ಸಿಸಿಎಲ್ ಫೈನಲ್: ಮೊದಲ ಇನ್ನಿಂಗ್ಸ್‌ನಲ್ಲಿ ಭೋಜ್‌ಪುರಿ ವಿರುದ್ಧ ತೆಲುಗು ವಾರಿಯರ್ಸ್‌ಗೆ ಬೃಹತ್ ಮುನ್ನಡೆ!

CCL 2023: Telugu Warriors lead by 32 runs against Bhojpuri Dabanggs in final match 1st innings

ಪ್ರಸ್ತುತ ನಡೆಯುತ್ತಿರುವ ಒಂಬತ್ತನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಮೆಂಟ್ ನಡೆಯುತ್ತಿದ್ದು, ಇಂದು ( ಮಾರ್ಚ್ 25 ) ವಿಶಾಖಪಟ್ಟಣದ ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಜರುಗುತ್ತಿರುವ ತೆಲುಗು ವಾರಿಯರ್ಸ್ ಹಾಗೂ ಭೋಜ್‌ಪುರಿ ದಬಾಂಗ್ಸ್ ತಂಡಗಳ ನಡುವಿನ ಫೈನಲ್ ಪಂದ್ಯದ ಮೂಲಕ ಟೂರ್ನಿಗೆ ತೆರೆ ಬೀಳಲಿದೆ.

ಹೌದು, ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಹೀರೊಸ್ ತಂಡವನ್ನು ಸೋಲಿಸಿದ್ದ ಭೋಜ್‌ಪುರಿ ದಬಾಂಗ್ಸ್ ಫೈನಲ್ ಪಂದ್ಯಕ್ಕೆ ಪ್ರವೇಶಿಸಿದ್ದು, ಮೊದಲ ಬಾರಿಗೆ ಟ್ರೋಫಿ ಗೆಲ್ಲುವತ್ತ ಚಿತ್ತ ನೆಟ್ಟಿದೆ. ಇನ್ನು ಮೂರು ಬಾರಿ ಚಾಂಪಿಯನ್ ಆಗಿರುವ ತೆಲುಗು ವಾರಿಯರ್ಸ್ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಸೋಲಿಸಿ ಫೈನಲ್ ಪಂದ್ಯಕ್ಕೆ ಬಂದಿದ್ದು, ನಾಲ್ಕನೇ ಬಾರಿಗೆ ಚಾಂಪಿಯನ್ ಆಗುವ ಗುರಿಯನ್ನು ಹೊಂದಿದೆ.

ಸಂಜೆ ಏಳು ಗಂಟೆಗೆ ಶುರುವಾಗಿರುವ ಪಂದ್ಯದಲ್ಲಿ ಟಾಸ್ ಗೆದ್ದ ತೆಲುಗು ವಾರಿಯರ್ಸ್ ತಂಡದ ನಾಯಕ ಅಖಿಲ್ ಅಕ್ಕಿನೇನಿ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಭೋಜ್‌ಪುರಿ ದಬಾಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭೋಜ್‌ಪುರಿ ದಬಾಂಗ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ರನ್ ಕಲೆಹಾಕುವಲ್ಲಿ ವಿಫಲವಾಗಿದೆ. 10 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 72 ರನ್ ಕಲೆಹಾಕಿದೆ.

ಭೋಜ್‌ಪುರಿ ದಬಾಂಗ್ಸ್ ಪರ ಮನೋಜ್ ತಿವಾರಿ 9, ಪ್ರವೇಶ್ ಲಾಲ್ ಯಾದವ್ 4, ಉದಯ್ ತಿವಾರಿ 10, ಆದಿತ್ಯಾ ಓಜಾ 26, ಅನ್ಶುಮಾನ್ ಸಿಂಗ್ 9, ವಿಕ್ರಾಂತ್ ಸಿಂಗ್ ಡಕ್ ಔಟ್, ಅಸ್ಗರ್ ಖಾನ್ ಅಜೇಯ 10 ರನ್ ಹಾಗೂ ದಿನೇಶ್ ಲಾಲ್ ಯಾದವ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು. ತೆಲುಗು ವಾರಿಯರ್ಸ್ ಪರ ನಂದಕಿಶೋರ್ ಎರಡು ವಿಕೆಟ್, ರಘು ಹಾಗೂ ಪ್ರಿನ್ಸ್ ತಲಾ ಒಂದೊಂದು ವಿಕೆಟ್ ಪಡೆದರು.

ಹೀಗೆ ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ತೆಲುಗು ವಾರಿಯರ್ಸ್ ಬ್ಯಾಟಿಂಗ್‌ನಲ್ಲಿಯೂ ಸಹ ಅಬ್ಬರಿಸಿದೆ. 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 104 ರನ್‌ಗಳನ್ನು ತೆಲುಗು ವಾರಿಯರ್ಸ್ ಕಲೆಹಾಕಿದೆ. ತಂಡದ ಪರ ನಾಯಕ ಅಖಿಲ್ ಅಕ್ಕಿನೇನಿ 32 ಎಸೆತಗಳಲ್ಲಿ 67, ಪ್ರಿನ್ಸ್ 10, ರೋಷನ್ 7, ಅಶ್ವಿನ್ ಬಾಬು 2, ರಘು ಅಜೇಯ 13 ಹಾಗೂ ಥಮನ್ ಅಜೇಯ 2 ರನ್ ಕಲೆಹಾಕಿದರು. ಭೋಜ್‌ಪುರಿ ದಬಾಂಗ್ಸ್ ಪರ ಅಸ್ಗರ್ ಖಾನ್ ಮೂರು ವಿಕೆಟ್ ಹಾಗೂ ವಿಕ್ರಾಂತ್ ಸಿಂಗ್ ಒಂದು ವಿಕೆಟ್ ಪಡೆದರು.

ಈ ಮೂಲಕ ಭೋಜ್‌ಪುರಿ ದಬಾಂಗ್ಸ್ ವಿರುದ್ಧ ತೆಲುಗು ವಾರಿಯರ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ 32 ರನ್‌ಗಳ ಬೃಹತ್ ಮುನ್ನಡೆಯನ್ನು ಕಾಯ್ದುಕೊಂಡಿದ್ದು ಎರಡನೇ ಇನ್ನಿಂಗ್ಸ್‌ನಲ್ಲಿಯೂ ಇದೇ ರೀತಿಯ ಹಿಡಿತ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮುವ ನಿರೀಕ್ಷೆ ಮೂಡಿಸಿದೆ.

More from Filmibeat

English summary
CCL 2023: Telugu Warriors lead by 32 runs against Bhojpuri Dabanggs in final match 1st innings
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X