For Quick Alerts
  ALLOW NOTIFICATIONS  
  For Daily Alerts

  ನಟಿಯರಿಗೆ ಕೋಟ್ಯಂತರ ಹಣ ಕೊಟ್ಟಿದ್ದ ಕೆಸಿನೊ ಕಿಂಗ್: ಯಾರಿಗೆ ಎಷ್ಟೆಷ್ಟು?

  |

  ಜಾರಿ ನಿರ್ದೇಶನಾಲಯ (ಇಡಿ) ಮಾಡಿರುವ ದಾಳಿಯಲ್ಲಿ ತೆಲಂಗಾಣದ ಇಬ್ಬರು ಭಾರಿ ಕೆಸಿನೊ ಕುಳಗಳ ಬಂಡವಾಳ ಬಯಲಾಗಿದ್ದು, ಕೋಟ್ಯಂತರ ರುಪಾಯಿ ಹಣ ಅಕ್ರಮ ವರ್ಗಾವಣೆ ಮಾಡಿರುವ ಆರೋಪವನ್ನು ಇಬ್ಬರ ವಿರುದ್ಧ ಹೊರಿಸಲಾಗಿದೆ.

  ನೇಪಾಳದಲ್ಲಿ ಕೆಸಿನೊ ಅಡ್ಡೆ ಹೊಂದಿರುವ ಮಾಧವ ರೆಡ್ಡಿ, ಚಿಕ್ಕೋಟಿ ಪ್ರವೀಣ್ ಎಂಬುವರ ಮೇಲೆ ಇಡಿ ದಾಳಿ ನಡೆಸಿದ್ದು ತನಿಖೆ ವೇಳೆ ಹಲವು ಆಘಾತಕಾರಿ ಅಂಶಗಳು ಬಯಲಾಗಿವೆ. ಮಾಧವ ರೆಡ್ಡಿ ಹಾಗೂ ಚಿಕ್ಕೋಟಿ ಪ್ರವೀಣ್ ಅವರುಗಳು ಬಾಲಿವುಡ್, ಟಾಲಿವುಡ್‌ನ ಖ್ಯಾತನಾಮ ನಟ-ನಟಿಯರೊಟ್ಟಿಗೆ ಸಂಪರ್ಕದಲ್ಲಿದ್ದು ಅವರಿಗೆ ಕೋಟ್ಯಂತರ ಮೊತ್ತದ ಹಣವನ್ನು ನೀಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

  ಸಿನಿಮಾ ತಾರೆಯರು ಮಾತ್ರವೇ ಅಲ್ಲದೆ ಆಂಧ್ರ-ತೆಲಂಗಾಣದ ಹಲವು ರಾಜಕಾರಣಿಗಳು, ಶಾಸಕರು, ಹಾಲಿ-ಮಾಜಿ ಮಂತ್ರಿಗಳು ಸಹ ಇವರ ಗ್ರಾಹಕರಾಗಿದ್ದು, ಲಕ್ಷಾಂತರ ರುಪಾಯಿ ಹಣ ಪಡೆದು ಪ್ಯಾಕೇಜ್‌ ಮೇಲೆ ಕೆಸಿನೊಗೆ ಕರೆದುಕೊಂಡು ಹೋಗುತ್ತಿದ್ದರಂತೆ ಈ ಮಾಧವ ರೆಡ್ಡಿ, ಚಿಕ್ಕೋಟಿ ಪ್ರವೀಣ್.

  ಬಾಲಿವುಡ್‌ ನಟ-ನಟಿಯರೊಟ್ಟಿಗೆ ಪಾರ್ಟಿ ಮಾಡಿರುವ ಚಿತ್ರಗಳು ಮಾಧವ ರೆಡ್ಡಿ ಹಾಗೂ ಚಿಕ್ಕೋಟಿ ಪ್ರವೀಣ್ ಮೊಬೈಲ್‌ನಲ್ಲಿ ಪತ್ತೆಯಾಗಿದ್ದು, ಯಾರಿಗೆ ಎಷ್ಟು ಹಣ ನೀಡಿದ್ದರೆಂಬ ಮಾಹಿತಿ ಸಹ ಮೊಬೈಲ್‌ ಸಂಭಾಷಣೆಗಳಿಂದ ದೊರಕಿದೆ ಎನ್ನಲಾಗಿದೆ.

  ಕೋಟ್ಯಂತರ ಹಣ ನೀಡಿದ್ದ ಚಿಕ್ಕೊಟಿ ಪ್ರವೀಣ್

  ಕೋಟ್ಯಂತರ ಹಣ ನೀಡಿದ್ದ ಚಿಕ್ಕೊಟಿ ಪ್ರವೀಣ್

  ಕೆಸಿನೋಗೆ ಪ್ರಚಾರಕರಾಗಿ ಬಾಲಿವುಡ್‌ ನಟಿಯರನ್ನು, ಟಾಲಿವುಡ್ ನಟಿಯರನ್ನು-ನಟರನ್ನು ಚಿಕ್ಕೋಟಿ ಪ್ರವೀಣ್ ಬಳಸಿಕೊಂಡಿದ್ದನಂತೆ. ಪ್ರಕಾರಕರಾಗಿ ಬಂದಿದ್ದ ನಟಿ ಮಲ್ಲಿಕಾ ಶೆರಾವತ್‌ಗೆ ಒಂದು ಕೋಟಿ ರುಪಾಯಿ ನೀಡಿದ್ದನಂತೆ. ಖ್ಯಾತ ನಟಿ ಅಮಿಷಾ ಪಟೇಲ್‌ಗೆ 50 ಲಕ್ಷ ರುಪಾಯಿ ಕೊಟ್ಟಿದ್ದನಂತೆ. ಬಾಲಿವುಡ್‌ನ ಖ್ಯಾತ ಹೀರೋ ಗೋವಿಂದಗೆ 50 ಲಕ್ಷ, ತೆಲುಗು ಸಿನಿಮಾ ನಾಯಕಿ ಇಶಾಗೆ 40 ಲಕ್ಷ, ಡಿಂಪಲ್ ಹಯಾತಿಗೆ 30 ಲಕ್ಷ, ಬಾಲಿವುಡ್ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯಗೆ 20 ಲಕ್ಷ, ಐಟಂ ಹಾಡುಗಳಿಂದ ಜನಪ್ರಿಯವಾಗಿರುವ ಮುಮೈತ್ ಖಾನ್‌ಗೆ 15 ಲಕ್ಷ ರುಪಾಯಿ ಹಣ ನೀಡಿದ್ದನಂತೆ ಪ್ರವೀಣ್.

  ಶಾಸಕರು, ಸಚಿವರು ಮಾಧವ್ ರೆಡ್ಡಿ ಗ್ರಾಹಕರು

  ಶಾಸಕರು, ಸಚಿವರು ಮಾಧವ್ ರೆಡ್ಡಿ ಗ್ರಾಹಕರು

  ಇನ್ನು ಮಾದವ ರೆಡ್ಡಿ ಸಹ ಭಾರಿ ಕುಳವೇ ಆಗಿದ್ದು, ಹಲವು ರಾಜಕಾರಣಿಗಳನ್ನು ಕೆಸಿನೊಗೆ ಕರೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ನಾಲ್ಕು ದಿನದ ಪ್ಯಾಕೇಜ್‌ಗೆ 5 ರಿಂದ 15 ಲಕ್ಷ ಚಾರ್ಜ್ ಮಾಡುತ್ತಿದ್ದರು ಚಿಕ್ಕೋಟಿ ಹಾಗೂ ಮಾದೇವ್ ರೆಡ್ಡಿ. ಸುಮಾರು 15 ಹಾಲಿ ಶಾಸಕರು ಮಾಧವ್ ರೆಡ್ಡಿಯ ಗ್ರಾಹಕರಾಗಿದ್ದರು. ಅವರನ್ನು ಹೊರತುಪಡಿಸಿ ಸುಮಾರು 250 ಮಂದಿ ಇತರ ಶ್ರೀಮಂತ ಗ್ರಾಹಕರು ಇದ್ದಾರೆ. ಆಂಧ್ರ ಪ್ರದೇಶದ ಮಾಜಿ ಸಚಿವ ಬಾಲಿನೇನಿ ಶ್ರೀನಿವಾಸ್, ತೆಲಂಗಾಣ ಹಾಲಿ ಸಚಿವ ಮಲ್ಲ ರೆಡ್ಡಿ ಸೇರಿದಂತೆ ಇನ್ನೂ ಹಲವು ಖ್ಯಾತನಾಮರು ಚಿಕ್ಕೋಟಿ ಪ್ರವೀಣ್‌ನ ಗ್ರಾಹಕರಾಗಿದ್ದಾರೆ. ಮಾದವ್ ರೆಡ್ಡಿ ತನ್ನ ಕಾರಿನ ಮೇಲೆ ಸಚಿವ ಮಲ್ಲ ರೆಡ್ಡಿಯ ಶಾಸಕ ಗುರುತಿನ ಸ್ಟಿಕ್ಕರ್ ಅನ್ನು ಅಂಟಿಸಿಕೊಂಡು ಓಡಾಡುತ್ತಿದ್ದ.

  ಅಪರೂಪದ ಸರಿಸೃಪಗಳನ್ನು ಹೊಂದಿದ್ದ ಚಿಕ್ಕೊಟಿ ಪ್ರವೀಣ್

  ಅಪರೂಪದ ಸರಿಸೃಪಗಳನ್ನು ಹೊಂದಿದ್ದ ಚಿಕ್ಕೊಟಿ ಪ್ರವೀಣ್

  ಚಿಕ್ಕೊಟಿ ಪ್ರವೀಣ್ ಹಾಗೂ ಮಾಧವ್ ರೆಡ್ಡಿ ಭಾರಿ ಐಶಾರಾಮಿ ಜೀವನ ನಡೆಸುತ್ತಿದ್ದರು ಎಂಬುದು ಸಾಮಾಜಿಕ ಜಾಲತಾಣದ ಚಿತ್ರಗಳಿಂದ ಗೊತ್ತಾಗುತ್ತಿದೆ. ಐಶಾರಾಮಿ ಕಾರುಗಳಲ್ಲಿ ಸುತ್ತಾಡುತ್ತಿದ್ದ ಮಾಧವ್ ರೆಡ್ಡಿ, ಕೆಜಿಗಟ್ಟಲೆ ಚಿನ್ನದ ಆಭರಣಗಳನ್ನು ಹಾಕಿಕೊಂಡು ಸುತ್ತುತ್ತಿದ್ದ. ಇನ್ನು ಚಿಕ್ಕೋಟಿ ಪ್ರವೀಣ್, ನಟಿಯರೊಟ್ಟಿಗೆ ಪಾರ್ಟಿಗಳನ್ನು ಮಾಡುವ ಶೋಕಿ ಹೊಂದಿದ್ದ. ಜೊತೆಗೆ ತೆಲಂಗಾಣ ಸಮೀಪದ ಕಡ್ತಾಲ್ ಬಳಿಯ ತನ್ನ ಫಾರಂ ಹೌಸ್‌ನಲ್ಲಿ ಹಲವು ವಿಧದ ಅಪರೂಪದ ಸರಿಸೃಪಗಳನ್ನು ಸಹ ಸಾಕಿದ್ದ. ಅವುಗಳೊಟ್ಟಿಗೆ ಚಿತ್ರಗಳನ್ನು ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಿದ್ದ.

  ಅಕ್ರಮ ಹಣ ವರ್ಗಾವಣೆ ಆರೋಪ

  ಅಕ್ರಮ ಹಣ ವರ್ಗಾವಣೆ ಆರೋಪ

  ಚಿಕ್ಕೋಟಿ ಪ್ರವೀಣ್ ಹಾಗೂ ಮಾಧವ್ ರೆಡ್ಡಿಗೆ ಸೇರಿದ ಹಲವು ಜಾಗಗಳಲ್ಲಿ ಇಡಿಯು ರೇಡ್ ಮಾಡಿದ್ದು, ಇಬ್ಬರ ಮೊಬೈಲ್‌ ಸೀಜ್ ಮಾಡಿದೆ. ಕೆಲವು ದಾಖಲೆಗಳನ್ನು ಸಹ ಸೀಜ್ ಮಾಡಿದೆ. ದಾಖಲೆಗಳ ಪರಿಶೀಲನೆಯನ್ನು ನಡೆಸಲಾಗುತ್ತಿದ್ದು, ಸೋಮವಾರ ಇಬ್ಬರೂ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದೆ ಇಡಿ. ಇಬ್ಬರೂ ಸಹ ಹವಾಲಾ ದಂಧೆ ನಡೆಸುತ್ತಿದ್ದರು ಎಂಬ ಆರೋಪವನ್ನೂ ಸಹ ಇಡಿ ಮಾಡಿದೆ. ಭಾರತೀಯರಿಂದ ಹಣ ಪಡೆದು ನೇಪಾಳದಲ್ಲಿ ಕೆಸಿನೊದಲ್ಲಿ ಜೂಜಿಗೆ ತೊಡಗಿಸುತ್ತಿದ್ದ ಇವರು ಅಕ್ರಮವಾಗಿ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದಾರೆ.

  Recommended Video

  Galipata 2 | Ganesh | Friends ಇಂದ ನನಗೆ ಏನು ಮುಚ್ಚಿಡಕ್ಕೆ ಆಗಲ್ಲ. | Yograj Bhat | Filmibeat Kannada
  English summary
  Chikoti Praveen and Madhav Reddy gave crores of money to Bollywood and Tollywood actress to promote their casino.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X