twitter
    For Quick Alerts
    ALLOW NOTIFICATIONS  
    For Daily Alerts

    ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಚಿರಂಜೀವಿ ದಂಪತಿ: ರಾಮ್ ಚರಣ್ ಪ್ರೀತಿಯ ವಿಶ್

    |

    ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಮತ್ತು ಪತ್ನಿ ಸುರೇಖಾ ದಂಪತಿಗೆ ಇಂದು ವಿಶೇಷವಾದ ದಿನ. ಹೌದು, ಚಿರಂಜೀವಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವಿದು. 1980ರಲ್ಲಿ ಅಂದರೆ 42 ವರ್ಷಗಳ ಹಿಂದೆ ಮೆಗಾಸ್ಟಾರ್, ಸುರೇಖಾ ಜೊತೆ ಹಸೆಮಣೆ ಏರಿದ್ದಾರೆ. 42ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಚಿರಂಜೀವಿ ದಂಪತಿ ಕುಟುಂಬದ ಜೊತೆ ಸಂಭ್ರಮಿಸಿದ್ದಾರೆ.

    ಟಾಲಿವುಡ್ ನ ಈ ಸುಂದರ ಜೋಡಿಗೆ ಅಭಿಮಾನಿಗಳಿಂದ ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ವಿಶೇಷ ಎಂದರೆ ಚಿರಂಜೀವಿ ಪ್ರೀತಿಯ ಪುತ್ರ ರಾಮ್ ಚರಣ್ ತಂದೆ-ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.

    ಚಿರಂಜೀವಿ 'ಲೂಸಿಫರ್' ರಿಮೇಕ್ ನಲ್ಲಿ ಸ್ಟಾರ್ ನಟಿ; 15 ವರ್ಷದ ಬಳಿಕ ಮತ್ತೆ ಒಂದಾಗುತ್ತಾ ಈ ಜೋಡಿ?ಚಿರಂಜೀವಿ 'ಲೂಸಿಫರ್' ರಿಮೇಕ್ ನಲ್ಲಿ ಸ್ಟಾರ್ ನಟಿ; 15 ವರ್ಷದ ಬಳಿಕ ಮತ್ತೆ ಒಂದಾಗುತ್ತಾ ಈ ಜೋಡಿ?

    ಸಾಮಾಜಿಕ ಜಾಲತಾಣದಲ್ಲಿ ಚಿರಂಜೀವಿ ಮತ್ತು ಸುರೇಖಾ ಅವರ ಸುಂದರ ಫೋಟೋವನ್ನು ಶೇರ್ ಮಾಡಿ, ದೊಡ್ಡ ಶಕ್ತಿ ಎಂದು ಹೇಳಿದ್ದಾರೆ. 'ನನ್ನ ದೊಡ್ಡ ಶಕ್ತಿ. ನಿಮ್ಮಿಬ್ಬರಿಗೂ 42ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು' ಎಂದು ಹೇಳಿದ್ದಾರೆ.

    Chiranjeevi and Surekha couple celebrating 42 years wedding anniversary

    ಚಿರಂಜೀವಿ ಪತ್ನಿ ಸುರೇಖಾ ಚಿತ್ರರಂಗದಿಂದ ದೂರ ಇದ್ದರೂ ಪತಿಯ ಸಿನಿ ಜೀವನಕ್ಕೆ ಆಧಾರಸ್ತಂಭವಾಗಿದ್ದಾರೆ. ಚಿರಂಜೀವಿ ಮತ್ತು ಸುರೇಖಾ ದಂಪತಿಗೆ ಮೂವರು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ. ಪುತ್ರ ರಾಮ್ ಚರಣ್ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದು, ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ.

    Recommended Video

    ಈ ವರ್ಷ ಕೀರ್ತಿ ಸುರೇಶ್ ಮದುವೆ, ಹುಡುಗ ಯಾರು ಗೊತ್ತಾ | Filmibeat Kannada

    ಚಿರಂಜೀವಿ ಸದ್ಯ ಆಚಾರ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಸಾಕಷ್ಟು ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾ ಬಳಿಕ ಚಿರಂಜೀವಿ ಮಲಯಾಳಂನ ಸೂಪರ್ ಹಿಟ್ ಲೂಸಿಫರ್ ಸಿನಿಮಾದ ರಿಮೇಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಪುತ್ರ ರಾಮ್ ಚರಣ್ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಳಿಕ ನಿರ್ದೇಶಕ ಶಂಕರ್ ಜೊತೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ.

    English summary
    Actor Chiranjeevi and Surekha couple celebrating 42 years wedding anniversary.
    Saturday, February 20, 2021, 14:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X