಕ್ಕೊಂದು ಲಿಂಕ್ ಕೊಟ್ಟು ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ ಹುಟ್ಟುವಂತೆ ಮಾಡೋದು, ಕೊನೆಗೆ ಒಂದು ಕತೆಯಲ್ಲಿರುವ ಪಾತ್ರಗಳನ್ನು ಮತ್ತೊಂದು ಕತೆಗೆ ತರೋದು, ಇಬ್ಬರು ಸ್ಟಾರ್ ನಟರನ್ನು ಸೇರಿಸಿ ಮಲ್ಟಿಸ್ಟಾರರ್ ಸಿನಿಮಾ ಮಾಡೋದು ಹೀಗೆ ಸಿನಿಮ್ಯಾಟಿಕ್ ಯೂನಿವರ್ಸ್ ಸದ್ದು ಮಾಡ್ತಿದೆ. ಲೋಕೇಶ್ ಕನಕರಾಜ್ 'ಕೈದಿ', 'ವಿಕ್ರಂ' ಹಾಗೂ 'ಲಿಯೋ' 3 ಕತೆಗಳಿಗೆ ಲಿಂಕ್ ಕೊಟ್ಟಿದ್ದಾರೆ. ಮುಂದೆ ದೊಡ್ಡ ಪ್ರಾಜೆಕ್ಟ್ ಪ್ಲ್ಯಾನ್ ಮಾಡ್ತಿದ್ದಾರೆ.

ಬಹಳ ದಿನಗಳಿಂದ ಪ್ರಶಾಂತ್ ನೀಲ್ ಸಿನಿಮ್ಯಾಟಿಕ್ ಯೂನಿವರ್ಸ್ ಚರ್ಚೆ ನಡೀತಿದೆ. 'KGF' ಸರಣಿಗೂ 'ಸಲಾರ್' ಸರಣಿಗೂ ಲಿಂಕ್ ಇದೆ. ಯಶ್ ರಾಕಿಭಾಯ್ ಆಗಿ 'ಸಲಾರ್' ಚಿತ್ರದಲ್ಲೂ ಅಬ್ಬರಿಸುತ್ತಾರೆ ಎನ್ನಲಾಗ್ತಿದೆ. ಲೇಟೆಸ್ಟ್ ಸಮಾಚಾರ ಏನಪ್ಪಾ ಅಂದ್ರೆ 'ಸಲಾರ್' ಚಿತ್ರದಲ್ಲಿ ಯಂಗ್ ಟೈಗರ್ ಎನ್‌ಟಿಆರ್ ಕೂಡ ಇರ್ತಾರೆ ಎನ್ನುವ ಚರ್ಚೆ ಶುರುವಾಗಿದೆ. 'ಸಲಾರ್' ಚಿತ್ರದಲ್ಲಿ ಸಣ್ಣ ಝಲಕ್ ಮಾತ್ರ ಇರಲಿದ್ದು ಮುಂದೆ ಮೂವರನ್ನು ಒಟ್ಟಿಗೆ ಸೇರಿ ಮೆಗಾ ಪ್ರಾಜೆಕ್ಟ್ ಸಿದ್ಧತೆ ನಡೀತಿದೆ ಎನ್ನುವ ಗುಸುಗುಸು ಶುರುವಾಗಿದೆ.
'ಸಲಾರ್' ಬಳಿಕ ಎನ್‌ಟಿಆರ್ ಚಿತ್ರಕ್ಕೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಲಿದ್ದಾರೆ. ಈಗಾಗಲೇ ಅದಕ್ಕಾಗಿ ತಯಾರಿ ಕೂಡ ನಡೀತಿದೆ. 'ಸಲಾರ್' ಚಿತ್ರದ ಕ್ಲೈಮ್ಯಾಕ್ಸ್ ಬಳಿಕ ಪೋಸ್ಟ್ ಕ್ರೆಡಿಟ್ ಸೀನ್‌ನಲ್ಲಿ ಯಶ್- ತಾರಕ್ ಆರ್ಭಟದ ಝಲಕ್ ತೋರಿಸಿ ಕುತೂಹಲ ಮೂಡಿಸುವ ಪ್ರಯತ್ನ ನಡೀತಿದೆಯಂತೆ. ಇದೇ ವಿಚಾರ ಟಾಲಿವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಇಷ್ಟು ದಿನ 'ಸಲಾರ್' ಹಾಗೂ ರಾಕಿಭಾಯ್ ಒಂದೇ ಫ್ರೇಮ್‌ನಲ್ಲಿ ಕಂಡರೆ ಹೇಗಿರುತ್ತೆ ಎಂದು ಊಹಿಸಿಕೊಂಡೇ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಇನ್ನು ತಾರಕ್ ಕೂಡ ಇರ್ತಾರಾ? ಎಂದು ಹುಬ್ಬೇರಿಸಿದ್ದಾರೆ.

ಪ್ರಭಾಸ್, ಯಶ್ ಹಾಗೂ ಎನ್‌ಟಿಆರ್ ಒಂದೇ ಚಿತ್ರದಲ್ಲಿ ನಟಿಸಿದ್ರೆ ಹೇಗಿರುತ್ತೆ? ಎನ್ನುವುದನ್ನು ಕಲ್ಪಿಸಿಕೊಂಡೇ ಕೆಲವರು ಥ್ರಿಲ್ಲಾಗಿದ್ದಾರೆ. ಇನ್ನು ಮೂವರು ಒಟ್ಟಿಗೆ ಸೇರಿಸಿ ನೀಲ್ ಆಕ್ಷನ್ ಕಟ್ ಹೇಳಿದರೆ ಬಾಕ್ಸಾಫೀಸ್ ಧೂಳಿಪಟ ಆಗುವುದರಲ್ಲಿ ಅನುಮಾನವಿಲ್ಲ. ಯಾವುದೇ ಅಸಾಧ್ಯವಿಲ್ಲ. ಕತೆ ಇಷ್ಟವಾದರೂ ಮೂವರು ಒಟ್ಟಿಗೆ ನಟಿಸಿದರೂ ಅಚ್ಚರಿ ಪಡಬೇಕಿಲ್ಲ. ಹೊಂಬಾಳೆ ಫಿಲ್ಮ್ಸ್, ಪ್ರಶಾಂತ್ ನೀಲ್ ಮನಸ್ಸು ಮಾಡಿದರೆ ಯಾವುದು ಅಸಾಧ್ಯವಲ್ಲ. ಆದರೆ ಇದೆಲ್ಲಾ ಬರೀ ಊಹಾಪೋಹ ಅಷ್ಟೆ. ಚಿತ್ರತಂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ಅಂದಹಾಗೆ 'ಸಲಾರ್ ಚೇಸ್‌ಫೈರ್' ಚಿತ್ರದ ಹೊಸ ರಿಲೀಸ್ ಡೇಟ್ ಘೋಷಣೆ ಮಾಡಲಾಗಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಡಿಸೆಂಬರ್ 22ಕ್ಕೆ 'ಸಲಾರ್' ಬರ್ತಿದ್ದಾನೆ. ಅದೇ ದಿನ ರಿಲೀಸ್ ಆಗಬೇಕಿದ್ದ ಕನ್ನಡದ 'ಯುವ' ಬರೋದು ತಡವಾಗಲಿಲ್ಲ. 3 ವರ್ಷಗಳ ಹಿಂದೆಯೇ ಜ್ಯೂ. ಎನ್‌ಟಿಆರ್ ಕಾಂಬಿನೇಷನ್‌ನಲ್ಲಿ ಪ್ರಶಾಂತ್ ನೀಲ್ ಸಿನಿಮಾ ಘೋಷಿಸಿದ್ದಾರೆ. ಈಗಾಗಲೇ ಒನ್‌ಲೈನ್ ಸ್ಟೋರಿ ಕುಡ ಹೇಳಿ ಒಪ್ಪಿಸಿದ್ದಾರೆ.
ಖುದ್ದು ತಾರಕ್ ಕನ್ನಡದ ನಿರ್ದೇಶನ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡುವ ಇಂಗಿಯ ವ್ಯಕ್ತಪಡಿಸಿದ್ದರು. ಹಾಗಾಗಿ ನೀಲ್ ಒಂದೊಳ್ಳೆ ಆಕ್ಷನ್ ಡ್ರಾಮಾ 'ಸ್'ಟೋರಿ ರೆಡಿ ಮಾಡುತ್ತಿದ್ದಾರೆ. ಹೊಂಬಾಳೆ ಸಂಸ್ಥೆ 'KGF'-3 ಕೆಲಸಗಳನ್ನು ಬೇಡ ಆರಂಭಿಸಲಾಗುತ್ತದೆ ಎಂದಿದೆ.


Click it and Unblock the Notifications











