ಡ್ರೀಮ್ ಗರ್ಲ್ 2, ಟೋಬಿ, ಬಾಟಮ್ಸ್..ಈ ವಾರ ಬಿಡುಗಡೆಯಾಗಲಿರುವ ಚಲನಚಿತ್ರಗಳ ಪೂರ್ಣ ಪಟ್ಟಿ ಇಲ್ಲಿದೆ
ಈ ವಾರ ಬಹುನೀರಿಕ್ಷಿತ ಆಯುಷ್ಮಾನ್ ಖುರಾನಾ ಅವರ 'ಡ್ರೀಮ್ ಗರ್ಲ್ 2' ಬಿಡುಗಡೆಯಾಗಲಿದೆ. ಇದರ ಜೊತೆಗೆ ಕನ್ನಡದಲ್ಲಿ ರಾಜ್ ಬಿ ಶೆಟ್ಟಿ ಅವರ 'ಟೋಬಿ' ಚಲನಚಿತ್ರ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಮಲಯಾಳಂನಲ್ಲಿ ಆಕ್ಷನ್ ಎಂಟರ್‌ಟೈನರ್ ಆರ್‌ಡಿಎಕ್ಸ್ : ರಾಬರ್ಟ್ ಡೋನಿ ಕ್ಸೇವಿಯರ್ ಬಿಡುಗಡೆಯಾಗುತ್ತದೆ.
ಡ್ರೀಮ್ ಗರ್ಲ್ 2
ಥಿಯೇಟ್ರಿಕಲ್ ಬಿಡುಗಡೆ ದಿನಾಂಕ: ಆಗಸ್ಟ್ 25, 2023
'ಡ್ರೀಮ್ ಗರ್ಲ್ 2' ಹಿಂದಿ ಭಾಷೆಯ ಹಾಸ್ಯಪ್ರಧಾನ ಚಲನಚಿತ್ರವಾಗಿದ್ದು ರಾಜ್ ಶಾಂಡಿಲ್ಯ ನಿರ್ದೇಶಿಸಿದ್ದಾರೆ ಮತ್ತು ಬಾಲಾಜಿ ಮೋಷನ್ ಪಿಕ್ಚರ್ಸ್ ಅಡಿಯಲ್ಲಿ ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್ ನಿರ್ಮಿಸಿದ್ದಾರೆ. 2019 ರಲ್ಲಿ ಬಿಡುಗಡೆಯಾಗಿದ್ದ 'ಡ್ರೀಮ್ ಗರ್ಲ್' ನ ಸೀಕ್ವೆಲ್ ಇದಾಗಿದೆ.

ಸಿನಿಮಾದಲ್ಲಿ ಆಯುಷ್ಮಾನ್ ಖುರಾನಾ, ಅನನ್ಯ ಪಾಂಡೆ, ಪರೇಶ್ ರಾವಲ್, ಅನ್ನು ಕಪೂರ್, ರಾಜ್‌ಪಾಲ್ ಯಾದವ್, ವಿಜಯ್ ರಾಜ್, ಅಸ್ರಾನಿ, ಅಭಿಷೇಕ್ ಬ್ಯಾನರ್ಜಿ, ಮಂಜೋತ್ ಸಿಂಗ್ ಮತ್ತು ಸೀಮಾ ಪಾಹ್ವಾ ಸೇರಿ ಬೃಹತ್ ತಾರಾಂಗಣವಿದೆ. ಕಥೆಯಲ್ಲಿ ಮಥುರಾದ ಚಿಕ್ಕಹಳ್ಳಿಯ ಯುವಕನೊಬ್ಬ ತನ್ನ ತಂದೆಯ ಸಾಲ ತೀರಿಸಲು, ತನ್ನ ಪ್ರೇಮಿಯನ್ನು ಪಡೆಯಲು ಹೆಣಗಾಡುವ ಕಥೆಯಿದೆ.
ಟೋಬಿ
ಥಿಯೇಟ್ರಿಕಲ್ ಬಿಡುಗಡೆ ದಿನಾಂಕ: ಆಗಸ್ಟ್ 25, 2023
ಬಾಸಿಲ್ ನಿರ್ದೇಶಿಸಿರುವ "ಟೋಬಿ" ಕನ್ನಡದ ಬಹುನಿರೀಕಿತ ಚಲನಚಿತ್ರವಾಗಿದ್ದು, ಸೇಡಿನ ಕಥೆಯನ್ನು ಹೇಳುತ್ತದೆ. ಬಾಸಿಲ್ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಸಂಯುಕ್ತ ಹೊರನಾಡು ಮತ್ತು ಚೈತ್ರ ಆಚಾರ್ ಸೇರಿದಂತೆ ಅನೇಕ ಮಂದಿ ನಟಿಸಿದ್ದಾರೆ.
ಟೋಬಿ ಸಿನಿಮಾ ದೇಶಾದ್ಯಂತ ದೊಡ್ಟಮಟ್ಟದಲ್ಲಿಯೇ ಬಿಡುಗಡೆ ಆಗುತ್ತಿದೆ. ಎಲ್ಲಾ ಕಡೆಯೂ ಕನ್ನಡದಲ್ಲಿಯೇ ಟೋಬಿ ಬಿಡುಗಡೆಯಾಗುತಿದ್ದು, ಸಿಂಗಲ್ ಸ್ಕ್ರೀನ್ ಥಿಯೇಟರ್ ಸೇರಿದಂತೆ ಮಲ್ಟಿಪ್ಲೆಕ್ಸ್‌ಗಳಲ್ಲೂ ಟೋಬಿ ಪ್ರದರ್ಶನವಾಗಲಿದೆ.

ಗಾಂಡೀವಧಾರಿ ಅರ್ಜುನ
ಥಿಯೇಟ್ರಿಕಲ್ ಬಿಡುಗಡೆ ದಿನಾಂಕ: ಆಗಸ್ಟ್ 25, 2023
"ಗಾಂಡೀವಧಾರಿ ಅರ್ಜುನ" ತೆಲುಗು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಪ್ರವೀಣ್ ಸತ್ತಾರು ತಾವೇ ಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ವರುಣ್ ತೇಜ್, ಸಾಕ್ಷಿ ವೈದ್ಯ ಮತ್ತು ವಿನಯ್ ರೈ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಆರ್‌ಡಿಎಕ್ಸ್: ರಾಬರ್ಟ್ ಡೋನಿ ಕ್ಸೇವಿಯರ್
ಥಿಯೇಟ್ರಿಕಲ್ ಬಿಡುಗಡೆ ದಿನಾಂಕ: ಆಗಸ್ಟ್ 25, 2023
ಮಲಯಾಳಂ ಆಕ್ಷನ್ ಚಿತ್ರದಲ್ಲಿ, ಸಮರ ಕಲೆಗಳು ಮತ್ತು ಬೀದಿ ಕಾದಾಟಗಳಲ್ಲಿ ನುರಿತ ರಾಬರ್ಟ್, ಡೇನಿ ಮತ್ತು ಕ್ಸೇವಿಯರ್ ಎಂಬ ಮೂವರು ವ್ಯಕ್ತಿಗಳ ಬಗ್ಗೆ ಸಿನಿಮಾ ಹೇಳುತ್ತದೆ. 'ಆರ್‌ಡಿಎಕ್ಸ್: ರಾಬರ್ಟ್ ಡೋನಿ ಕ್ಸೇವಿಯರ್' ನಲ್ಲಿ ನಹಾಸ್ ಹಿದಾಯತ್, ಶಾಬಾಸ್ ರಶೀದ್, ಆದರ್ಶ್ ಸುಕುಮಾರನ್, ಆಂಟೋನಿ ವರ್ಗೀಸ್, ಶೇನ್ ನಿಗಮ್, ನೀರಜ್ ಮಾಧವ್, ಲಾಲ್, ಬಾಬು ಆಂಟೋನಿ, ಮಾಲಾ ಪಾರ್ವತಿ, ಮಹಿಮಾ ನಂಬಿಯಾರ್, ಬೈಜು, ಐಮಾ ಸೆಬಾಸ್ಟಿಯನ್, ಶಮ್ಮಿ ತಿಲಕನ್ ಮತ್ತು ನಿಶಾನ್ ಥಿಲಕನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಅಕೆಲ್ಲಿ
ಥಿಯೇಟ್ರಿಕಲ್ ಬಿಡುಗಡೆ ದಿನಾಂಕ: ಆಗಸ್ಟ್ 25, 2023
ಪ್ರಣಯ್ ಮೆಶ್ರಾಮ್ ನಿರ್ದೇಶನದ ಚೊಚ್ಚಲ ಹಿಂದಿ ಭಾಷೆಯ ಥ್ರಿಲ್ಲರ್ ಚಲನಚಿತ್ರ "ಅಕೆಲ್ಲಿ" ಚಿತ್ರದಲ್ಲಿ ನುಶ್ರತ್ ಭರುಚ್ಚ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಅಕೆಲಿ, ನೈಜ ಘಟನೆಗಳನ್ನು ಆಧರಿಸಿದ ಸಿನಿಮಾವಾಗಿದೆ. ಸ್ವಾತಂತ್ರ್ಯದ ಹೋರಾಟದಲ್ಲಿ ಯುದ್ಧ ವಲಯದಲ್ಲಿ ಸಿಕ್ಕಿಬಿದ್ದ ಸಾಮಾನ್ಯ ಭಾರತೀಯ ಯುವತಿಯ ಹೋರಾಟವನ್ನು ತಿಳಿಸುತ್ತದೆ.

ಬಾಟಮ್ಸ್
ಥಿಯೇಟ್ರಿಕಲ್ ಬಿಡುಗಡೆ ದಿನಾಂಕ: ಆಗಸ್ಟ್ 25, 2023
"ಬಾಟಮ್ಸ್" ಎಂಬುದು ಅಮೇರಿಕನ್ ಹಾಸ್ಯ ಚಲನಚಿತ್ರವಾಗಿದ್ದು, ಹುಡುಗಿಯರನ್ನು ಭೇಟಿಯಾಗಲು ಮತ್ತು ಸಂಪರ್ಕಿಸುವ ಪ್ರಯತ್ನದಲ್ಲಿ ಫೈಟ್ ಕ್ಲಬ್ ಅನ್ನು ಪ್ರಾರಂಭಿಸಲು ನಿರ್ಧರಿಸಿದ ಇಬ್ಬರು ಕ್ವೀರ್ ಹೈಸ್ಕೂಲ್‌ರ್‌ಗಳ ಸುತ್ತ ಕೇಂದ್ರೀಕೃತವಾಗಿದೆ. ಆದರೆ, ಇದರಿಂದ ಉಂಟಾದ ಹಿಂಸಾಚಾರವು ಅವರ ಶಾಲೆಯಾದ್ಯಂತ ಹರಡುತ್ತದೆ. ಎಮ್ಮಾ ಸೆಲಿಗ್ಮನ್ ಮತ್ತು ರಾಚೆಲ್ ಸೆನೋಟ್ ಬರೆದಿರುವ ಚಲನಚಿತ್ರವನ್ನು ಸೆಲಿಗ್ಮನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನಿಕೋಲಸ್ ಗ್ಯಾಲಿಟ್ಜಿನ್, ಅಯೋ ಎಡೆಬಿರಿ, ದಗ್ಮಾರಾ ಡೊಮಿನ್ಸಿಕ್, ರಾಚೆಲ್ ಸೆನೋಟ್, ಕೈಯಾ ಗರ್ಬರ್ ಮತ್ತು ರೂಬಿ ಕ್ರೂಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಪಾಂಚ್ ಕೃತಿ: ಫೈವ್ ಎಲಿಮೆಂಟ್ಸ್
ಥಿಯೇಟ್ರಿಕಲ್ ಬಿಡುಗಡೆ ದಿನಾಂಕ: ಆಗಸ್ಟ್ 25, 2023
"ಪಾಂಚ್ ಕೃತಿ: ಫೈವ್ ಎಲಿಮೆಂಟ್ಸ್" ಸನ್ಜೋಯ್ ಭಾರ್ಗವ್ ನಿರ್ದೇಶಿಸಿದ 2023 ರ ಹಿಂದಿ ರಹಸ್ಯ ಚಲನಚಿತ್ರವಾಗಿದೆ. ಚಾಂದೇರಿ ಪಟ್ಟಣದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಸವಾಲುಗಳು, ಆಧ್ಯಾತ್ಮಿಕತೆ ಸಮಸ್ಯೆಗಳನ್ನು ಪರಿಹರಿಸುವ ಐದು ಆಕರ್ಷಕ ಕಥೆಗಳನ್ನು ಒಟ್ಟಿಗೆ ತೋರಿಸುವ ಪ್ರಯತ್ನವಿದೆ.
ಸಿನಿಮಾದಲ್ಲಿ ಬ್ರಿಜೇಂದ್ರ ಕಲಾ, ಸಾಗರ್ ವಾಹಿ, ಕುರಂಗಿ ವಿಜಯಶ್ರೀ ನಾಗರಾಜ್, ಸಾರಿಕಾ ಬಹ್ರೋಲಿಯಾ ಮತ್ತು ಪೂರ್ವಾ ಪರಾಗ್ ಸೇರಿದಂತೆ ಹಲವು ಪ್ರತಿಭಾವಂತರು ಪಾತ್ರ ನಿರ್ವಹಿಸಿದ್ದಾರೆ.
ಇರೈವನ್
ಥಿಯೇಟ್ರಿಕಲ್ ಬಿಡುಗಡೆ ದಿನಾಂಕ: ಆಗಸ್ಟ್ 25, 2023
"ಇರೈವನ್" ತಮಿಳು ಥ್ರಿಲ್ಲರ್ ಚಲನಚಿತ್ರವಾಗಿದ್ದು, ಐ. ಅಹ್ಮದ್ ಬರೆದು ನಿರ್ದೇಶಿಸಿದ್ದಾರೆ. ಜಯಂ ರವಿ ಮತ್ತು ನಯನತಾರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಯುವನ್ ಶಂಕರ್ ರಾಜಾ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ.


Click it and Unblock the Notifications











