For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ರಿಮೇಕ್ ಗಾಡ್‌ಫಾದರ್‌ಗೆ ಯು/ಎ ಸರ್ಟಿಫಿಕೇಟ್; ಚಿರು ಫ್ಯಾನ್ಸ್‌ಗೆ ದಸರಾ ಗಿಫ್ಟ್

  |

  ಸೈರಾ ನರಸಿಂಹ ರೆಡ್ಡಿ ಸಿನಿಮಾ ಬಿಡುಗಡೆಯಾಗಿ ಮೂರು ವರ್ಷಗಳ ಬಳಿಕ ಈ ವರ್ಷ ಬಿಡುಗಡೆಗೊಂಡ ಚಿರಂಜೀವಿ ಅಭಿನಯದ ಆಚಾರ್ಯ ದೊಡ್ಡ ಮಟ್ಟದ ಸೋಲನ್ನು ಅನುಭವಿಸಿತು. ಚಿರಂಜೀವಿ ಹಾಗೂ ರಾಮ್ ಚರಣ್ ಅಪ್ಪ ಮಗನ ಕಾಂಬಿನೇಷನ್ ಇದ್ದರೂ ಸಹ ಚಿತ್ರ ಮಕಾಡೆ ಮಲಗಿತ್ತು. ಇಬ್ಬರ ಸ್ಟಾರ್‌ಗಿರಿ ಕೂಡ ಚಿತ್ರವನ್ನು ಕಾಪಾಡಲು ಆಗಿರಲಿಲ್ಲ. ಹೀಗೆ ಈ ವರ್ಷ ಡಿಸಾಸ್ಟರ್ ಚಿತ್ರ ನೀಡಿರುವ ಚಿರಂಜೀವಿ ಇದೀಗ ಮಲಯಾಳಂನ ಲೂಸಿಫರ್ ಚಿತ್ರದ ರಿಮೇಕ್ ಆಗಿರುವ ಗಾಡ್ ಫಾದರ್ ಮೂಲಕ ಸಿದ್ಧರಾಗಿದ್ದಾರೆ.

  ಸದ್ಯ ಎರಡು ಮೂರು ಚಿತ್ರಗಳನ್ನು ಘೋಷಿಸಿರುವ ಚಿರಂಜೀವಿ ತನ್ನ ಬಾಕ್ಸ್ ಸ್ಟಾಮಿನಾವನ್ನು ಸಾಬೀತುಪಡಿಸಿಕೊಂಡು ಮುಂದಿನ ಚಿತ್ರಗಳ ನಿರೀಕ್ಷೆ ಹೆಚ್ಚಿಸಬೇಕೆಂದರೆ ಗಾಡ್‌ಫಾದರ್ ಕಡ್ಡಾಯವಾಗಿ ಹಿಟ್ ಆಗಲೇಬೇಕಿದೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಥಾರ್ ಮಾರ್ ಎಂಬ ಹಾಡೊಂದು ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿವೆ. ಸಿನಿಮಾ ವಿಜಯದಶಮಿಯ ಪ್ರಯುಕ್ತ ಅಕ್ಟೋಬರ್ 5ರಂದು ಬಿಡುಗಡೆಯಾಗಲಿದೆ.

  ಗಾಡ್ ಫಾದರ್ ಓಟಿಟಿ ಹಕ್ಕು ಮಾರಾಟ: ಮಹೇಶ್ ಬಾಬು ದಾಖಲೆ ಮುರಿದುಹಾಕಿದ ಚಿರಂಜೀವಿಗಾಡ್ ಫಾದರ್ ಓಟಿಟಿ ಹಕ್ಕು ಮಾರಾಟ: ಮಹೇಶ್ ಬಾಬು ದಾಖಲೆ ಮುರಿದುಹಾಕಿದ ಚಿರಂಜೀವಿ

  ಚಿತ್ರದ ಸೆನ್ಸಾರ್ ಇಂದು ( ಸೆಪ್ಟೆಂಬರ್ 23 ) ಸೆನ್ಸಾರ್ ಆಗಿದ್ದು, ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಮಲಯಾಳಂನ ಮೂಲ ಚಿತ್ರ ಲೂಸಿಫರ್‌ನಲ್ಲಿ ಮೋಹನ್ ಲಾಲ್ ನಿರ್ವಹಿಸಿದ್ದ ಪಾತ್ರದಲ್ಲಿ ಚಿರಂಜೀವಿ ಅಭಿನಯಿಸಿದ್ದರೆ, ಅಲ್ಲಿ ಪೃಥ್ವಿರಾಜ್ ಸುಕುಮಾರನ್ ನಿರ್ವಹಿಸಿದ್ದ ಪಾತ್ರವನ್ನು ಇಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ನಿರ್ವಹಿಸಿದ್ದಾರೆ ಹಾಗೂ ಮಂಜು ವಾರಿಯರ್ ಮಾಡಿದ್ದ ಪಾತ್ರಕ್ಕೆ ಇಲ್ಲಿ ನಯನತಾರಾ ಜೀವ ತುಂಬಿದ್ದಾರೆ ಹಾಗೂ ಎಸ್ ಥಮನ್ ಸಂಗೀತ ಚಿತ್ರಕ್ಕಿದೆ.

  ಚಿತ್ರದಲ್ಲಿ ಒಳ್ಳೆಯ ನಟ ನಟಿಯರಿದ್ದು, ಚಿತ್ರದ ಕತೆ ಚೆನ್ನಾಗಿರುವ ಕಾರಣ ಚಿತ್ರ ಹಿಟ್ ಲಿಸ್ಟ್ ಸೇರಬಹುದು ಎಂಬ ನಿರೀಕ್ಷೆ ಇದೆ. ಚಿರಂಜೀವಿ ವಯಸ್ಸಿಗೂ ಆಯ್ದುಕೊಂಡಿರುವ ಕತೆಗೂ ಹೊಂದಾಣಿಕೆಯಾಗಲಿದ್ದು ಜನರು ಚಿತ್ರವನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

  English summary
  Chiranjeevi and Salman Khan starrer Godfather censored with U/A certificate. Read on
  Saturday, September 24, 2022, 9:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X