For Quick Alerts
  ALLOW NOTIFICATIONS  
  For Daily Alerts

  'ವಕೀಲ್ ಸಾಬ್‌'ಗೆ ಸಮಸ್ಯೆ: ಸಿಎಂ ಜಗನ್ ವಿರುದ್ಧ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಗರಂ

  |

  'ವಕೀಲ್ ಸಾಬ್' ಸಿನಿಮಾ ತೆಲುಗು ಚಿತ್ರರಂಗ ಹಾಗೂ ರಾಜಕೀಯ ರಂಗ ಎರಡರಲ್ಲೂ ಬಿಸಿ-ಬಿಸಿ ಚರ್ಚ ಎಬ್ಬಿಸಿದೆ. ಈ ಸಿನಿಮಾ ಚರ್ಚೆ ಎಬ್ಬಿಸಿರುವುದು ಸಿನಿಮಾದ ವಿಷಯ ವಸ್ತು, ಕತೆಯ ಕಾರಣಕ್ಕಲ್ಲ ಬದಲಿಗೆ ಸಿನಿಮಾದ ಸುತ್ತ ಎದ್ದಿರುವ ರಾಜಕೀಯದ ಕಾರಣಕ್ಕೆ.

  'ವಕೀಲ್ ಸಾಬ್' ಸಿನಿಮಾದ ವಿಶೇಷ ಶೋಗಳನ್ನು ಜಗನ್ ಸರ್ಕಾರ ರದ್ದು ಮಾಡಿದ್ದು ವಿವಾದ ಏಳಲು ಮೂಲ ಕಾರಣ. ವಿಶೇಷ ಶೋ ರದ್ದಾಗಿದ್ದಕ್ಕೆ ಸಿಟ್ಟಾಗ ತೆಲುಗು ಚಿತ್ರರಂಗದ ಕೆಲವರು ಜಗನ್‌ ವಿರುದ್ಧ ಆಕ್ರೋಶದ ಪ್ರತಿಕ್ರಿಯೆ ನೀಡಿದರು. ಆ ಮೂಲಕ ಘಟನೆಯು ವಿವಾದದ ಸ್ವರೂಪ ಪಡೆಯುವಂತೆ ಮಾಡಿದರು.

  ಏಪ್ರಿಲ್ 9 ರಂದು 'ವಕೀಲ್ ಸಾಬ್' ಸಿನಿಮಾ ಬಿಡುಗಡೆ ಆಗಿತ್ತು, ಏಪ್ರಿಲ್ 8 ರ ಮಧ್ಯರಾತ್ರಿ ಹಾಗೂ ಏಪ್ರಿಲ್ 9 ರ ಮುಂಜಾವು ಸಿನಿಮಾದ ವಿಶೇಷ ಶೋಗಳನ್ನು ನಿಗದಿಪಡಿಸಲಾಗಿತ್ತು ಆದರೆ ಸಿನಿಮಾ ಬಿಡುಗಡೆಯ ಹಿಂದಿನ ದಿನ ಸರ್ಕಾರವು ಎಲ್ಲಾ ವಿಶೇಷ ಶೋಗಳನ್ನು ರದ್ದು ಮಾಡಿ ಆದೇಶ ಹೊರಡಿಸಿತು. ಇದರಿಂದ ಪವನ್ ಕಲ್ಯಾಣ್ ಅಭಿಮಾನಿಗಳು ಕೆರಳಿ ಕೆಲವು ಚಿತ್ರಮಂದಿರಗಳಲ್ಲಿ ಗಲಾಟೆ ಮಾಡಿ, ಕಲ್ಲು ತೂರಿ, ಪೀಠೋಪಕರಣ ಧ್ವಂಸಗೊಳಿಸಿದ್ದು.

  ಜಗನ್-ಪವನ್ ಅಭಿಮಾನಿಗಳ ಮಧ್ಯೆ ಫೈಟ್

  ಜಗನ್-ಪವನ್ ಅಭಿಮಾನಿಗಳ ಮಧ್ಯೆ ಫೈಟ್

  ನಿರ್ಮಾಪಕ ಬಂಡ್ಲಾ ಗಣೇಶ್ ಹಾಗೂ ಇತರರು ಸರ್ಕಾರದ ಆದೇಶವನ್ನು ತೀವ್ರವಾಗಿ ಖಂಡಿಸಿ 'ಪವನ್ ಕಲ್ಯಾಣ್‌ ಮೇಲಿನ ರಾಜಕೀಯ ದ್ವೇಷದಿಂದ ಸಿಎಂ ಜಗನ್ ಮೋಹನ್ ರೆಡ್ಡಿ ಹೀಗೆ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಹ ಜಗನ್ ಹಾಗೂ ಪವನ್ ಕಲ್ಯಾಣ್ ಅಭಿಮಾನಿಗಳು ಪರಸ್ಪರ ಕಿತ್ತಾಟಕ್ಕಿಳಿದಿದ್ದಾರೆ.

  ಪವನ್ ಅನ್ನು ಆರ್ಥಿಕವಾಗಿ ಕುಗ್ಗಿಸುವ ತಂತ್ರ: ಚಂದ್ರಬಾಬು ನಾಯ್ಡು

  ಪವನ್ ಅನ್ನು ಆರ್ಥಿಕವಾಗಿ ಕುಗ್ಗಿಸುವ ತಂತ್ರ: ಚಂದ್ರಬಾಬು ನಾಯ್ಡು

  ಇದೀಗ ಆಂಧ್ರಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸಹ 'ವಕೀಲ್ ಬಾಸ್' ವಿವಾದದ ಬಗ್ಗೆ ಮಾತನಾಡಿದ್ದು ಪ್ರಕರಣಕ್ಕೆ ಪೂರ್ಣ ರಾಜಕೀಯ ಕೋನವನ್ನು ನೀಡಿದ್ದಾರೆ. 'ಪವನ್ ಕಲ್ಯಾಣ್ ಅನ್ನು ಆರ್ಥಿಕವಾಗಿ ಕುಗ್ಗಿಸಲೆಂದೇ ಜಗನ್ ಮೋಹನ್ ರೆಡ್ಡಿ 'ವಕೀಲ್ ಸಾಬ್‌' ಸಿನಿಮಾದ ವಿಶೇಷ ಶೋಗಳನ್ನು ರದ್ದು ಮಾಡಿದ್ದಾರೆ' ಎಂದಿದ್ದಾರೆ.

  ಬಿಜೆಪಿ ಜೊತೆ ಸೇರಿರುವುದು ಜಗನ್‌ಗೆ ಸಹಿಸಲಾಗುತ್ತಿಲ್ಲ: ನಾಯ್ಡು

  ಬಿಜೆಪಿ ಜೊತೆ ಸೇರಿರುವುದು ಜಗನ್‌ಗೆ ಸಹಿಸಲಾಗುತ್ತಿಲ್ಲ: ನಾಯ್ಡು

  'ಪವನ್ ಕಲ್ಯಾಣ್ ಬಿಜೆಪಿ ಜೊತೆ ಸೇರಿ ಚುನಾವಣೆ ಎದುರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ, ಬಹಿರಂಗ ಸಭೆಗಳಲ್ಲಿ ಜಗನ್ ಸರ್ಕಾರವನ್ನು ವಿಮರ್ಶೆಗೊಳಪಡಿಸುತ್ತಿದ್ದಾರೆ, ಟೀಕಿಸುತ್ತಿದ್ದಾರೆ. ಇದನ್ನು ಸಹಿಸದ ಜಗನ್ ಪವನ್‌ ಕಲ್ಯಾಣ್‌ ಮೇಲಿನ ವೈಯಕ್ತಿಕ ಸಿಟ್ಟಿನಿದಾಗಿ 'ವಕೀಲ್ ಸಾಬ್' ಸಿನಿಮಾಕ್ಕೆ ಸಮಸ್ಯೆ ನೀಡುತ್ತಿದ್ದಾರೆ ಎಂದಿದ್ದಾರೆ ಚಂದ್ರಬಾಬು ನಾಯ್ಡು.

  ಕೊರೊನಾ ನೈಟ್ ಕರ್ಫ್ಯೂ ಜಾರಿಯಿಂದ ಚಿತ್ರರಂಗಕ್ಕೆ ಗಾಯದ ಮೇಲೆ ಬರೆ | Filmibeat Kannada
  ಭರ್ಜರಿ ಕಲೆಕ್ಷನ್ ಮಾಡುತ್ತಿರುವ 'ವಕೀಲ್ ಸಾಬ್'

  ಭರ್ಜರಿ ಕಲೆಕ್ಷನ್ ಮಾಡುತ್ತಿರುವ 'ವಕೀಲ್ ಸಾಬ್'

  ಹಲವು ಅಡೆ-ತಡೆಗಳ ನಡುವೆಯೂ 'ವಕೀಲ್ ಸಾಬ್' ಸಿನಿಮಾವು ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಸಿನಿಮಾವು ಎರಡೇ ದಿನಕ್ಕೆ ಸುಮಾರು 48 ಕೋಟಿ ರೂ ಹಣ ಗಳಿಸಿದೆ. ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ಪ್ರಕಾಶ್ ರೈ, ಶ್ರುತಿ ಹಾಸನ್, ನಿವೇತಾ ಥೋಮಸ್, ಅಂಜಲಿ, ಅನನ್ಯಾ ನಾಗಲ್ಲ, ಪ್ರಕಾಶ್ ರೈ ನಟಿಸಿದ್ದಾರೆ. ಸಿನಿಮಾವನ್ನು ವೇಣು ಶ್ರೀರಾಮ್ ನಿರ್ದೇಶನ ಮಾಡಿದ್ದಾರೆ.

  English summary
  Andhra Pradesh former CM Chandrababu Naidu said CM Jagan intentionally causing problems to Pawan Kalyan's 'Vakeel Saab' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X