For Quick Alerts
  ALLOW NOTIFICATIONS  
  For Daily Alerts

  'ದಿಶಾ ಎನ್‌ಕೌಂಟರ್' ಸಿನಿಮಾಕ್ಕೆ ಸೆನ್ಸಾರ್ ನಿರಾಕರಣೆ

  |

  2019 ರಲ್ಲಿ ತೆಲಂಗಾಣದಲ್ಲಿ ನಡೆದಿದ್ದ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಅತ್ಯಾಚಾರ ಮಾಡಿದ್ದವರನ್ನು ಅದೇ ಸ್ಥಳದಲ್ಲಿ ಪೊಲೀಸರು ಎನ್‌ಕೌಂಟರ್ ಮಾಡಿದ್ದ ಘಟನೆಯನ್ನು ಆಧರಿಸಿ ರಾಮ್ ಗೋಪಾಲ್ ವರ್ಮಾ ಸಿನಿಮಾ ಮಾಡಿದ್ದು, ಆ ಸಿನಿಮಾಕ್ಕೆ ಸೆನ್ಸಾರ್ ಮಂಡಳಿಯು ಪ್ರಮಾಣಪತ್ರ ನೀಡಲು ನಿರಾಕರಿಸಿದೆ.

  ನಿಜ ಘಟನೆಗಳನ್ನು ಆಧರಿಸಿ 'ದಿಶಾ ಎನ್‌ಕೌಂಟರ್' ಹೆಸರಿನ ಸಿನಿಮಾವನ್ನು ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ್ದಾರೆ. ಸಿನಿಮಾವನ್ನು ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಮಾಡುವುದಾಗಿ ಈ ಹಿಂದೆಯೇ ಹೇಳಿದ್ದ ರಾಮ್ ಗೋಪಾಲ್ ವರ್ಮಾ, ಸಿನಿಮಾವನ್ನು ಸೆನ್ಸಾರ್ ಗಾಗಿ ಕಳಿಸಿದ್ದರು. ಆದರೆ ಸೆನ್ಸಾರ್ ಮಂಡಳಿ ಸದಸ್ಯರು ಸಿನಿಮಾಕ್ಕೆ ಒಪ್ಪಿಗೆ ನೀಡಲಾಗದು ಎಂದಿದ್ದಾರೆ.

  ಸಿನಿಮಾದ ಹಲವು ದೃಶ್ಯಗಳು ನಿಜ ಘಟನೆಯನ್ನೇ ಹೋಲುವಂತಿದೆ. ಸಿನಿಮಾದಿಂದ ಸಂತ್ರಸ್ತೆಯ ಗುರುತು ಪತ್ತೆ ಸಹ ಆಗುವ ಸಾಧ್ಯತೆ ಇದೆ ಹಾಗಾಗಿ ಸೆನ್ಸಾರ್ ಪ್ರಮಾಣಪತ್ರ ನೀಡಲಾಗುವುದಿಲ್ಲ ಎಂದಿದೆ ಸೆನ್ಸಾರ್ ಮಂಡಳಿ.

  ಸೆನ್ಸಾರ್ ಮಂಡಳಿಯ ಉತ್ತರ ಕೇಳಿ ಶಾಕ್ ಆಗಿರುವುದಾಗಿ ಹೇಳಿರುವ ರಾಮ್ ಗೋಪಾಲ್ ವರ್ಮಾ, ಪುನರ್ಪರಿಶೀಲನಾ ಸಮಿತಿಗೆ ದೂರು ನೀಡಿದ್ದು, ಪುನರ್‌ಪರಿಶೀಲನಾ ಸಮಿತಿಯು ಸಿನಿಮಾವನ್ನು ನೋಡಬೇಕಾಗಿ ಮನವಿ ಮಾಡಿದ್ದಾರೆ. ಪರಿಶೀಲನಾ ಸಮಿತಿಯು ಸಿನಿಮಾವನ್ನು ನೋಡುವುದಾಗಿ ಒಪ್ಪಿಕೊಂಡಿದೆ.

  ನನ್ನ ಸಿನಿಮಾ ಉಳಿಸಿಕೊಡಿ ಎಂದು ಬೇಡಿಕೊಂಡ ಅನಿಶ್ | Anish Tejeshwar | Ramarjuna | Filmibeat Kannada

  'ದಿಶಾ ಎನ್‌ಕೌಂಟರ್' ಸಿನಿಮಾದ ವಿರುದ್ಧವಾಗಿ ಸಂತ್ರಸ್ತೆಯ ಪೋಷಕರು ಸಹ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ಆದರೆ ಆ ಅರ್ಜಿಯನ್ನು ವಿಚಾರಣೆ ಬಳಿಕ ರದ್ದು ಮಾಡಲಾಯಿತು.

  English summary
  Censor members refuse to give certificate to Disha Encounter movie which directed by Ram Gopal Varma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X