twitter
    For Quick Alerts
    ALLOW NOTIFICATIONS  
    For Daily Alerts

    ರಾಜೀವ್ ಗಾಂಧಿ ಮಾದರಿಯಲ್ಲಿ ಸಿಎಂ ಜಗನ್ ಅನ್ನು ಕೊಲ್ಲುತ್ತೇನೆಂದ ಪವನ್ ಅಭಿಮಾನಿ!

    |

    ಸಿನಿಮಾ ರಂಗ ಹಾಗೂ ಆಂಧ್ರ ಸರ್ಕಾರದ ನಡುವೆ ತಿಕ್ಕಾಟ ಹೆಚ್ಚಾಗಿದ್ದು ಚಿರಂಜೀವಿ ಮಧ್ಯ ಪ್ರವೇಶದಿಂದ ಈ ತಿಕ್ಕಾಟ ತುಸು ಕಡಿಮೆ ಆಗಿದೆ.

    ಆದರೆ ಪವನ್ ಕಲ್ಯಾಣ್ ಅಭಿಮಾನಿಗಳು ಮಾತ್ರ ತಮ್ಮ ಜಗನ್ ಮೇಲಿನ ದ್ವೇಷವನ್ನು ಬಿಟ್ಟಿಲ್ಲ. ಇದೀಗ ಪವನ್ ಕಲ್ಯಾಣ್ ಅಭಿಮಾನಿಯೊಬ್ಬ ಸಿಎಂ ಜಗನ್ ಮೋಹನ್ ಅನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.

    ಮಾನವ ಬಾಂಬ್ ಆಗಿ ಜಗನ್ ಅನ್ನು ಕೊಲ್ಲುತ್ತೇನೆ ಎಂದು ಪವನ್ ಕಲ್ಯಾಣ್ ಅಭಿಮಾನಿ ಟ್ವಿಟ್ಟರ್‌ನಲ್ಲಿ ಹೇಳಿದ್ದಾನೆ. ಅಭಿಮಾನಿಯ ವಿರುದ್ಧ ತಿರುಪತಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಜಗನ್ ನೇತೃತ್ವದ ಜನಸೇನಾ ಪಕ್ಷ ಸಹ ಹಲವು ನಗರಗಳಲ್ಲಿ ಪವನ್ ಅಭಿಮಾನಿ ವಿರುದ್ಧ ದೂರು ದಾಖಲಿಸಿವೆ.

    Case Against Pawan Kalyan Fan Who Threaten To Kill CM Jagan Mohan Reddy
    ಸಿಎಂ ಜಗನ್ ಅನ್ನು ಅವಾಚ್ಯ ಶಬ್ದಗಳಿಂದ ಬೈದಿರುವ ಪವನ್ ಕಲ್ಯಾಣ್ ಅಭಿಮಾನಿ, ಪವನ್ ಕಲ್ಯಾಣ್‌ಗಾಗಿ ನಾನು ಸೂಸೈಡ್ ಬಾಂಬರ್ ಆಗಿ ಸಿಎಂ ಜಗನ್ ಅನ್ನು ಕೊಲ್ಲುತ್ತೇನೆ ಎಂದಿದ್ದಾರೆ.

    ಪವನ್ ಕಲ್ಯಾಣ್ ಹಾಗೂ ಜಗನ್ ನಡುವೆ ತೀವ್ರ ವಾಗ್ದಾಳಿಗಳು ನಡೆದಿದ್ದವು. ಪವನ್ ಕಲ್ಯಾಣ್ ನಟನೆಯ 'ವಕೀಲ್ ಸಾಬ್‌' ಸಿನಿಮಾಕ್ಕೆ ಜಗನ್ ಸರ್ಕಾರ ಸಮಸ್ಯೆ ನೀಡಿತು ಎಂದು ಪವನ್ ಅಭಿಮಾನಿಗಳು ಆರೋಪ ಮಾಡಿದ್ದರು. ಬಳಿಕ ಪವನ್ ಸಹ ತಮ್ಮ ಕುಟುಂಬದ ಸಾಯಿ ತೇಜ್ ನಟನೆಯ 'ರಿಪಬ್ಲಿಕ್' ಸಿನಿಮಾದ ಕಾರ್ಯಕ್ರಮದಲ್ಲಿ ಜಗನ್ ವಿರುದ್ಧ ಏಕ ವಚನದ ವಾಗ್ದಾಳಿ ನಡೆಸಿದರು. ಇದರಿಂದ ಜಗನ್ ಹಾಗೂ ಪವನ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ವೈಷಮ್ಯ ಏರ್ಪಟ್ಟಿತು.

    ಪವನ್ ಕಲ್ಯಾಣ್, ಜಗನ್ ಅನ್ನು ಏಕ ವಚನದಲ್ಲಿ ನಿಂದಿಸಿದ ಬಳಿಕವೇ ಜಗನ್ ಸರ್ಕಾರವು ಚಿತ್ರಮಂದಿರಗಳ ಟಿಕೆಟ್ ದರ ತಗ್ಗಿಸಿತು. ಕೆಲವು ಚಿತ್ರಮಂದಿರಗಳನ್ನು ಸೀಜ್ ಮಾಡಿ ಸಿನಿಮಾ ಪ್ರದರ್ಶಿಸದಂತೆ ಮಾಡಿತು. ಜಗನ್ ವಿರುದ್ಧ ಪವನ್ ಕಲ್ಯಾಣ್ ಮಾತನಾಡಿದ್ದಕ್ಕೆ ಈ ಸಮಸ್ಯೆ ಎಲ್ಲ ಆಗುತ್ತಿವೆ ಎಂದು ಸಹ ಹಲವರು ಮಾತನಾಡಿಕೊಂಡರು.

    ಇದೀಗ ಪವನ್ ಕಲ್ಯಾಣ್ ಸಹೋದರ ನಟ ಚಿರಂಜೀವಿ, ಸಿಎಂ ಜಗನ್ ಅನ್ನು ಭೇಟಿಯಾಗಿ ಚಿತ್ರರಂಗದ ಸಮಸ್ಯೆ ಬಗ್ಗೆ ಚರ್ಚಿಸಿದ್ದು, ಸಭೆ ಯಶಸ್ವಿಯಾಗಿದೆ ಎಂದಿದ್ದಾರೆ. ಚಿತ್ರಮಂದಿರಗಳ ಟಿಕೆಟ್ ದರ ತಗ್ಗಿಸಿ ಆಂಧ್ರ ಸರ್ಕಾರ ಈಗ ಹೊರಡಿಸಿರುವ ಆದೇಶವನ್ನು ಹಿಂಪಡೆಯುವುದಾಗಿ ಜಗನ್ ಭರವಸೆ ನೀಡಿದ್ದಾರೆ ಎಂದು ಚಿರಂಜೀವಿ ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಹೊಸ ಆದೇಶ ಹೊರಬರಲಿದೆ.

    English summary
    Case against Pawan Kalyan fan who threaten to kill CM Jagan Mohan Reddy. Tirupati police registered complaint against him.
    Tuesday, January 18, 2022, 13:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X