ಚಂದ್ರಮುಖಿ 2: ಭರತನಾಟ್ಯ ಮಾಡಿ ಟ್ರೋಲ್‌ಗೆ ಒಳಗಾದ ಬಾಲಿವುಡ್ ಕ್ವೀನ್ ಕಂಗನಾ ರನೌತ್!
ಬಹುನಿರೀಕ್ಷಿತ 'ಚಂದ್ರಮುಖಿ 2' ಸಿನಿಮಾದ ಸ್ವಾಗತಾಂಜಲಿ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಸಂಯೋಜಿಸಿರುವ ಹಾಡು ಕಿವಿಗೆ ಇಂಪು ನೀಡುತ್ತದೆ. ಆದರೆ, ಹಾಡಿನಲ್ಲಿ ಭರತನಾಟ್ಯ ಮಾಡಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅವರ ನೃತ್ಯ ಸಿನಿಪ್ರಿಯರಿಗೆ ಇಷ್ಟವಾಗಿಲ್ಲ.
ಎಂಎಂ ಕೀರವಾಣಿ ಸಂಯೋಜಿಸಿರುವ ಈ ಹಾಡಿನಲ್ಲಿ ನಟಿ ಭರತನಾಟ್ಯ ನೃತ್ಯ ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ಕಂಗನಾ ಅವರ ಭರತನಾಟ್ಯ ನೃತ್ಯವನ್ನು ಅನೇಕ ಬಳಕೆದಾರರು ಕಟುವಾಗಿ ಟೀಕಿಸಿದ್ದಾರೆ. ಹಳೆಯ ಚಂದ್ರಮುಖಿಯ ನೃತ್ಯದೊಂದಿಗೆ ಹೋಲಿಸಿ ಟ್ರೋಲ್ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕಂಗನಾ ಅವರ ನೃತ್ಯವನ್ನು ಸಾಂಪ್ರದಾಯಿಕ ನೃತ್ಯ ಪ್ರಕಾರವನ್ನು ಕಳಪೆಯಾಗಿ ತೋರಿಸಲಾಗಿದೆ ಎಂದು ಹೇಳಲಾಗಿದೆ.

ಒಳ್ಳೆಯ ನಟಿ. ಆದರೆ, ಉತ್ತಮ ನೃತ್ಯಗಾರ್ತಿಯಲ್ಲ!
ಬಹು ನಿರೀಕ್ಷಿತ ಚಿತ್ರ 'ಚಂದ್ರಮುಖಿ 2' ನಲ್ಲಿ ನಟ ರಾಘವ ಲಾರೆನ್ಸ್ ಜೊತೆಗೆ ಕಂಗನಾ ರನೌತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಭಾರೀ ಸದ್ದು ಮಾಡಿತ್ತು. ಟೀಸರ್ ನಂತರ, ಆಗಸ್ಟ್ 12 ರಂದು, ಚಿತ್ರದ ನಿರ್ಮಾಪಕರು ಮೊದಲ ಹಾಡು 'ಸ್ವಾಗತಾಂಜಲಿ' ಅನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡು ಅನೇಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದರೂ ಸಹ ಅನೇಕರು ಟ್ರೋಲ್ ಮಾಡುತ್ತಿದ್ದಾರೆ.
ಕಂಗನಾ ಅವರ ಭಾವಾಭಿವ್ಯಕ್ತಿಗಳ ಬಗ್ಗೆ ಮಾತನಾಡಿರುವ ಟ್ವಿಟ್ಟರ್ ಬಳಕೆದಾರರು, "ಕಂಗನಾ ರನೌತ್ ಉತ್ತಮ ನಟಿಯಾಗಿರಬಹುದು. ಆದರೆ ಖಂಡಿತವಾಗಿಯೂ ಉತ್ತಮ ನೃತ್ಯಗಾರ್ತಿಯಲ್ಲ!" ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು ಟ್ವೀಟ್ ಮಾಡಿ, "ನಾನು, ಸುಮಾರು 17 ವರ್ಷಗಳ ಶಾಸ್ತ್ರೀಯ ನೃತ್ಯ ತರಬೇತಿಯೊಂದಿಗೆ, ಚಂದ್ರಮುಖಿ 2 ನ ಕಂಗನಾ ಅವರ ಕ್ಲಿಪ್ ಅನ್ನು ನೋಡುತ್ತಿದ್ದೇನೆ" ಎಂದು ಹಳೆಯ ಚಿತ್ರದ ಫೋಟೋ ಹಾಕಿ ಟ್ರೋಲ್ ಮಾಡಿದ್ದಾರೆ.

ಕಂಗಾನಾಗೆ ಅಭಿಮಾನಿಗಳ ಬೆಂಬಲ
ಟ್ರೋಲ್‌ಗಳ ಮಧ್ಯೆಯೂ, ಕಂಗನಾ ರನೌತ್ ಅವರ ಬೃಹತ್ ಸಾಮಾಜಿಕ ಮಾಧ್ಯಮದ ಫಾಲೋವರ್ಸ್ ಟ್ರೋಲ್‌ಗಳಿಗೆ ಉತ್ತರ ನೀಡುತ್ತಾ ಬಂದಿದ್ದಾರೆ. ಹಾಡಿನಲ್ಲಿ ಕಾಣಿಸಿಕೊಂಡಿರುವ ನಟಿಯ ನೃತ್ಯ, ರೂಪ ಮತ್ತು ಭಾವಾಭಿವ್ಯಕ್ತಿಗಳನ್ನು ಹೊಗಳಿದ್ದಾರೆ.
"ಕಂಗನಾ ರನೌತ್ ರಾಜನ ಆಸ್ಥಾನದ ನರ್ತಕಿ 'ಚಂದ್ರಮುಖಿ'ಯಾಗಿ ಸ್ವಾಗತಾಂಜಲಿ ಹಾಡಿನಲ್ಲಿ ಸಾಂಪ್ರದಾಯಿಕ ಉಡುಗೆ ಮತ್ತು ಆಭರಣಗಳಲ್ಲಿ ಬೆರಗುಗೊಳಿಸಿದ್ದಾರೆ. ಅವರು ತನ್ನ ಲುಕ್‌ನಿಂದ ಎಲ್ಲರನ್ನು ದಿಗ್ಭ್ರಮೆಗೊಳಿಸಿದ್ದಾರೆ" ಎಂದಿದ್ದಾರೆ.

"ಈ ಗಣೇಶ ಚತುರ್ಥಿಯಂದು ಆಕೆ ಬರುತ್ತಾಳೆ. ಅವರ ನೃತ್ಯ ಮತ್ತು ಸೌಂದರ್ಯದಿಂದ ನನ್ನ ಕಣ್ಣುಗಳನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ. ಶಾಸ್ತ್ರೀಯ ನೃತ್ಯಪಟುವಂತೆ ನೃತ್ಯ ಕಲಿಯದ ಅವರು ಡ್ಯಾನ್ಸ್ ಮಾಡುತ್ತಿದ್ದಾರೆ. ಇಂತಹ ಪ್ರತಿಭಾವಂತೆ ಕಂಗನಾ ಅಲ್ಲದೇ ಬೇರೆ ಯಾರು?. ಅವರು ಏನು ಬೇಕಾದರೂ ಮಾಡಬಲ್ಲರು" ಎಂದು ತಮ್ಮ ನಟಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಚಂದ್ರಮುಖಿ 2
'ಚಂದ್ರಮುಖಿ 2' ತಮಿಳಿನ ಅತ್ಯಂತ ಯಶಸ್ವಿ ಹಾರರ್, ಕಾಮಿಡಿ ಚಿತ್ರ 'ಚಂದ್ರಮುಖಿ' ಯ ಸೀಕ್ವೆಲ್ ಆಗಿದೆ. ಮೂಲ ಚಿತ್ರದಲ್ಲಿ ರಜನಿಕಾಂತ್, ಪ್ರಭು ಮತ್ತು ಜ್ಯೋತಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.. ಪಿ ವಾಸು ನಿರ್ದೇಶನದ ಸೀಕ್ವೆಲ್‌ನಲ್ಲಿ ಕಂಗನಾ ರನೌತ್, ರಾಘವ ಲಾರೆನ್ಸ್ ಮತ್ತು ವಡಿವೇಲು ಪ್ರಮುಖ ಪಾತ್ರಗಳಲ್ಲಿದ್ದಾರೆ.


Click it and Unblock the Notifications