CCL 2025 ; ಚೆನ್ನೈ ರೈನೋಸ್ VS ತೆಲುಗು ವಾರಿಯರ್ಸ್, ಜಿದ್ದಾಜಿದ್ದಿನ ಹೋರಾಟದಲ್ಲಿ ಗೆದ್ದವರು ಯಾರು..?

ಹೈದರಾಬಾದ್‌ನಲ್ಲಿ ತೆಲುಗು ವಾರಿಯರ್ಸ್ ವಿರುದ್ದ ಕಣಕ್ಕಿಳಿದ ಚೆನ್ನೈ ತಂಡಕ್ಕೆ ಆರಂಭಿಕ ಆಘಾತಕ್ಕೀಡಾಗಿತ್ತು. ಮೊದಲ ಓವರ್‌ನಲ್ಲಿ ರಘು ಎರಡು ವಿಕೆಟ್ ಕಬಳಿಸಿದರು. ರಮಣ ಮತ್ತು ಶರಣ್ ಅವರನ್ನು ಪೆವಲಿಯನ್‌ಗೆ ಕಳಿಸಿದರು.

ಮೊದಲ ಓವರ್‌ನಲ್ಲಿ ಕೇವಲ ಹನ್ನೊಂದು ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡ ಚೆನ್ನೈ ತಂಡ ಆ ನಂತರ ತಂಡದ ನಾಯಕ ವಿಕ್ರಾಂತ್ ಜವಾಬ್ಧಾರಿಯುತ ಆಟದಿಂದ ಚೇತರಿಸಿಕೊಂಡಿತು. ವಿಕ್ರಾಂತ್ 28 ಎಸೆತಗಳಲ್ಲಿ 61 ರನ್ ಬಾರಿಸಿದರು.

Chennai Rhinos vs Telugu Warriors Who won the match Here s the result of the thrilling match

ಐದನೇ ಕ್ರಮಾಂಕದಲ್ಲಿ ಬಂದ ದಸರತಿ 14 ಬಾಲ್‌ನಲ್ಲಿ 35 ರನ್‌ಗಳಿಸಿದರು. ವಿಕ್ರಾಂತ್ ಮತ್ತು ದಸರತಿ ಅವರ ಬ್ಯಾಟಿಂಗ್‌ನಿಂದ ಚೆನ್ನೈ ಮೊದಲ ಇನಿಂಗ್ಸ್‌ನಲ್ಲಿ ಹತ್ತು ಓವರ್‌ಗಳಲ್ಲಿ 125 ರನ್ ಗಳಿಸಿತು. ಚೆನ್ನೈ ನೀಡಿದ 125 ರನ್‌ಗಳ ಗುರಿಯನ್ನು ಬೆನ್ನತ್ತಿದ ತೆಲುಗು ವಾರಿಯರ್ಸ್ ನಾಯಕ ಅಖಿಲ್ ಅಕ್ಕಿನೇನಿ ಅವರ ವಿಕೆಟ್‌ನ್ನು ಕಳೆದುಕೊಂಡಿತು. ಕೇವಲ ಒಂದು ರನ್ ಗಳಿಸಿ ಅಖಿಲ್ ಔಟಾದರು. ಅಖಿಲ್ ಹಿಂದೆ ಹಿಂದೆಯೇ ಆದರ್ಶ್ ಕೂಡ ಪೆವಿಲಿಯನ್ ಸೇರಿದರು.

ಒಂದು ಕಡೆ ವಿಕೆಟ್ ಬೀಳುತ್ತಿದ್ದರೆ ಇನ್ನೊಂದು ಕಡೆ ರೋಷನ್ ಬಂಡೆಗಲ್ಲಿನಂತೆ ನಿಂತುಕೊಂಡಿದ್ದರು. ಏಕಾಂಗಿ ಹೋರಾಟವನ್ನು ಮಾಡಿದರು. 33 ಎಸೆತಗಳಲ್ಲಿ 72 ರನ್ ಸಿಡಿಸಿದ ರೋಷನ್ ತಂಡದ ಮೊತ್ತವನ್ನು 105ಕ್ಕೆ ತಲುಪಿಸಿದರು. ಈ ಮೂಲಕ ಚೆನ್ನೈ ರೈನೋಸ್ ತಂಡ 20 ರನ್‌ಗಳ ಲೀಡ್ ಪಡೆಯಿತು.

ಆ ನಂತರ ಎರಡನೇ ಇನಿಂಗ್ಸ್ ಆರಂಭಿಸಿದ ಚೆನ್ನೈ ಉತ್ತಮವಾದ ಆರಂಭವನ್ನೇ ಪಡೆಯಿತು.ನಾಲ್ಕು ಓವರ್‌ಗಳಲ್ಲಿ 47 ರನ್ ಗಳಿಸಿತ್ತು. ಆದರೆ ಆ ನಂತರ ಶರಣ್ ಮತ್ತು ಕಲೈರಸನ್ ಬೌಲಿಂಗ್ ಎದುರಿಸಲು ವಿಫಲವಾದ ಚೆನ್ನೈ ಆಟಗಾರರು ಒಬ್ಬರಾದ ಮೇಲೊಬ್ಬರು ಪೆವಿಲಿಯನ್ ಪರೇಡ್ ನಡೆಸಿದರು. ಅಜಯ್ ಮತ್ತು ಪೃಥ್ವಿ ಅವರನ್ನು ಹೊರತು ಪಡಿಸಿದರೆ ಚೆನ್ನೈನ ಬೇರೆ ಯಾವ ಆಟಗಾರ ಕೂಡ ಎರಡಂಕಿಯ ಗಡಿಯನ್ನು ತಲುಪಲಿಲ್ಲ.ಪರಿಣಾಮ ಚೆನ್ನೈ ತಂಡ ಹತ್ತು ಓವರ್‌ಗಳಲ್ಲಿ 08 ವಿಕೆಟ್ ಕಳೆದುಕೊಂಡು ಕೇವಲ 94 ರನ್ ಮಾತ್ರ ಗಳಿಸುವಲ್ಲಿ ಯಶಸ್ವಿಯಾಯ್ತು.

ಹೀಗೆ ಎರಡನೇ ಇನಿಂಗ್ಸ್‌ನಲ್ಲಿ 94ರನ್ ಗಳಿಸಿದ ಚೆನ್ನೈ ತಂಡ ತೆಲುಗು ವಾರಿಯರ್ಸ್‌ಗೆ 108ರನ್‌ಗಳ ಗುರಿಯನ್ನು ನೀಡಿತು. ಈ ಗುರಿ ಬೆನ್ನತ್ತಿದ ಅಖಿಲ್ ಅಕ್ಕಿನೇನಿ ಸಾರಥ್ಯದ ತೆಲುಗು ವಾರಿಯರ್ಸ್ ತಂಡ ಆರಂಭದಲ್ಲಿಯೇ ರೋಷನ್ ಅವರ ವಿಕೆಟ್ ಕಳೆದುಕೊಂಡಿತು. ಆ ನಂತರ ಅಶ್ವಿನ್ ಬಾಬು, ಸಾಮ್ರಾಟ್, ಸಾಂಬಾ ಕೂಡ ಬೇಗ ಬೇಗ ಔಟಾದರು. ಅಖಿಲ್ ಅಕ್ಕಿನೇನಿ 14 ಎಸೆತಗಳಲ್ಲಿ 27 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ನಂತರ ಆದರ್ಶ್ ಕೂಡ 11 ರನ್ ಗಳಿಸಿ ಕಲೈರಸನ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಅಂತಿಮವಾಗಿ ಕೊನೆಯ ಓವರ್‌ನಲ್ಲಿ 43 ರನ್‌ಗಳನ್ನು ತೆಲುಗು ವಾರಿಯರ್ಸ್ ಗಳಿಸಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಸಚಿನ್ ಸತತವಾಗಿ ಮೂರು ಬೌಂಡರಿಗಳನ್ನು ಹೊಡೆಯುವ ಮೂಲಕ ನೇರೆದ ಜನಸ್ತೋಮಕ್ಕೆ ಮನರಂಜನೆ ನೀಡಿದರಾದರೂ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಲು ಸಾಧ್ಯವಾಗಲಿಲ್ಲ. 26 ರನ್‌ಗಳಿಂದ ತೆಲುಗು ವಾರಿಯರ್ಸ್ ತಂಡ ಸೋಲನ್ನೊಪ್ಪಿಕೊಂಡಿತು.

More from Filmibeat

Read more about: ccl 2025 cricket filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X