Chinmayi Sripaada: ಕೇಳಿದಷ್ಟು ಕೊಡ್ತಿನಿ.. ನನ್ನೊಟ್ಟಿಗೆ ಮಲಗ್ತೀಯಾ?: ನೆಟ್ಟಿಗನ ಅಸಭ್ಯ ಮೆಸೇಜ್‌ಗೆ 'ನಿನ್ನಿಂದಲೇ' ಗಾಯಕಿ ಗರಂ

ತೆಲುಗು ಗಾಯಕಿ ಚಿನ್ಮಯಿ ಶ್ರೀಪಾದ ತಮ್ಮ ಹಾಡುಗಳಿಂದ ಮಾತ್ರವಲ್ಲ ತಮ್ಮ ನೇರಾನೇರ ಮಾತಿನಿಂದಲೂ ಪದೇ ಪದೆ ಸುದ್ದಿಯಲ್ಲಿರ್ತಾರೆ. ತಮ್ಮ ತಂಟೆಗೆ ಬಂದವರನ್ನು ಸುಮ್ಮನೆ ಬಿಡುವುದಿಲ್ಲ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಆಕೆಯನ್ನು ಟ್ರೋಲ್‌ ಮಾಡೋದು ಅದಕ್ಕೆ ಆಕೆಗೆ ತಿರುಗೇಟು ನೀಡೋದು ನಡೆಯುತ್ತಲೇ ಇರುತ್ತದೆ.

ಮುಂಬೈನಲ್ಲಿ ಹುಟ್ಟಿಬೆಳೆದ ಚಿನ್ಮಯಿ ಶ್ರೀಪಾದ ಬಳಿಕ ಹೈದರಾಬಾದ್‌ಗೆ ಶಿಫ್ಟ್ ಆದರು. ನಟ, ನಿರ್ದೇಶಕ ರಾಹುಲ್ ರವಿಂದ್ರನ್ ಕೈ ಹಿಡಿದ ಆಕೆ ತಮ್ಮ ಸುಮಧುರ ಗಾಯನದಿಂದ ಮೋಡಿ ಮಾಡಿದ್ದಾರೆ. ಗಾಯಕಿಯಾಗಿ ಮಾತ್ರವಲ್ಲದೇ ಕಂಠದಾನ ಕಲಾವಿದೆಯಾಗಿಯೂ ಗುರ್ತಿಸಿಕೊಂಡಿದ್ದಾರೆ. ಸಮಂತಾ ನಟಿಸಿರುವ ಹಲವು ಚಿತ್ರಗಳಲ್ಲಿ ಆಕೆಯ ಪಾತ್ರಕ್ಕೆ ಡಬ್ ಮಾಡಿದ್ದಾರೆ. ಸಮಂತಾಗೆ ಆತ್ಮೀಯ ಸ್ನೇಹಿತೆ ಚಿನ್ಮಯಿ ಶ್ರೀಪಾದ.

Chinmayi-Sripaada-Savage-reply-netizen

ಸೋಶಿಯಲ್ ಮೀಡಿಯಾದಲ್ಲಿ ಗಾಯಕಿ ಚಿನ್ಮಯಿ ಬಗ್ಗೆ ಬಹಳ ನೆಗೆಟಿವಿಟಿ ಇದೆ. ಆಕೆ ಸ್ತ್ರೀಪಕ್ಷಪಾತಿ, ಫೆಮಿನಿಸ್ಟ್ ಅಂತೆಲ್ಲಾ ಬಹಳ ಟ್ರೋಲ್ ಮಾಡುತ್ತಿರುತ್ತಾರೆ. ಆಕೆಯ ಪೋಸ್ಟ್‌ಗಳಿಗೆ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ಸ್ ಬರುತ್ತಿರುತ್ತದೆ. ಇತ್ತೀಚೆಗೆ ನೆಟ್ಟಿಗನೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ಕೆಟ್ಟದಾಗಿ ಪರ್ಸನಲ್ ಮೆಸೇಜ್ ಮಾಡಿದ್ದಾನೆ. ಅದಕ್ಕೆ ಆಕೆ ಖಾರವಾಗಿಯೇ ಉತ್ತರ ಕೊಟ್ಟಿದ್ದಾರೆ.

"ನೀವು ಅಂದ್ರೆ ನನಗೆ ತುಂಬಾ ಇಷ್ಟ. ನೀವು ಹುಡುಗಿಯರ ಪರ ನಿಲ್ಲುವ ರೀತಿ ನನಗೆ ಇಷ್ಟ. ನನ್ನ ತಂಗಿಗೂ ಇದೇ ರೀತಿಯ ಕಹಿ ಅನುಭವಗಳು ಎದುರಾಗಿದ್ದವು ಎಂದು ಮೆಸೇಜ್ ಮಾಡಿದ್ದಾನೆ. ಆಕೆ ಪ್ರತಿಕ್ರಿಯಿಸದೇ ಇದ್ದಾಗ ತನ್ನ ನಿಜ ಸ್ವರೂಪ ಪ್ರದರ್ಶಿಸಿದ್ದಾನೆ. "ನಿನಗೆ ಎಷ್ಟು ಬೇಕೋ ಅಷ್ಟು ಕೊಡ್ತೀನಿ.. ನೀನು ನನ್ನ ಜೊತೆ ಮಲಗ್ತೀಯಾ?.. ನಿನಗೆ ಒಳ್ಳೆ ಸುಖ ಕೊಡ್ತೀನಿ ಅಂತೆಲ್ಲಾ ಹುಚ್ಚು ಹುಚ್ಚಾಗಿ ಮೆಸೇಜ್ ಮಾಡಿದ್ದಾನೆ. ಅದಕ್ಕೆ ಚಿನ್ಮಯಿ ಗರಂ ಆಗಿದ್ದಾರೆ.

"ಇವನನ್ನು ನೋಡಿ.. ಮೊದಲಿಗೆ ಒಳ್ಳೆ ರೀತಿಯಲ್ಲಿ ಮೆಸೇಜ್ ಮಾಡುತ್ತಿದ್ದ. ನಾನು ರಿಪ್ಲೈ ಮಾಡದೇ ಇದ್ದಾಗ ಆತನ ಈಗೋ ಹರ್ಟ್ ಆಗಿದೆ. ಈಗ ತನ್ನ ನಿಜಸ್ವರೂಪ ತೋರಿಸಿದ್ದಾನೆ. ಇಂತಹವನ್ನು ಅವರಪ್ಪ ಕೆಟ್ಟದಾಗಿ ಬೆಳೆಸಿದ್ದಾರೆ. ಇವ್ನು ಬಹಳ ಕಚಡ. ಸಮಾಜದಲ್ಲಿ ಇಂಥವರು ಬಹಳ ಜನ ಇದ್ದಾರೆ.. ಹುಡುಗಿಯರು ಜಾಗ್ರತೆಯಿಂದ ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು" ಎಂದು ಚಿನ್ಮಯಿ ಸಲಹೆ ನೀಡಿದ್ದಾರೆ.

Chinmayi-Sripaada-Savage-reply-netizen

ಇದೇ ಮೊದಲಲ್ಲ. ಗಾಯಕಿ ಚಿನ್ಮಯಿಗೆ ಇದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕೆಟ್ಟಗಾಗಿ ಮೆಸೇಜ್‌ ಬರುತ್ತದೆ. ಆಕೆಯ ಪೋಸ್ಟ್‌ಗಳಿಗೆ ಕಾಮೆಂಟ್‌ ಬಾಕ್ಸ್‌ನಲ್ಲೂ ಇದೇ ರೀತಿ ಕೆಟ್ಟದಾಗಿ ಕಾಮೆಂಟ್ ಮಾಡ್ತಾರೆ. ಆದರೆ ಆಕೆ ಯಾವತ್ತು ಇದಕ್ಕೆ ಹೆದರುವುದಿಲ್ಲ. ಎಷ್ಟು ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೋ ಅಷ್ಟೇ ಘಾಟಾಗಿ ರಿಪ್ಲೇ ಮಾಡ್ತಾರೆ. ಜೊತೆಗೆ ಆ ಮೆಸೇಜ್ ಹಾಗೂ ತಮ್ಮ ಕಾಮೆಂಟ್‌ ಸ್ಕ್ರೀನ್‌ಶಾಟ್ ತೆಗೆದು ಇನ್‌ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡುತ್ತಾರೆ.

ಗಾಯಕಿ ಚಿನ್ಮಯಿ ಶ್ರೀಪಾದ ತೆಲುಗು ಹಾಗೂ ತಮಿಳಿನಲ್ಲೇ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಹಿಂದಿ, ಮಲಯಾಳಂ ಭಾಷೆಗಳ ಹಾಡುಗಳಿಗೂ ದನಿಯಾಗಿದ್ದಾರೆ. ಕನ್ನಡದ ಹಲವು ಹಾಡುಗಳನ್ನು ಹಾಡಿದ್ದು ಎರಡು ಹಾಡು ಹಿಟ್ ಲಿಸ್ಟ್ ಸೇರಿದೆ. 'ನಿನ್ನಿಂದಲೇ' ಚಿತ್ರದ 'ನಿಂತೆ ನಿಂತೆ ಕಾಯುತ್ತಾ ಒಂಟಿ ಕಾಲಲ್ಲಿ' ಹಾಗೂ 'ದಿಯಾ' ಚಿತ್ರದ 'ಸೋಲ್ ಆಫ್ ದಿಯಾ' ಹಾಡನ್ನು ಮರೆಯೋಕೆ ಸಾಧ್ಯವಿಲ್ಲ.

ಚಿನ್ಮಯಿ ತಮಿಳು ಕಿರುತೆರೆಯ ಗಾಯನ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಬಳಿಕ ಎ. ಆರ್ ರೆಹಮಾನ್ ಸಂಗೀತದಲ್ಲಿ ಹಾಡುವ ಅವಕಾಶ ಸಿಕ್ಕಿತ್ತು. ಅಲ್ಲಿಂದ ಮುಂದೆ ಹಿಂತಿರುಗಿ ನೋಡಲೇಯಿಲ್ಲ. ಸಾಲು ಸಾಲು ಅವಕಾಶಗಳು ಅರಸಿ ಬಂತು. ಗಾಯನಕ್ಕಾಗಿ ಸಾಕಷ್ಟು ಪ್ರಶಸ್ತಿಗಳು ಸಿಕ್ಕಿವೆ. ಭೂಮಿಕಾ ಚಾವ್ಲಾ, ವೇದಿಕಾ, ತಮನ್ನಾ, ತ್ರಿಶಾ, ನಯನತಾರಾ, ಪ್ರಿಯಾಂಕ ಚೋಪ್ರಾ ಸೇರಿದಂತೆ ಸಾಕಷ್ಟು ನಟಿಯರಿಗೆ ಡಬ್ ಮಾಡಿ ಗೆದ್ದಿದ್ದಾರೆ.

More from Filmibeat

English summary
Chinmayi Sripaada's Savage reply to netizen who sent bad message
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X