ಅಯ್ಯಯ್ಯೋ.. ರಶ್ಮಿಕಾ ಮಂದಣ್ಣ ಹೆಸರನ್ನ ಚಿರಂಜೀವಿ ಹೀಗಾ ಕರೆಯೋದು.!?
Recommended Video
ಕನ್ನಡ ಚಿತ್ರರಂಗದಲ್ಲಿ ಮಾತ್ರ ಅಲ್ಲ.. ತೆಲುಗು ಚಿತ್ರರಂಗದಲ್ಲೂ ನಟಿ ರಶ್ಮಿಕಾ ಮಂದಣ್ಣ ತುಂಬಾ ಫೇಮಸ್. 'ಚಲೋ' ಚಿತ್ರದ ಮೂಲಕ ಟಾಲಿವುಡ್ ಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ ತೆಲುಗು ಸಿನಿ ಅಂಗಳದಲ್ಲಿ 'ಗೀತ ಗೋವಿಂದಂ', 'ಡಿಯರ್ ಕಾಮ್ರೇಡ್', 'ದೇವ್ ದಾಸ್' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಸದ್ಯ 'ಸರಿಲೇರು ನೀಕ್ಕೆವ್ವರು' ಚಿತ್ರದಲ್ಲಿ ಟಾಲಿವುಡ್ ನಟ ಮಹೇಶ್ ಬಾಬು ಜೊತೆಗೆ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿದ್ದಾರೆ. ತೆಲುಗಿನಲ್ಲಿ ಸಿಕ್ಕಾಪಟ್ಟೆ ಗುರುತಿಸಿಕೊಂಡಿದ್ದರೂ, ರಶ್ಮಿಕಾ ಮಂದಣ್ಣ ಹೆಸರು ಮಾತ್ರ ಮೆಗಾ ಸ್ಟಾರ್ ಚಿರಂಜೀವಿಗೆ ಸರಿಯಾಗಿ ಗೊತ್ತೇ ಇಲ್ಲ ಕಣ್ರೀ.!
ನಂಬಿದ್ರೆ ನಂಬಿ.. ರಶ್ಮಿಕಾ ಮಂದಣ್ಣ ನಾಯಕಿ ಆಗಿ ಅಭಿನಯಿಸಿರುವ ಮೂರು ಚಿತ್ರಗಳ ಕಾರ್ಯಕ್ರಮಕ್ಕೆ ಮೆಗಾ ಸ್ಟಾರ್ ಚಿರಂಜೀವಿ ಮುಖ್ಯ ಅತಿಥಿಯಾಗಿ ಹಾಜರಾಗಿದ್ದಾರೆ. ಅದರೂ ರಶ್ಮಿಕಾ ಮಂದಣ್ಣ ಹೆಸರು ಚಿರಂಜೀವಿಗೆ ಗೊತ್ತಿಲ್ಲ. ಹೀಗಾಗಿ, 'ಸರಿಲೇರು ನೀಕ್ಕೆವ್ವರು' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ರನ್ನ ''ರಶ್ಮಿ ಮಂಡುಕ'' ಎಂದುಬಿಟ್ಟರು ಚಿರಂಜೀವಿ.! ಮುಂದೆ ಓದಿರಿ...

ಮುಖ್ಯ ಅತಿಥಿಯಾಗಿ ಬಂದಿದ್ದ ಚಿರಂಜೀವಿ
ನಟ ಮಹೇಶ್ ಬಾಬು, ರಶ್ಮಿಕಾ ಮಂದಣ್ಣ, ವಿಜಯಶಾಂತಿ ಅಭಿನಯದ 'ಸರಿಲೇರು ನೀಕ್ಕೆವ್ವರು' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗಷ್ಟೇ ಅದ್ಧೂರಿಯಾಗಿ ನಡೆದಿತ್ತು. ಈ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಚಿರಂಜೀವಿ ಮುಖ್ಯ ಅತಿಥಿಯಾಗಿ ಬಂದಿದ್ದರು. ಚಿರಂಜೀವಿಯ ಆಶೀರ್ವಾದ ಪಡೆದು ''ಮೆಗಾ ಸ್ಟಾರ್ ಚಿರಂಜೀವಿ ನನಗೆ ಲಕ್ಕಿ ಚಾರ್ಮ್'' ಎಂದು ಇದೇ ಸಮಾರಂಭದಲ್ಲಿ ವೇದಿಕೆ ಮೇಲೆ ರಶ್ಮಿಕಾ ಮಂದಣ್ಣ ಹೇಳಿದರು.

ಅಯ್ಯಯ್ಯೋ.. ಚಿರಂಜೀವಿ ಹೀಗಾ ಕರೆಯೋದು.?
ಇದೇ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಬಗ್ಗೆ ಮಾತನಾಡಿದ ಚಿರಂಜೀವಿ, ಆಕೆಯ ಹೆಸರನ್ನು ಉಚ್ಛಾರಣೆ ಮಾಡಿದ್ದು ''ರಶ್ಮಿ ಮಂಡುಕ'' ಅಂತ.! ಇಡೀ ಕಾರ್ಯಕ್ರಮದಲ್ಲಿ ''ರಶ್ಮಿ ಮಂಡುಕ'' ಅಂತಲೇ ಚಿರಂಜೀವಿ ಕರೆಯುತ್ತಿದ್ದರು. ಅದನ್ನ ಸರಿ ಪಡಿಸಲು ಯಾರೂ ಮುಂದಾಗಲಿಲ್ಲ. ಚಿರಂಜೀವಿ ''ರಶ್ಮಿ ಮಂಡುಕ'' ಅಂತ ಕರೆದಿರುವುದೇ ಈಗ ಟ್ರೋಲ್ ಆಗುತ್ತಿದೆ.

ರಶ್ಮಿಕಾ ಬಗ್ಗೆ ಚಿರಂಜೀವಿ ಹೇಳಿದ್ದೇನು.?
''ಚಲೋ' ಚಿತ್ರದ ಕಾರ್ಯಕ್ರಮಕ್ಕೆ ನನ್ನ ಆಹ್ವಾನಿಸಿದರು. ಅಲ್ಲಿಗೆ ಹೋದರೆ ಇದೇ (ರಶ್ಮಿಕಾ ಮಂದಣ್ಣ) ಹುಡುಗಿ. ನಮ್ಮದೇ 'ಗೀತ ಗೋವಿಂದಂ' ಚಿತ್ರದ ಕಾರ್ಯಕ್ರಮಕ್ಕೆ ಹೋದೆ. ಅಲ್ಲೂ ಇದೇ ಹುಡುಗಿ. ಈಗ ಇಲ್ಲಿಗೆ ಬಂದೆ. ಇಲ್ಲೂ ರಶ್ಮಿ ಮಂಡುಕನೇ ಇದ್ದಾರೆ. ನನ್ನನ್ನ ನಿಮ್ಮ ಸಿನಿಮಾಗಳಿಗೆ ಕಾಂಟ್ರ್ಯಾಕ್ಟ್ ತೆಗೆದುಕೊಂಡಿದ್ದೀರಾ.?'' ಎಂದು ತಮಾಷೆಯಾಗಿ ರಶ್ಮಿಕಾ ಮಂದಣ್ಣ ರನ್ನ ಚಿರಂಜೀವಿ ಕೇಳಿದರು.

ಲಕ್ಕಿ ಚಾರ್ಮ್ ಎಂದಿದ್ದ ರಶ್ಮಿಕಾ
''ನನ್ನ 'ಚಲೋ' ಚಿತ್ರಕ್ಕೆ ಚಿರಂಜೀವಿ ಬಂದಿದ್ದರು. ಅದು ಹಿಟ್ ಆಯ್ತು. 'ಗೀತ ಗೋವಿಂದಂ' ಚಿತ್ರಕ್ಕೂ ಚಿರಂಜೀವಿ ಬಂದಿದ್ದರು. ಅದೂ ಹಿಟ್ ಅಯ್ತು. ಈಗ 'ಸರಿಲೇರು ನೀಕ್ಕೆವ್ವರು' ಚಿತ್ರಕ್ಕೆ ಚಿರಂಜೀವಿ ಬಂದಿದ್ದಾರೆ. ಅವರು ನನಗೆ ಲಕ್ಕಿ ಚಾರ್ಮ್'' ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.


Click it and Unblock the Notifications











