ಚಿರಂಜೀವಿ-ಮಹೇಶ್ ಬಾಬು ಮೆಗಾ ಸಿನಿಮಾ: ಧೂಳೆಬ್ಬಿಸಲಿದೆ ಪ್ರಾಜೆಕ್ಟ್!
ಚಿರಂಜೀವಿ ಮತ್ತು ಮಹೇಶ್ ಬಾಬು ಒಟ್ಟಿಗೆ ಸಿನಿಮಾ ಮಾಡಿದ್ರೆ ಹೇಗೆ? ಎಂಬ ಟಾಕ್ ಅನೇಕರಲ್ಲಿ ಮೂಡಿರಬಹುದು. ಇದೀಗ, ಈ ಆಸೆ ನೆರವೇರುವ ಎಲ್ಲ ತಯಾರಿ ನಡೆದಿದೆ ಎಂಬುದು ಸಂಚಲನ ಸೃಷ್ಟಿಸಿದೆ.
ಮೆಗಾಸ್ಟಾರ್ ಜೊತೆ ಮಹೇಶ್ ಬಾಬು ತೆರೆ ಹಂಚಿಕೊಳ್ಳಲಿದ್ದಾರೆ. ಈ ಚಿತ್ರವನ್ನು ತೆಲುಗಿನ ಸ್ಟಾರ್ ನಿರ್ದೇಶಕ ಮಾಡಲಿದ್ದಾರೆ. ಈ ಸುದ್ದಿ ಕೇಳಿ ಸೌತ್ ಇಂಡಸ್ಟ್ರಿ ದಾಖಲೆಗಳು ಧೂಳಿಪಟ ಆಗೋದು ಪಕ್ಕಾ ಎನ್ನುತ್ತಿದೆ. ಅಷ್ಟಕ್ಕೂ, ಯಾವುದು ಆ ಚಿತ್ರ? ಮುಂದೆ ಓದಿ...

ಶ್ರೀನು ವೈಟ್ಲು ಚಿತ್ರದಲ್ಲಿ ಚಿರು-ಪ್ರಿನ್ಸ್
ಮಹೇಶ್ ಬಾಬು ಜೊತೆ ದೂಕುಡು ಸಿನಿಮಾ ಮಾಡಿದ್ದ ನಿರ್ದೇಶ ಕಶ್ರೀನು ವೈಟ್ಲು 'ದೂಕುಡು 2' ಮಾಡಲು ಪ್ಲಾನ್ ಮಾಡಿದ್ದರು. ಆದರೆ, ಮಹೇಶ್ ಬಾಬು ಸ್ವಲ್ಪ ಸಮಯ ತಗೊಂಡು ಮಾಡೋಣ ಎಂದು ಸುಮ್ಮನಿದ್ದರು. ಇದೀಗ, ಶ್ರೀನು ವೈಟ್ಲು ಭರ್ಜರಿ ಪ್ಲಾನ್ ಮಾಡಿದ್ದು ಮಹೇಶ್ ಬಾಬು ಜೊತೆ ಚಿರಂಜೀವಿಯನ್ನು ತೆರೆಮೇಲೆ ತರ್ತಿದ್ದಾರೆ.

ಕಥೆ ಕೇಳಿ ಒಪ್ಪಿದ್ದಾರೆ
ಶ್ರೀನು ವೈಟ್ಲಾ ಮಾಡಿರುವ ಕಥೆಯಲ್ಲಿ ಇಬ್ಬರು ನಾಯಕರಿಗೂ ಪ್ರಾಮುಖ್ಯತೆ ಇದೆ. ಹಾಗಾಗಿ, ಚಿರು ಮತ್ತು ಮಹೇಶ್ ಬಾಬು ಇದ್ದರೆ ಉತ್ತಮ ಎಂದು ನಿರ್ಧರಿಸಿ ಇಬ್ಬರಿಗೂ ಕಥೆ ವಿವರಿಸಿದ್ದಾರಂತೆ. ಇಬ್ಬರು ಕಥೆ ಕೇಳಿ ಇಷ್ಟಪಟ್ಟು ಒಪ್ಪಿಗೆ ಕೂಡ ಸೂಚಿಸಿದ್ದಾರೆ ಎನ್ನಲಾಗಿದೆ.

ಚಿರು 152 ಚಿತ್ರದಲ್ಲೂ ಮಹೇಶ್!
ಈ ಕಡೆ ಚಿರಂಜೀವಿ ಮತ್ತು ಕೊರಟಲಾ ಶಿವ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 152ನೇ ಚಿತ್ರವೂ ಭಾರಿ ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲೂ ಮಹೇಶ್ ಬಾಬು ಅತಿಥಿ ಪಾತ್ರ ನಿರ್ವಹಿಸಲಿದ್ದಾರಂತೆ. ಈ ವಿಷಯವನ್ನು ಖುದ್ದು ನಿರ್ದೇಶಕರೇ ಖಚಿತ ಪಡಿಸಿದ್ದಾರಂತೆ.

ರಾಮ್ ಚರಣ್ ಮಾಡಬೇಕಿದ್ದ ಪಾತ್ರ
ಈ ಮುಂಚೆ ನಿರ್ಧರಿಸಿದಂತೆ ಚಿರು 152ನೇ ಚಿತ್ರದಲ್ಲಿ ರಾಮ್ ಚರಣ್ ಪ್ರಮುಖ ಪಾತ್ರ ಮಾಡಬೇಕಿತ್ತು. ಸುಮಾರು 20 ನಿಮಿಷ ಈ ಪಾತ್ರ ಬರಲಿದ್ದು ಜೂನಿಯರ್ ಚಿರಂಜೀವಿ ಪಾತ್ರ ಎನ್ನಲಾಗಿತ್ತು. ಇದೀಗ, ಈ ಪಾತ್ರವನ್ನು ರಾಮ್ ಚರಣ್ ಮಾಡುತ್ತಿಲ್ಲ, ಬದಲಾಗಿ ಮಹೇಶ್ ಬಾಬು ಮಾಡಲಿದ್ದಾರೆ ಎನ್ನಲಾಯಿತು. ಆರ್ ಆರ್ ಆರ್ ಚಿತ್ರದಲ್ಲಿ ರಾಮ್ ಚರಣ್ ಬ್ಯುಸಿ ಇರುವ ಕಾರಣ, ಚಿರುಪುತ್ರನ ಜಾಗಕ್ಕೆ ಪ್ರಿನ್ಸ್ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ.


Click it and Unblock the Notifications











