"ಈ ವರ್ಷವೇ ಪವನ್ ತಮ್ಮ 3ನೇ ಪತ್ನಿಗೂ ಡಿವೋರ್ಸ್ ಕೊಡ್ತಾರೆ": ಖ್ಯಾತ ಜ್ಯೋತಿಷಿ ಭವಿಷ್ಯ
ಟಾಲಿವುಡ್ ನಟ, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಸದ್ಯ ಮುಂದಿನ ಆಂಧ್ರ ಚುನಾವಣೆ ಕಡೆ ಗಮನ ಹರಿಸಿರುವ ಜನಸೇನಾನಿ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಮಾಡಿದ್ದಾರೆ. ಪಕ್ಷ ಸಂಘಟನೆಯತ್ತ ಮುಖ ಮಾಡಿದ್ದಾರೆ. ಇನ್ನು ಪವನ್ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುತ್ತದೆ.
ಎದುರಾಳಿ ಪಕ್ಷಗಳು ಪವನ್ ಕಲ್ಯಾಣ್ 3 ಮದುವೆ ಆಗಿದ್ದಾರೆ ಎನ್ನುವ ವಿಚಾರವನ್ನೇ ದಾಳವಾಗಿಸಿಕೊಂಡು ವಾಗ್ದಾಳಿ ನಡೆಸುತ್ತಾ ಬರುತ್ತಿದ್ದಾರೆ. ಅದಕ್ಕೆಲ್ಲಾ ಪವರ್ ಸ್ಟಾರ್ ತಿರುಗೇಟು ನೀಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈಗಾಗಲೇ ಇಬ್ಬರಿಗೆ ಡಿವೋರ್ಸ್ ಕೊಟ್ಟು ರಷ್ಯಾ ಮೂಲದ ಅನ್ನಾ ಲೆಜ್ನೆವಾ ಎಂಬುವವರ ಕೈ ಹಿಡಿದಿದ್ದಾರೆ. ಈ ವರ್ಷವೇ ಆಕೆಗೂ ಪವನ್ ಡಿವೋರ್ಸ್ ನೀಡುತ್ತಾರೆ ಎಂದು ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಸೆಲೆಬ್ರಿಟಿಗಳ ವೃತ್ತಿ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿ ವೇಣುಸ್ವಾಮಿ ಜನಪ್ರಿಯತೆ ಗಳಿಸಿದ್ದಾರೆ. ಕೆಲವೊಮ್ಮೆ ವಿವಾದಾತ್ಮಕ ಹೇಳಿಕೆಗಳಿಂದಲೂ ಸುದ್ದಿಯಾಗಿದ್ದಾರೆ. ನಾಗಚೈತನ್ಯಾ, ಸಮಂತಾ, ಪವನ್ ಕಲ್ಯಾಣ್, ರಶ್ಮಿಕಾ ಮಂದಣ್ಣ, ಪ್ರಭಾಸ್ ಸೇರಿದಂತೆ ಹಲವರ ಬಗ್ಗೆ ವೇಣುಸ್ವಾಮಿ ಮಾತನಾಡಿ ಚರ್ಚಗೆ ಗ್ರಾಸವಾಗಿದ್ದರು. ಆದರೆ ಆತ ಹೇಳಿದ್ದರಲ್ಲಿ ಒಂದಷ್ಟು ವಿಚಾರಗಳು ನಿಜವಾಗಿವೆ.
ರಶ್ಮಿಕಾ ಮಂದಣ್ಣ, ನಿಧಿ ಅಗರ್‌ವಾಲ್, ಡಿಂಪುಲ್ ಹಯಾತಿ ರೀತಿಯ ನಟಿಯರು ವೇಣುಸ್ವಾಮಿಯನ್ನು ನಂಬುತ್ತಾರೆ. ಆತನ ಸೂಚನೆಯಂತೆ ಪೂಜೆಗಳನ್ನು ನೆರವೇರಿಸಿದ್ದಾರೆ. ಇನ್ನು ನಾಗಚೈತನ್ಯಾ ಹಾಗೂ ಸಮಂತಾ ಡಿವೋರ್ಸ್ ಪಡೆಯುತ್ತಾರೆ ಎಂದು ವೇಣು ಸ್ವಾಮಿ ಹಿಂದೆಯೇ ಹೇಳಿದ್ದರು. ಅದು ನಿಜವಾದ ಬಳಿಕ ಕೆಲವರು ಆತನ ಮಾತನ್ನು ನಂಬಲು ಆರಂಭಿಸಿದರು. ಇದೀಗ 2024ರಲ್ಲಿ ಟಾಲಿವುಡ್ ಸೆಲೆಬ್ರೆಟಿಗಳ ಭವಿಷ್ಯ ಏನೆಲ್ಲಾ ಆಗುತ್ತದೆ ಎಂದು ವೇಣುಸ್ವಾಮಿ ವಿವರಿಸಿದ್ದಾರೆ.
ಕೆಲ ದಿನಗಳ ಹಿಂದೆ 'ಸಲಾರ್' ಸಿನಿಮಾ ಕೂಡ ಸೋಲುತ್ತದೆ ಎಂದು ವೇಣುಸ್ವಾಮಿ ಹೇಳಿದ್ದರು. ಇದು ಪ್ರಭಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ಸಿನಿಮಾ ಸಕ್ಸಸ್ ಕಂಡಿದೆ. ಇದೀಗ ಪವನ್ ಕಲ್ಯಾಣ್ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿ ವೇಣುಸ್ವಾಮಿ ಮತ್ತೆ ಸುದ್ದಿಯಲ್ಲಿದ್ದಾರೆ. ಪವನ್ ಕಲ್ಯಾಣ್ ಮತ್ತೆ ಡಿವೋರ್ಸ್ ಪಡೆಯುತ್ತಾರೆ ಎಂದು ಹೇಳಿ ಶಾಕ್ ಕೊಟ್ಟಿದ್ದಾರೆ. ಚಿತ್ರರಂಗದಲ್ಲಿ ಪವರ್ ಸ್ಟಾರ್‌ಗೆ ಒಳ್ಳೆ ಭವಿಷ್ಯ ಇದೆ. ಆದರೆ ವೈಯಕ್ತಿಕ ವಿಚಾರಗಳಲ್ಲಿ ವಿವಾದಗಳು ಎದುರಾಗುತ್ತದೆ. ಅದನ್ನು ಪವನ್ ಕಲ್ಯಾಣ್ ಎದುರಿಸಲೇಬೇಕು ಎಂದಿದ್ದಾರೆ.

ಪವನ್ ಕಲ್ಯಾಣ್‌ಗೆ ತಿಳಿ ಹೇಳುವವರು ಯಾರು ಇಲ್ಲ. ಹಾಗಾಗಿ ರಾಜಕೀಯರಂಗಕ್ಕಿಳಿದು ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆತ ಬರೀ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮಾತುಗಳನ್ನು ಮಾತ್ರ ಕೇಳುತ್ತಾರೆ. ಆದರೆ ಪವನ್ ವೈಯಕ್ತಿಕ ಜೀವನದ ಬಗ್ಗೆ ತ್ರಿವಿಕ್ರಮ್ ಶ್ರೀನಿವಾಸ್ ತಿಳಿಹೇಳುವ ಗೋಜಿಗೆ ಹೋಗುವುದಿಲ್ಲ. ಪವನ್ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು, ಏನು ಮಾಡಿದರೆ ಮುಖ್ಯಮಂತ್ರಿ ಆಗ್ತೀನಿ ಎನ್ನುವ ಬಗ್ಗೆ ಚಿಂತಿಸಬೇಕು. ಅವರನ್ನು ಮುಖ್ಯಮಂತ್ರಿಯಾಗಿ ನೋಡಲು ನಾನು ಕಾಯುತ್ತಿದ್ದೇನೆ ಎಂದು ವೇಣುಸ್ವಾಮಿ ಹೇಳಿದ್ದಾರೆ.
ಅಂದಹಾಗೆ ಪವನ್ ಕಲ್ಯಾಣ್ 1997ರಲ್ಲಿ ನಂದಿನಿ ಎಂಬುವವರನ್ನು ಮದುವೆ ಆಗಿದ್ದರು. 2007ರಲ್ಲಿ ಆಕೆಗೆ ಡಿವೋರ್ಸ್ ನೀಡಿದ್ದರು. ಬಳಿಕ 'ಬದ್ರಿ' ಚಿತ್ರದಲ್ಲಿ ತನ್ನ ಜೊತೆ ನಟಿಸಿದ ರೇಣು ದೇಸಾಯಿ ಜೊತೆ ಪ್ರೀತಿಲಿ ಬಿದ್ದಿದ್ದರು. 2009ರಲ್ಲಿ ಆಕೆಯ ಕೈ ಹಿಡಿದಿದ್ದರು. ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ 2012ರಲ್ಲಿ ರೇಣು ದೇಸಾಯಿಗೂ ಪವನ್ ಡಿವೋರ್ಸ್ ಕೊಟ್ಟು ದೂರಾಗಿದ್ದರು.
'ತೀನ್‌ಮಾರ್' ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆ ರಷ್ಯಾ ಮೂಲದ ಅನ್ನಾ ಲೆಜ್ನೆವಾ ನಾಯಕಿಯಾಗಿ ನಟಿಸಿದ್ದರು. ಬಳಿಕ ಇಬ್ಬರೂ ಪ್ರೀತಿಸಿ ಸ್ಪೆಷಲ್ ಮ್ಯಾರೇಜ್ ಆಕ್ಟ್ ಪ್ರಕಾರ 2013ರಲ್ಲಿ ಹೈದರಾಬಾಸ್ ಸಬ್ ರಿಜಿಸ್ಟರ್ ಆಫೀಸ್‌ನಲ್ಲಿ ಮದುವೆ ಮಾಡಿಕೊಂಡಿದ್ದರು.


Click it and Unblock the Notifications











