ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 'ಹೃದಯವಂತ' ಚಿತ್ರದ ನಟಿ ಅಪರೂಪದ ಸಾಧನೆ

ಚಿತ್ರರಂಗದಲ್ಲಿರುವ ತಾರೆಯರು ಬೇರೆ ಬೇರೆ ಕ್ಷೇತ್ರಗಳಲ್ಲಿ ಕೂಡ ಸಾಧನೆ ಮಾಡುತ್ತಿದ್ದಾರೆ. ತಮಿಳು ನಟ ಅಜಿತ್ ಕಾರ್‌ ರೇಸ್‌ನಲ್ಲಿ ಆಸಕ್ತಿ ಹೊಂದಿದ್ದಾರೆ. ಅರ್ಜುನ್ ಸರ್ಜಾ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಹೊಂದಿದ್ದಾರೆ. ನಟಿ ಜೆನಿಲಿಯಾ ಕೂಡ ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡಿದವರು. ಇದೀಗ ಪೋಷಕ ನಟಿ ಪ್ರಗತಿ ಏಷ್ಯನ್ ಗೇಮ್ಸ್‌ನಲ್ಲಿ ಕಮಾಲ್ ಮಾಡಿದ್ದಾರೆ.

ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 4 ಪದಕಗಳನ್ನು ಪಡೆದು ಎಲ್ಲರ ಹುಬ್ಬೇರಿಸಿದ್ದಾರೆ. ಅದರಲ್ಲಿ ಒಂದು ಚಿನ್ನದ ಪದಕ ಕೂಡ ಇರುವುದು ವಿಶೇಷ. ಟರ್ಕಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ನಟಿ ಪ್ರಗತಿ ಭಾರತವನ್ನು ಪ್ರತಿನಿಧಿಸಿ ಪದಕ ಬೇಟೆ ಆಡಿದ್ದಾರೆ. ಇದಕ್ಕು ಮುನ್ನ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕೀಡ್ರಾಕೂಟಗಳಲ್ಲಿ ಪ್ರಗತಿ ಸ್ಪರ್ಧಿಸಿ ಪದಕಗಳನ್ನು ಗೆದ್ದಿದ್ದರು.

Character actress Wins 4 Medals at Asian Games Including Gold in Powerlifting

ತೆಲುಗು ನಟಿ ಪ್ರಗತಿ ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲಿ ಕೂಡ ಪೋಷಕ ನಟಿಯಾಗಿ ಮಿಂಚಿದ್ದಾರೆ. ಕನ್ನಡದಲ್ಲಿ 'ಪ್ರೇಮಕೈದಿ', 'ಹೃದಯವಂತ' ಹಾಗೂ 'ವಿನಾಯಕ ಗೆಳೆಯರ ಬಳಗ' ಚಿತ್ರಗಳಲ್ಲಿ ಪೋಷಕ ನಟಿಯಾಗಿ ಮಿಂಚಿದ್ದಾರೆ. ಸಿನಿಮಾಗಳಲ್ಲಿ ನಾಯಕ, ನಾಯಕಿಗೆ ತಾಯಿ, ಅತ್ತೆ, ಸಹೋದರಿ ಪಾತ್ರಗಳಲ್ಲಿ ಪ್ರಗತಿ ನಟಿಸಿ ಜನಪ್ರಿಯರಾಗಿದ್ದಾರೆ. ನೂರಾರು ತೆಲುಗು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಕೆಲ ವರ್ಷಗಳಿಂದ ನಟಿ ಪ್ರಗತಿ ಫಿಟ್‌ನೆಸ್ ಕಡೆ ಮುಖ ಮಾಡಿದ್ದಾರೆ. ಪ್ರತಿದಿನ ಜಿಮ್‌ನಲ್ಲಿ ಕರಸತ್ತು ನಡೆಸುತ್ತಾರೆ. ಕಳೆದ 2 ವರ್ಷಗಳಿಂದ ವೇಯ್ಡ್ ಲಿಫ್ಟಿಂಗ್ ಕಡೆ ಮುಖ ಮಾಡಿದ್ದರು. ನಿಧಾನವಾಗಿ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಆರಂಭಿಸಿದ್ದರು. ಹಂತ ಹಂತವಾಗಿ ಗೆಲ್ಲುತ್ತಾ ಇದೀಗ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆದ್ದುಕೊಂಡಿದ್ದಾರೆ. ಆಕೆಯ ಸಾಧನೆಗೆ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

"ಏಷ್ಯನ್ ಕ್ರೀಡಾಕೂಟದಲ್ಲಿ ಒಟ್ಟಾರೆ ಬೆಳ್ಳಿ ಪದಕ, ಡೆಡ್‌ಲಿಫ್ಟ್‌ಗೆ 1 ಚಿನ್ನ, ಬೆಂಚ್ ಮತ್ತು ತಂಡಕ್ಕೆ 2 ಬೆಳ್ಳಿ" ಎಂದು ವೀಡಿಯೋ ಪೋಸ್ಟ್ ಮಾಡಿದ್ದಾರೆ. ತಮ್ಮ ಏಷ್ಯನ್ ಗೇಮ್ಸ್ ಜರ್ನಿಯ ಫೋಟೊಗಳನ್ನು ಕೊಲಾಜ್ ಮಾಡಿ ವೀಡಿಯೋ ಪೋಸ್ಟ್ ಮಾಡಿದ್ದಾರೆ.

ಆಂಧ್ರದ ಓಂಗೂಲು ಮೂಲದ ನಟಿ ಪ್ರಗತಿ ನಾಯಕಿಯಾಗಿ ಚಿತ್ರರಂಗಕ್ಕೆ ಬಂದಿದ್ದರು. ಆದರೆ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದರು. ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು. ಕೆ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದ ಪ್ರಗತಿ ಇಬ್ಬರು ಮಕ್ಕಳ ಜೊತೆ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದು ತಮ್ಮ ವರ್ಕ್‌ಔಟ್‌ಗೆ ಸಂಬಂಧಿಸಿದ ವೀಡಿಯೋ, ರೀಲ್ಸ್ ಪೋಸ್ಟ್ ಮಾಡುತ್ತಾರೆ.

ಸಾಕಷ್ಟು ಸಂದರ್ಶನಗಳಲ್ಲಿ ನಟಿ ಪ್ರಗತಿ ತಮ್ಮ ಮದುವೆ, ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ಮತ್ತೊಂದು ಮದುವೆ ಆಗುವ ಆಸೆ ಇದೆ. ಆದರೆ ಈಗ ಯಾರೇ ಆಗಲಿ ನನ್ನನ್ನು ಸಹಿಸಿಕೊಳ್ಳುವುದು ಕಷ್ಟ ಎಂದು ಹೇಳಿದ್ದರು. 1993ರಲ್ಲಿ ಬಂಧ 'ಶಬ್ಬಾಶ್ ರಾಮು' ಚಿತ್ರದಲ್ಲಿ ಮೊದಲ ಬಾರಿಗೆ ಪ್ರಗತಿ ಬಣ್ಣ ಹಚ್ಚಿದ್ದರು. ಚಿತ್ರರಂಗಕ್ಕೆ ಬರುವ ಮುನ್ನ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದರು. ಮೈಸೂರ್ ಸಿಲ್ಕ್ಸ್ ಪ್ಯಾಲೇಸ್‌ ಜಾಹೀರಾತುಗಳಲ್ಲಿ ಮಿಂಚಿದ್ದರು.

ತಮಿಳಿನ ಕೆಲ ಸಿನಿಮಾಗಳಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದರು. ಮದುವೆ ಬಳಿಕ ಚಿತ್ರರಂಗದಿಂದ ದೂರಾಗಿದ್ದರು. ಬಳಿಕ ಕಿರುತೆರೆಗೆ ಪೋಷಕ ನಟಿಯಾಗಿ ವಾಪಸ್ ಬಂದಿದ್ದರು. 'ಬಾಬಿ' ಚಿತ್ರದಲ್ಲಿ ಪೋಷಕ ನಟಿಯಾಗಿ ಮಿಂಚಿದ ಬಳಿಕ ಅದೇ ಖಾಯಂ ಆಯಿತು. 'ಗಂಗೋತ್ರಿ', 'ಚಿರುತ', 'ಅತಿಥಿ', 'ಮಿ. ಪರ್ಫೆಕ್ಟ್', 'ಬದ್ರಿನಾಥ್', 'ದೂಕುಡು' ಸೇರಿ ಹಲವು ತೆಲುಗು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಪ್ರಗತಿ ನಟಿಸಿದ್ದಾರೆ. ಇದೇ ವರ್ಷ ಬಂದ 'ನಾರಿ' ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದರು.

More from Filmibeat

Read more about: tollywood actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X