ಕೋಟ್ಯಂತರ ಹಣ ನಷ್ಟವಾಗುವ ಭೀತಿಯಲ್ಲಿ ಚಿರಂಜೀವಿ ಮತ್ತು ಪುತ್ರ

ಸಿನಿಮಾ ನಟನೆ, ನಿರ್ಮಾಣದಿಂದ ಕೋಟಿ-ಕೋಟಿ ಗಳಿಸಿರುವ ಚಿರಂಜೀವಿ ಮತ್ತು ಪುತ್ರ ರಾಮ್‌ಚರಣ್ ತೇಜಾ ಗೆ ಹಣ ಕಳೆದುಕೊಳ್ಳುವ ಭಯ ಆತಂಕ ಎದುರಾಗಿದೆ.

ಹಣ ಕಳೆದುಕೊಳ್ಳುವ ಆತಂಕವೆಂದೊಡನೆ, ಗಳಿಸಿದ್ದೆಲ್ಲವನ್ನೂ ಕಳೆದುಕೊಳ್ಳುತ್ತಾರೆಯೇ ಎಂದುಕೊಳ್ಳಬೇಕಿಲ್ಲ. ಆದರೆ ಪ್ರಸ್ತುತ ಕೊರೊನಾ ಸನ್ನಿವೇಶದಿಂದ ಸಾಕಷ್ಟು ದೊಡ್ಡ ಮಟ್ಟದ ಆರ್ಥಿಕ ಹಾನಿಯೇ ಚಿರಂಜೀವಿ ಮತ್ತು ರಾಮ್‌ ಚರಣ್ ತೇಜಾ ಗೆ ಆಗಲಿದೆ.

ಚಿರಂಜೀವಿ ಅಭಿನಯಿಸುತ್ತಿರುವ 'ಆಚಾರ್ಯ' ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದುದು ಬಹುತೇಕರಿಗೆ ಗೊತ್ತೇ ಇದೆ. ಇದರ ನಿರ್ಮಾಪಕ ಚಿರಂಜೀವಿ ಪುತ್ರ ರಾಮ್‌ ಚರಣ್ ತೇಜಾ. ಕೊರೊನಾ ಮತ್ತು ಇತರೆ ಕಾರಣಗಳಿಂದಾಗಿ ನಿರ್ಮಾಪಕ ರಾಮ್‌ ಚರಣ್‌ ತೇಜಾ ಗೆ ಭಾರಿ ದೊಡ್ಡ ನಷ್ಟ ಎದುರಾಗಲಿದೆ.

ಆಚಾರ್ಯ ಕ್ಕಾಗಿ ದೊಡ್ಡ ಸೆಟ್ ಹಾಕಲಾಗಿತ್ತು

ಆಚಾರ್ಯ ಕ್ಕಾಗಿ ದೊಡ್ಡ ಸೆಟ್ ಹಾಕಲಾಗಿತ್ತು

ಆಚಾರ್ಯ ಸಿನಿಮಾಕ್ಕಾಗಿ ಹೈದರಾಬಾದ್ ಸಮೀಪವೇ ಬಹಳಾ ದೊಡ್ಡ ಸೆಟ್‌ ಒಂದನ್ನು ನಿರ್ಮಿಸಲಾಗಿದೆ. ಅದರಲ್ಲಿಯೇ ಬಹುತೇಕ ಚಿತ್ರೀಕರಣ ನಡೆಯುತ್ತಿತ್ತು. ಆದರೆ ಲಾಕ್‌ಡೌನ್ ಆದ ಕಾರಣ ಚಿತ್ರೀಕರಣ ಸ್ಥಗಿತಗೊಂಡಿತು.

ಸೆಟ್ ಅನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು

ಸೆಟ್ ಅನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು

ಲಾಕ್‌ಡೌನ್ ಮುಗಿದ ನಂತರ ಚಿತ್ರೀಕರಣ ಮಾಡಲೆಂದು ಸೆಟ್‌ ಅನ್ನು ಕೆಡವದೆ ಹಾಗೆಯೇ ಉಳಿಸಿಕೊಳ್ಳಲಾಗಿತ್ತು. ಆದರೆ ಲಾಕ್‌ಡೌನ್ ವಿಸ್ತರಣೆ ಆಗುತ್ತಲೇ ಹೋಗಿದ್ದರಿಂದ ಈಗ ಆತಂಕ ತಲೆಎತ್ತಿದೆ. ಆತಂಕ್ಕೆ ಮುಖ್ಯ ಕಾರಣ ಹವಾಮಾನ.

ತೆಲಂಗಾಣ ಆಂಧ್ರಗಳಲ್ಲಿ ಮಳೆ ನಿರೀಕ್ಷಿಸಲಾಗಿದೆ

ತೆಲಂಗಾಣ ಆಂಧ್ರಗಳಲ್ಲಿ ಮಳೆ ನಿರೀಕ್ಷಿಸಲಾಗಿದೆ

ತೆಲಂಗಾಣ, ಆಂಧ್ರಗಳಲ್ಲಿ ಜುಲೈ ಮೊದಲ ವಾರದಿಂದ ಭಾರಿ ಮಳೆ ನಿರೀಕ್ಷಿಸಲಾಗಿದೆ. ಹವಾಮಾನ ಇಲಾಖೆ ಅಂದತೆಯೇ ಆದರೆ ಈ ಎರಡೂ ರಾಜ್ಯಗಳಲ್ಲಿ ಈ ವಾರದಲ್ಲಿಯೇ ಮಳೆಯಾಗುತ್ತದೆ. ಹಾಗೊಮ್ಮೆ ಮಳೆ ಆದರೆ ಆಚಾರ್ಯ ಸೆಟ್‌ ಗೆ ಭಾರಿ ಹಾನಿ ಆಗಲಿದೆ.

ಮಳೆ ನಿರೋಧಿಸಬಲ್ಲ ಸೆಟ್ ಅಲ್ಲ

ಮಳೆ ನಿರೋಧಿಸಬಲ್ಲ ಸೆಟ್ ಅಲ್ಲ

ಆಚಾರ್ಯ ಕ್ಕಾಗಿ ನಿರ್ಮಿಸಿರುವುದು ಮಳೆ ನಿರೋಧಕ ಸೆಟ್ ಅಲ್ಲ. ಹಾಗಾಗಿ ಮಳೆ-ಗಾಳಿಯ ಹೊಡೆತಕ್ಕೆ ಆ ದೊಡ್ಡ ಸೆಟ್‌ ತಡೆಯಲಾರದು. ಹಾಗಾಗಿ ಸುಮಾರು ಕೋಟಿಗಳಷ್ಟು ನಿರ್ಮಾಪಕರಿಗೆ ಆ ಮೂಲಕ ಚಿರಂಜೀವಿ ಅವರಿಗೂ ನಷ್ಟವಾಗಲಿದೆ.

More from Filmibeat

English summary
Megastar Chiranjeevi and his son Ram Charan Teja may see crores of loss in this coronavirus situation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X