For Quick Alerts
  ALLOW NOTIFICATIONS  
  For Daily Alerts

  ಆಡಿಕೊಂಡವರ ಬಾಯಿಗೆ ಬೀಗ ಜಡಿದ 'ಗಾಡ್‌ಫಾದರ್': ಕೊನೆಗೂ ಚಿರು ಸಕ್ಸಸ್.. ಬಾಸ್ ಈಸ್ ಬ್ಯಾಕ್ ಎಂದ ಫ್ಯಾನ್ಸ್!

  |

  ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಗಾಡ್‌ಫಾದರ್' ಸಿನಿಮಾ ಹತ್ತು ಲವು ವಿಚಾರಗಳಿಂದ ಸದ್ದು ಮಾಡ್ತಾ ಬಂದಿತ್ತು. ಕೆಲವರು 'ಲೂಸಿಫರ್‌'ಗೆ ಕಂಫೇರ್ ಮಾಡಿ 'ಗಾಡ್‌ಫಾದರ್' ಚಿತ್ರವನ್ನು ಟ್ರೋಲ್ ಮಾಡಿದ್ದರು. ಅಂತೂ ಇಂತೂ ಸಿನಿಮಾ ತೆರೆಕಂಡಿದ್ದು, ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಮೆಗಾಸ್ಟಾರ್ ಚಿರಂಜೀವಿ ಪರ್ಫಾರ್ಮೆನ್ಸ್, ಮೋಹನ್ ರಾಜಾ ನಿರ್ದೇಶನ ಹಾಗೂ ತಮನ್ ಮ್ಯೂಸಿಕ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರ್ತಿದೆ.

  'ಆಚಾರ್ಯ' ಸೋಲಿನಿಂದ ಕಂಗೆಟ್ಟಿದ್ದ ಚಿರು ಹಾಗೂ ರಾಮ್‌ಚರಣ್‌ಗೆ ಒಂದೊಳ್ಳೆ ಹಿಟ್ ಬೇಕಿತ್ತು. ಮಲಯಾಳಂನ ಸೂಪರ್ ಹಿಟ್ 'ಲೂಸಿಫರ್‌' ಚಿತ್ರದಲ್ಲಿ ಚಿರು ನಟಿಸ್ತಾರೆ ಎಂದಾಗ ಹಲವರು ವ್ಯಂಗ್ಯ ಮಾಡಿದ್ದರು. ತೆಲುಗಿಗೂ ಡಬ್ ಆಗಿ ಸಕ್ಸಸ್ ಕಂಡಿದ್ದ ಚಿತ್ರವನ್ನು ರೀಮೆಕ್ ಮಾಡ್ತಿದ್ದಾರೆ ಬುದ್ದಿ ಇಲ್ವಾ ? ಎಂದು ಕೇಳಿದ್ದರು. ಆದರೆ ಮೂಲ ಚಿತ್ರಕ್ಕಿಂತ ಸಾಕಷ್ಟು ಬದಲಾವಣೆ ಮಾಡಿಕೊಂಡು 'ಗಾಡ್‌ಫಾದರ್' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ಪೊಲಿಟಿಕಲ್ ಥ್ರಿಲ್ಲರ್ ಆಕ್ಷನ್ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗ್ತಿದೆ. ಚಿರು ಅಭಿಮಾನಿಗಳಂತೂ ಬಾಸ್ ಈಸ್ ಬ್ಯಾಕ್ ಎಂದು ಸಂಭ್ರಮಿಸುತ್ತಿದ್ದಾರೆ. ಎಸ್. ತಮನ್ ಮ್ಯೂಸಿಕ್ ಪ್ರೇಕ್ಷಕರಿಗೆ ಮತ್ತಷ್ಟು ಕಿಕ್ ಕೊಡ್ತಿದೆ.

  ಸೀಕ್ರೆಟ್ ಬಿಚ್ಚಿಟ್ಟ ಚಿರಂಜೀವಿ: 'ಗಾಡ್‌ಫಾದರ್' ಚಿತ್ರಕ್ಕೆ ಸಲ್ಲು ಕೇಳಿದ ಸಂಭಾವನೆ ಎಷ್ಟು ಗೊತ್ತಾ?ಸೀಕ್ರೆಟ್ ಬಿಚ್ಚಿಟ್ಟ ಚಿರಂಜೀವಿ: 'ಗಾಡ್‌ಫಾದರ್' ಚಿತ್ರಕ್ಕೆ ಸಲ್ಲು ಕೇಳಿದ ಸಂಭಾವನೆ ಎಷ್ಟು ಗೊತ್ತಾ?

  10 ವರ್ಷಗಳ ಕಾಲ ಚಿತ್ರರಂಗದಿಂದ ದೂರಾಗಿದ್ದ ಚಿರಂಜೀವಿ 'ಖೈದಿ ನಂಬರ್ 150' ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದರು. ಆ ಸಿನಿಮಾ ಕೊಂಚಮಟ್ಟಿಗೆ ಸದ್ದು ಮಾಡಿತ್ತು. ನಂತರ ಬಂದ 'ಸೈರಾ' ಹಾಗೂ 'ಆಚಾರ್ಯ' ಸಿನಿಮಾಗಳು ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತ್ತು. ಈ ನಾಲ್ಕು ಸಿನಿಮಾಗಳಿಗೆ ರಾಮ್‌ಚರಣ್ ನಿರ್ಮಾಪಕರಾಗಿರುವುದು ವಿಶೇಷ. ಹಾಗಾಗಿ ತಂದೆ, ಮಗ ಇಬ್ಬರಿಗೂ 'ಗಾಡ್‌ಫಾದರ್' ಒಳ್ಳೆ ಗೆಲುವು ತಂದುಕೊಡುವ ಸುಳಿವು ಸಿಕ್ತಿದೆ.

   ಚಿರು ಪವರ್‌ಫುಲ್ ಪರ್ಫಾರ್ಮೆನ್ಸ್

  ಚಿರು ಪವರ್‌ಫುಲ್ ಪರ್ಫಾರ್ಮೆನ್ಸ್

  ಟೀಸರ್, ಟ್ರೈಲರ್‌ನಲ್ಲಿ ಮೋಹನ್ ಲಾಲ್‌ಗೆ ಹೋಲಿಸಿ ಚಿರು ಲುಕ್, ನಟನೆ ಚೆನ್ನಾಗಿಲ್ಲ ಎಂದು ಕೆಲವರು ಹೇಳಿದ್ದರು. ಆದರೆ ಚಿತ್ರದಲ್ಲಿ ಚಿರು ಅಭಿನಯಕ್ಕೆ ಸಿನಿರಸಿಕರು ಫಿದಾ ಆಗಿದ್ದಾರೆ. ಬ್ರಹ್ಮ ಪಾತ್ರದಲ್ಲಿ ಮೆಗಾಸ್ಟಾರ್ ಆರ್ಭಟಕ್ಕೆ ಫುಲ್ ಮಾರ್ಕ್ಸ್ ಸಿಕ್ಕಿದೆ. ಮೋಹನ್‌ ಲಾಲ್ ಹಾಗೂ ಚಿರಂಜೀವಿ ಇಬ್ಬರು ಸೂಪರ್ ಸ್ಟಾರ್‌ಗಳೇ. ಆದರೆ ಒಂದು ಪಾತ್ರ ಎಂದು ಬಂದಾಗ ಇಬ್ಬರನ್ನು ಹೋಲಿಸಿ ನೋಡುವುದು ತಪ್ಪಾಗುತ್ತದೆ. ಮೋಹನ್‌ ಲಾಲ್‌ ತಮ್ಮ ಸ್ಟೈಲ್‌ನಲ್ಲಿ ಮಿಂಚಿದ್ರೆ, ಮೆಗಾಸ್ಟಾರ್ ತಮ್ಮ ಪರ್ಫಾರ್ಮೆನ್ಸ್‌ ಗ್ರೇಸ್‌ನಿಂದ ಗಮನ ಸೆಳೆದಿದ್ದಾರೆ. ಪವರ್‌ಫುಲ್ ಪರ್ಫಾರ್ಮೆನ್ಸ್‌ನಿಂದ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇನ್ನು ಮೋಹನ್‌ ಲಾಲ್‌ಗಿಂತ ಇಲ್ಲಿ ಚಿರುಗೆ ಹೆಚ್ಚು ಸ್ಕ್ರೀನ್‌ ಸ್ಪೇಸ್ ಸಿಕ್ಕಿದೆ.

   ಸಾಕಷ್ಟು ಬದಲಾವಣೆ ಮಾಡಿ ಗೆದ್ದ ನಿರ್ದೇಶಕರು

  ಸಾಕಷ್ಟು ಬದಲಾವಣೆ ಮಾಡಿ ಗೆದ್ದ ನಿರ್ದೇಶಕರು

  ಒಂದು ಸೂಪರ್ ಹಿಟ್ ಸಿನಿಮಾವನ್ನು ರೀಮೆಕ್ ಮಾಡುವುದು ಅಷ್ಟು ಸುಲಭ ಅಲ್ಲ. ಕಥೆ ಚಿತ್ರಕಥೆಯಲ್ಲಿ ಬದಲಾವಣೆ ಮಾಡುವುದು ಕೂಡ ರಿಸ್ಕ್ ಎನ್ನಿಸಿಕೊಳ್ಳುತ್ತದೆ. ಆದರೆ ತಮಿಳು ನಿರ್ದೇಶಕ ಮೋಹನ್ ರಾಜಾ ಬಹಳ ವಿಭಿನ್ನವಾಗಿ 'ಗಾಡ್‌ಫಾದರ್' ಕಟ್ಟಿಕೊಟ್ಟು ಗೆದ್ದಿದ್ದಾರೆ. ಮೂಲ ಕಥೆಯನ್ನು ಹಾಗೆಯೇ ಉಳಿಸಿಕೊಂಡು ಸಾಕಷ್ಟು ಹೊಸ ಪಾತ್ರಗಳನ್ನು ಸೇರಿಸಿ, ಚಿತ್ರಕಥೆಯನ್ನು ಕೊಂಚ ಬದಲಿಸಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಕ್ಸಸ್ ಕಂಡಿದ್ದಾರೆ. 'ಲೂಸಿಫರ್‌' ಸಿನಿಮಾ ನೋಡಿದವರಿಗೂ 'ಗಾಡ್‌ಫಾದರ್' ಹೊಸ ಫೀಲ್ ಕೊಡುತ್ತೆ. ಇನ್ನು ಮೆಗಾಸ್ಟಾರ್ ಎಲಿವೇಷನ್ ಸೀನ್ಸ್‌ ಅಂತೂ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ. ಇದೇ ಕಾರಣಕ್ಕೆ ಸಿನಿಮಾ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡು ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣ್ತಿದೆ.

   ಚಿರಂಜೀವಿಗೆ ಸಲ್ಮಾನ್ ಖಾನ್ ಸಾಥ್

  ಚಿರಂಜೀವಿಗೆ ಸಲ್ಮಾನ್ ಖಾನ್ ಸಾಥ್

  'ಗಾಡ್‌ಫಾದರ್' ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸಿರೋದು ಗೊತ್ತೇಯಿದೆ. ಸಿನಿಮಾ ಇಷ್ಟೆಲ್ಲಾ ಹೈಪ್ ಕ್ರಿಯೇಟ್ ಮಾಡುವುದಕ್ಕೆ ಇದು ಕೂಡ ಒಂದು ಕಾರಣ. ಸಲ್ಲು ತೆರೆಮೇಲೆ ಇದ್ದಷ್ಟು ಹೊತ್ತು ಪ್ರೇಕ್ಷಕರಿಗೆ ಸಖತ್ ಮಜಾ ಸಿಗುತ್ತದೆ. ಚಿರು ಜೊತೆಗಿನ ಸ್ನೇಹಕ್ಕಾಗಿ ಸಂಭಾವನೆ ಪಡೆಯದೇ ಚಿತ್ರದಲ್ಲಿ ನಟಿಸಿದ್ದಾರಂತೆ. ಮಾಸೂಮ್ ಪಾತ್ರದಲ್ಲಿ ನಟಿಸಿ ಬಾಲಿವುಡ್ ಭಾಯ್ಜಾನ್ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. 'ಲೂಸಿಫರ್‌' ಚಿತ್ರದಲ್ಲಿ ಪೃಥ್ವಿರಾಜ್ ಈ ಪಾತ್ರವನ್ನು ಮಾಡಿದ್ದರು. ಇನ್ನು ಚಿರು, ಸಲ್ಲು ಜೊತೆಗೆ ನಯನತಾರಾ, ಸತ್ಯದೇವ್ ಅಭಿನಯವೂ ಚಿತ್ರಕ್ಕೆ ಪ್ಲಸ್ ಆಗಿದೆ.

   'ಗಾಡ್‌ಫಾದರ್'ಗೆ 'ದಿ ಘೋಸ್ಟ್' ಸವಾಲ್

  'ಗಾಡ್‌ಫಾದರ್'ಗೆ 'ದಿ ಘೋಸ್ಟ್' ಸವಾಲ್

  ಚಿರಂಜೀವಿ ನಟನೆಯ 'ಗಾಡ್‌ಫಾದರ್' ಜೊತೆಗೆ ನಾಗಾರ್ಜುನ ಅಭಿನಯದ ಆಕ್ಷನ್ ಥ್ರಿಲ್ಲರ್ 'ದಿ ಘೋಸ್ಟ್' ಸಿನಿಮಾ ರಿಲೀಸ್ ಆಗಿದೆ. ಆ ಚಿತ್ರಕ್ಕೂ ಕೂಡ ಒಳ್ಳೆ ರೆಸ್ಪಾನ್ಸ್ ಸಿಕ್ತಿದ್ದು, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲು ಶುರುಮಾಡಿದೆ. ದಸರಾ ವೀಕೆಂಡ್‌ನಲ್ಲಿ ಪ್ರೇಕ್ಷಕರು 2 ಸಿನಿಮಾ ನೋಡೇ ನೋಡ್ತಾರೆ ಎನ್ನುವ ಧೈರ್ಯದಿಂದ ಒಟ್ಟೊಟ್ಟಿಗೆ ಸಿನಿಮಾಗಳನ್ನು ರಿಲೀಸ್ ಮಾಡಲಾಗಿದೆ. ಎರಡೂ ಸಿನಿಮಾಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು, ಮುಂದಿನ ಸಿನಗಳಲ್ಲಿ ಏನಾಗುತ್ತೋ ಕಾದು ನೋಡಬೇಕು.

   "ಚರಣ್ ಮಾಡಿದ್ದಾನೆ ಸಾಕು, ನಾನು ಮಾತ್ರ ಮೌಳಿ ಜೊತೆ ಸಿನಿಮಾ ಮಾಡುವ ರಿಸ್ಕ್ ತಗೊಳ್ಳಲ್ಲ"- ಚಿರು

  English summary
  Chiranjeevi and Salman khan Starrer Godfather movie got positive talk. know More.
  Wednesday, October 5, 2022, 15:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X