For Quick Alerts
  ALLOW NOTIFICATIONS  
  For Daily Alerts

  RRR ಸಿನಿಮಾದ ಬಗ್ಗೆ ಮಹತ್ವದ ಅಂಶ ಬಹಿರಂಗಗೊಳಿಸಿದ ಬಾಲ ನಟ

  |

  ರಾಜಮೌಳಿ ನಿರ್ದೇಶಿಸುತ್ತಿರುವ ಆರ್‌ಆರ್‌ಆರ್ ಸಿನಿಮಾವು ಹಲವು ಕಾರಣಕ್ಕೆ ಕುತೂಹಲ ಕೆರಳಿಸಿದೆ. ತೆಲುಗು ಸಿನಿಮಾರಂಗದ ಎರಡು ಶಕ್ತಿಕೇಂದ್ರಗಳಾಗಿರುವ ಮೆಗಾಸ್ಟಾರ್ ಹಾಗೂ ಎನ್‌ಟಿಆರ್ ಕುಟುಂಬ ನಟರು ಇದೇ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ.

  ತೆಲುಗು ರಾಜ್ಯಗಳ ಬಂಡಾಯದ, ಹೋರಾಟದ ಸ್ಪೂರ್ತಿಗಳಾದ ಐತಿಹಾಸಿಕ ನಾಯಕರು ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಜೀವನ ಆಧರಿಸಿದ ಕತೆ ಇದಾಗಿದೆ. ಇನ್ನೂ ಹಲವಾರು ಕಾರಣಗಳಿಂದಾಗಿ ಈ ಸಿನಿಮಾ ಕುತೂಹಲ ಕೆರಳಿಸಿದೆ.

  ನಿರ್ದೇಶಕ ರಾಜಮೌಳಿ ಸಿನಿಮಾ ನಿರ್ದೇಶಿಸಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಈ ಸಮಯದಲ್ಲಿ ಸಿನಿಮಾದ ಬಗ್ಗೆ ಸಣ್ಣ ಮಾಹಿತಿ ಸಹ ಹೊರಗೆ ಹೋಗದಂತೆ ಜಾಗೃತಿವಹಿಸುತ್ತಾರೆ. ಆರ್‌ಆರ್‌ಆರ್‌ ಸಿನಿಮಾದ ಬಗ್ಗೆಯೂ ಅದೇ ಜಾಗೃತಿವಹಿಸಿದ್ದಾರೆ. ಆದರೆ ಸಿನಿಮಾದ ಕತೆಯ ಬಗ್ಗೆ ರಾಜಮೌಳಿ ಬಚ್ಚಿಟ್ಟಿದ್ದ ಪ್ರಮುಖ ಅಂಶವೊಂದು ಬಾಲನಟನೊಬ್ಬನಿಂದ ಬಹಿರಂಗವಾಗಿದೆ.

  ಅಜಯ್ ದೇವಗನ್‌ಗೆ ಯಾವ ಪಾತ್ರ?

  ಅಜಯ್ ದೇವಗನ್‌ಗೆ ಯಾವ ಪಾತ್ರ?

  ಆರ್‌ಆರ್‌ಆರ್‌ ಸಿನಿಮಾದಲ್ಲಿ ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜು ಪಾತ್ರ ಮಾಡುತ್ತಿರುವುದು, ಜೂ.ಎನ್‌ಟಿಆರ್ ಕೋಮರಂ ಭೀಮ್ ಪಾತ್ರ ಮಾಡುತ್ತಿರುವುದು ಹಾಗೂ ನಟಿ ಆಲಿಯಾ ಭಟ್ ಸೀತಾ ಪಾತ್ರ ಮಾಡುತ್ತಿರುವುದು ಗೊತ್ತಿದೆ. ಆದರೆ ಸಿನಿಮಾದಲ್ಲಿ ನಟಿಸಿರುವ ಪ್ರಮುಖ ಪಾತ್ರ ಅಜಯ್ ದೇವಗನ್ ನಿರ್ವಹಿಸುತ್ತಿರುವ ಪಾತ್ರ ಯಾವುದೆಂದು ಬಹಿರಂಗಗೊಂಡಿರಲಿಲ್ಲ.

  ಜೂ.ಎನ್‌ಟಿಆರ್ ತಂದೆ ಪಾತ್ರದಲ್ಲಿ ಅಜಯ್ ದೇವಗನ್

  ಜೂ.ಎನ್‌ಟಿಆರ್ ತಂದೆ ಪಾತ್ರದಲ್ಲಿ ಅಜಯ್ ದೇವಗನ್

  ಆದರೆ ಆರ್‌ಆರ್‌ಆರ್‌ ಸಿನಿಮಾದಲ್ಲಿ ನಟಿಸಿರುವ ಬಾಲನಟ ಚಕ್ರಿ ಇಂದಾಗಿ ಚಿತ್ರತಂಡ ಬಚ್ಚಿಟ್ಟಿದ್ದ ಪ್ರಮುಖ ಅಂಶ ಬಹಿರಂಗವಾಗಿದೆ. ಆರ್‌ಆರ್‌ಆರ್‌ ಸಿನಿಮಾದಲ್ಲಿ ನಟ ಅಜಯ್ ದೇವಗನ್ ಜೂ.ಎನ್‌ಟಿಆರ್ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಬಾಲನಟ ಚಕ್ರಿ ಹೇಳಿದ್ದಾನೆ.

  ಸಿನಿಮಾದಲ್ಲಿ ನಟಿಸಿರುವ ಬಾಲನಟ ಚಕ್ರಿ

  ಸಿನಿಮಾದಲ್ಲಿ ನಟಿಸಿರುವ ಬಾಲನಟ ಚಕ್ರಿ

  ಚೆಕ್ರಿ ಸಹ ಆರ್‌ಆರ್‌ಆರ್ ಸಿನಿಮಾದಲ್ಲಿ ನಟಿಸಿದ್ದಾನೆ. ಜೂ.ಎನ್‌ಟಿಆರ್ ನಿರ್ವಹಿಸುತ್ತಿರುವ ಪಾತ್ರದ ಬಾಲಾವಸ್ಥೆಯ ಪಾತ್ರದಲ್ಲಿ ಚಕ್ರಿ ನಟಿಸಿದ್ದಾನೆ. ಚಕ್ರಿ ಜೊತೆ ಅವನ ತಂದೆಯಾಗಿ ಅಜಯ್ ದೇವಗನ್ ನಟಿಸಿದ್ದಾರೆ. ಚಕ್ರಿ ಯೂಟ್ಯೂಬ್ ಚಾನೆಲ್‌ ಒಂದಕ್ಕೆ ಸಂದರ್ಶನ ನೀಡುವಾಗಿ ಈ ವಿಷಯವನ್ನು ಬಹಿರಂಗಗೊಳಿಸಿದ್ದಾನೆ.

  June 28ಕ್ಕೆ ಪ್ರತಿಭಟನೆಗೆ ಸಜ್ಜಾಗುತ್ತಿರುವ ಕಲಾವಿದರ ಸಂಘ!! | Filmibeat Kannada
  ಫೈಟ್ ವಿಷಯವನ್ನೂ ಬಹಿರಂಗಗೊಳಿಸಿದ್ದ ಮತ್ತೊಬ್ಬ ನಟ

  ಫೈಟ್ ವಿಷಯವನ್ನೂ ಬಹಿರಂಗಗೊಳಿಸಿದ್ದ ಮತ್ತೊಬ್ಬ ನಟ

  ಆರ್‌ಆರ್‌ಆರ್ ಸಿನಿಮಾದಲ್ಲಿ ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ನಡುವೆ ಒಂದು ಫೈಟ್ ಇದೆ ಎಂದು ಆರ್‌ಆರ್‌ಆರ್ ಸಿನಿಮಾದಲ್ಲಿ ನಟಿಸಿದ್ದ ನಟನೊಬ್ಬ ಸಂದರ್ಶನದಲ್ಲಿ ಹೇಳಿದ್ದ. ಆ ವಿಡಿಯೋವನ್ನು ಯೂಟ್ಯೂಬ್‌ನಿಂದಲೇ ತೆಗೆಸಿ ಹಾಕಲಾಗಿತ್ತು. ಈಗ ಚೆಕ್ರಿ ಇನ್ನೂ ಮಹತ್ವದ ಅಂಶವನ್ನು ಬಹಿರಂಗಗೊಳಿಸಿದ್ದು ಈಗ ಚಿತ್ರತಂಡ ಏನು ಮಾಡುತ್ತದೆ ಕಾದು ನೋಡಬೇಕು.

  English summary
  Child artist Chekry said that Ajay Devagan playing Jr NTR's father character in RRR movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X