ತೆಲುಗು ಯುವನಟ- ಯುವನಟಿ ಸಾಯುತ್ತಾರೆ: ವೇಣುಸ್ವಾಮಿ ಹೇಳಿಕೆ ದಿಢೀರ್ ವೈರಲ್ ಆಗಿದ್ಯಾಕೆ?

ಮತ್ತೊಮ್ಮೆ ಟಾಲಿವುಡ್ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಹೇಳಿಕೆ ವೈರಲ್ ಆಗಿದೆ. ಕೆಲ ವರ್ಷಗಳಿಂದ ವೇಣುಸ್ವಾಮಿ ಏನೇನೋ ಭವಿಷ್ಯ ಹೇಳುತ್ತಾ ಬರ್ತಿದ್ದಾರೆ. ಆರಂಭದಲ್ಲಿ ಯಾರು ನಂಬುತ್ತಿರಲಿಲ್ಲ. ಆದರೆ ನಾಗಚೈತನ್ಯ- ಸಮಂತಾ ಡಿವೋರ್ಸ್ ತಗೋತ್ತಾರೆ ಎಂದು ಮೊದಲೇ ಹೇಳಿದ್ದರು. ಅದು ನಡೆದ ಮೇಲೆ ಆತನ ಹೇಳಿಕೆಗಳನ್ನು ಕೆಲವರು ನಂಬಲು ಶುರು ಮಾಡಿದ್ದಾರೆ. ಈಗ ಆತನ ಮತ್ತೊಂದು ಹೇಳಿಕೆ ವಿಡಿಯೋ ವೈರಲ್ ಆಗಿದೆ.

ಇತ್ತೀಚೆಗೆ ನಂದಮೂರಿ ಕುಟುಂಬದ ನಟ ತಾರಕರತ್ನ ಕೊನೆಯುಸಿರೆಳಿದಿದ್ದಾರೆ. ಇದರ ಬೆನ್ನಲ್ಲೇ ವೇಣು ಸ್ವಾಮಿಯ ಆ ಹೇಳಿಕೆಯೊಂದು ಸಖತ್ ವೈರಲ್ ಆಗಿದೆ. ಕೆಲವೇ ದಿನಗಳಲ್ಲಿ ತೆಲುಗಿನ ಯುವ ನಟ ಹಾಗೂ ಯುವ ನಟಿ ಸಾಯುತ್ತಾರೆ ಎಂದು ವೇಣು ಸ್ವಾಮಿ ಕೆಲ ದಿನಗಳ ಹಿಂದೆ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದರು.

ಇನ್ನು ಯುವ ನಟಿ ಕೂಡ ಸಾಯುತ್ತಾರೆ ಎಂದು ವೇಣುಸ್ವಾಮಿ ಅದೇ ವಿಡಿಯೋದಲ್ಲಿ ಹೇಳಿದ್ದಾರೆ. ಅವರ ವಯಸ್ಸು 40ರಿಂದ 45ರ ಓಳಗೆ ಇರುತ್ತದೆ ಎಂದಿದ್ದಾರೆ. ಅದು ಕೂಡ ಮೇಷ ರಾಶಿಯ ನಟಿ ಎಂದು ಹೇಳಿದ್ದಾರೆ. ವೃಶ್ಚಿಕ ರಾಶಿ ಅಥವಾ ಮಿಥುನ ರಾಶಿಯ ನಟ ಎಂದು ಕೂಡ ಹೇಳಿದ್ದರು. ಅನಾರೋಗ್ಯದಿಂದಲೇ ಅವರು ಸಾಯುತ್ತಾರೆ. ಆತ್ಮಹತ್ಯೆ ಆದರೂ ಆಗಬಹುದು ಎಂದಿದ್ದರು. ಈ ವಿಡಿಯೋ ಈಗ ಸದ್ದು ಮಾಡ್ತಿದೆ.

Celebrity Astrologer Venu Swamy shocking Prediction about telugu young actor and actress goes viral

ಇದೀಗ ವೇಣುಸ್ವಾಮಿ ಹೇಳಿದಂತೆ ಆಗುತ್ತಾ? ಆತ ಹೇಳಿದ್ದಂತೆ ನಟ ತಾರಕರನ್ನ ವಿಧಿವಶರಾಗಿದ್ದಾರೆ ಎಂದು ಕೆಲವರು ನಂಬಿದ್ದಾರೆ. ಹಾಗಾದರೆ ಆ ನಟಿ ಯಾರಿರಬಹುದು ಎಂದು ಚರ್ಚಿಸಲು ಆರಂಭಿಸಿದ್ದಾರೆ. ಆದರೆ ಕೆಲವರು ಇದೆಲ್ಲಾ ಸುಳ್ಳು ಎನ್ನುತ್ತಿದ್ದಾರೆ. ಅದೆಲ್ಲಾ ಏನೇ ಇದ್ದರೂ ಈಗ ವೇಣುಸ್ವಾಮಿಗೆ ಬೇಡಿಕೆ ಹೆಚ್ಚಾಗಿದೆ. ಸೆಲೆಬ್ರೆಟಿಗಳು ಆತನಿಗೆ ಜಾತಕ ತೋರಿಸಿ ಏನಾದರೂ ಸಮಸ್ಯೆ ಇದ್ದರೆ ಅದಕ್ಕೆ ಪರಿಹಾರಗಳನ್ನು ಕೇಳುತ್ತಿದ್ದಾರೆ. ಆತ ಹೇಳದಂತೆ ಹೋಮ ಹವನ ನಡೆಸುತ್ತಿದ್ದಾರೆ.

Celebrity Astrologer Venu Swamy shocking Prediction about telugu young actor and actress goes viral

ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಕೂಡ ವೇಣುಸ್ವಾಮಿ ಹೇಳಿದಂತೆ ಹೋಮ ಹವನ ನಡೆಸಿದ್ದರು. ತಾರಾ ದೇವಿ ಆರಾಧನೆ ಮಾಡಿದ್ದರು. ಅದರಿಂದಲೇ ಆಕೆ ಚಿತ್ರರಂಗದಲ್ಲಿ ಹೆಚ್ಚು ಅವಕಾಶಗಳು ಗಿಟ್ಟಿಸಿಕೊಂಡಿದ್ದರು ಎನ್ನಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನಾನು ಹೇಳಿದಂತೆ ರಶ್ಮಿಕಾ ಕೇಳುತ್ತಿಲ್ಲ. ಅದಕ್ಕೆ ಆಕೆಗೆ ಮತ್ತೆ ಸೋಲು ಎದುರಾಗುತ್ತಿದೆ ಎಂದು ವೇಣುಸ್ವಾಮಿ ಹೇಳಿಕೊಂಡಿದ್ದರು.

More from Filmibeat

English summary
Celebrity Astrologer Venu Swamy shocking Prediction about telugu young actor and actress goes viral. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X