ಆಂಧ್ರ ಡಿಸಿಎಂ ಪವನ್ ಕುಂಭಮೇಳ ಪುಣ್ಯಸ್ನಾನ ಫೋಟೊ ತಿರುಚಿದವರ ವಿರುದ್ಧ ದೂರು

ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ಇತ್ತೀಚೆಗೆ ಕುಂಭಮೇಳಕ್ಕೆ ತೆರಳಿಸಿದ್ದರು. ಪ್ರಯಾಗ್‌ರಾಜ್ ತ್ರಿವೇಣಿ ಸಂಗಮದಲ್ಲಿ ಪತ್ನಿ ಹಾಗೂ ಮಗನ ಜೊತೆ ಪುಣ್ಯಸ್ನಾನ ಮಾಡಿದ್ದರು. ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಸಹ ಈ ವೇಳೆ ಜೊತೆಗಿದ್ದರು.

ಪವನ್ ಪುಣ್ಯಸ್ನಾನದ ವೇಳೆ ಅಂಗಿ ಬಿಚ್ಚಿ ಕಾಣಿಸಿಕೊಂಡಿದ್ದರು. ಆದರೆ ಈ ಫೋಟೊಗಳನ್ನು ಕೆಲವರು ಮಾರ್ಫ್ ಮಾಡಿ ವ್ಯಂಗ್ಯ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಇದನ್ನು ಪವನ್ ಫ್ಯಾನ್ಸ್ ಕೂಡ ತಿರುಗೇಟು ನೀಡುತ್ತಿದ್ದಾರೆ. ಸ್ಟಾರ್ ನಟ, ಆಕ್ಷನ್ ಹೀರೊ ಹೀಗೆ ಏನೇನೋ ಅಂತಾರೆ, ಇಲ್ಲಿ ನೋಡಿ ಬೊಜ್ಜು ಹೊಟ್ಟೆ ಎಂದು ಕೆಲವರು ವ್ಯಂಗ್ಯವಾಡಿದ್ದರು.

Case filed against who morphed and shared AP DCM Pawan kalyan s kumbh mela pics

ಸದ್ಯ ಪವನ್ ಫೋಟೊ, ವೀಡಿಯೋಗಳನ್ನು ತಪ್ಪಾಗಿ ತೋರಿಸಿ ಟ್ರೋಲ್ ಮಾಡಿದವರ ವಿರುದ್ಧ ದೂರು ದಾಖಲಾಗಿದೆ. ವಿಜಯವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಜನಸೈನಿಕರು(ಜನಸೇನಾ ಪಕ್ಷ ಕಾರ್ಯಕರ್ತರು) ದೂರು ನೀಡಿದ್ದಾರೆ. ಈ ಸಂಬಂಧ BNS ಸೆಕ್ಷನ್ 353(2), 356(2) ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಪವನ್ ಬಾಡಿ ಶೇಮಿಂಗ್ ಮಾಡಿ ಫೋಟೊಗಳನ್ನು ವೈರಲ್ ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ವಿರೋಧ ಪಕ್ಷದವರು ಹೀಗೆ ಮಾಡುತ್ತಿದ್ದಾರೆ ಎನ್ನುವುದು ಕೆಲವರ ಆರೋಪವಾಗಿದೆ.

ಆಂಧ್ರ ಡಿಸಿಎಂ ಫಿಟ್ನೆಸ್ ಹಾಗೂ ಫಿಜಿಕ್ ಬಗ್ಗೆ ಅಸಭ್ಯ ಪದಗಳನ್ನು ಬಳಸಿ ಟ್ರೋಲ್ ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹೀಗೆ ಸುಖಾಸುಮ್ಮನೆ ಟ್ರೋಲ್ ಮಾಡುವವರಿಗೆ ಈ ಹಿಂದೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಡಿಸಿಎಂ ಪವನ್ ಎಚ್ಚರಿಕೆ ನೀಡಿದ್ದರು. ಆದರೂ ಅದು ಮುಂದುವರೆಯುತ್ತಿದೆ.

ಮಂಗಳವಾರ(ಫೆಬ್ರವರಿ 18) ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ ಹಾಗೂ ಪುತ್ರ ಅಕಿರಾ ನಂದನ್‌ ಜೊತೆಗೆ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದರು. ಬಳಿಕ ಗಂಗಾರತಿ ಬೆಳಗಿದರು. ನಂತರ ಮಾತನಾಡಿ "ಮಹಾ ಕುಂಭಮೇಳಕ್ಕೆ ಉತ್ತಮ ವ್ಯವಸ್ಥೆಗಳನ್ನು ಮಾಡಿದ್ದಕ್ಕಾಗಿ ಅವರು ಯೋಗಿ ಸರ್ಕಾರವನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಪವನ್ ಆಧ್ಯಾತ್ಮಿಕ ಪ್ರಯಾಣ, ರಾಜಕೀಯ ಹೆಜ್ಜೆಗಳು ಮತ್ತು ಸನಾತನ ಧರ್ಮದ ಬಗ್ಗೆ ಪ್ರತಿಕ್ರಿಯಿಸಿದ್ದರು.

10 ವರ್ಷಗಳ ಹಿಂದೆ ಜನಸೇನಾ ಪಕ್ಷ ಸ್ಥಾಪಿಸಿದ್ದ ಪವನ್ ಕಲ್ಯಾಣ್ 5 ವರ್ಷಗಳ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಕಳೆದ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಹಾಗೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರು. 19 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡಿದ್ದರು. 2 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸಿತ್ತು.

ಚುನಾವಣೆಯಲ್ಲಿ ಗೆದ್ದ ಬಳಿಕ ಪವನ್ ಸಂಪೂರ್ಣವಾಗಿ ಸರ್ಕಾರ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಅವರು ನಟಿಸುತ್ತಿದ್ದ 3 ಸಿನಿಮಾಗಳು ಅರ್ಧಕ್ಕೆ ನಿಂತಿವೆ. ಆಗಾಗ್ಗೆ ಚಿತ್ರೀಕರಣ ನಡೆಸಿ ಆ ಚಿತ್ರಗಳನ್ನು ಮುಗಿಯುವ ಮನಸ್ಸು ಮಾಡಿದ್ದಾರೆ. ಇತ್ತೀಚೆಗೆ ಮತ್ತೆ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. 'ಹರಹರ ವೀರಮಲ್ಲು', 'OG' ಹಾಗೂ 'ಉಸ್ತಾದ್ ಭಗತ್‌ ಸಿಂಗ್' ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ.

More from Filmibeat

English summary
Supporters of AP DCM Pawan Kalyan have filed a case against those who morphed and shared his recent Kumbh Mela photos;
Read more about: tollywood pawan kalyan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X