ಪ್ರಿನ್ಸ್, ಪವನ್, ಪ್ರಭಾಸ್‌ ಫೈಟ್‌ನಲ್ಲಿ ಭಾರೀ ಟ್ವಿಸ್ಟ್: ಪ್ರಭಾಸ್‌ಗೂ ಮೊದ್ಲೆ ಬಾಲಕೃಷ್ಣ ಎಂಟ್ರಿ.. ಜೈ ಬಾಲಯ್ಯ!

ಟಾಲಿವುಡ್‌ನಲ್ಲೀಗ ಸೂಪರ್ ಹಿಟ್ ಸಿನಿಮಾಗಳ ರೀ-ರಿಲೀಸ್ ಟ್ರೆಂಡ್ ನಡೀತಿದೆ. ದಶಕಗಳ ಹಿಂದೆ ರಿಲೀಸ್ ಆಗಿದ್ದ ಸಿನಿಮಾಗಳನ್ನು ಹೊಸ ತಂತ್ರಜ್ಞಾನ ಬಳಸಿ ರೀ ರಿಲೀಸ್ ಮಾಡ್ತಿದ್ದಾರೆ. ಈಗಾಗಲೇ 'ಪೋಕಿರಿ', 'ಜಲ್ಸಾ' ಸಿನಿಮಾಗಳು ರಿಲೀಸ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿದೆ. ಪ್ರಭಾಸ್ ಹುಟ್ಟುಹಬ್ಬಕ್ಕೆ 'ಬಿಲ್ಲಾ' ರೀ-ರಿಲೀಸ್ ಪ್ಲ್ಯಾನ್ ನಡೀತಿತ್ತು. ಆದರೆ ಗ್ಯಾಪ್‌ನಲ್ಲಿ 'ಚೆನ್ನಕೇಶವ ರೆಡ್ಡಿ' ಎಂಟ್ರಿ ಆಗ್ತಿದೆ.

ಆಗಸ್ಟ್ 9ಕ್ಕೆ ಮಹೇಶ್ ಬಾಬು ಬರ್ತ್‌ಡೇ ಸ್ಪೆಷಲ್ ಆಗಿ 'ಪೋಕಿರಿ' ಸಿನಿಮಾ ರೀ- ರಿಲೀಸ್ ಆಗಿತ್ತು. ಪುರಿ ಜಗನ್ನಾಥ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಹೊಸ ರೂಪದಲ್ಲಿ ಅಭಿಮಾನಿಗಳಿಗೆ ಕಿಕ್ ಕೊಟ್ಟಿತ್ತು. ದೇಶ ವಿದೇಶಗಳಲ್ಲಿ ಸಿನಿಮಾ ಸದ್ದು ಮಾಡಿತ್ತು. ಸೆಪ್ಟೆಂಬರ್ 2ಕ್ಕೆ ಪವನ್ ಕಲ್ಯಾಣ್ ಬರ್ತ್‌ಡೇ ವಿಶೇಷವಾಗಿ 'ಜಲ್ಸಾ' ಸಿನಿಮಾ ರೀ-ರಿಲೀಸ್ ಆಗಿ 'ಪೋಕಿರಿ' ದಾಖಲೆ ಮುರಿದಿತ್ತು. ಅಕ್ಟೋಬರ್ 23ಕ್ಕೆ ಪ್ರಭಾಸ್ ಬರ್ತ್‌ಡೇ ಸಂಭ್ರಮದಲ್ಲಿ 'ಬಿಲ್ಲಾ' ಚಿತ್ರವನ್ನು ಮತ್ತೆ ತೆರೆಗೆ ತರಲಾಗ್ತಿದೆ.

'ಜಲ್ಸಾ' ರೀ-ರಿಲೀಸ್ ಬಾಕ್ಸಾಫೀಸ್ ದಾಖಲೆಯನ್ನು 'ಬಿಲ್ಲಾ' ಮುರಿಯೋದು ಗ್ಯಾರೆಂಟಿ ಎಂದು ಎಲ್ಲರೂ ಲೆಕ್ಕಚಾರ ಹಾಕ್ತಿದ್ರು. ಕಹಾನಿಯಲ್ಲಿ ಟ್ವಿಸ್ಟ್‌ ಎನ್ನುವಂತೆ 'ಜಲ್ಸಾ'ಗಿಂತ ಟಫ್ ಟಾರ್ಗೆಟ್ ಕೊಡೋದಕ್ಕೆ ನಟಸಿಂಹ ಬಾಲಕೃಷ್ಣ ನಟನೆಯ 'ಚೆನ್ನಕೇಶವ ರೆಡ್ಡಿ' ಸೆಪ್ಟೆಂಬರ್ 24 ಹಾಗೂ 25ರಂದು ರೀ-ರಿಲೀಸ್ ಆಗ್ತಿದೆ.

20 ವರ್ಷದ ನಂತರ 'ಚೆನ್ನಕೇಶವ ರೆಡ್ಡಿ'

20 ವರ್ಷದ ನಂತರ 'ಚೆನ್ನಕೇಶವ ರೆಡ್ಡಿ'

ಸೆಪ್ಟೆಂಬರ್ 25, 2002ರಲ್ಲಿ ತೆರೆಗಪ್ಪಳಿಸಿದ ಬಾಕ್ಸಾಫೀಸ್ ಶೇಕ್ ಮಾಡಿದ್ದ ಸಿನಿಮಾ 'ಚೆನ್ನಕೇಶವ ರೆಡ್ಡಿ'. ವಿ. ವಿ ವಿನಾಯಕ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಟೈಟಲ್‌ ರೋಲ್‌ನಲ್ಲಿ ಬಾಲಯ್ಯ ಅಬ್ಬರಿಸಿ ಬೊಬ್ಬಿರಿದಿದ್ದರು. ಭರ್ಜರಿ ಆಕ್ಷನ್, ಡೈಲಾಗ್ಸ್‌ನಿಂದ ನಟಸಿಂಹ ಆರ್ಭಟಿಸಿದ್ದರು. ಸಿನಿಮಾ ಅವತ್ತಿನ ಕಾಲಕ್ಕೆ ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು. ಇದೀಗ ಸಿನಿಮಾ 20 ವರ್ಷ ಪೂರೈಸುತ್ತಿದೆ. ಇದೇ ಸಮಯದಲ್ಲಿ ಹೊಸ ರೂಪದಲ್ಲಿ ಚಿತ್ರವನ್ನು ಮತ್ತೆ ತೆರೆಗೆ ತರಲಾಗ್ತಿದೆ.

ಒಳ್ಳೆ ಉದ್ದೇಶಕ್ಕೆ ಸಿನಿಮಾ ರೀ-ರಿಲೀಸ್

ಒಳ್ಳೆ ಉದ್ದೇಶಕ್ಕೆ ಸಿನಿಮಾ ರೀ-ರಿಲೀಸ್

ಟಾಲಿವುಡ್‌ನಲ್ಲಿ ಬಾಲಯ್ಯಗೆ ದೊಡ್ಡ ಅಭಿಮಾನಿ ಬಳಗ ಇದೆ. 'ಚೆನ್ನಕೇಶವ ರೆಡ್ಡಿ' ಸಿನಿಮಾ ರೀ-ರಿಲೀಸ್ ವಿಚಾರ ಕೇಳಿ ನಟ ಬಾಲಕೃಷ್ಣ ಕೂಡ ಥ್ರಿಲ್ಲಾಗಿದ್ದಾರೆ. ಸ್ವತ: ಚಿತ್ರದ ನಿರ್ಮಾಪಕರಾದ ಬೆಲ್ಲಂಕೊಂಡ ಸುರೇಶ್ ಸಿನಿಮಾ ರೀ- ರಿಲೀಸ್‌ಗೆ ಮುಂದಾಗಿದ್ದಾರೆ. ಇದರಿಂದ ಬರುವ ಶೇಕಡಾ 75ರಷ್ಟು ಹಣವನ್ನು ಬಾಲಯ್ಯ ತಾಯಿ ಬಸವ ತಾರಕಂ ಅವರ ಹೆಸರಿನಲ್ಲಿರುವ ಟ್ರಸ್ಟ್‌ ನೀಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಇನ್ನುಳಿದ ಹಣವನ್ನು ತಮ್ಮ ಅಸೋಸಿಯೇಷನ್‌ಗೆ ನೀಡಲು ಮುಂದಾಗಿದ್ದಾರೆ.

'ಪೋಕಿರಿ' ದಾಖಲೆ ಮುರಿದಿದ್ದ 'ಜಲ್ಸಾ'

'ಪೋಕಿರಿ' ದಾಖಲೆ ಮುರಿದಿದ್ದ 'ಜಲ್ಸಾ'

ಸೂಪರ್ ಸ್ಟಾರ್ ಮಹೇಶ್ ಬಾಬು ಹುಟ್ಟುಹಬ್ಬ ಸಂಭ್ರಮದಲ್ಲಿ 'ಪೋಕಿರಿ' ಸಿನಿಮಾ ಹೊಸ ರೂಪದಲ್ಲಿ ತೆರೆಗೆ ಬಂದಿತ್ತು. 300 ಶೋಗಳು ಹೌಸ್‌ಫುಲ್‌ ಆಗಿ 1.76 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು. ಇನ್ನು ಪವನ್ ಕಲ್ಯಾಣ್ ಬರ್ತ್‌ಡೇ ಸ್ಪೆಷಲ್ಲಾಗಿ 'ಜಲ್ಸಾ' ಸಿನಿಮಾ ತೆರೆಕಂಡು 3.20 ಕೋಟಿ ರೂ. ಗಳಿಸಿ 'ಪೋಕಿರಿ' ದಾಖಲೆ ಅಳಿಸಿ ಹಾಕಿತ್ತು.

ಹೊಸ ದಾಖಲೆ ಬರೀತ್ತಾನಾ 'ಚೆನ್ನಕೇಶವ ರೆಡ್ಡಿ'..?

ಹೊಸ ದಾಖಲೆ ಬರೀತ್ತಾನಾ 'ಚೆನ್ನಕೇಶವ ರೆಡ್ಡಿ'..?

ಬಹಳ ದೊಡ್ಡಮಟ್ಟದಲ್ಲಿ 'ಚೆನ್ನಕೇಶವ ರೆಡ್ಡಿ' ಸಿನಿಮಾ ರೀ- ರಿಲೀಸ್ ಆಗ್ತಿದೆ. ಬೆಂಗಳೂರಿನ 3 ಥಿಯೇಟರ್‌ಗಳಲ್ಲೂ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದ್ದು, ಈಗಾಗಲೇ ಆನ್‌ಲೈನ್‌ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿದೆ. ಸಿನಿಮಾ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು, ಟಿಕೆಟ್ ಬುಕ್ಕಿಂಗ್‌ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಬಾಲಯ್ಯ ಕ್ರೇಜ್ ನೋಡ್ತಿದ್ರೆ, 'ಜಲ್ಸಾ' ದಾಖಲೆ ಧೂಳಿಪಟ ಆಗುವ ಸುಳಿವು ಸಿಕ್ತಿದೆ.

'ಬಿಲ್ಲಾ'ಗೆ 'ಚೆನ್ನಕೇಶವ ರೆಡ್ಡಿ' ಟಫ್ ಟಾರ್ಗೆಟ್

'ಬಿಲ್ಲಾ'ಗೆ 'ಚೆನ್ನಕೇಶವ ರೆಡ್ಡಿ' ಟಫ್ ಟಾರ್ಗೆಟ್

'ಚೆನ್ನಕೇಶವ ರೆಡ್ಡಿ' ನಂತರ ಪ್ರಭಾಸ್ ಹುಟ್ಟುಹಬ್ಬ ಸಂಭ್ರಮದಲ್ಲಿ 'ಬಿಲ್ಲಾ' ಸಿನಿಮಾ ರೀ ರಿಲೀಸ್ ಪ್ಲ್ಯಾನ್ ನಡೀತಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಯಂಗ್‌ ರೆಬೆಲ್ ಸ್ಟಾರ್ ಕ್ರೇಜ್ ಹೇಗಿದೆ ಅನ್ನೋದನ್ನು ಬಿಡಿಸಿ ಹೇಳುವುದು ಬೇಕಾಗಿಲ್ಲ. ಸುಲಭವಾಗಿ 'ಜಲ್ಸಾ' ದಾಖಲೆಯನ್ನು 'ಬಿಲ್ಲಾ' ಮುರಿತ್ತಾನೇ ಎನ್ನುವ ಲೆಕ್ಕಾಚಾರ ನಡೆದಿತ್ತು. ಆದರೆ 'ಚೆನ್ನಕೇಶವ ರೆಡ್ಡಿ' ಈಗ 'ಜಲ್ಸಾ' ದಾಖಲೆ ಮುರಿದು 'ಬಿಲ್ಲಾ'ಗೆ ಟಫ್ ಟಾರ್ಗೆಟ್ ಕೊಡುವು ಸಾಧ್ಯತೆಯಿದೆ.

More from Filmibeat

English summary
Chennakesava Reddy Re Release advance booking is in full swing. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X