ಮಲಯಾಳಂನ ಸೂಪರ್ ಹಿಟ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ ಚಿರಂಜೀವಿ-ಅಲ್ಲು ಅರ್ಜುನ್
ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಲೂಸಿಫರ್ ಸಿನಿಮಾ ಮಲಯಾಳಂನಲ್ಲಿ ದಾಖಲೆ ನಿರ್ಮಿಸಿತ್ತು. ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದ ಲೂಸಿಫರ್ ಚಿತ್ರದಲ್ಲಿ ಖ್ಯಾತ ನಟ ಮೋಹನ್ ಲಾಲ್ ನಾಯಕನಾಗಿ ಕಾಣಿಸಿಕೊಂಡಿದ್ದರು.
ಮಲಯಾಳಂ ಸಿನಿಮಾರಂಗದಲ್ಲಿ ಹೊಸ ದಾಖಲೆ ಬರೆದ ಲೂಸಿಫರ್ ಈಗ ತೆಲುಗು ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗುತ್ತಿದೆ. ಹೌದು, ಲೂಸಿಫರ್ ಸಿನಿಮಾ ತೆಲುಗುಗೆ ರಿಮೇಕ್ ಆಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅಲ್ಲದೆ ತೆಲುಗು ಲೂಸಿಫರ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಮತ್ತು ಅಲ್ಲು ಅರ್ಜುನ್ ಕಾಣಿಸಿಕೊಳ್ಳುತ್ತಿದ್ದಾರಂತೆ. ಮುಂದೆ ಓದಿ..

ಲೂಸಿಫರ್ ರಿಮೇಕ್ ನಲ್ಲಿ ಚಿರಂಜೀವಿ
ಮಲಯಲಾಳಂ ಸ್ಟಾರ್ ನಟ ಮೋಹನ್ ಲಾಲ್ ಅಭಿನಯಿಸಿದ್ದ ಲೂಸಿಫರ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ ಚಿರಂಜೀವಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಈ ಬಗ್ಗೆ ಮಾತುಕತೆ ನಡೆದಿದ್ದು, ನಿರ್ದೇಶಕ ಕೂಡ ಫಿಕ್ಸ್ ಆಗಿದ್ದಾರೆ. ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ ಆದರೆ ಈಗಾಗಲೆ ಪ್ರಿಪ್ರೊಡಕ್ಷನ್ ಕೆಲಸ ನಡೆಯುತ್ತಿದೆಯಂತೆ.

ರಿಮೇಕ್ ರೈಟ್ಸ್ ಪಡೆದಿರುವ ಕೊನಿಡೆಲಾ ಸಂಸ್ಥೆ
ಮಲಯಾಳಂ ಲೂಸಿಫರ್ ಸಿನಿಮಾದ ರಿಮೇಕ್ ರೈಟ್ಸ್ ಅನ್ನು ಈಗಾಗಲೆ ಚಿರಂಜೀವಿ ಅವರ ಕೊನಿಡೆಲಾ ನಿರ್ಮಾಣ ಸಂಸ್ಥೆ ಕೊಂಡುಕೊಂಡಿದೆಯಂತೆ. ಕೊನೆಡೆಲಾ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸದ್ಯ ತಯಾರಾಗುತ್ತಿರುವ ಆಚಾರ್ಯ ಸಿನಿಮಾ ಕೂಡ ಕೊನೆಡೆಲಾ ಬ್ಯಾನರ್ ನಲ್ಲಿ ಮೂಡಿ ಬರುತ್ತಿದೆ.

ಸಾಹೋ ನಿರ್ದೇಶಕನ ಸಾರಥ್ಯದರಲ್ಲಿ ಲೂಸಿಫರ್ ತೆಲುಗಿನಲ್ಲಿ
ಲೂಸಿಫರ್ ತೆಲುಗು ರಿಮೇಕ್ ಗೆ ಸಾಹೋ ಖ್ಯಾತಿಯ ನಿರ್ದೇಶಕ ಸುಜಿತ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೊದಲು ನಿರ್ದೇಶಕ ಸುಕುಮಾರ್ ಸಾರಥ್ಯದಲ್ಲಿ ಲೂಸಿಫರ್ ಸಿನಿಮಾ ಮೂಡಿ ಬರಲಿದೆ ಎಂದು ಹೇಳಲಾಗುತ್ತಿತ್ತು. ಆದರೀಗ ಸುಜಿತ್ ನಿರ್ದೇಶನ ಮಾಡಲಿದ್ದಾರಂತೆ. ಈಗಾಗಲೆ ಸುಜಿತ್ ಪ್ರಿ-ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದ್ದಾರಂತೆ.

ಚಿರಂಜೀವಿ ಲೂಸಿಫರ್ ನಲ್ಲಿ ಅಲ್ಲು ಅರ್ಜುನ್
ಲೂಸಿಫರ್ ತೆಲುಗು ರಿಮೇಕ್ ನಲ್ಲಿ ಚಿರಂಜೀವಿ ಜೊತೆ ಅಲ್ಲು ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಲಯಾಳಂನಲ್ಲಿ ನಟ ಪೃಥ್ವಿರಾಜ್ ನಿಭಾಯಿಸಿದ್ದ ಪಾತ್ರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಳ್ಳುತ್ತಿದ್ದಾರಂತೆ. ನಟ ಪೃಥ್ವಿರಾಜ್ ನಿರ್ದೇಶನದ ಜೊತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದೆ ಪಾತ್ರದಲ್ಲಿ ಅಲ್ಲು ಬಣ್ಣಹಚ್ಚಲಿದ್ದಾರೆ.

ಬರ್ತಿದೆ ಲೂಸಿಫರ್ ಎರಡನೆ ಆವೃತ್ತಿ
ಲೂಸಿಫರ್ ಎರಡನೇ ಆವೃತ್ತಿಗೆ 'ಎಂಪುರಾನ್' ಎಂದು ಹೆಸರಿಡಲಾಗಿದೆ. ಸ್ಟೀಫನ್ ನೆಡುಂಪಿಳ್ಳಿ ಅಲಿಯಾಸ್ ಖುರೇಶಿ ಅಬ್ರಾಮ್ ಆಗಿ ಮೋಹನ್ ಲಾಲ್ ಮತ್ತೆ ಮೋಡಿ ಮಾಡಲು ಸಿದ್ಧರಾಗುತ್ತಿದ್ದಾರೆ. ಲೂಸಿಫರ್ ನಲ್ಲಿ ಜಾಯೇದ್ ಮಸೂದ್ ಹೆಸರಿನ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪೃಥ್ವಿರಾಜ್, ಎರಡನೇ ಆವೃತ್ತಿಯಲ್ಲಿ ಹೆಚ್ಚು ಹೊತ್ತು ಪರದೆ ಮೇಲೆ ಕಾಣಿಸಿಕೊಂಡು ರಂಜಿಸಲಿದ್ದಾರಂತೆ.


Click it and Unblock the Notifications











