ಸ್ಟಾರ್ ನಿರ್ದೇಶಕನ ಜೊತೆ 154ನೇ ಚಿತ್ರ ಘೋಷಿಸಿದ ಮೆಗಾಸ್ಟಾರ್ ಚಿರಂಜೀವಿ

ತೆಲುಗು ಮೆಗಾಸ್ಟಾರ್ ಚಿರಂಜೀವಿ ಸದ್ಯ ಆಚಾರ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಮ್ ಚರಣ್ ನಿರ್ಮಾಣ ಮಾಡುತ್ತಿರುವ ಆಚಾರ್ಯ ಚಿತ್ರಕ್ಕೆ ಕೊರಟಲಾ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಆಗಿದ್ದು, ಭರ್ಜರಿ ಎಂಟರ್‌ಟೈನ್‌ಮೆಂಟ್ ನೀಡಲಿದೆ ಎಂಬ ಸುಳಿವು ಸಿಕ್ಕಿದೆ.

ಆಚಾರ್ಯ ಮುಗಿಯುತ್ತಿದ್ದಂತೆ ಮಲಯಾಳಂ ಹಿಟ್ ಚಿತ್ರ ಲೂಸಿಫರ್ ರೀಮೇಕ್‌ನಲ್ಲಿ ಮೆಗಾಸ್ಟಾರ್ ಕೈಗೆತ್ತಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಸಾಹೋ ಖ್ಯಾತಿಯ ಸುಜಿತ್ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಯಿತು. ಬಳಿಕ, ಸುಜಿತ್ ಜಾಗಕ್ಕೆ ಮೋಹನ್ ರಾಜಾ ಎಂಟ್ರಿಯಾದರು.

ಈಗ ಚಿರು ನಟಿಸಲಿರುವ 154ನೇ ಚಿತ್ರ ಘೋಷಣೆಯಾಗಿದೆ. ಉಪ್ಪೇನಾ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಚಿರಂಜೀವಿ ತಮ್ಮ 154ನೇ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಜೊತೆ ಮಾಡಲಿದ್ದೇನೆ ಎಂದು ಪ್ರಕಟಿಸಿದ್ದಾರೆ.

Chiranjeevi 154th Movie Announced in Uppena Pre Release Event

ಈ ಚಿತ್ರಕ್ಕೆ ಕೆಎಸ್ ರವೀಂದ್ರ (ಬಾಬಿ) ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಚಿರು ಹೇಳಿದರು. ಪವರ್, ಸರ್ದಾರ್ ಗಬ್ಬರ್ ಸಿಂಗ್, ಜೈ ಲವಕುಶ, ವೆಂಕಿ ಮಾಮ ಅಂತಹ ಹಿಟ್ ಚಿತ್ರಗಳನ್ನು ನೀಡಿರುವ ಬಾಬಿ ಜೊತೆ ಚಿರು ಮುಂದಿನ ಸಿನಿಮಾ ಕೈಗೆತ್ತಿಕೊಳ್ಳುತ್ತಿರುವುದು ಮೆಗಾ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದೆ.

ಆಚಾರ್ಯ ಚಿತ್ರದ ವಿಚಾರಕ್ಕೆ ವಾಪಸ್ ಬರುವುದಾದರೆ ಮೇ 13, 2021ಕ್ಕೆ ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ. ಕಾಜಲ್ ಅಗರ್‌ವಾಲ್ ನಾಯಕಿಯಾಗಿ ನಟಿಸಿದ್ದು, ರಾಮ್ ಚರಣ್ ತೇಜ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Megastar Chiranjeevi 154th Movie Announced in Uppena Pre Release Event. megastar will be seen in KS Ravindra movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X