Cannes 2023: ಪ್ರತಿಷ್ಠಿತ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ಗೆ 'ಸೀತಾರಾಮಂ' ನಟಿ ಮೃಣಾಲ್ ಠಾಕೂರ್
ಮೃಣಾಲ್ ಠಾಕೂರ್ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಜನಪ್ರಿಯ ನಟಿ. ಬಹುಬೇಗನೇ ಚಿತ್ರರಂಗದಲ್ಲಿ ತನ್ನದೊಂದು ಸ್ಥಾನ ಗಿಟ್ಟಿಸಿಕೊಂಡಿರೋ ನಟಿ. ಟಾಲಿವುಡ್ ಸಿನಿಮಾ 'ಸೀತಾ ರಾಮಂ' ಯಶಸ್ಸಿನ ಬಳಿಕ ಈ ನಟಿ ಸಿನಿಪ್ರಿಯರ ಫೇವರೀಟ್ ಆಗಿದ್ದಾರೆ.
2022ನಲ್ಲಿ ಮೃಣಾಲ್ ಠಾಕೂರ್ ಟಾಲಿವುಡ್‌ಗೆ 'ಸೀತಾರಾಮಂ' ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾ ಗೆಲ್ಲುತ್ತಿದ್ದಂತೆ ದಕ್ಷಿಣ ಭಾರತದಲ್ಲಿ ಅಷ್ಟೇ ಅಲ್ಲದೆ ಬಾಲಿವುಡ್‌ನಲ್ಲೂ ಬ್ಯುಸಿಯಾಗಿದ್ದಾರೆ. ಸಹಜ ಅಭಿನಯ ಹಾಗೂ ಫ್ಯಾಷನ್ ಈಕೆಯ ಸ್ಟ್ರೆಂಥ್. ಇದೇ ನಟಿ ಈಗ ಕೇನ್ಸ್ ಫಿಲ್ಸ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕೆಲವು ಅದ್ಭುತ ಸಿನಿಮಾಗಳಲ್ಲಿ ಕೆಲಸ ಮಾಡಿದ ಬಳಿಕ ಮೃಣಾಲ್ ಠಾಕೂರ್ ಸಿನಿಮಾರಂಗದಲ್ಲಿ ತನ್ನದೇ ಹೆಸರು ಮಾಡಿದ್ದಾರೆ. ಇದೇ ಖುಷಿಯಲ್ಲಿ 2023ಯ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುವುದಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ಗೆ ಆಹ್ವಾನ ಪಡೆದಿರೋ ಸೆಲೆಬ್ರೆಟಿಗಳೊಂದಿಗೆ ಸೇರಿಕೊಳ್ಳಲಿದ್ದಾರೆ.

ಕೇನ್ಸ್‌ಗೆ ಮೃಣಾಲ್ ಠಾಕೂರ್
ಪ್ರತಿಷ್ಠಿತ ಕೇನ್ಸ್ ಫಿಲ್ಮ್ ಫೇಸ್ಟಿವಲ್‌ಗೆ ಈಗಾಗಲೇ ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳಿಗೆ ಆಹ್ವಾನ ಸಿಕ್ಕಿದೆ. ಎಂದಿನಂತೆ ಐಶ್ವರ್ಯ ರೈ ಬಚ್ಚನ್‌ಗೆ ಮೊದಲು ಆಹ್ವಾನ ನೀಡಲಾಗಿದೆ. ಇವರೊಂದಿಗೆ ಈ ಬಾರಿ ಹಲವು ಮಂದಿಗೆ ಮೊದಲ ಬಾರಿ ಆಮಂತ್ರಣ ನೀಡಲಾಗಿದೆ. ಸಾರಾ ಅಲಿಖಾನ್, ಅನುಷ್ಕಾ ಶರ್ಮಾ ಕೂಡ ಸೇರಿಕೊಂಡಿದ್ದಾರೆ.
ಇವರ ಸಾಲಿನಲ್ಲೀಗ ಸೀತಾರಾಮಂ ನಟಿ ಕೂಡ ಸೇರಿಕೊಂಡಿದ್ದಾರೆ. ಕೇನ್ಸ್‌ನಲ್ಲಿ ಮೃಣಾಲ್ ಠಾಕೂರ್ ವೋಡ್ಕಾ ಬ್ರ್ಯಾಂಡ್ ಗ್ರೇ ಗೂಸ್ ಅನ್ನು ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಂನಲ್ಲಿ ಫೇವರಿಟ್ ಡಿಸೈನರ್ ಫಾಲ್ಗುನಿ ಹಾಗೂ ಸ್ಯಾನ್ ಪೀಕಾಕ್ ಅವರೊಂದಿಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ. ಜೊತೆಗೆ " ನಾನು ನಿಜಕ್ಕೂ ಮೂಕವಿಸ್ಮಿತಳಾಗಿದ್ದೇನೆ. ನಾನು ಈ ಉಡುಪುಗಳನ್ನು ತೋರಿಸಬಹುದು. ಆದರೆ, ನಾನಿನ್ನೂ ಕೇನ್ಸ್ ಹೋಗಬೇಕಿದೆ." ಎಂದು ಪೋಸ್ಟ್ ಮಾಡಿದ್ದಾರೆ.
ಕೇನ್ಸ್ ಬಗ್ಗೆ ಮೃಣಾಲ್ ಏನಂತಾರೆ?
ಕೇನ್ಸ್ ಫಿಲ್ಮ್ ಫೆಸ್ಟಿವಲ್‌ಗೆ ಇದೇ ಮೊದಲ ಬಾರಿಗೆ ಎಂಟ್ರಿ ಕೊಡುತ್ತಿರುವ ಮೃಣಾಲ್ ಠಾಕೂರ್ ಉತ್ಸುಕರಾಗಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. " ಇದೇ ಮೊದಲ ಬಾರಿಗೆ ನಾನು ಕೇನ್ಸ್ ಫಿಲ್ಮ್ ಫೇಸ್ಟಿವಲ್‌ಗೆ ಹೋಗುತ್ತಿರುವುದಕ್ಕೆ ಥ್ರಿಲ್ ಆಗಿದ್ದೇನೆ. ಗ್ರೇ ಗೂಸ್ ಅನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆ ಎನಿಸುತ್ತಿದೆ." ಎಂದಿದ್ದಾರೆ.
ಹಾಗೇ " ಇದೇ ವೇಳೆ ನಾನು ಗ್ಲೋಬಲ್ ಫಿಲ್ಮ್‌ಮೇಕರ್ಸ್ ಜೊತೆ ಚರ್ಚೆ ಮಾಡುವುದನ್ನು ಎದುರು ನೋಡುತ್ತಿದ್ದೇನೆ. ಹೊಸ ಅವಕಾಶಗಳನ್ನು ಹುಡುಕುತ್ತೇನೆ" ಎಂದು ಮೃಣಾಲ್ ಠಾಕೂರ್ ಹೇಳಿದ್ದಾರೆ.

ಸಿನಿಮಾಗಳಲ್ಲೂ ಬ್ಯುಸಿ
ಮೃಣಾಲ್ ಠಾಕೂರ್ ಸಿನಿಮಾಗಳಲ್ಲೂ ಫುಲ್ ಬ್ಯುಸಿ. ಇತ್ತೀಚೆಗಷ್ಟೇ ಆದಿತ್ಯ ರಾಯ್ ಕಪೂರ್ ಜೊತೆ ನಟಿಸಿದ್ದ 'ಗುಮ್ರಾ' ಸಿನಿಮಾ ರಿಲೀಸ್ ಆಗಿದೆ. ಆದರೆ, ಬಾಕ್ಸಾಫೀಸ್ ಹೆಚ್ಚೇನು ಮೋಡಿ ಮಾಡಿಲ್ಲ. ಆದರೆ, ಕೈ ತುಂಬಾ ಸಿನಿಮಾಗಳಿವೆ.
ಮೃಣಾಲ್ ಠಾಕೂರ್ ಕೈಯಲ್ಲಿ ಹಲವು ಸಿನಿಮಾಗಳಿವೆ. 'ಪೂಜಾ ಮೇರಿ ಜಾನ್', 'ಪಿಪ್ಪಾ', 'ಲಸ್ಟ್ ಸ್ಟೋರಿಸ್ 2' ಹಾಗೇ ಟಾಲಿವುಡ್‌ನ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.


Click it and Unblock the Notifications











