ಚಿರಂಜೀವಿ ಸಹಿತ ಕುಟುಂಬದ ಮೇಲೆ ಜೇನುನೊಣಗಳ ದಾಳಿ: ನಡೆದಿದ್ದೇನು?

ಮೆಗಾಸ್ಟಾರ್ ಚಿರಂಜೀವಿ ಸಹಿತ ಕುಟುಂಬ ಸದಸ್ಯರ ಮೇಲೆ ಜೇನುನೊಣಗಳು ದಾಳಿ ಮಾಡಿವೆ. ಚಿರಂಜೀವಿ ಕುಟುಂಬ ಆಪ್ತರೊಬ್ಬರ ಅಂತಿಮ ಕ್ರಿಯೆಯಲ್ಲಿ ಪಾಲ್ಗೊಂಡಿದ್ದಾಗ ಈ ಘಟನೆ ನಡೆದಿದೆ.

Recommended Video

ನನ್ನ ತಂದೆಯ ಬಗ್ಗೆ ಏನಾದರು ಪೋಸ್ಟ್‌ ಹಾಕ್ತಿನಿ ನಿಮಗೇನು ಅಂದ ಡಾನ್ ಜಯರಾಜ್ ಮಗ | Ajith Jayaraj

ವಿವಾದಾತ್ಮಕ ದೋಮಕೊಂಡ ಕೋಟೆಯ ವಾರಸರು ಎನ್ನಲಾಗುವ ಉಮಾಪತಿ ರಾವ್ ಅವರು ನಾಲ್ಕು ದಿನದ ನಿಧನಹೊಂದಿದ್ದರು, ಅವರ ಅಂತ್ಯಕ್ರಿಯೆಯಲ್ಲಿ ಮೆಗಾಸ್ಟಾರ್ ಕುಟುಂಬ ಸಹ ಭಾಗವಹಿಸಿತ್ತು. ಆಗ ಈ ಘಟನೆ ನಡೆದಿದೆ.

ವಿವಾದಾತ್ಮಕ ದೋಮಕೊಂಡ ಕೋಟೆಯಲ್ಲಿ ಮೃತರ ಅಂತ್ಯಸಂಸ್ಕಾರ ಆಯೋಜಿಸಲಾಗಿತ್ತು. ಆಗ ಏಕಾ-ಏಕಿ ಜೇನುನೊಣಗಳ ಹಿಂಡು ಅಲ್ಲಿದ್ದವರ ಮೇಲೆ ದಾಳಿ ಮಾಡಿದೆ. ಆ ಸಂದರ್ಭದಲ್ಲಿ ಚಿರಂಜೀವಿ ಮತ್ತು ಕೆಲವು ಕುಟುಂಬಸ್ಥರು ಸೇರಿ ಹಲವು ಪ್ರಮುಖರು ಅಲ್ಲಿ ಹಾಜರಿದ್ದರು.

ಗದ್ದಲ, ಹೊಗೆಗೆ ಜೇನುನೊಣಗಳು ಕ್ರೋಧಗೊಂಡವು

ಗದ್ದಲ, ಹೊಗೆಗೆ ಜೇನುನೊಣಗಳು ಕ್ರೋಧಗೊಂಡವು

ದೋಮಕೊಂಡ ಹಳೆಯ ಕೋಟೆಯಾಗಿದ್ದು ಅಲ್ಲಿ ಸಾಕಷ್ಟು ಜೇನುನೊಣಗಳು ಗೂಡು ಕಟ್ಟಿದ್ದವು. ಅಂತ್ಯಕ್ರಿಯೆ ನಡೆವ ವೇಳೆ ಅಲ್ಲಿನ ಗದ್ದಲ, ಹೊಗೆ ಇನ್ನಿತರೆಗಳಿಂದ ಕ್ರೋಧಗೊಂಡು ಜೇನುನೊಣಗಳು ಅಲ್ಲಿದ್ದ ಗುಂಪಿನ ಮೇಲೆ ದಾಳಿ ನಡೆಸಿವೆ.

ಕೆಲವು ಜೇನುನೊಣ ಕಚ್ಚಿವೆ

ಕೆಲವು ಜೇನುನೊಣ ಕಚ್ಚಿವೆ

ಚಿರಂಜೀವಿ, ರಾಮ್‌ಚರಣ ತೇಜ, ಉಪಾಸನಾ ಸೇರಿ ಇನ್ನೂ ಕೆಲವು ಚಿರಂಜೀವಿ ಕುಟುಂಬ ಸದಸ್ಯರನ್ನು ಭದ್ರತಾ ಸಿಬ್ಬಂದಿ ಅಲ್ಲಿಯೇ ಇದ್ದ ಕೋಣೆಗೆ ಕೊಂಡೊಯ್ದರು. ಆದರೆ ರಾಮ್‌ಚರಣ್ ಹಾಗೂ ಉಪಾಸನಾ ಗೆ ಕೆಲವು ಜೇನುನೊಣಗಳು ಕಚ್ಚಿವೆ ಎನ್ನಲಾಗಿದೆ. ಕೆಲವು ಗ್ರಾಮಸ್ಥರಿಗೂ ಜೇನುನೊಣಗಳು ಕಚ್ಚಿವೆಯಂತೆ. ಯಾರಿಗೂ ಹೆಚ್ಚಿನ ಸಮಸ್ಯೆ ಆಗಿಲ್ಲ.

ತೆಲುಗು ರಾಜ್ಯಗಳ ವಿಐಪಿಗಳಲ್ಲಿ ಒಬ್ಬರು

ತೆಲುಗು ರಾಜ್ಯಗಳ ವಿಐಪಿಗಳಲ್ಲಿ ಒಬ್ಬರು

ನಿಧನರಾಗಿರುವ ಉಮಾಪತಿ ರಾವ್ ಅವರು ಚಿರಂಜೀವಿ ಸೊಸೆ, ರಾಮ್‌ಚರಣ್ ಪತ್ನಿ ಉಪಾಸನಾ ಅವರ ತಾತ. ಉಮಾಪತಿ ರಾವ್ ಆಂಧ್ರದ ವಿಐಪಿಗಳಲ್ಲಿ ಒಬ್ಬರು. ಅವರು ಮಾಜಿ ಐಎಎಸ್ ಅಧಿಕಾರಿ ಸಹ ಆಗಿದ್ದರು. ವಿವಾದದ ಕೇಂದ್ರಬಿಂದು ಆಗಿರುವ ದೋಮಕೊಂಡ ಕೋಟೆಯ ವಾರಸರು ಸಹ ಆಗಿದ್ದರು.

ಉರ್ದು ಕವಿ ಸಹ ಆಗಿದ್ದರು

ಉರ್ದು ಕವಿ ಸಹ ಆಗಿದ್ದರು

ಉಪಾಸನಾ ತನ್ನ ತಾತನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ತಾತ ಮಾಜಿ ಐಎಎಸ್ ಅಧಿಕಾರಿ. ಶಿಸ್ತು, ಸಂಯಮ, ಮಾನವೀಯತೆ, ನಿಸ್ವಾರ್ಥತೆಯನ್ನು ಉಸಿರಾಗಿಸಿಕೊಂಡಿದ್ದರು. ಅವರು ತಿರುಮಲ ತಿರುಪತಿ ದೇವಸ್ಥಾನದ ಮೊದಲ ಆಡಳಿತಾಧಿಕಾರಿ ಸಹ ಆಗಿದ್ದರು. ಜೊತೆಗೆ ಅವರೊಬ್ಬ ಅದ್ಭುತ ಉರ್ದು ಕವಿ ಸಹ, ಅವರ ಶಾಯರಿಗಳು ಬಹಳ ಪ್ರಖ್ಯಾತವಾಗಿದ್ದವು ಎಂದಿದ್ದಾರೆ.

More from Filmibeat

English summary
Chiranjeevi Ram Charan and Upasana attacked by honeybee in Domakonda while attending a funeral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X