ನಿಹಾರಿಕಾ- ಚೈತನ್ಯಾ ಡಿವೋರ್ಸ್? ತಂದೆ ಮಗಳು ಕೂಡ ದೂರಾ ದೂರಾ?
ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ಮತ್ತೊಂದು ಮದುವೆಗೆ ವೇದಿಕೆ ಸಿದ್ಧವಾಗ್ತಿದೆ. ನಾಗಬಾಬು ಪುತ್ರ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಪ್ರೀತಿಸಿ ಮದುವೆ ಆಗಲು ನಿರ್ಧರಿಸಿದ್ದಾರೆ. ಪೋಷಕರು ಕೂಡ ಇಬ್ಬರ ಮದುವೆಗೆ ಒಪ್ಪಿಗೆ ನೀಡಿದ್ದಾರೆ. ಈಗಾಗಲೇ ವರುಣ್ -ಲಾವಣ್ಯ ಉಂಗುರ ಬದಲಿಸಿಕೊಂಡು ಮದುವೆ ನಿಶ್ಚಯಿಸಿಕೊಂಡಿದ್ದಾರೆ. ಬಹಳ ಅದ್ಧೂರಿಯಾಗಿ ಇಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದೆ.
ನಾಗಬಾಬು ಪುತ್ರಿ ನಿಹಾರಿಕಾ ಹಾಗೂ ಚೈತನ್ಯಾ ಜೊನ್ನಲಗಡ್ಡ ಡಿವೋರ್ಸ್ ಗಾಸಿಪ್ ಬಗ್ಗೆ ಮಾತ್ರ ಮೆಗಾ ಫ್ಯಾಮಿಲಿ ಸೈಲೆಂಟ್ ಆಗಿ ಇದೆ. ಕಳೆದ ಕೆಲ ದಿನಗಳಿಂದ ಇವರಿಬ್ಬರ ಡಿವೋರ್ಸ್ ಬಗ್ಗೆ ಟಾಲಿವುಡ್‌ನಲ್ಲಿ ಗುಲ್ಲಾಗಿದೆ. ಅದಕ್ಕೆ ಸಾಕ್ಷಿ ಇದೆ ನೋಡಿ ಎಂದು ಕೆಲವರು ಹೇಳುತ್ತಿದ್ದಾರೆ. ಎಲ್ಲಾ ಸೆಲೆಬ್ರೆಟಿಗಳಂತೆ ನಿಹಾರಿಕಾ- ಚೈತನ್ಯಾ ಇನ್‌ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಇಬ್ಬರು ತಮ್ಮ ಮದುವೆ ಫೋಟೊಗಳನ್ನು ಸಹ ಡಿಲೀಟ್ ಮಾಡಿದ್ದಾರೆ.

3 ವರ್ಷಗಳ ಹಿಂದೆ ರಾಜಸ್ಥಾನದ ಉದಯ್‌ಪುರ್‌ದಲ್ಲಿರುವ ಒಬೆರಾಯ್ ಉದಯ್ ವಿಲಾಸದಲ್ಲಿ ನಿಹಾರಿಕಾ- ಚೈತನ್ಯಾ ಮದುವೆ ನಡೆದಿತ್ತು. ಚಿತ್ರರಂಗದ ತಾರೆಯರು, ರಾಜಕೀಯ ಮುಖಂಡರು ಈ ಕಲ್ಯಾಣೋತ್ಸವಕ್ಕೆ ಸಾಕ್ಷಿ ಆಗಿತ್ತು. ಇದೀಗ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ, ಇಬ್ಬರೂ ದೂರಾಗುತ್ತಾರೆ ಎನ್ನುವ ಚರ್ಚೆ ಜೋರಾಗಿ ನಡೀತಿದೆ. ವರುಣ್ ತೇಜ್ ಎಂಗೇಜ್‌ಮೆಂಟ್‌ಗೂ ಚೈತನ್ಯಾ ಬರದೇ ಇರುವುದು ಅನುಮಾನ ಮತ್ತಷ್ಟು ಹೆಚ್ಚಿಸಿದೆ ಎಂದು ಕೆಲವರು ಹೇಳುತ್ತಿದ್ದಾರೆ.
ನಾಗಬಾಬು- ನಿಹಾರಿಕಾ ದೂರ?
ಚಿರಂಜೀವಿ ಸಹೋದರ ನಾಗಬಾಬು ಮುದ್ದಿನ ಮಗಳು ನಿಹಾರಿಕಾ. ತಮ್ಮ ಮಗಳೇ ನನ್ನ ಸರ್ವಸ್ವ ಎಂದು ಸಾಕಷ್ಟು ಬಾರಿ ನಾಗಬಾಬು ಹೇಳಿಕೊಂಡಿದ್ದಾರೆ. ಆದರೆ ಕಳೆದ ಕೆಲ ದಿನಗಳಿಂದ ತಂದೆ - ಮಗಳು ಮಾತನಾಡುತ್ತಿಲ್ಲ. ಡಿವೋರ್ಸ್ ವಿಚಾರಕ್ಕೆ ಸಂಬಂಧಿಸಿ ನಾಗಬಾಬು- ನಿಹಾರಿಕಾ ನಡುವೆ ಕೂಡ ವೈಮನಸ್ಸು ಮೂಡಿದೆ. ಮೆಗಾ ಫ್ಯಾಮಿಲಿ ಕೂಡ ನಿಹಾರಿಕಾಳಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನುವ ಗುಸುಗುಸು ಟಾಲಿವುಡ್‌ನಲ್ಲಿ ಕೇಳಿಬರ್ತಿದೆ.

ಗಾಳಿಸುದ್ದಿಗೆ ನಿಹಾರಿಕಾ ಗುದ್ದು
ಚೈತನ್ಯಾ ಜೊತೆಗಿನ ವೈಮನಸ್ಸಿನಿಂದ ನಿಹಾರಿಕಾ ತನ್ನ ಕೈಯಾರೆ ತನ್ನ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾಳೆ ಎಂದು ಮೆಗಾ ಫ್ಯಾಮಿಲಿ ಭಾವಿಸಿದೆ ಎನ್ನುವ ಗುಸುಗುಸು ಶುರುವಾಗಿತ್ತು. ಇದೇ ಕಾರಣಕ್ಕೆ ನಾಗಬಾಬು ಕೂಡ ಮಗಳ ಜೊತೆ ಮಾತನಾಡುತ್ತಿಲ್ಲ ಎನ್ನಲಾಗಿತ್ತು. ಆದರೆ ಅಣ್ಣನ ನಿಶ್ಚಿತಾರ್ಥ ಸಮಾರಂಭಕ್ಕೆ ನಿಕಾರಿಕಾ ಹಾಜರಾಗಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗ್ತಿದೆ. ಆ ಮೂಲಕ ಗಾಳಿಸುದ್ದಿಗೆ ಗುದ್ದು ನೀಡಿದಂತಾಗಿದೆ. ಇನ್‌ಸ್ಟಾಗ್ರಾಂನಲ್ಲಿ "ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ. ನಮ್ಮ ಫ್ಯಾಮಿಲಿ ಸ್ವಾಗತ ಲಾವಣ್ಯ" ಎಂದು ನಿಹಾರಿಕಾ ಬರೆದುಕೊಂಡಿದ್ದಾರೆ.
ಒಂಟಿಯಾಗಿ ಬಂದ ನಿಹಾರಿಕಾ
ಅಣ್ಣನ ನಿಶ್ಚಿತಾರ್ಥಕ್ಕೆ ನಿಹಾರಿಕಾ ಬಂದಿದ್ದು ಸರಿ. ಆದರೆ ಒಬೊಂಟಿಯಾಗಿ ಬಂದಿದ್ದು ಯಾಕೆ? ತಮ್ಮ ಮನೆಯ ಕಾರ್ಯಕ್ರಮಕ್ಕೆ ಗಂಡನನ್ನು ಬಿಟ್ಟು ಒಬ್ಬಳೇ ಬಂದಿದ್ದು ಡಿವೋರ್ಸ್ ಸುದ್ದಿಗೆ ಮತ್ತಷ್ಟು ಇಂಬು ನೀಡುವಂತೆ ಮಾಡಿದೆ ಎನ್ನುವ ಚರ್ಚೆ ನಡೀತಿದೆ. ಇತ್ತೀಚಿನ ದಿನಗಳಲ್ಲಿ ಮೆಗಾ ಫ್ಯಾಮಿಲಿಯ ಯಾವುದೇ ಕಾರ್ಯಕ್ರಮದಲ್ಲಿ ನಿಹಾರಿಕಾ ಪತಿ ಚೈತನ್ಯಾ ಜೊನ್ನಲಗಡ್ಡ ಭಾಗಿ ಆಗಲಿಲ್ಲ. ಆದರೆ ಸ್ವತಃ ಭಾವನ ನಿಶ್ಚಿತಾರ್ಥ ಸಮಾರಂಭಕ್ಕೂ ಬರದೇ ಇರುವುದು ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ನಾಗಬಾಬು ಸೈಲೆಂಟ್
ಮೆಗಾ ಫ್ಯಾಮಿಲಿಯಲ್ಲಿ ನಾಗಬಾಬು ಫೈರ್ ಬ್ರ್ಯಾಂಡ್ ಎಂದೇ ಅನ್ನಿಸಿಕೊಂಡಿದ್ದಾರೆ. ತಮ್ಮ ಫ್ಯಾಮಿಲಿ ಬಗ್ಗೆ ಯಾರು ಏನೇ ಮಾತನಾಡಿದರೂ ಮೆಗಾ ಬ್ರದರ್ ದಿಢೀರನೇ ತಿರುಗೇಟು ನೀಡುತ್ತಾರೆ. ಆದರೆ ಮಗಳ ಡಿವೋರ್ಸ್ ಬಗ್ಗೆ ಇಷ್ಟೆಲ್ಲಾ ಚರ್ಚೆ ನಡೆಯುತ್ತಿದ್ದರು ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಾಜಿ ಸಂಧಾನದ ಮೂಲಕ ಮಗಳ ಸಂಸಾರ ಸರಿ ಮಾಡಬೇಕು ಎಂದುಕೊಂಡಿರುವ ಕಾರಣಕ್ಕೆ ನಾಗಬಾಬು ಈ ಬಗ್ಗೆ ಮೌನವಾಗಿದ್ದಾರೆ ಎನ್ನುವ ಚರ್ಚೆ ಕೂಡ ಟಾಲಿವುಡ್‌ನಲ್ಲಿ ನಡೀತಿದೆ.


Click it and Unblock the Notifications










