For Quick Alerts
  ALLOW NOTIFICATIONS  
  For Daily Alerts

  ಅತ್ಯಾಚಾರಕ್ಕೆ ಒಳಗಾಗುವ ಪುರುಷರ ಕಥೆ-ವ್ಯಥೆಯೇ 'ಕ್ಯಾಲಿಫ್ಲವರ್': 'ಬರ್ನಿಂಗ್ ಸ್ಟಾರ್' ಸಂಪೂರ್ಣೇಶ್ ಬಾಬು

  By ರವೀಂದ್ರ ಕೊಟಕಿ
  |

  ಕೆಲವು ಸಿನಿಮಾಗಳು ಹಾಗೆಯೇ, ಅದರಲ್ಲಿ ನೀವು ಲಾಜಿಕ್ ಹುಡುಕಬಾರದು, ಕೇವಲ ಮ್ಯಾಜಿಕ್ ನೋಡಿ ಎಂಜಾಯ್ ಮಾಡಬೇಕು. ಅಂತಹ ಸಿನಿಮಾಗಳನ್ನು ನಿರ್ಮಿಸುವುದೇ ಪ್ರೇಕ್ಷಕರನ್ನು ರಂಜಿಸಲು. ಚಿತ್ರ ಪ್ರೇಕ್ಷಕರನ್ನು ರಂಜಿಸಲು ಯಶಸ್ವಿಯಾದರೆ ಖಂಡಿತಾ ಹಿಟ್ ಆದಂತೆ. ವ್ಯಾಪಾರಿ ಮನೋಭಾವದ ಕೇವಲ ಹಾಸ್ಯವನ್ನು ಪ್ರಧಾನವಾಗಿಸಿಕೊಂಡು ಬರುವಂತಹ ಕಡಿಮೆ ಬಜೆಟ್ಟಿನ ಚಿತ್ರಗಳು ಅನೇಕ ಬಾರಿ ಸೂಪರ್ ಹಿಟ್ ಚಿತ್ರಗಳಾಗಿ ಜನಮನ ಕೂಡ ಗೆದ್ದಿದ್ದೇವೆ. ಪ್ರತ್ಯೇಕವಾದ ಯಾವುದೇ ಒಂದು ಜಾನರ್ ರಿಗೆ, ಇಸಂಗಳಿಗೆ ಮತ್ತು ಇಮೇಜ್ ಗಳಿಗೆ ಅಂಟಿಕೊಳ್ಳದ ಈ ಚಿತ್ರಗಳುಮೂಲ ಉದ್ದೇಶ ಮನೋರಂಜನೆ, ಮನೋರಂಜನೆ ಮಾತ್ರ. ಇಂತಹ ಚಿತ್ರಗಳ ಬಗ್ಗೆ ಚೀಪ್ ರೇಟೆಡ್ ಅಥವಾ ಮೂರನೇ ದರ್ಜೆಯ ಕಾಮಿಡಿ ಅಂತಲೂ ಕೊಡ ಇವುಗಳನ್ನು ಕ್ರಿಟಿಕ್ಸ್ ಅಭಿವರ್ಣಿಸುತ್ತಾರೆ. ಹಾಗಂತ ಈ ಚಿತ್ರಗಳು ತೀರಾ ಕಳಪೆ ಆಗಿರುತ್ತದೆ ಅಂತ ಹೇಳಲು ಸಾಧ್ಯವಿಲ್ಲ. ಆದರೆ ಅವುಗಳಲ್ಲಿರುವ ಲಾಜಿಕ್ ಇದೆ ಮೀರಿದ ಊಹಿಸಲೂ ಅಸಾಧ್ಯವಾದ ದೃಶ್ಯಗಳು ಮಾತ್ರ ಕೆಲವರಿಗೆ ಭಾರಿ ನಗುವನ್ನು ತರಿಸಿದರೆ ಮತ್ತೆ ಕೆಲವರಿಗೆ ಇದು ಇರಿಟೇಶನ್ ಕೊಡ ಮಾಡುತ್ತದೆ. ಇಂತಹ ಚಿತ್ರಗಳನ್ನು ಸೂಪ್ ಕಾಮಿಡಿ ಅಂತ ಕರೆಯುತ್ತಾರೆ.

  ಹಾಲಿವುಡ್ ನಲ್ಲಿ ಸೂಪ್ ಕಾಮಿಡಿ ಅಂತಲೇ ಪ್ರತ್ಯೇಕವಾದ ಸಿನಿಮಾಗಳನ್ನು ತಯಾರಿಸುವ ತಂಡಗಳಿವೆ. ಭಾರತದಲ್ಲಿ ಸೂಪ್ ಕಾಮಿಡಿ ಅತ್ಯಂತ ಯಶಸ್ವಿಯಾಗಿ ಕಾಣುವಂತಹದು ನಾವು ತೆಲುಗು ಚಿತ್ರಗಳಲ್ಲಿ.ಸೂಪ್ ಕಾಮಿಡಿ ಚಿತ್ರಗಳನ್ನು ನಿರ್ಮಿಸುವ ನಿರ್ದೇಶಕರು ಮತ್ತು ನಿರ್ಮಾಪಕರ ದೊಡ್ಡ ದಂಡೇ ತೆಲುಗು ಸಿನಿಮಾ ರಂಗದಲ್ಲಿ ಕಾಣಬಹುದು. ಅದರಲ್ಲೂ ಇಲ್ಲಿ 'ಅಲ್ಲರಿ ನರೇಶ್' , 'ಸಂಪೂರ್ಣೇಶ್ ಬಾಬು' ಅಂತಹ ನಟರಗೋಸ್ಕರ ಅದೆಷ್ಟೋ ಸೂಪ್ ಕಾಮಿಡಿಯ ಸ್ಕ್ರಿಪ್ಟ್ ಗಳನ್ನು ನಿರ್ದೇಶಕರು ತಯಾರಿಸುತ್ತಾರೆ.

  ಈಗ ಇದೇ ಸಾಲಿಗೆ ಬಂದಿರುವ ಹೊಸ ಚಿತ್ರ ಕ್ಯಾಲಿಫ್ಲವರ್.

  'ಬರ್ನಿಂಗ್ ಸ್ಟಾರ್' ಸಂಪೂರ್ಣೇಶ್ ಬಾಬು

  'ಬರ್ನಿಂಗ್ ಸ್ಟಾರ್' ಸಂಪೂರ್ಣೇಶ್ ಬಾಬು

  ಹೌದು ಆತ ತೆಲುಗು ಚಿತ್ರರಂಗದ 'ಬರ್ನಿಂಗ್ ಸ್ಟಾರ್' ಸಂಪೂರ್ಣೇಶ್ ಬಾಬು ಅಲಿಯಾಸ್ ಸಂಪು. ತೆಲಂಗಾಣ ರಾಜ್ಯದ ಸಿದ್ದಿಪೆಟ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಜನಿಸಿದವರು. ಆರಂಭದ ಹಂತದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮೂಲಕ ಗಮನ ಸೆಳೆದ ನರಸಿಂಹಚಾರಿ ತಮ್ಮ ಸಿನಿಮಾ ಹೆಸರು ಸಂಪೂರ್ಣೇಶ್ ಬಾಬು ಅಂತ ಬದಲಾಯಿಸಿಕೊಂಡರು. ಅದರಲ್ಲೂ ನಾಯಕನಟನಾಗಿ 2014ರಲ್ಲಿ ನಟಿಸಿದ 'ಹೃದಯ ಕಾಲಯ0' ಚಿತ್ರದಲ್ಲಿನ ಸೂಪ್ ಕಾಮಿಡಿ ಮೂಲಕ ತೆಲುಗು ರಾಜ್ಯಗಳಲ್ಲಿ ಮನೆಮಾತಾದರು. ಸ್ಟೀಫನ್ ಶಂಕರ್ ನಿರ್ದೇಶನದ 'ಹೃದಯ ಕಾಲಯ0' ಚಿತ್ರ ಆ ವರ್ಷದ ಅತಿದೊಡ್ಡ ಯಶಸ್ಸಿನ ಚಿತ್ರಗಳಲ್ಲಿ ಒಂದಾಗಿತ್ತು.

  ಹಲವು ಸಿನಿಮಾಗಳಲ್ಲಿ ನಾಯಕ ಪಾತ್ರ

  ಹಲವು ಸಿನಿಮಾಗಳಲ್ಲಿ ನಾಯಕ ಪಾತ್ರ

  ಆ ಚಿತ್ರದಲ್ಲಿನ ಸಂಪು ಪಾತ್ರದಲ್ಲಿ ಇವರ ಸೂಪ್ ಕಾಮಿಡಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಯ್ತು. ಚಿತ್ರದಲ್ಲಿನ ಕ್ಲೈಮ್ಯಾಕ್ಸ್ ಅಲ್ಲಿ ಬರುವ ಹಾರ್ಟ್ ಟ್ರಾನ್ಸ್ ಪ್ಲಾಂಟೇಷನ್ ಅಂತೂ ಜನರನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತದೆ. ಎಲ್ಲಾ ಹೀರೋಗಳಿಗೂ ಒಂದು ಸ್ಟಾರ್ ಪಟ್ಟ ಇರುವಂತೆ ತನಗೂ ಒಂದು ಬೇಕು ಎಂಬ ಭಾವನೆಯಿಂದಲೇ ಆತ 'ಬರ್ನಿಂಗ್ ಸ್ಟಾರ್' ಅಂತ ತನ್ನ ಸೂಪ್ ಕಾಮಿಡಿ ಅಭಿಮಾನಿಗಳಿಂದ ಕರೆಸಿಕೊಂಡ. ಆನಂತರ 'ಕರೆಂಟ್ ತೀಗ', 'ಸಿಂಗಂ 123','ಕೊಬ್ಬರಿ ಮಟ್ಟ', ಮುಂತಾದ ಚಿತ್ರಗಳಲ್ಲಿ ನಾಯಕನಟನಾಗಿ ನಟಿಸಿ ಸೈ ಎನಿಸಿಕೊಂಡ.

  ಕ್ಯಾಲಿಫ್ಲವರ್: ಶಿಲೋ ರಕ್ಷತಿ ರಕ್ಷಿತ:

  ಕ್ಯಾಲಿಫ್ಲವರ್: ಶಿಲೋ ರಕ್ಷತಿ ರಕ್ಷಿತ:

  ಸಂಪೂರ್ಣೇಶ್ ಬಾಬು ಅವರ ಮುಂದಿನ ಚಿತ್ರದ ಹೆಸರು 'ಕ್ಯಾಲಿಫ್ಲವರ್' (ಹೂಕೋಸು) ಇನ್ನು ಈ ಚಿತ್ರದ ಟ್ಯಾಗ್ ಲೈನ್ ಬಂದು ಶಿಲೋ ರಕ್ಷತಿ ರಕ್ಷಿತ:, ಟೈಟಲ್ ಹೇಳುವಂತೆಯೇ ಇದು ಒಂದು ಸೂಪ್ ಕಾಮಿಡಿ ಚಿತ್ರ. ಇನ್ನು ಈ ಚಿತ್ರದಲ್ಲಿ 'ಬರ್ನಿಂಗ್ ಸ್ಟಾರ್' ಸಂಪು ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೆ ಶುಕ್ರವಾರ ನವೆಂಬರ್ 26ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದ ವಿಶೇಷಗಳ ಬಗ್ಗೆ ಸಂಪೂರ್ಣೇಶ್ ಬಾಬು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿರುವುದು ಹೀಗಿದೆ.

  ಆಂಡ್ರ್ಯೂಫ್ಲವರ್ ಮೊಮ್ಮಗ ಕ್ಯಾಲಿಫ್ಲವರ್

  ಆಂಡ್ರ್ಯೂಫ್ಲವರ್ ಮೊಮ್ಮಗ ಕ್ಯಾಲಿಫ್ಲವರ್

  "ಕ್ಯಾಲಿ ಫ್ಲವರ್ ಸಿನಿಮಾವನ್ನು ಎಲ್ಲರೂ ಎಂಜಾಯ್ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ" ಅಂತ ಹೇಳುವ ಸಂಪು "ನಾನು ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದು ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಅಧಿಕಾರಿ ಆಂಡ್ರ್ಯೂಫ್ಲವರ್ ಮತ್ತು ಇಂದಿನ ಕಾಲಘಟ್ಟದ ಅವನ ಮೊಮ್ಮಗ ಕ್ಯಾಲಿಫ್ಲವರ್ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಹೆಣ್ಣುಮಕ್ಕಳಿಗೆ ಅಷ್ಟೇ ಅಲ್ಲ ಗಂಡು ಮಕ್ಕಳಿಗೂ ಕೂಡ ಅವರ ಶೀಲ ಅಷ್ಟೇ ಮುಖ್ಯ. ಪುರುಷನೊಬ್ಬನ (ಕ್ಯಾಲಿಫ್ಲವರ್) ಶೀಲದ ಸುತ್ತಲು ಕತೆ ಹೆಣೆಯಲಾಗಿದ್ದು ಅದಕ್ಕಾಗಿಯೇ ಚಿತ್ರದ ಟ್ಯಾಗ್ ಲೈನ್ ಬಂದು'ಶಿಲೋ ರಕ್ಷತಿ ರಕ್ಷಿತ:' ಎಂದು ಇಡಲಾಗಿದೆ. ಗುಡೂರು ಶ್ರೀಧರ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರವನ್ನು ಮಧುಸೂದನ ಕ್ರಿಯೇಷನ್ಸ್ ಮತ್ತು ರಾಧಾಕೃಷ್ಣ ಟಾಕೀಸ್ ಬ್ಯಾನರ್‌ನಲ್ಲಿ ಆಶಾಜ್ಯೋತಿ ಗೋಗಿನೆ ನಿರ್ಮಿಸುತ್ತಿದ್ದಾರೆ. ಆರ್. ಕೆ. ಮಾಲಿನೇನಿ ನಿರ್ದೇಶನದ ಈ ಚಿತ್ರ ನವೆಂಬರ್ 26 ರಂದು ಬಿಡುಗಡೆಯಾಗಲಿದೆ" ಅಂತ ವಿವರಿಸಿದ್ದಾರೆ.

  ಕ್ಯಾಲಿಫ್ಲವರ್ ಎಂಬ ಹೆಸರು ಏಕೆ?

  ಕ್ಯಾಲಿಫ್ಲವರ್ ಎಂಬ ಹೆಸರು ಏಕೆ?

  ಇನ್ನು ಮಾಧ್ಯಮದವರು ಚಿತ್ರದ ಶೀರ್ಷಿಕೆಯ ಬಗ್ಗೆ ಕೇಳಿದಾಗ ಸಂಪು ಅವರು ಹೇಳಿದ್ದು "ಇದರಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದೇನೆ. ವಯಸ್ಸಾದ ಆಂಡ್ರ್ಯೂಫ್ಲವರ್, ಎರಡನೇ ಪಾತ್ರಕ್ಕೆ ಕ್ಯಾಲಿಫ್ಲವರ್ ಎಂದು ಹೆಸರಿಸಲಾಗಿದೆ. ಎಲ್ಲರೂ ಅದೇಕೆ ಆ ಹೆಸರಿಟ್ಟಿದ್ದಾರೆ ಅಂತ ಕೇಳುತ್ತಾರೆ, ಪಾತ್ರದ ಹೆಸರಷ್ಟೇ.. ಒಂದು ಹಂತದಲ್ಲಿ ಅದೇ ರಕ್ಷಣಾ ಕವಚವಾಗುತ್ತದೆ" ಎನ್ನುತ್ತಾರೆ.

  ಹೊಸ ಅವತಾರದಲ್ಲಿ ಸಂಪೂರ್ಣೇಶ್ ಬಾಬು

  ಹೊಸ ಅವತಾರದಲ್ಲಿ ಸಂಪೂರ್ಣೇಶ್ ಬಾಬು

  "ಈ ಚಿತ್ರದಲ್ಲಿ ನಾನು ಹೊಸದಾಗಿ ಕಾಣುತ್ತೇನೆ. 'ಕೊಬ್ಬರಿ ಮಟ್ಟ' ದಲ್ಲಿ ಹೇಳಿರುವಷ್ಟು ಭಾರೀ ಉದ್ದದ ಡೈಲಾಗ್‌ಗಳಿಲ್ಲ. ಕೋರ್ಟ್ ಸೀನ್ ನಲ್ಲಿ ಮಾತ್ರ ಇಂತಹ ಡೈಲಾಗ್ ಗಳಿರುತ್ತವೆ. 35 ವರ್ಷ ಆಗುವವರೆಗೆ ಮದುವೆಯಾಗದಿರುವುದು ವಂಶಪಾರಂಪರ್ಯವಾಗಿ ಬರುತ್ತದೆ. ಅದಕ್ಕೇ ನಾನು ಶೀಲವನ್ನು ಪರಿಶುದ್ಧವಾಗಿ ಇಟ್ಟುಕೊಳ್ಳುವ ಪ್ರಯತ್ನವನ್ನು ಮಾಡುತ್ತೇನೆ. ಯಾವ ಹುಡುಗಿಯೂ ಹತ್ತಿರ ಬಂದು ಮಾತನಾಡಬಾರದು, ಹುಡುಗಿಯ ನೆರಳು ಕೂಡ ಸೋಕಬಾರದು ಅಂತಹ ಪತ್ರ ಕ್ಯಾಲಿಫ್ಲವರ್ ದು.ಈ ಸಿನಿಮಾದಲ್ಲಿ ಗೆಟಪ್ ಗಳು ಚೆನ್ನಾಗಿ ಮೂಡಿಬಂದಿವೆ.. ಹೀರೋ ಅತ್ಯಾಚಾರಕ್ಕೆ ಗುರಿಯಾಗುವ, ಆನಂತರ ಅದರ ನಂತರ ಬರುವ ಹಾಡುಗಳು ಎಲ್ಲವೂ ಚೆನ್ನಾಗಿವೆ. ಎಲ್ಲರೂ ಆನಂದಿಸುತ್ತಾರೆ. ನಿರ್ದೇಶಕ ಆರ್‌ಕೆ ಈ ಹಿಂದೆ ಧಾರಾವಾಹಿಗಳನ್ನು ಮಾಡಿದ್ದಾರೆ. ಈ ಕಥೆಗೆ ಸಂಪೂರ್ಣೇಶ್ ಬಾಬು ಚೆನ್ನಾಗಿರುತ್ತಾನೆ ಎಂದುಕೊಂಡರು. ಹಾಗಾಗಿ ನನ್ನ ಬಳಿ ಬಂದು ಕಥೆ ಹೇಳಿದರು. ನನಗೂ ಕೂಡ ಕಥೆ ಇಷ್ಟವಾಯಿತು ಓಕೆ ಅಂದೆ.ನಾಯಕಿ ವಸಂತಿ ಇದುವರೆಗೂ ಕನ್ನಡದಲ್ಲಿ ಧಾರಾವಾಹಿಗಳನ್ನು ಮಾಡಿದ್ದಾರೆ. ಇದು ಅವರ ಮೊದಲ ತೆಲುಗು ಚಿತ್ರ. ಆದರೂ ಚೆನ್ನಾಗಿ ಅಭಿನಯಿಸಿದ್ದಾರೆ" ಅಂತ ಹೇಳಿ ನಿರ್ದೇಶಕ ಮತ್ತು ನಾಯಕಿಯ ಬಗ್ಗೆ ಕೂಡ ಇಂಟ್ರೊಡಕ್ಷನ್ ಮಾಡಿಕೊಟ್ಟಿದ್ದಾರೆ.

   ಪ್ರಸ್ತುತ ಕೈಯಲ್ಲಿ ನಾಲ್ಕು ಚಿತ್ರಗಳಿವೆ

  ಪ್ರಸ್ತುತ ಕೈಯಲ್ಲಿ ನಾಲ್ಕು ಚಿತ್ರಗಳಿವೆ

  "ಪ್ರಸ್ತುತ ಕೈಯಲ್ಲಿ ನಾಲ್ಕು ಚಿತ್ರಗಳಿವೆ. ಈ ಚಿತ್ರದ ಬಿಡುಗಡೆಗಾಗಿ ನಾನು ಕಾತರದಿಂದ ಎದುರು ನೋಡುತ್ತಿದ್ದೇನೆ.ನಾನು ಎಷ್ಟೇ ಅತಿಯಾಗಿ ಮಾಡಿದರೂ ಪ್ರೇಕ್ಷಕರು ಮೆಚ್ಚುತ್ತಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಕಥೆಗಳನ್ನು ಬರೆಯಲಾಗುತ್ತದೆ. ಯಕೃತ್‌ನಲ್ಲಿರುವ ರಾಶಿಯಿಂದ ಹೃದಯವು ಹೊರಬರುತ್ತದೆ, ತೆಂಗಿನಕಾಯಿಗೆ ಹೊಡೆದಾಗ ಸುಮೋ ಕೈಗೆ ಸಿಗುತ್ತದೆ. ಅದು ಪರಾಕಾಷ್ಠೆ. ಸಿಂಗಂ 123 ಚಿತ್ರದಲ್ಲಿ ಮನೆಯ ಈಜುಕೊಳದಲ್ಲಿ ಹಾರಿದರೆ ನಾನು ಎಲ್ಲೋ ತೇಲುತ್ತೇನೆ. ಇದೆಲ್ಲವನ್ನು ಪ್ರೇಕ್ಷಕರನ್ನು ರಂಜಿಸಲು ನಾನು ಮಾಡುವ ಚಿತ್ರಗಳು. ಜನ ಕೂಡ ಇಂತಹ ಪಾತ್ರಗಳನ್ನೇ ನನ್ನಿಂದ ನಿರೀಕ್ಷಿಸುತ್ತಾರೆ. ಪ್ರಸ್ತುತ ನಾಲ್ಕು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು ಇದರಲ್ಲಿ ಒಂದು ತಮಿಳು ಚಿತ್ರವಿದು ಶೇಕಡ 70ರಷ್ಟು ಅದರ ಚಿತ್ರೀಕರಣ ಕೂಡ ಮುಗಿದಿದೆ. "ದೇವರ ದಯೆ ಮತ್ತು ಪ್ರೇಕ್ಷಕರ ಬೆಂಬಲದಿಂದ ನಾನು ಈ ಸ್ಥಾನದವರೆಗೂ ಬಂದು ನಿಂತಿದ್ದೇನೆ. ಸಂಪಾದನೆಯ ಒಂದು ಭಾಗವನ್ನು ಸಮಾಜಸೇವೆಗೆ ನಾನು ಮೀಸಲಿಟ್ಟಿದ್ದೇನೆ. ಸಮಾಜಸೇವೆ ನನಗೆ ಎಲ್ಲದಕ್ಕಿಂತ ಹೆಚ್ಚಿನ ಸಂತೃಪ್ತಿಯನ್ನು ಕೊಡುತ್ತದೆ" ಅಂತ 50 ವರ್ಷದ ಸಂಪೂರ್ಣೇಶ್ ಬಾಬು ಹೇಳಿಕೊಂಡು ಬಂದಿದ್ದಾರೆ.

  English summary
  Cauliflower movie talks about male rape victim's: burning star sampoornesh babu. sampoornesh babu who is always popularly known as sampu is playing the lead role in 'Cauliflower' a soup comedy movie, which is going to release on Nov 26.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X