ಫ್ಯಾನ್ಸಿ ನಂಬರ್‌ಗೆ 5 ಲಕ್ಷ ಕೊಟ್ಟ ಚಿರು ಖರೀದಿಸಿದ ಹೊಸ ಲಗ್ಜುರಿ ಕಾರ್ ಯಾವ್ದು? ಅದರ ವಿಶೇಷತೆಗಳೇನು?
ಟಾಲಿವುಡ್‌ಗೆ ಎಷ್ಟೇ ಜನ ಹೀರೊಗಳು ಬಂದರೂ ಹೋದರು ಇವರತ್ತಿಗೂ ನಂಬರ್ ವನ್ ಸ್ಥಾನದಲ್ಲಿರುವ ನಟ ಚಿರಂಜೀವಿ. 10 ವರ್ಷಗಳ ಕಾಲ ಚಿತ್ರರಂಗ ಬಿಟ್ಟು ಪಾಲಿಟಿಕ್ಸ್‌ಗೆ ಹೋಗಿದ್ದ ಚಿರು 'ಕೈದಿ ನಂಬರ್ 150' ಸಿನಿಮಾದಿಂದ ಭರ್ಜರಿ ಕಂಬ್ಯಾಕ್ ಮಾಡಿದ್ದರು. 'ಸಾಹೋ', 'ಆಚಾರ್ಯ' ಚಿತ್ರಗಳು ಸೋತರು 'ವಾಲ್ತೇರು ವೀರಯ್ಯ' ಚಿತ್ರದಿಂದ ಮತ್ತೆ ಮೆಗಾಸ್ಟಾರ್ ಆರ್ಭಟ ಶುರುವಾಗಿದೆ.
90ರ ದಶಕದಲ್ಲೇ 1 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುವ ಮೂಲಕ ಬಾಲಿವುಡ್‌ಗೆ ಚಿರು ಶಾಕ್ ಕೊಟ್ಟಿದ್ದರು. ಬ್ಲಾಕ್‌ಬಸ್ಟರ್ ಸಿನಿಮಾಗಳಿಂದ ಚಿರಂಜೀವಿ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದ್ದಾರೆ. ಬೇರೆ ಸ್ಟಾರ್‌ಗಳು ಲಕ್ಷಗಳಲ್ಲಿ ಸಂಭಾವನೆ ಎಣಿಸುವಾಗ ಮೆಗಾಸ್ಟಾರ್ ಕೋಟಿಗಳಲ್ಲಿ ಆದಾಯ ಗಳಿಸಲು ಆರಂಭಿಸಿದ್ದರು. ಇನ್ನು ಗಳಿಸಿದ ಆದಾಯವನ್ನು ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಸಿ ಕೋಟಿ ಕೋಟಿ ಆಸ್ತಿ ಸಂಪಾದಿಸಿದ್ದಾರೆ. ಅದಕ್ಕೆ ತಕ್ಕ ಐಷಾರಾಮಿ ಜೀವನ ಸಾಗಿಸ್ತಿದ್ದಾರೆ.

ಚಿರಂಜೀವಿ ಕಾರ್ ಗ್ಯಾರೇಜ್‌ಗೆ ಮತ್ತೊಂದು ಅತ್ಯಾಧುನಿಕ ಕಾರ್ ಸೇರಿಕೊಂಡಿದೆ. ಅದು ಟೊಯೋಟ ವೆಲ್‌ಫೈರ್. ಶೋ ರೂಂ ಬೆಲೆ, ಆಲ್‌ಟ್ರೇಷನ್, ರೋಡ್ ಟ್ಯಾಕ್ಸ್ ಎಲ್ಲಾ ಸೇರಿ ಈ ಕಾರು ಮನೆಗೆ ಬರೋ ಹೊತ್ತಿಗೆ 1.9 ಕೋಟಿ ರೂಪಾಯಿಯಾಗುತ್ತದೆ. ಈಗಾಗಲೇ ಚಿರು ಬಳಿ ಕೋಟ್ಯಂತರ ರೂಪಾಯಿ ಮೌಲ್ಯದ ಕಾರುಗಳಿವೆ. ಆ ಕಾರುಗಳ ಪಟ್ಟಿಗೆ ಈ ಕಾರು ಕೂಡ ಸೇರಿಕೊಳ್ಳಲಿಲ್ಲ. ಇತ್ತೀಚೆಗೆ ಸಾಕಷ್ಟು ಜನ ಸೆಲೆಬ್ರೆಟಿಗಳು ಇದೇ ಕಾರನ್ನು ಖರೀದಿಸುತ್ತಿದ್ದಾರೆ. ಆರಾಮಾದಾಯಕ ಪ್ರಯಾಣಕ್ಕೆ ಇದು ಸೂಕ್ತ ಎನ್ನಲಾಗ್ತಿದೆ.
ಮೆಗಾಸ್ಟಾರ್ ಖರೀದಿಸಿರುವ ಕಪ್ಪು ಬಣ್ಣದ ಟೊಯೋಟ ವೆಲ್‌ಫೈರ್ ಕಾರಿಗೆ ತೆಲಂಗಾಣ ಆರ್‌ಟಿಎ ಅಧಿಕಾರಿಗಳು ಆಲ್-1 ನಂಬರ್ ಕೊಟ್ಟಿದ್ದಾರೆ. TS 09 JB 1111 ಫ್ಯಾನ್ಸಿ ನಂಬರ್ ಅನ್ನು ಚಿರು 4.7 ಲಕ್ಷ ರೂ. ಕೊಟ್ಟು ಪಡೆದುಕೊಂಡಿದ್ದಾರೆ. ಅದಕ್ಕಾಗಿ ರಿಜಿಸ್ಟ್ರೇಷನ್ ಸರ್ಟಿಫಿಕೇಟ್‌ಗಾಗಿ ಮೆಗಾಸ್ಟಾರ್ ಮಂಗಳವಾರ ಖೈರತಾಬಾದ್ ಆರ್‌ಟಿಎ ಕಛೇರಿಗೆ ಹೋಗಿದ್ದರು. ಆರ್‌ಟಿಒ ಅಧಿಕಾರಿ ರಾಮಚಂದ್ರ ಉಪಸ್ಥಿತಿಯಲ್ಲಿ ಫೋಟೊ, ಡಿಜಿಟಲ್ ಸಹಿ ಪ್ರಕ್ರಿಯೆ ಮುಗಿಸಿದ್ದಾರೆ. ಕೊಣಿದೇಲ ಚಿರಂಜೀವಿ ಹೆಸರಿನಲ್ಲಿ ಕಾರಿನ ರಿಜಿಸ್ಟ್ರೇಷನ್ ಆಗಿದೆ.
ಟೊಯೊಟಾದಿಂದ ಬಿಡುಗಡೆಯಾದ ಈ ವೆಲ್‌ಫೈರ್ ಕಾರಿನಲ್ಲಿ ಅದ್ಭುತವಾದ, ಅತ್ಯಾಧುನಿಕವಾದ ಹೈಬ್ರಿಡ್‌ಎಲೆಕ್ಟ್ರಿಕ್ ವೈಶಿಷ್ಟ್ಯಗಳೊಂದಿಗೆ ಸಾಕಷ್ಟು ಭದ್ರತಾ ವಿಶೇಷಗಳಿವೆ. ಹೈಸ್ಪೆಸಿಫಿಕೇಶನ್ಸ್‌ನೊಂದಿಗೆ ಬಿಡುಗಡೆಯಾದ ಈ ಮಲ್ಟಿಪರ್ಪಸ್ ವೆಹಿಕಿಲ್‌ನಲ್ಲಿ ಮೂರು ಸಾಲು ಸೀಟ್ ವ್ಯವಸ್ಥೆ ಇದೆ. ಏಳು ಜನ ಆರಾಮಾಗಿ ಕೂತು ಪ್ರಯಾಣಿಸಬಹುದು. ಮಧ್ಯದ ಸಾಲಿನ ವಿಐಪಿ ಸೀಟ್ ಬಹಳ ಆರಾಮದಾಯಕಾಗಿರುತ್ತದೆ.

ಭದ್ರತೆಗಾಗಿ ಏಳು ಏರ್‌ಬ್ಯಾಗ್‌ಗಳು ಇರುವುದು ವಿಶೇಷ. ಟ್ವಿನ್ ಸನ್‌ರೂಫ್, ಟ್ರೀಜೋನ್ ಕ್ಲೈಮೆಟ್ ಕಂಟ್ರೋಲ್, 13 ಇಂಟರ್‌ನೆಟ್ ಟೈನ್‌ಮೆಂಟ್ ಸ್ಕ್ರೀನ್ಸ್‌ನಂತಹ ವಿಶೇಷತೆಗಳು ಈ ಕಾರಿನಲ್ಲಿದೆ. ಫ್ರಂಟ್‌ನಲ್ಲಿ ಕೂಡ ಹತ್ತು ಇನ್‌ಫೋಟೈನ್‌ಮೆಂಟ್ ಸಿಸ್ಟಮ್ ಕೂಡ ಇದೆ. ಆಂಡ್ರಾಯಿಡ್‌ನಲ್ಲಿ ಆಟೋ, ಯಾಪಲ್ ಪ್ಲೇ ಸಪೋರ್ಟ್ ಮಾಡುತ್ತದೆ. ಇದರಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್ಸ್ ಇದೆ. ಇನ್ನು ಬರ್ನಿಂಗ್ ಬ್ಲಾಕ್, ವೆಲ್‌ಫೈರ್ ಪೆರಲ್ ವೈಟ್, ಗ್ರಾಫೈಟ್ ಕಲರಿನ ಕಾರುಗಳು ಲಭ್ಯವಿದೆ.
ಈ ವಾಹನದ ಮೈಲೇಜ್ ಗರಿಷ್ಠ ಲೀಟರ್‌ಗೆ ಸುಮಾರು 16.35 ಕಿಲೋ ಮೀಟರ್ ಇದೆ. ಇದೆಲ್ಲರ ಜೊತೆಗೆ ಪನೋರಮಿಕ್ ವ್ಯೂ ಮಾನಿಟರ್, ವೆಹಿಕಿಲ್ ಡೈನಾಮಿಕ್ ಮ್ಯಾನೇಜ್‌ಮೆಂಟ್, ಫ್ರಂಟ್ ಆಂಡ್ ರೇರ್ ಪಾರ್ಕಿಂಗ್ ಸೆನ್ಸರ್‌ಗಳೂ ಇವೆ. ಎಲೆಕ್ಟ್ರಿಕ್ ಸ್ಲೈಡಿಂಗ್ ಡೋರ್ಸ್ ಇರುವುದು ಮತ್ತೊಂದು ವಿಶೇಷ. ಇದಕ್ಕೆ 2.5 ಪೆಟ್ರೋಲ್ ಎಂಜಿನ್‌ನೊಂದಿಗೆ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳು ಸಹ ಇವೆ.
ಸಿನಿಮಾಗಳ ವಿಚಾರಕ್ಕೆ ಬಂದರೆ 'ವಾಲ್ತೇರು ವೀರಯ್ಯ' ಸಕ್ಸಸ್ ನಂತರ ಚಿರಂಜೀವಿ 'ಭೋಳಾ ಶಂಕರ್' ಚಿತ್ರದಲ್ಲಿ ನಟಿಸ್ತಿದ್ದಾರೆ. ಮತ್ತೆರಡು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


Click it and Unblock the Notifications










