For Quick Alerts
  ALLOW NOTIFICATIONS  
  For Daily Alerts

  ಚಿರು 152: ಶೂಟಿಂಗ್ ದಿನವೇ ಬಿಡುಗಡೆ ದಿನಾಂಕ ಬಹಿರಂಗ!

  |

  ಸೈರಾ ನರಸಿಂಹ ರೆಡ್ಡಿ ಸಿನಿಮಾದ ಯಶಸ್ಸಿನ ಬಳಿಕ ಮೆಗಾಸ್ಟಾರ್ ಚಿರಂಜೀವಿ 152ನೇ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಕೊರಟಲಾ ಶಿವ ನಿರ್ದೇಶನದಲ್ಲಿ ಚಿರು ನಟಿಸುತ್ತಿದ್ದು, ಇಂದಿನಿಂದ ಚಿತ್ರೀಕರಣ ಆರಂಭವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

  ಹೈದರಾಬಾದ್ ನಲ್ಲಿ ಚಿರಂಜೀವಿ ಹೊಸ ಸಿನಿಮಾ ಶೂಟಿಂಗ್ ಆರಂಭಿಸಿದ್ದು, ಬಿಡುಗಡೆ ದಿನಾಂಕ ಕೂಡ ಬಹಿರಂಗವಾಗಿದೆ. ಈ ವರ್ಷದ ನಿರೀಕ್ಷೆಯ ಸಿನಿಮಾ ಇದಾಗಿದ್ದು, ಆಗಸ್ಟ್ 14 ರಂದು ತೆರೆಗೆ ಬರಲು ಪ್ಲಾನ್ ಮಾಡಿದ್ದಾರಂತೆ.

  ಟಿ.ಆರ್.ಪಿ ಎಂಬ ಮಹಾ ಯುದ್ಧದಲ್ಲಿ ಗೆದ್ದದ್ದು ಚಿರಂಜೀವಿ, ಸೋತದ್ದು ಪ್ರಭಾಸ್.!ಟಿ.ಆರ್.ಪಿ ಎಂಬ ಮಹಾ ಯುದ್ಧದಲ್ಲಿ ಗೆದ್ದದ್ದು ಚಿರಂಜೀವಿ, ಸೋತದ್ದು ಪ್ರಭಾಸ್.!

  ಚಿರು 152 ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ನಲ್ಲಿದ್ದು, ಈ ಚಿತ್ರದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಹೆಚ್ಚು ಆಸಕ್ತಿ ತೋರಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಪ್ರಾರಂಭಿಸಿರುವ ಚಿತ್ರತಂಡ ಸುಮಾರು 20 ದಿನದವರೆಗೂ ಶೆಡ್ಯೂಲ್ ಹಾಕಿದ್ದಾರಂತೆ.


  ಮೂಲಗಳ ಪ್ರಕಾರ, ಬಹುಭಾಷ ನಟಿ ತ್ರಿಷಾ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ರೆಜಿನಾ ಕೂಡ ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದು, ಹಾಡೊಂದರಲ್ಲಿ ಹೆಜ್ಜೆ ಹಾಕಲಿದ್ದಾರಂತೆ.

  ಚಿರಂಜೀವಿ ಅಭಿಮಾನಿ ಸಾವು: ಕುಟುಂಬದ ಸಹಾಯಕ್ಕೆ ನಿಂತ ರಾಮ್ ಚರಣ್ಚಿರಂಜೀವಿ ಅಭಿಮಾನಿ ಸಾವು: ಕುಟುಂಬದ ಸಹಾಯಕ್ಕೆ ನಿಂತ ರಾಮ್ ಚರಣ್

  ಇದೇ ಮೊದಲ ಬಾರಿಗೆ ಕೊರಟಲಾ ಶಿವ ನಿರ್ದೇಶನದ ಸಿನಿಮಾದಲ್ಲಿ ಚಿರಂಜೀವಿ ನಟಿಸುತ್ತಿದ್ದು, ಕುತೂಹಲ ಹೆಚ್ಚಿದೆ. ಸದ್ಯಕ್ಕೆ ಇದು ಮಾಸ್ ಎಂಟರ್ ಟೈನ್ಮೆಂಟ್ ಸಿನಿಮಾ ಎಂದು ಹೇಳಲಾಗುತ್ತಿದೆ.

  ರಾಮ್ ಚರಣ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

  English summary
  Telugu Megastar Chiranjeevi Starrer 152nd movie has started shooting today at hyderabad. and release date also announced.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X